ಬೆಂಗಳೂರು: ಕರ್ನಾಟಕ ಅರಣ್ಯ ಇಲಾಖೆಯಲ್ಲಿನ (Karnataka Forest Department) ವಿವಿಧ ವೃತ್ತಗಳಲ್ಲಿ ಖಾಲಿ ಇರುವ ಸುಮಾರು 310 ಅರಣ್ಯ ವೀಕ್ಷಕ (Forest Watcher) ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ನೇರ ನೇಮಕಾತಿ ಮೂಲಕ ಹುದ್ದೆಗಳನ್ನು ಭರ್ತಿ ಮಾಡಲಾಗುವುದು ಎಂದು ಅಧಿಸೂಚನೆ ತಿಳಿಸಿದೆ. ಆಸಕ್ತರು ಅಕ್ಟೋಬರ್ 26ರ ಒಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಶೈಕ್ಷಣಿಕ ಅರ್ಹತೆ
Karnataka Forest Departmet (KFD) ಅಧಿಕೃತ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ 10ನೇ ತರಗತಿ / ಎಸ್ಸೆಸ್ಸೆಲ್ಸಿ ತೇರ್ಗಡೆಯಾಗಿರಬೇಕು. 18ರಿಂದ 30 ವರ್ಷದೊಳಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಮೀಸಲಾತಿ ವಿಭಾಗದವರಿಗೆ ರಿಯಾಯಿತಿ ಇದೆ. ಎಸ್‌ಸಿ, ಎಸ್‌ಟಿ ಅಭ್ಯರ್ಥಿಗಳಿಗೆ 3 ವರ್ಷ ಮತ್ತು ಒಬಿಸಿ ವಿಭಾಗದವರಿಗೆ 2 ವರ್ಷಗಳ ರಿಯಾಯಿತಿ ಅನ್ವಯವಾಗಲಿದೆ.
ಎಸ್‌ಸಿ, ಎಸ್‌ಟಿ ಅಭ್ಯರ್ಥಿಗಳು 100 ರೂ. ಅರ್ಜಿ ಶುಲ್ಕ ಪಾವತಿಸಬೇಕು. ಉಳಿದ ಎಲ್ಲಾ ವಿಭಾಗದ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ 200 ರೂ. ಪರೀಕ್ಷೆ, ಸಂದರ್ಶನ, ವೈದ್ಯಕೀಯ ಪರೀಕ್ಷೆಯ ಮೂಲಕ ಆಯ್ಕೆ ನಡೆಯಲಿದೆ.
ಇದನ್ನೂ ಓದಿ: ECIL Recruitment 2023: ಐಟಿಐ ಪಾಸಾದವರಿಗೆ ಗುಡ್ ನ್ಯೂಸ್; 484 ಅಪ್ರೆಂಟಿಸ್‌ಗಳಿಗೆ ಅರ್ಜಿ ಆಹ್ವಾನ
ಎಲ್ಲೆಲ್ಲಿ, ಎಷ್ಟೆಷ್ಟು ಹುದ್ದೆಗಳಿವೆ?
ಬೆಂಗಳೂರು ವೃತ್ತ-33, ಬೆಳಗಾವಿ ವೃತ್ತ-20, ಬಳ್ಳಾರಿ ವೃತ್ತ-20, ಚಾಮರಾಜನಗರ ವೃತ್ತ-32, ಚಿಕ್ಕಮಗಳೂರು ವೃತ್ತ-25, ಧಾರವಾಡ ವೃತ್ತ-7, ಹಾಸನ ವೃತ್ತ-20, ಕೆನರಾ ವೃತ್ತ-32, ಕೊಡಗು ವೃತ್ತ-16, ಕಲಬುರಗಿ ವೃತ್ತ-23, ಮಂಗಳೂರು-20, ಮೈಸೂರು-32, ಶಿವಮೊಗ್ಗ-30.
ವೇತನ ಶ್ರೇಣಿ
ಆಯ್ಕೆಯಾದ ಅಭ್ಯರ್ಥಿಗಳಿಗೆ ಪ್ರತಿ ತಿಂಗಳು 18,600-32,600 ರೂ. ವೇತನ ಸಿಗಲಿದೆ.
ಅರ್ಜಿ ಸಲ್ಲಿಸುವ ವಿಧಾನ
- ಆರಂಭದಲ್ಲಿ https://kfdrecruitment.in/ ವೆಬ್ಸೈಟ್ ಮೇಲೆ ಕ್ಲಿಕ್ ಮಾಡಿ
- ಅಗತ್ಯವಿರುವ ಎಲ್ಲಾ ವಿವರಗಳನ್ನು ತುಂಬಿ. ಸರ್ಟಿಫಿಕೆಟ್ಗಳ ಸ್ಕ್ಯಾನ್, ಡಾಕ್ಯುಮೆಂಟ್ ಮತ್ತು ಇತ್ತೀಚಿನ ಫೋಟೊಗಳನ್ನು ಅಪ್ಲೋಡ್ ಮಾಡಿ.
- ಆನ್‌ಲೈನ್ ಮೂಲಕ ಶುಲ್ಕ ಪಾವತಿಸಿ
- ಕೊನೆಗೆ submit ಬಟನ್ ಅನ್ನು ಕ್ಲಿಕ್ ಮಾಡಿ. ಅಪ್ಲಿಕೇಷನ್ ನಂಬರ್ ಮತ್ತು ರಿಕ್ವೆಸ್ಟ್ ನಂಬರ್ ಅನ್ನು ತೆಗೆದಿಡಿ.
- ಅರ್ಜಿ ತುಂಬುವಾಗ ಎಚ್ಚರಿಕೆವಹಿಸಿ. ಸರಿಯಾದ ಮೊಬೈಲ್ ನಂಬರ್ ಮತ್ತು ಇಮೇಲ್ ವಿಳಾಸ ನಮೂದಿಸಿ. ಅರ್ಜಿ ಸಲ್ಲಿಸುವ ಮುನ್ನ ಐಡಿ ಪ್ರೂಫ್, ವಯಸ್ಸು, ಶೈಕ್ಷಣಿಕ ಅರ್ಹತೆ, ರೆಸ್ಯೂಮ್, ವೃತ್ತಿ ಅನುಭವಗಳ ಮಾಹಿತಿಯನ್ನು ರೆಡಿ ಮಾಡಿಡಿ.