ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು (ಬಿಬಿಎಂಪಿ) ಕೇಂದ್ರ ಸರ್ಕಾರದ 15ನೇ ಹಣಕಾಸು ಆಯೋಗದ ಯೋಜನೆಯಡಿಯಲ್ಲಿ ಬೆಂಗಳೂರಿನ ವಿವಿಧ ಭಾಗಗಳಲ್ಲಿ ʼನಮ್ಮ ಕ್ಲಿನಿಕ್ʼ ಆರಂಭಿಸಲಿದ್ದು, ಇಲ್ಲಿ ಕಾರ್ಯನಿವರ್ಹಹಿಸಲು ಒಟ್ಟು 940 ಹುದ್ದೆಗಳಿಗೆ (BBMP Jobs) ನೇಮಕ ಮಾಡಿಕೊಳ್ಳಲಿದೆ.
ಮೆರಿಟ್ ಕಮ್ ರೋಸ್ಟರ್ ಆಧಾರದ ಮೇಲೆ ಈ ನೇಮಕ ನಡೆಯಲಿದ್ದು, ಇದಕ್ಕಾಗಿ ಸಂದರ್ಶನ ನಡೆಸಲಾಗುತ್ತದೆ. ಒಂದು ವರ್ಷದ ಅವಧಿಯ ಗುತ್ತಿಗೆ ಆಧಾರಿತ ಹುದ್ದೆಗಳು ಇವಾಗಿವೆ. ರಾಜ್ಯದಲ್ಲಿ ಸುಮಾರು 436 ಕಡೆಗಳಲ್ಲಿ ನಮ್ಮ ಕ್ಲಿನಿಕ್‌ಗಳು ಆರಂಭವಾಗಲಿವೆ. ಇದು ರಾಜ್ಯದ ಆರೋಗ್ಯ ವ್ಯವಸ್ಥೆಗೆ ಹೊಸ ಸ್ಪರ್ಶವನ್ನು ತಂದುಕೊಡಲಿದೆ. ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ನಗರ ಪ್ರದೇಶಗಳಲ್ಲಿ ನಮ್ಮ ಕ್ಲಿನಿಕ್ ಕಾರ್ಯಾರಂಭ ಮಾಡಲಾಗುತ್ತದೆ. ಈಗ ಬೆಂಗಳೂರಿನಲ್ಲಿ ತೆರೆಯಲಾಗುವ ನಮ್ಮ ಕ್ಲಿನಿಕ್‌ಗೆ ಮಾತ್ರ ನೇಮಕ ನಡೆಯುತ್ತಿದೆ.
ಯಾವ್ಯಾವ ಹುದ್ದೆಗೆ ನೇಮಕ?
ವೈದ್ಯಾಧಿಕಾರಿ 235, ಶುಶ್ರೂಷಕಿ/ ಶುಶ್ರೂಷಕರು 235, ಪ್ರಯೋಗಶಾಲಾ ತಂತ್ರಜ್ಞರು 235 ಹಾಗೂ ನಾಲ್ಕನೇ ದರ್ಜೆ ನೌಕರರು 235 ಹುದ್ದೆಗಳಿಗೆ ನೇಮಕ ನಡೆಯಲಿದೆ.
ಆರ್ಹತೆಗಳೇನು?
ವೈದ್ಯಾಧಿಕಾರಿ ಹುದ್ದೆಗಳಿಗೆ ಎಂಬಿಬಿಎಸ್ ಮಾಡಿದವರು ಸಂದರ್ಶನಕ್ಕೆ ಹಾಜರಾಗಬಹುದು. ಅಭ್ಯರ್ಥಿಗಳು ಕೆಎಂಸಿ ಕೌನ್ಸಿಲ್ ನೋಂದಾವಣಿ ಹೊಂದಿರಬೇಕಾದದು ಅವಶ್ಯಕ. ಇವರಿಗೆ ಮಾಸಿಕ 47,250 ರೂ. ವೇತನ ನೀಡಲಾಗುತ್ತದೆ.
ಶುಶ್ರೂಷಕಿ/ ಶುಶ್ರೂಷಕರ ಹುದ್ದೆಗಳಿಗೆ ಬಿಎಸ್‌ಸಿ/ ಡಿಪ್ಲೊಮಾ ಇನ್ ನರ್ಸಿಂಗ್ ಮಾಡಿದವರು ಅರ್ಜಿ ಸಲ್ಲಿಸಬಹುದು. ಇವರು ಕೂಡ ಕೆಎಂಸಿ ಕೌನ್ಸಿಲ್ ನೋಂದಾವಣಿ ಹೊಂದಿರಬೇಕು. ಇವರಿಗೆ ಮಾಸಿಕ 15,750 ರೂ. ವೇತನ ನೀಡಲಾಗುತ್ತದೆ.
ಪ್ರಯೋಗಶಾಲಾ ತಂತ್ರಜ್ಞರ ಹುದ್ದೆಗಳಿಗೆ ಡಿಪ್ಲೊಮಾ ಇನ್ ಪ್ರಯೋಗಶಾಲಾ ತಂತ್ರಜ್ಞಾನ (ಬಿಎಂಎಲ್‌ಟಿ) ಮಾಡಿದವರು ಅರ್ಜಿ ಸಲ್ಲಿಸಬಹುದು. ಇವರಿಗೆ ಕಂಪ್ಯೂಟರ್‌ನಲ್ಲಿ ಕಾರ್ಯನಿರ್ವಹಿಸುವ ಜ್ಞಾನ ಕಡ್ಡಾಯ. ಇವರೂ ಕೂಡ ಕರ್ನಾಟಕ ಪ್ಯಾರಾಮೆಡಿಕಲ್ ಮಂಡಳಿಯ ನೋಂದಣಿ ಹೊಂದಿರಬೇಕಾದದು ಅವಶ್ಯ. ಇವರಿಗೆ 14,609 ರೂ. ವೇತನ ನೀಡಲಾಗುತ್ತದೆ. ನಾಲ್ಕನೇ ದರ್ಜೆ ನೌಕರರ ಹುದ್ದೆಗೆ ಎಸ್‌ಎಸ್‌ಎಲ್‌ಸಿ ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿದವರು ಅರ್ಜಿ ಸಲ್ಲಿಸಬಹುದು. ಇವರಿಗೆ 10,500ರೂ. ವೇತನ ನೀಡಲಾಗುತ್ತದೆ. ಎಲ್ಲ ಹುದ್ದೆಗಳಿಗೂ ಕನ್ನಡ ಭಾಷೆಯ ಜ್ಞಾನ ಹೊಂದಿದವರು ಮಾತ್ರ ಅರ್ಜಿ ಸಲ್ಲಿಸಬಹುದಾಗಿರುತ್ತದೆ.
ವಯೋಮಿತಿ ಎಷ್ಟು?
ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷಗಳಾಗಿರಬೇಕು. ಗರಿಷ್ಠ ವಯೋಮಿತಿ ಸಾಮಾನ್ಯ ಅಭ್ಯರ್ಥಿಗಳಿಗೆ 35, 2ಎ,2ಬಿ, 3ಎ,3ಬಿ ಅಭ್ಯರ್ಥಿಗಳಿಗೆ 38 ವರ್ಷ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1ರ ಅಭ್ಯರ್ಥಿಗಳಿಗೆ 40 ವರ್ಷ ನಿಗದಿಪಡಿಸಲಾಗಿದೆ.
ನೇಮಕ ಹೇಗೆ?
ಅಭ್ಯರ್ಥಿಗಳು ಬಿಬಿಎಂಪಿ ವೆಬ್‌ಸೈಟ್‌ನಲ್ಲಿ ಇರುವ ಅರ್ಜಿ ನಮೂನೆಯನ್ನು ಡೌನ್‌ಲೋಡ್ ಮಾಡಿಕೊಂಡು ಭರ್ತಿಮಾಡಿದ ಅರ್ಜಿಯೊಂದಿಗೆ ಸಂಬಂಧಿಸಿದ ವಿದ್ಯಾರ್ಹತೆಯ ಮೂಲ ದಾಖಲೆಗಳು, ಒಂದು ಸ್ವಯಂ ದೃಢೀಕೃತ ಜೆರಾಕ್ಸ್ ಪ್ರತಿ ಮತ್ತು 2 ಜತೆ ಭಾವಚಿತ್ರದೊಂದಿಗೆ ಸಂದರ್ಶನಕ್ಕೆ ಹಾಜರಾಗಬೇಕಿರುತ್ತದೆ.
ಸಂದರ್ಶನವು ಆಗಸ್ಟ್ 10 ಮತ್ತು 11 ರಂದು ಬೆಳಗ್ಗೆ 10.30 ರಿಂದ ಸಂಜೆ 4.30ರವರೆಗೆ ಬೆಂಗಳೂರಿನ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿರುವ ನೌಕರರ ಭವನ ಸಭಾಂಗಣದಲ್ಲಿ ನಡೆಯಲಿದೆ.
ಹೆಚ್ಚಿನ ಮಾಹಿತಿಗೆ ಸಂಪಕ್ಷಿಸಬೇಕಾದ ದೂರವಾಣಿ ಸಂಖ್ಯೆ: 080-22975516, ಇ-ಮೇಲ್ ಐಡಿ: choph515@gmail.com ಹಾಗೂ ವೆಬ್ ಸೈಟ್: https://bbmp.gov.in
ಇದನ್ನೂ ಓದಿ| KPSC Recruitment 2022 | ರೇಷ್ಮೆ ವಿಸ್ತರಣಾಧಿಕಾರಿ ಹುದ್ದೆಗಳಿಗೆ ಅರ್ಜಿ ಅಹ್ವಾನ