ಢಾಕಾ: ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರಾಗಿರುವ ಹಿಂದೂಗಳ ಮೇಲೆ ಆಗಾಗ ಬಹುಸಂಖ್ಯಾತ ಮುಸ್ಲಿಮರು ದಾಳಿ ಮಾಡುವ, ದೇವಾಲಯಗಳನ್ನು ಧ್ವಂಸಗೊಳಿಸುವ ಪ್ರಕರಣಗಳು ಆಗಾಗ ಕೇಳಿಬರುತ್ತಲೇ ಇರುತ್ತವೆ. ಬಾಂಗ್ಲಾದಲ್ಲಿ ಹಿಂದೂಗಳು ಭಯದಲ್ಲಿಯೇ ಜೀವಿಸುವ ಪರಿಸ್ಥಿತಿ ಇದೆ ಎಂಬ ಮಾತುಗಳೂ ಇವೆ. ಇದರ ಬೆನ್ನಲ್ಲೇ, ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾ (Sheikh Hasina) ಅವರು ಹಿಂದೂಗಳಿಗೆ ಅಭಯ ನೀಡಿದ್ದಾರೆ. “ನೀವೂ ನನ್ನಷ್ಟೇ ಹಕ್ಕುಗಳನ್ನು ಹೊಂದಿದ್ದೀರಿ” ಎಂದಿದ್ದಾರೆ.
ಢಾಕಾದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, “ದೇಶದಲ್ಲಿ ಎಲ್ಲರೂ ಸಮಾನ ಹಕ್ಕುಗಳನ್ನು ಹೊಂದಿರಬೇಕು ಎಂಬುದು ನಮ್ಮ ಆಶಯವಾಗಿದೆ. ಎಲ್ಲ ಧರ್ಮದವರೂ ಒಂದೇ ಎನ್ನುವ ಭಾವ ನಮ್ಮದಾಗಿದೆ. ಹಿಂದೂಗಳು ಈ ದೇಶದ ಪ್ರಜೆಗಳಾಗಿದ್ದಾರೆ ಎಂದರೆ, ಅವರೂ ನನ್ನಷ್ಟೇ ಹಕ್ಕುಗಳನ್ನು ಹೊಂದಿದ್ದಾರೆ” ಎಂದು ತಿಳಿಸಿದರು.
“ಹಿಂದೂಗಳು ನಾವು ಅಲ್ಪಸಂಖ್ಯಾತರು, ನಮ್ಮನ್ನು ಬೇರೆ ರೀತಿಯಲ್ಲಿ ನೋಡುತ್ತಾರೆ ಎಂಬ ಕೀಳರಿಮೆ ಬಿಡಬೇಕು. ನಾವೆಲ್ಲರೂ ಒಂದೇ ಎನ್ನುವ ಮನೋಭಾವ ರೂಢಿಸಿಕೊಳ್ಳಬೇಕು. ನಾವು ಎಲ್ಲರಿಂದಲೂ ಇದನ್ನೇ ಬಯಸುತ್ತೇವೆ. ಹಾಗೆಯೇ, ಹಿಂದೂಗಳ ಮೇಲೆ ದೌರ್ಜನ್ಯ ಎಸಗಿದವರು, ದೇವಾಲಯಗಳ ಮೇಲೆ ದಾಳಿ ನಡೆಸಿದವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ” ಎಂದು ಭರವಸೆ ನೀಡಿದರು.
ಇದನ್ನೂ ಓದಿ | ಸೌಹಾರ್ದ ಸಂಭ್ರಮ| ಈ ಊರಲ್ಲಿ ಒಂದೇ ಒಂದು ಮುಸ್ಲಿಂ ಕುಟುಂಬವಿಲ್ಲ, ಹಿಂದೂಗಳಿಂದಲೇ ಮೊಹರಂ!