ಬೆಂಗಳೂರು: ಕರ್ನಾಟಕ ಅರಣ್ಯ ಇಲಾಖೆಯಲ್ಲಿ ಖಾಲಿ ಇರುವ ಒಟ್ಟು 310 ಅರಣ್ಯ ವೀಕ್ಷಕರ ಹುದ್ದೆಯನ್ನು ಭರ್ತಿ (Job News) ಮಾಡಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಸೆಪ್ಟೆಂಬರ್ 19ರಂದು ಈ ಕುರಿತು ಅಧಿಸೂಚನೆ ಹೊರಡಲಿದ್ದು, ಕರ್ನಾಟಕದ ನಾನಾ ವೃತ್ತಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಮುಂದಾಗಿದೆ. ಬೆಂಗಳೂರು, ಬಳ್ಳಾರಿ, ಬೆಳಗಾವಿ, ಚಾಮರಾಜನಗರ, ಚಿಕ್ಕಮಗಳೂರು, ಧಾರವಾಡ, ಹಾಸನ, ಕೆನರಾ, ಕಲಬುರ್ಗಿ, ಕೊಡಗು, ಮಂಗಳೂರು, ಮೈಸೂರು, ಶಿವಮೊಗ್ಗ ವೃತ್ತಗಳಲ್ಲಿ ಹುದ್ದೆಗಳು ನೇಮಕವಾಗಲಿವೆ.
ಸಂಬಂಧಿತ ವೃತ್ತಗಳ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮೂಲಕ ಸೆಪ್ಟೆಂಬರ್ 19ರಂದು ಅಧಿಸೂಚನೆ ಹೊರಡಲಿದೆ. ಸೆಪ್ಟೆಂಬರ್ 27ರಿಂದ ಅರ್ಜಿ ಸಲ್ಲಿಕೆ ಅರಂಭವಾಗಲಿದ್ದು, ಅಕ್ಟೋಬರ್ 26 ಅರ್ಜಿ ಸಲ್ಲಿಕೆಗೆ ಕೊನೇ ದಿನಾಂಕವಾಗಿದೆ. ಹುದ್ದೆಯ ವಯಸ್ಸಿನ ಮಿತಿ ಹಾಗೂ ಶೈಕ್ಷಣಿಕ ಅರ್ಹತೆಗಳ ಕುರಿತು ಇನ್ನೂ ಮಾಹಿತಿ ಬಹಿರಂಗವಾಗಿಲ್ಲ. ಸೆಪ್ಟೆಂಬರ್ 21ರಂದು ಈ ಕುರಿತು ರಾಜ್ಯಪತ್ರದ ಈ ಗೆಜೆಟ್ ಅಧಿಸೂಚನೆ ಹೊರಡಲಿದೆ ಅಂದು ಸಂಪೂರ್ಣ ಮಾಹಿತಿ ಆಕಾಂಕ್ಷಿಗಳಿಗೆ ಲಭ್ಯವಾಗಲಿದೆ.
ಅರ್ಜಿ ಸಲ್ಲಿಕೆ ಸೇರಿದಂತೆ ಎಲ್ಲ ಪ್ರಕ್ರಿಯೆಗಳು ಆನ್ಲೈನ್ ನಡೆಯಲಿವೆ ಎಂಬುದು ಕರಡು ಅಧಿಸೂಚನೆಯ ಮೂಲಕ ಗೊತ್ತಾಗಿದೆ.
ಬೆಂಗಳೂರು ವೃತ್ತ 33
ಬೆಂಗಳೂರು ನಗರ ವಿಭಾಗ 5 ಹುದ್ದೆ, ಬೆಂಗಳೂರು ಗ್ರಾಮಾಂತರ ವಿಭಾಗದಲ್ಲಿ 5 ಹುದ್ದೆ, ರಾಮನಗರ ವಿಭಾಗದಲ್ಲಿ 5 ಹುದ್ದೆ, ಕೋಲಾರ ವಿಭಾಗದಲ್ಲಿ 5 ಹುದ್ದೆ, ,ಚಿಕ್ಕಬಳ್ಳಾಪುರ ವಿಭಾಗದಲ್ಲಿ 5 ಹುದ್ದೆ ಹಾಗೂ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದಲ್ಲಿ 8 ಹುದ್ದೆಗಳಿವೆ.
ಬೆಳಗಾವಿ ವೃತ್ತದಲ್ಲಿ 20 ಹುದ್ದೆ
ಘಟಪ್ರಭ ವಿಭಾಗದಲ್ಲಿ 6 ಹುದ್ದೆ, ಬಾಗಲಕೋಟೆ ವಿಭಾಗದಲ್ಲಿ 7 ಹುದ್ದೆ, ವಿಜಯಪುರ ವಿಭಾಗದಲ್ಲಿ 1 ಹುದ್ದೆಗಳು ಖಾಲಿ ಇವೆ
ಬಳ್ಳಾರಿ ವೃತ್ತದಲ್ಲಿ 20 ಹುದ್ದೆಗಳು
ಬಳ್ಳಾರಿ ವಿಭಾಗದಲ್ಲಿ 4 ಹುದ್ದೆಗಳು, ವಿಜಯನಗರ ವಿಭಾಗದಲ್ಲಿ 6 ಹುದ್ದೆಗಳು, ಚಿತ್ರದುರ್ಗ ವಿಭಾಗದಲ್ಲಿ 4 ಹುದ್ದೆಗಳು, ದಾವಣಗೆರೆ ವಿಭಾಗದಲ್ಲಿ 4 ಹುದ್ದೆಳು ಹಾಗೂ ಕೂಪ್ಪಳ ವಿಭಾಗದಲ್ಲಿ 2 ಹುದ್ದೆಗಳು ಭರ್ತಿಯಾಗಲಿವೆ.
ಚಾಮರಾಜನಗರ ವೃತ್ತದಲ್ಲಿ 32 ಹುದ್ದೆಗಳು
ಬಿ.ಆರ್.ಟಿ. ಹುಲಿ ಸಂರಕ್ಷಿತ ಪ್ರದೇಶ ಚಾಮರಾಜನಗರ ವಿಭಾಗದಲ್ಲಿ 6 ಹುದ್ದೆಗಳು, ಮಲೆ, ಮಹದೇಶ್ವರ ವನ್ಯಜೀವಿ ವಿಭಾಗದಲ್ಲಿ 10 ಹುದ್ದೆಗಳು, ಕಾವೇರಿ ವನ್ಯ ಜೀವಿ ವಿಭಾಗದಲ್ಲಿ 6 ಹುದ್ದೆಗಳು, ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ 10 ಹುದ್ದೆಗಳು ಭರ್ತಿಯಾಗಲಿವೆ.
ಇದನ್ನೂ ಓದಿ : SBI recruitment 2023: ಭಾರತೀಯ ಸ್ಟೇಟ್ ಬ್ಯಾಂಕ್‌ನಲ್ಲಿ ತರಬೇತಿ ಹುದ್ದೆಗಳಿಗೆ ಅರ್ಜಿ ಆಹ್ವಾನ
ಚಿಕ್ಕಮಗಳೂರು ವೃತ್ತದಲ್ಲಿ 25 ಹುದ್ದೆಗಳು
ಚಿಕ್ಕಮಗಳೂರು ವಿಭಾಗದಲ್ಲಿ 1 ಹುದ್ದೆ, ಕೊಪ್ಪ, ವಿಭಾಗದಲ್ಲಿ 10 ಹುದ್ದೆ, ಭದ್ರಾ ಹುಲಿ ಸಂರಕ್ಷಿತ ಪ್ರದೇಶದಲ್ಲಿ 14 ಹುದ್ದೆಗಲು ಭರ್ತಿಯಾಗಲಿವೆ.
ಧಾರವಾಡ ವೃತ್ತದಲ್ಲಿ 7 ಹುದ್ದೆಗಳು
ಧಾರವಾಡ ವಿಭಾಗದಲ್ಲಿ 2 ಹುದ್ದೆಗಳು, ಗದಗ ವಿಭಾಗದಲ್ಲಿ 2 ಹುದ್ದೆಗಳು ಹಾಗೂ ಹಾವೇರಿ ವಿಭಾಗದಲ್ಲಿ 4 ಹುದ್ದೆಗಳಿವೆ.
ಹಾಸನ ವೃತ್ತದಲ್ಲಿ 20 ಹುದ್ದೆಗಳು
ಹಾಸನ ವಿಭಾಗದಲ್ಲಿ 8 ಹುದ್ದೆಗಳು, ತುಮಕೂರು ವಿಭಾಗದಲ್ಲಿ 12 ಹುದ್ದೆಗಳಿವೆ.
ಕೆನರಾ ವೃತ್ತದಲ್ಲಿ 32 ಹುದ್ದೆಗಳು
ಕಾರವಾರ ವಿಭಾಗದಲ್ಲಿ 4 ಹುದ್ದೆಗಳು, ಹಳಿಯಾಳ ವಿಭಾಗದಲ್ಲಿ 3 ಹುದ್ದೆಗಳು, ಯಲ್ಲಾಪುರ ವಿಭಾಗದಲ್ಲಿ 5 ಹುದ್ದೆಗಳು, ಶಿರಸಿ ವಿಭಾಗದಲ್ಲಿ 1 ಹುದ್ದೆ, ಹೊನ್ನಾವರ ವಿಭಾಗದಲ್ಲಿ 5 ಹುದ್ದೆ, ಕಾಳಿ ಹುಲಿ ಸಂರಕ್ಷಿತ ಪ್ರದೇಶ, ದಾಂಡಲಿಯಲ್ಲಿ 14 ಹುದ್ದೆಗಳಿವೆ.
ಇದನ್ನೂ ಓದಿ :
ಕೊಡಗು ವೃತ್ತದಲ್ಲಿ 16 ಹುದ್ದೆಗಳು
ಮಡಿಕೇರಿ ವಿಭಾಗದಲ್ಲಿ 1 ಹುದ್ದೆಗಳು, ವಿರಾಜಪೇಟೆ ವಿಭಾಗದಲ್ಲಿ 5 ಹುದ್ದೆಗಳು, ಮಡಿಕೇರಿ ವನ್ಯಜೀವಿ ವಿಭಾಗದಲ್ಲಿ 6 ಹುದ್ದೆಗಳು.
ಕಲಬುರ್ಗಿ ವೃತ್ತದಲ್ಲಿ 24 ಹುದ್ದೆಗಳು
ಯಾದಗಿರಿ ವಿಭಾಗದಲ್ಲಿ 7 ಹುದ್ದೆಗಳು, ರಾಯಚೂರು ವಿಭಾಗದಲ್ಲಿ 4 ಹುದ್ದೆಗಳಿವೆ.
ಮಂಗಳೂರು ವೃತ್ತದಲ್ಲಿ 20 ಹುದ್ದೆಗಳು
ಮಂಗಳೂರು ವಿಭಾಗದಲ್ಲಿ 5 ಹುದ್ದೆಗಳು, ಕುಂದಾಪುರ ವಿಭಾಗದಲ್ಲಿ 5 ಹುದ್ದೆಗಳು, ಕುದುರೆಮುಖ ವನ್ಯಜೀವಿ ವಿಭಾಗದಲ್ಲಿ 10 ಹುದ್ದೆಗಳು.
ಮೈಸೂರು ವೃತ್ತದಲ್ಲಿ 12 ಹುದ್ದೆಗಳು
ಮೈಸೂರು ವಿಭಾಗದಲ್ಲಿ 5 ಹುದ್ದೆಗಳು, ಹುಣಸೂರು ವಿಭಾಗದಲ್ಲಿ 4 ಹುದ್ದೆಗಳು, ಮಂಡ್ಯ, ವಿಭಾಗದಲ್ಲಿ 5 ಹುದ್ದೆಗಳು, ಮೈಸೂರು ವನ್ಯಜೀವಿ ವಿಭಾಗದಲ್ಲಿ 6 ಹುದ್ದೆಗಳು, ರಾಜೀವ್ ಗಾಂಧಿ ರಾಷ್ಟ್ರೀಯ ಉದ್ಯಾನವನದಲ್ಲಿ 12 ಹುದ್ದೆಗಳಿವೆ.
ಶಿವಮೊಗ್ಗ ವೃತ್ತದಲ್ಲಿ 30 ಹುದ್ದೆಗಳು
ಶಿವಮೊಗ್ಗ
ಶಿವಮೊಗ್ಗ, ವಿಭಾಗದಲ್ಲಿ 8 ಹುದ್ದೆಗಳು, ಭದ್ರಾವತಿ ವಿಭಾಗದಲ್ಲಿ 8 ಹುದ್ದೆಗಳು, ಸಾಗರ ವಿಭಾಗದಲ್ಲಿ 8 ಹುದ್ದೆಗಳು, ಶಿವಮೊಗ್ಗ ವನ್ಯಜೀವಿ ವಿಭಾಗದಲ್ಲಿ 8 ಹುದ್ದೆಗಳಿವೆ.