ನವ ದೆಹಲಿ: ಮುಂದಿನ ಒಂದೂವರೆ ವರ್ಷದ ಅವಧಿಯಲ್ಲಿ 10 ಲಕ್ಷ ಹುದ್ದೆಗಳನ್ನು ಭರ್ತಿ ಮಾಡಬೇಕು: ಇದು ಪ್ರಧಾನಿ ನರೇಂದ್ರ ಮೋದಿ ಆರ್ಡರ್. ಈ ರೀತಿ ಮಿಷನ್ ಮೋಡ್‌ನಲ್ಲಿ ನೇಮಕಾತಿ ನಡೆಯಬೇಕು ಎಂದು ಅವರು ಅದೇಶ ಕೊಟ್ಟಿದ್ದು ಕೇಂದ್ರ ಸರಕಾರದ ನಾನಾ ಇಲಾಖೆಗಳು ಮತ್ತು ಸಚಿವಾಲಯಗಳಿಗೆ.
ಪ್ರಧಾನಿ ಮೋದಿ ಅವರು ಶನಿವಾರ ಎಲ್ಲ ಸರಕಾರಿ ಇಲಾಖೆಗಳು ಮತ್ತು ಸಚಿವಾಲಯಗಳಲ್ಲಿರುವ ಮಾನವ ಸಂಪನ್ಮೂಲ ಸ್ಥಿತಿಗತಿಗೆ ಸಂಬಂಧಿಸಿ ಪರಿಶೀಲನಾ ಸಭೆ ನಡೆಸಿದರು. ಈ ವೇಳೆ ಹುದ್ದೆ ಭರ್ತಿ ಬಗ್ಗೆ ಸೂಚನೆ ನೀಡಿದರು ಎಂದು ಪ್ರಧಾನಿ ಸಚಿವಾಲಯದ ಮೂಲಗಳು ತಿಳಿಸಿವೆ.
ಪ್ರತಿಪಕ್ಷಗಳು ಆಗಾಗ ನಿರುದ್ಯೋಗ ಸಮಸ್ಯೆಯ ಬಗ್ಗೆ ಧ್ವನಿ ಎತ್ತುವುದು ಮತ್ತು ಇಲಾಖೆಗಳಲ್ಲಿ ಸೂಕ್ತ ಸಿಬ್ಬಂದಿಗಳಿಲ್ಲದೆ ಕೆಲಸಗಳು ವೇಗವಾಗಿ ನಡೆಯದೆ ಇರುವ ಬಗ್ಗೆ ಆಕ್ಷೇಪ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಅವರ ಈ ಕ್ರಮ ಮಹತ್ವ ಪಡೆದಿದೆ.
ಮೋದಿ ಅವರು ಎಲ್ಲ ಇಲಾಖೆಗಳ ಒಟ್ಟಾರೆ ವಿವರಗಳನ್ನು ಪಡೆದುಕೊಂಡು 18 ತಿಂಗಳಲ್ಲಿ 10 ಲಕ್ಷ ಸ್ಥಾನ ತುಂಬುವಂತೆ ಸೂಚಿಸಿದರು. ಇದೀಗ ಯಾವ ಇಲಾಖೆಯಲ್ಲಿ ಎಷ್ಟು ಹುದ್ದೆಗಳನ್ನು ತುಂಬಬೇಕು ಎನ್ನುವ ಬಗ್ಗೆ ಇಲಾಖೆಗಳೇ ಮುಂದಿನ ತೀರ್ಮಾನ ತೆಗೆದುಕೊಳ್ಳಬೇಕಾಗಿದೆ.
ಇದನ್ನೂ ಓದಿ| ಬೆಂಗಳೂರಿಗೆ ಬರ್ತಾರೆ ಮೋದಿ, ರಾಷ್ಟ್ರಪತಿ, ರಾಜಧಾನಿಯ ಎಲ್ಲ ಕಡೆ ಪೊಲೀಸ್ ಕಣ್ಗಾವಲು