Site icon Vistara News

Walter Mirisch : ಆಸ್ಕರ್ ಪ್ರಶಸ್ತಿ ವಿಜೇತ ನಿರ್ಮಾಪಕ ವಾಲ್ಟರ್ ಮಿರಿಷ್ ನಿಧನ

#image_title

ವಾಷಿಂಗ್ಟನ್: ಆಸ್ಕರ್ ಪ್ರಶಸ್ತಿ ಪಡೆದಿದ್ದ ಚಿತ್ರ ನಿರ್ಮಾಪಕ ವಾಲ್ಟರ್ ಮಿರಿಷ್ (Walter Mirisch) ಅವರು ನಿಧನರಾಗಿದ್ದಾರೆ. 101 ವರ್ಷ ವಯಸ್ಸಾಗಿದ್ದ ಅವರು ಶುಕ್ರವಾರ ಲಾಸ್ ಏಂಜಲೀಸ್‌ನಲ್ಲಿರುವ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ. ವಾಲ್ಟರ್ ಅವರು ‘ಸಮ್ ಲೈಕ್ ಇಟ್ ಹಾಟ್’, ‘ವೆಸ್ಟ್ ಸೈಡ್ ಸ್ಟೋರಿ’ ಮತ್ತು ‘ಇನ್ ದಿ ಹೀಟ್ ಆಫ್ ದಿ ನೈಟ್’ನಂತಹ ಕ್ಲಾಸಿಕ್‌ಗಳನ್ನು ಸಿನಿಮಾಗಳನ್ನು ಕೊಟ್ಟಿದ್ದರು.

ಇದನ್ನೂ ಓದಿ : MM Keeravaani: ‘ಆಸ್ಕರ್‌ ಗೆದ್ದೇ ಗೆಲ್ಲುತ್ತೇವೆ’, ನಾಟು ನಾಟು ಸಂಗೀತ ನಿರ್ದೇಶಕ ಎಂ.ಎಂ.ಕೀರವಾಣಿ ವಿಶ್ವಾಸ
ವಾಲ್ಟರ್ ಅವರ ನಿಧನದ ಕುರಿತಾಗಿ ಆಸ್ಕರ್ ಅಕಾಡೆಮಿಯ ಸಿಇಒ ಆಗಿರುವ ಬಿಲ್ ಕ್ರಾಮರ್ ಅವರು ಪ್ರಕಟಣೆ ಹೊರಡಿಸಿದ್ದಾರೆ. “ವಾಲ್ಟರ್ ಅವರು ನಿರ್ಮಾಪಕರಾಗಿ ಮತ್ತು ಉದ್ಯಮದ ನಾಯಕರಾಗಿ ನಿಜವಾದ ದಾರ್ಶನಿಕರಾಗಿದ್ದರು. ಚಲನಚಿತ್ರ ನಿರ್ಮಾಣ ಮತ್ತು ಅಕಾಡೆಮಿಯ ಮೇಲಿನ ಅವರ ಉತ್ಸಾಹವು ಎಂದಿಗೂ ಕಡಿಮೆಯಾಗಲಿಲ್ಲ. ಅವರು ನಮ್ಮ ಆತ್ಮೀಯ ಸ್ನೇಹಿತ ಮತ್ತು ಸಲಹೆಗಾರರಾಗಿದ್ದರು. ಈ ಕಷ್ಟದ ಸಮಯದಲ್ಲಿ ನಾವು ಅವರ ಕುಟುಂಬಕ್ಕೆ ನಮ್ಮ ಪ್ರೀತಿ ಮತ್ತು ಬೆಂಬಲವನ್ನು ನೀಡುತ್ತೇವೆ” ಎಂದು ಅವರು ತಿಳಿಸಿದ್ದಾರೆ.

ವಾಲ್ಟರ್ ಮಿರಿಷ್ ಅವರು 1967ರ ‘ಇನ್ ದಿ ಹೀಟ್ ಆಫ್ ದಿ ನೈಟ್’ ಸಿನಿಮಾಗಾಗಿ ಆಸ್ಕರ್ ಅತ್ಯುತ್ತಮ ಚಿತ್ರ ಪ್ರಶಸ್ತಿಯನ್ನು ಪಡೆದರು. ವಾಲ್ಟರ್ ಅವರು 1973ರಿಂದ 1977ರವರೆಗೆ ಅಕಾಡೆಮಿ ಆಫ್ ಮೋಷನ್ ಪಿಕ್ಚರ್ ಆರ್ಟ್ಸ್ ಅಂಡ್ ಸೈನ್ಸಸ್‌ನ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು. ಅದರಲ್ಲಿ ಅವರ ಕೆಲಸ ಮತ್ತು ಅವರ ಮಾನವೀಯ ಪ್ರಯತ್ನಗಳನ್ನು ಗುರುತಿಸಿ 1978 ಮತ್ತು 1983ರಲ್ಲಿ ಎರಡು ಗೌರವ ಆಸ್ಕರ್‌ಗಳನ್ನು ನೀಡಲಾಗಿತ್ತು.

Exit mobile version