ನವ ದೆಹಲಿ: ಈಗ ಟಾಟಾ ಗ್ರೂಪ್‌ನ ಒಡೆತನಕ್ಕೆ ಒಳಪಟ್ಟ ಏರ್ ಇಂಡಿಯಾವು ವಿಮಾನ ಸಿಬ್ಬಂದಿ (ಕ್ಯಾಬಿನ್ ಕ್ರೂ) ನೇಮಕಕ್ಕೆ (Air India Recruitment 2023) ಸಂದರ್ಶನ ನಡೆಸುತ್ತಿದೆ. ದೆಹಲಿ ಜೈಪುರ, ಚೆನ್ನೈ, ಹೈದರಾಬಾದ್, ಕೋಲ್ಕತ್ತಾ, ಗುವಾಹತಿ, ಅಹ್ಮದಾಬಾದ್, ಇಂದೋರ್, ಪುಣೆ ಮತ್ತು ಲಕ್ನೋದಲ್ಲಿ ಈ ಸಂದರ್ಶನ ನಡೆಯಲಿದೆ. ಮಾ.24ರ ವರೆಗೆ ವಿವಿಧ ದಿನ ಈ ಸಂದರ್ಶನ ನಡೆಯಲಿದೆ.
ವಿಮಾನದ ಪ್ರಯಾಣಿಕರನ್ನು ಸ್ವಾಗತಿಸುವುದು, ಅವರಿಗೆ ಅಗತ್ಯ ಸೇವೆ ನೀಡುವುದು, ಅವರ ಸುರಕ್ಷತೆಯನ್ನು ನೋಡಿಕೊಳ್ಳುವುದು ಹಾಗೂ ವಿಮಾನದ ಪ್ರಯಾಣದ ವೇಳೆ ನಿರ್ವಹಿಸಬೇಕಾಗಿರುವ ಎಲ್ಲ ಕಾರ್ಯಗಳನ್ನು ನಿರ್ವಹಿಸುವುದು ಈ ಸಿಬ್ಬಂದಿಯ ಕೆಲಸವಾಗಿದೆ. ದ್ವಿತೀಯ ಪಿಯುಸಿಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳು ಈ ಹುದ್ದೆಗಳಿಗೆ ನಡೆಯುವ ಸಂದರ್ಶನದಲ್ಲಿ ಭಾಗವಹಿಸಬಹುದಾಗಿದೆ. ಹೊಸಬರಾದರೆ 18 ರಿಂದ 27 ವರ್ಷದ ಒಳಗಿನವರಾಗಿರಬೇಕು. ಅನುಭವ ಹೊಂದಿದವರಾದರೆ 35 ವರ್ಷದೊಳಗಿನವರಾಗಿರಬೇಕು.
ಮಹಿಳಾ ಅಭ್ಯರ್ಥಿಗಳು ಮಾತ್ರ ಈ ಹುದ್ದೆಗಳಿಗೆ ನಡೆಯುವ ಸಂದರ್ಶನದಲ್ಲಿ ಭಾಗವಹಿಸಬಹುದಾಗಿದೆ. ಅಭ್ಯರ್ಥಿಗಳು 155 ಸೆಂ.ಮೀ. ಎತ್ತರವಿರಬೇಕು. ಎತ್ತರಕ್ಕೆ ತಕ್ಕ ತೂಕ ಹೊಂದಿರಬೇಕು. ಹಿಂದಿ ಮತ್ತು ಇಂಗ್ಲಿಷ್‌ನಲ್ಲಿ ಚೆನ್ನಾಗಿ ಮಾತನಾಡಲು ಬರುತ್ತಿರಬೇಕು. ಪಶ್ಚಿಮಾತ್ಯ ಉಡುಗೆ ಧರಿಸಲು ಸಿದ್ಧರಿರಬೇಕು.
ಎಲ್ಲಿ ಎಂದು, ಯಾವಾಗ ಸಂದರ್ಶನ?
ಸ್ಥಳ | ದಿನಾಂಕ | ಸಮಯ |
ಮುಂಬಯಿ | 3 March 2023 | 9:30 am to 12:30 pm |
ದೆಹಲಿ | 6 march 2023, 13 March 2023, 20 March 2023 | 9:30 am to 12:30 pm |
ಜೈಪುರ | 7 March 2023 | 9:30 am to 12:30 pm |
ಚೆನ್ನೈ | 10 March 2023 | 9:30 am to 12:30 pm |
ಹೈದರಾಬಾದ್ | 10 March 2023 | 9:30 am to 12:30 pm |
ಕೋಲ್ಕತ್ತಾ | 14 March 2023 | 9:30 am to 12:30 pm |
ಗುವಾಹತಿ | 16 March 2023 | 9:30 am to 12:30 pm |
ಅಹಮದಾಬಾದ್ | 17 March 2023 | 9:30 am to 12:30 pm |
ಇಂದೋರ್ | 21 March 2023 | 9:30 am to 12:30 pm |
ಮುಂಬಯಿ | 23 March 2023 | 9:30 am to 12:30 pm |
ಪುಣೆ | 24 March 2023 | 9:30 am to 12:30 pm |
ಲಕ್ನೋ | 24 March 2023 | 9:30 am to 12:30 pm |
ಈ ನೇಮಕದ ಕುರಿತ ಹೆಚ್ಚಿನ ಮಾಹಿತಿಯನ್ನು ಪಡೆಯಲು ಇಲ್ಲಿ ಕ್ಲಿಕ್ (Click Here) ಮಾಡಿ.
5,100 ಮಂದಿಗೆ ಉದ್ಯೋಗ
ಕಳೆದ ವಾರ ಏರ್ ಇಂಡಿಯಾ 900 ಪೈಲಟ್‌ಗಳು ಹಾಗೂ 4,200 ಸಿಬ್ಬಂದಿಯನ್ನು ಶೀಘ್ರದಲ್ಲಿಯೇ ನೇಮಕ ಮಾಡಿಕೊಳ್ಳುವುದಾಗಿ (Air India hiring) ಪ್ರಕಟಿಸಿತ್ತು. ಒಟ್ಟು 5,100 ಮಂದಿಗೆ ಏರ್‌ಲೈನ್‌ನಲ್ಲಿ ಉದ್ಯೋಗಾವಕಾಶ ಸಿಗಲಿದೆ ಎಂದು ಪ್ರಕಟಿಸಲಾಗಿತ್ತು. ಅದರ ಬೆನ್ನಲ್ಲೇ ಈ ವಿಮಾನ ಸಿಬ್ಬಂದಿ ನೇಮಕದ ಪ್ರಕಟಣೆ ಹೊರ ಬಿದ್ದಿದೆ. ಕಳೆದ ವರ್ಷ ಅಂದರೆ 2022ರ ಮೇ ಮತ್ತು 2023ರ ಫೆಬ್ರವರಿ ನಡುವೆ ಏರ್ ಇಂಡಿಯಾ 1900 ಕ್ಯಾಬಿನ್ ಸಿಬ್ಬಂದಿಯನ್ನು ನೇಮಿಸಿತ್ತು.
ಇನ್ನಿತರ ಉದ್ಯೋಗದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ (Click Here) ಮಾಡಿ.
ಏರ್ ಇಂಡಿಯಾ ಮುಂದಿನ 10 ವರ್ಷಗಳಲ್ಲಿ 470 ವಿಮಾನಗಳನ್ನು ಖರೀದಿಸಲು ಏರ್‌ಬಸ್ ಮತ್ತು ಬೋಯಿಂಗ್ ಜತೆ ಇತ್ತೀಚೆಗೆ ಒಪ್ಪಂದ ಮಾಡಿಕೊಂಡಿದೆ. ಈ ವಿಮಾನ ಖರೀದಿ 840ಕ್ಕೆ ಏರಿಕೆಯಾಗುವ ಸಾಧ್ಯತೆ ಇದೆ. ಏರ್‌ಬಸ್ ಫ್ರಾನ್ಸ್ ಮೂಲದ ಏರ್‌ಲೈನ್ ಆಗಿದ್ದರೆ, ಬೋಯಿಂಗ್ ಅಮೆರಿಕ ಮೂಲದ ಏರ್‌ಲೈನ್ ಕಂಪನಿಯಾಗಿದೆ. ಏರ್ ಇಂಡಿಯಾವು ಏರ್‌ಬಸ್‌ನಿಂದ ಕಳೆದ 17 ವರ್ಷಗಳ ಬಳಿಕ ಮೊದಲ ಸಲ ವಿಮಾನವನ್ನು ಖರೀದಿಸುತ್ತಿದೆ. ಈ ಡೀಲ್ ಪರಿಣಾಮ ಅಮೆರಿಕದಲ್ಲಿ 10 ಲಕ್ಷ ಉದ್ಯೋಗ ಸೃಷ್ಟಿಯಾಗಲಿದೆ.
ಭಾರತಕ್ಕೆ ಮುಂದಿನ 15 ವರ್ಷಗಳಲ್ಲಿ 2,000 ವಿಮಾನಗಳ ಅಗತ್ಯವಿದೆ. ಏರ್ ಇಂಡಿಯಾದ ಐತಿಹಾಸಿಕ ವಿಮಾನಗಳ ಖರೀದಿ ಡೀಲ್‌ನ ಮೌಲ್ಯ 115 ಶತಕೋಟಿ ಡಾಲರ್ ( 9.43 ಲಕ್ಷ ಕೋಟಿ ರೂ.) ಹೀಗಾಗಿ ಭಾರತದಲ್ಲೂ ಮುಂದಿನ ದಶಕದಲ್ಲಿ ಏರ್ ಇಂಡಿಯಾ ಒಂದರಲ್ಲಿಯೇ ಸಾವಿರಾರು ಉದ್ಯೋಗ ಸೃಷ್ಟಿಯಾಗಲಿದೆ.
ಇದನ್ನೂ ಓದಿ: Land Surveyor Recruitment : 2000 ಭೂಮಾಪಕರ ನೇಮಕಕ್ಕೆ ಅರ್ಜಿ ಆಹ್ವಾನ; ಅರ್ಜಿ ಸಲ್ಲಿಸಲು ಮಾ.10 ಕೊನೆಯ ದಿನ