Site icon Vistara News

Layoffs 2023 : ಅಕ್ಸೆಂಚರ್‌ನಿಂದ ಭಾರತದಲ್ಲಿ 7,000 ಹುದ್ದೆ ಕಡಿತ ನಿರೀಕ್ಷೆ

Accenture

Accenture

ಬೆಂಗಳೂರು: ಐಟಿ ಕಂಪನಿ ಅಕ್ಸೆಂಚರ್‌ (Accenture) ಮುಂದಿನ ಒಂದೂವರೆ ವರ್ಷದಲ್ಲಿ ತನ್ನ 19,000 ಉದ್ಯೋಗಿಗಳನ್ನು ವಜಾಗೊಳಿಸಲು ಉದ್ದೇಶಿಸಿದೆ. (Layoffs 2023) ಈ ಪೈಕಿ ಭಾರತದಲ್ಲಿಯೇ 7,000 ಟೆಕ್ಕಿಗಳಿಗೆ ಉದ್ಯೋಗ ನಷ್ಟವಾಗುವ ಸಾಧ್ಯತೆ ಇದೆ. ದೇಶದಲ್ಲಿ 3.5 ಲಕ್ಷ ಉದ್ಯೋಗಿಗಳನ್ನು ಕಂಪನಿ ಹೊಂದಿದೆ. ಹೀಗಾಗಿ ಭಾರತೀಯ ಟೆಕ್ಕಿಗಳ ವಲಯದಲ್ಲಿ ಭೀತಿ ಉಂಟಾಗಿದೆ.

ಕಳೆದ ವರ್ಷ ಆರ್ಥಿಕ ಅನಿಶ್ಚಿತತೆ ಹಿನ್ನೆಲೆಯಲ್ಲಿ ಲಕ್ಷಾಂತರ ಮಂದಿ ಉದ್ಯೋಗ ಕಳೆದುಕೊಂಡಿದ್ದರು. 1,052 ಟೆಕ್‌ ಕಂಪನಿಗಳು 1,61,411 ಉದ್ಯೋಗಿಗಳನ್ನು ವಜಾಗೊಳಿಸಿತ್ತು. ಈ 2023 ರಲ್ಲಿ ಕೂಡ 500 ಟೆಕ್‌ ಕಂಪನಿಗಳು 1,50,000 ಸಿಬ್ಬಂದಿಯನ್ನು ವಜಾಗೊಳಿಸಿವೆ.

ಉದ್ಯೋಗ ಕಡಿತ ಜಾಗತಿಕ ಸಮಸ್ಯೆಯಾಗಿದ್ದು, ಭಾರತವೂ ಹೊರತಾಗಿಲ್ಲ. ಬೈಜೂಸ್‌, ಅನ್‌ಅಕಾಡೆಮಿ, ವೇದಾಂತು, ಸ್ವಿಗ್ಗಿ, ಓಲಾದಲ್ಲಿ ಸಾವಿರಾರು ನೌಕರರು ಉದ್ಯೋಗ ಕಳೆದುಕೊಂಡಿದ್ದಾರೆ.

2023ರಲ್ಲಿ ಉದ್ಯೋಗ ಕಡಿತ ಇಂತಿದೆ:

ಬೈಜೂಸ್:‌ 4,000

ಅನ್‌ ಅಕಾಡೆಮಿ: 1,500

ಓಲಾ: 1,400

ವೇದಾಂತು : 1,100

ಸ್ವಿಗ್ಗಿ: 630

ಕಾರ್ಸ್‌ 24: 600

ಓಯೊ: 600

ಶೇರ್‌ಚಾಟ್‌ : 600

ಉದ್ಯೋಗಾವಕಾಶ ಕುರಿತ ಸೇವೆ ನೀಡುವ‌ ಅಮೆರಿಕ ಮೂಲದ ಇಂಡೀಡ್‌ನಲ್ಲೂ 2,200 ಸಿಬ್ಬಂದಿ ಉದ್ಯೋಗ ಕಳೆದುಕೊಂಡಿದ್ದಾರೆ. ಇತ್ತೀಚೆಗೆ ಅಮೆಜಾನ್‌ 9,000 ಉದ್ಯೋಗಗಳನ್ನು ಕಡಿತಗೊಳಿಸಿದೆ. ಮೆಟಾ 10,000 ಉದ್ಯೋಗಗಳನ್ನು ಕಡಿತಗೊಳಿಸಲಿದೆ.

Exit mobile version