ನವ ದೆಹಲಿ: ಅಲ್ಪಾವಧಿಯ ಹೋಮ್ಸ್ಟೇ ಸೌಲಭ್ಯವನ್ನು (Airbnb Layoff) ಆನ್ಲೈನ್ ಮೂಲಕ ಕಲ್ಪಿಸುವ ಏರ್ಬಿಎನ್ಬಿ ಕಂಪನಿಸಯಲ್ಲಿ 30% ಉದ್ಯೋಗ ಕಡಿತ ನಡೆಯಲಿದೆ ಎಂದು ವರದಿಯಾಗಿದೆ. ಏರ್ಪಿಎನ್ಬಿಯಲ್ಲಿ ಒಟ್ಟು 6,800 ಉದ್ಯೋಗಿಗಳು ಕಾರ್ಯನಿರ್ವಹಿಸುತ್ತಿದ್ದಾರೆ.
ಅನಿವಾರ್ಯವಾಗಿ ಹುದ್ದೆಗಳನ್ನು ಕಡಿತಗೊಳಿಸಬೇಕಾಗಿದೆ. ಇದೊಂದು ಕಠಿಣ ನಿರ್ಧಾರ ಎಂದು ಕಂಪನಿಯ ವಕ್ತಾರರು ತಿಳಿಸಿದ್ದಾರೆ.
ಸ್ಯಾನ್ ಫ್ರಾನ್ಸಿಸ್ಕೊ ಮೂಲದ ಕಂಪನಿ 2022ರಲ್ಲಿ ತನ್ನ ಆದಾಯವನ್ನು ಹೆಚ್ಚಿಸಿಕೊಂಡಿತ್ತು. ಕೋವಿಡ್ ಬಿಕ್ಕಟ್ಟಿನ ಸಂದರ್ಭ ಕಂಪನಿಯು 1900 ಉದ್ಯೋಗಿಗಳನ್ನು ವಜಾಗೊಳಿಸಿತ್ತು.