Site icon Vistara News

Agniveer Recruitment 2023: ಭಾರತೀಯ ವಾಯುಪಡೆಗೆ ಅಗ್ನಿವೀರರ ನೇಮಕ; ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ

Agniveer Recruitment 2023 agniveer vayu

ನವ ದೆಹಲಿ: ಸೇನಾ ನೇಮಕಾತಿ ಯೋಜನೆ ʼಅಗ್ನಿಪಥ್‌ʼ (Agnipath) ಅಡಿಯಲ್ಲಿ ಭಾರತೀಯ ವಾಯುಪಡೆಯು (Indian Air Force) ʼಅಗ್ನಿವೀರʼ ರನ್ನು (Agniveervayu) ನೇಮಿಸಿಕೊಳ್ಳುತ್ತಿದ್ದು (Agniveer Recruitment 2023), ಅವಿವಾಹಿತ ಪರುಷ ಮತ್ತು ಮಹಿಳಾ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.

ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗುತ್ತಿದ್ದು, ಅರ್ಹ ಅಭ್ಯರ್ಥಿಗಳು ಜುಲೈ 27 ರಿಂದ ಆಗಸ್ಟ್‌ 17ರ ವರೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಅಕ್ಟೋಬರ್‌ 13 ರ ನಂತರ ಈ ನೇಮಕಾತಿಗೆ ಸಂಬಂಧಿಸಿದಂತೆ ಲಿಖಿತ ಪರೀಕ್ಷೆ ನಡೆಸಲಾಗುವುದು ಎಂದು ವಾಯು ಪಡೆಯು ಪ್ರಕಟಣೆಯಲ್ಲಿ ತಿಳಿಸಿದೆ.

ವಿದ್ಯಾರ್ಹತೆ ಏನು?

  1. ದ್ವಿತೀಯ ಪಿಯುಸಿಯಲ್ಲಿ ಉತ್ತೀರ್ಣರಾಗಿರಬೇಕು. ಇಲ್ಲವೇ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು. ಇಂಗ್ಲಿಷ್‌, ಪಿಜಿಕ್ಸ್‌ ಮತ್ತು ಮ್ಯಾಥ್‌ಮೆಟಿಕ್ಸ್‌ ಓದಿರಬೇಕಾದದು ಕಡ್ಡಾಯ. ಶೇ.50 ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು. ಇಂಗ್ಲಿಷ್‌ನಲ್ಲಿಯೂ ಶೇ.50 ಅಂಕ ಪಡೆದಿರಬೇಕು.
    ಅಥವಾ
  2. ಮೂರು ವರ್ಷಗಳ ಡಿಪ್ಲೊಮಾವನ್ನು (ಮೆಕ್ಯಾನಿಕಲ್‌/ಎಲೆಕ್ಟ್ರಿಕಲ್‌/ಎಲೆಕ್ಟ್ರಾನಿಕ್ಸ್‌/ ಆಟೋಮೊಬೈಲ್‌/ ಕಂಪ್ಯೂಟರ್‌ ಸೈನ್ಸ್‌/ ಇನ್‌ಸ್ಟ್ರುಮೆಂಟೇಷನ್‌ ಟೆಕ್ನಾಲಜಿ, ಇನ್‌ಫಾರ್ಮೆಷನ್‌ ಟೆಕ್ನಾಲಜಿ) ಪೂರ್ಣಗೊಳಿಸಿರಬೇಕು. ಶೇ.50 ರಷ್ಟು ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು.
    ಅಥವಾ
  3. ಎರಡು ವರ್ಷಗಳ ವೃತಿಪರ ಕೋರ್ಸ್‌ ಮಾಡಿರಬೇಕು (ಇಂಗ್ಲಿಷ್‌, ಫಿಕಿಕ್ಸ್‌ ಮತ್ತು ಮ್ಯಾಥ್‌ಮೆಟಿಕ್ಸ್‌ ಓದಿರಬೇಕು) ಶೇ. 50 ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು.
  4. ಪಿಯುಸಿಯಲ್ಲಿ ವಿಜ್ಞಾನ ವಿಷಯವನ್ನು ಓದಿರದ ಅಭ್ಯರ್ಥಿಗಳೂ ಅರ್ಜಿ ಸಲ್ಲಿಸಬಹುದು.

ದೈಹಿಕ ಅರ್ಹತೆಗಳೇನು?

ಪುರುಷ ಅಭ್ಯರ್ಥಿಗಳು ಕನಿಷ್ಠ 152.5 ಸೆಂ. ಮೀ. ಎತ್ತರವಿರಬೇಕು. ಮಹಿಳಾ ಅಭ್ಯರ್ಥಿಗಳು 152 ಸೆಂ.ಮೀ ಎತ್ತರವಿರಬೇಕು. ಎತ್ತರಕ್ಕೆ ತಕ್ಕ ತೂಕ ಹೊಂದಿರಬೇಕು. ಎದೆಯನ್ನು ಕನಿಷ್ಠ 5 ಸೆಂ.ಮೀ. ಹಿಗ್ಗಿಸುವ ಸಾಮರ್ಥ್ಯವಿರಬೇಕು. ಅತ್ಯುತ್ತಮ ದೃಷ್ಟಿ, ಹಲ್ಲುಗಳ ಆರೋಗ್ಯ ಸೇರದಿಂತೆ ಅತ್ಯುತ್ತಮ ದೈಹಿಕ ಆರೋಗ್ಯವನ್ನು ಅಭ್ಯರ್ಥಿಗಳು ಹೊಂದಿರಬೇಕು.

ಇತ್ತ ಗಮನಿಸಿ
ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭಿಕ ದಿನಾಂಕ : 27-07-2023
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 17-08-2023 ( ರಾತ್ರಿ 11 ಗಂಟೆಯವರೆಗೆ ಮಾತ್ರ)
ಅರ್ಜಿ ಶುಲ್ಕ : 25 ರೂ. (ಆನ್‌ಲೈನ್‌ನಲ್ಲಿಯೇ ಪಾವತಿಸಬಹುದಾಗಿದೆ)
ಮಾಹಿತಿಗೆ ಸಹಾಯವಾಣಿ ಸಂಖ್ಯೆ: 20-25503105/25503106
ಹೆಚ್ಚಿನ ಮಾಹಿತಿಗೆ ವೆಬ್‌ ಸೈಟ್‌:
https://agnipathvayu.cdac.in

ವಯೋಮಿತಿ ಎಷ್ಟು ?

21 ವರ್ಷದೊಳಗಿನ ಅಭ್ಯರ್ಥಿಗಳು ಅಗ್ನಿವೀರರ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. 27 ಜೂನ್‌2003 ರಿಂದ 27 ಡಿಸೆಂಬರ್‌ 2006ರ ಒಳಗೆ ಜನಿಸಿದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಅರ್ಜಿ ಶುಲ್ಕ ಎಷ್ಟು?

ವಾಯುಪಡೆಯ ಅಗ್ನಿವೀರರ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 250 ರೂ. ಪರೀಕ್ಷಾ ಶುಲ್ಕ ಪಾವತಿಸ ಬೇಕಿರುತ್ತದೆ. ಆನ್‌ಲೈನ್‌ನಲ್ಲಿಯೇ ಶುಲ್ಕ ಪಾವತಿಸಲು ಅವಕಾಶ ನೀಡಲಾಗುತ್ತದೆ.

ವಿವರವಾದ ಅಧಿಸೂಚನೆ ನೋಡಲು ಇಲ್ಲಿ ಕ್ಲಿಕ್‌ (Click Here) ಮಾಡಿ.

ನೇಮಕ ಹೇಗೆ?

ಒಟ್ಟು ಮೂರು ಹಂತದ ಪರೀಕ್ಷೆ ಮೂಲಕ ಅಗ್ನಿವೀರರ ನೇಮಕ ನಡೆಯಲಿದೆ. ಮೊದಲಿಗೆ ಆನ್‌ಲೈನ್‌ನಲ್ಲಿ ಲಿಖಿತ ಪರೀಕ್ಷೆ ನಡೆಸಲಾಗುತ್ತದೆ. ಅಬ್ಜೆಕ್ಟೀವ್‌ ಮಾದರಿಯಲ್ಲಿ ಈ ಪರೀಕ್ಷೆ ಇರಲಿದ್ದು, ಇಂಗ್ಲಿಷ್‌ ಅಥವಾ ಹಿಂದಿಯಲ್ಲಿ ಪರೀಕ್ಷೆ ಬರೆಯಬಹುದಾಗಿರುತ್ತದೆ. ಇದರಲ್ಲಿ ಅರ್ಹತೆ ಪಡೆದವರು ಎರಡನೇ ಹಂತದ ಪರೀಕ್ಷೆಗೆ ಆಯ್ಕೆಯಾಗಲಿದ್ದಾರೆ. ಫಲಿತಾಂಶವನ್ನು CASB ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುತ್ತದೆ.

ಎರಡನೇ ಹಂತದಲ್ಲಿ ದೈಹಿಕ ಸಾಮರ್ಥ್ಯ ಪರೀಕ್ಷೆ ನಡೆಯಲಿದೆ. ಮೊದಲಿಗೆ 1.6 ಕಿ.ಮೀ. ಓಡಬೇಕಿರುತ್ತದೆ. ಪುರುಷ ಅಭ್ಯರ್ಥಿಗಳಿಗೆ ಏಳು ನಿಮಿಷ ಮಹಿಳಾ ಅಭ್ಯರ್ಥಿಗಳಿಗೆ 8 ನಿಮಿಷ ಸಮಯ ನಿಗದಿಪಡಿಸಲಾಗಿರುತ್ತದೆ. ನಂತರ ಸಿಟ್‌ಅಪ್ಸ್‌, ಪುಷ್‌ಅಪ್ಸ್‌ ಪರೀಕ್ಷೆ ನಡೆಯಲಿದೆ. ನಂತರ ಹೊಂದಾಣಿಕೆಗೆ ಸಂಬಂಧಿಸಿದ (Adaptability Test) ಪರೀಕ್ಷೆಗಳು ನಡೆಯಲಿವೆ.

ಉದ್ಯೋಗಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ (Click Here ) ಮಾಡಿ.

ಮೂಲ ದಾಖಲೆಗಳ ಪರಿಶೀಲನೆ, ವಿದ್ಯಾರ್ಹತೆಗೆ ಸಂಬಂಧಿಸಿದ ಮಾಹಿತಿಗಳ ಪರಿಶೀಲನೆ, ಇತರ ಕೌಶಲ, ಸಾಧನೆಗಳ ಮಾಹಿತಿ ಸಂಗ್ರಹ ನಡೆಯಲಿದೆ. ಮೂರನೇ ಹಂತದಲ್ಲಿ ವೈದ್ಯಕೀಯ ಪರೀಕ್ಷೆ ನಡೆಯಲಿದ್ದು, ಇದರಲ್ಲಿಯೂ ಆಯ್ಕೆಯಾದಲ್ಲಿ ಭಾರತೀಯ ವಾಯುಪಡೆಯು ʼಅಗ್ನಿವೀರರʼ ಹುದ್ದೆಗೆ ನೇಮಕ ಮಾಡಿಕೊಳ್ಳಲಾಗುತ್ತದೆ.

ಇದನ್ನೂ ಓದಿ: Indian Army Recruitment 2023 : ಎಂಜಿನಿಯರಿಂಗ್‌ ಪದವೀಧರರಿಗೆ ಸೇನೆಯಲ್ಲಿ ಆಫೀಸರ್‌ ಹುದ್ದೆ; ಕೂಡಲೇ ಅರ್ಜಿ ಸಲ್ಲಿಸಿ!

ವೇತನ ಎಷ್ಟು?

ಅಗ್ನಿವೀರರಾಗಿ ನೇಮಕಗೊಳ್ಳುವವರು ನಾಲ್ಕು ವರ್ಷ ಸೇವೆಯ ನಂತರ ಒಟ್ಟು 10.04 ಲಕ್ಷ ರೂ. ಪ್ಯಾಕೇಜ್‌ ಪಡೆಯಲಿದ್ದಾರೆ. ಇದಲ್ಲದೆ, ಪ್ರತಿ ತಿಂಗಳು ಮೊದಲ ವರ್ಷ 21,000 ರೂ. ಎರಡನೇ ವರ್ಷ 23,100 ರೂ. , ಮೂರನೇ ವರ್ಷ 25,550 ರೂ. ಹಾಗೂ ನಾಲ್ಕನೇ ವರ್ಷ 28,000 ರೂ. ವೇತನ ಪಡೆಯಲಿದ್ದಾರೆ.

Exit mobile version