ಬೆಂಗಳೂರು: ಬೆಂಗಳೂರಿನಲ್ಲಿ ಕೇಂದ್ರ ಕಚೇರಿ ಹೊಂದಿರುವ ನವರತ್ನ ಕಂಪನಿಗಳಲ್ಲಿ ಒಂದಾದ ಭಾರತ್ ಎಲೆಕ್ಟ್ರಾನಿಕ್ಸ್ (ಬಿಇಎಲ್) ತನ್ನ ಸಾಫ್ಟ್‌ವೇರ್ ವಿಭಾಗದಲ್ಲಿನ ಪ್ರಾಜೆಕ್ಟ್ ಎಂಜಿನಿಯರ್ -I ಹುದ್ದೆಗಳಿಗೆ ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳುತ್ತಿದ್ದು (BEL Recruitment 2023), ವಾಕ್ ಇನ್ ಸೆಲೆಕ್ಷನ್ ನಡೆಸಲಿದೆ. ಒಟ್ಟು 110 ಹುದ್ದೆಗಳಿಗೆ ನೇಮಕ ನಡೆಯಲಿದ್ದು, 52 ಹುದ್ದೆಗಳು ವಿಶಾಖಪಟ್ಟಣದಲ್ಲಿದ್ದರೆ, ನವದೆಹಲಿ, ಗಾಜಿಯಾಬಾದ್ ಮತ್ತು ಬೆಂಗಳೂರಿನಲ್ಲಿ ಒಟ್ಟು 58 ಹುದ್ದೆಗಳಿವೆ.
ಈ ನೇಮಕ ಪ್ರಕ್ರಿಯೆಯು ಜಮ್ಮು,, ರಾಂಚಿ ಮತ್ತು ಗುವಾಹತಿಯಲ್ಲಿ ಮಾತ್ರ ನಡೆಯಲಿದೆ. ಮೊದಲಿಗೆ ಅಭ್ಯರ್ಥಿಗಳು ಗೂಗಲ್ ಫಾರ್ಮ್‌ನಲ್ಲಿ (Google form) ಹೆಸರು ನೋಂದಾಯಿಸಿಕೊಳ್ಳಬೇಕಿರುತ್ತದೆ. ಇದಕ್ಕೆ ಮಾರ್ಚ್ 17 ಕೊನೆಯ ದಿನವಾಗಿರುತ್ತದೆ. ನೇಮಕ ಪ್ರಕ್ರಿಯೆ ನಡೆಯುವ ಸ್ಥಳ ಮತ್ತು ದಿನಾಂಕ, ಸಮಯದ ಕುರಿತು ಕಂಪನಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ಅಭ್ಯರ್ಥಿಗಳಿಗೆ ಮಾಹಿತಿ ನೀಡಲಾಗುತ್ತದೆ ಎಂದು ಭಾರತ್ ಎಲೆಕ್ಟ್ರಾನಿಕ್ಸ್ ಪ್ರಕಟಣೆಯಲ್ಲಿ ತಿಳಿಸಿದೆ.
ಹುದ್ದೆಗಳ ಮೀಸಲಾತಿ ಹಂಚಿಕೆ ಹೀಗಿದೆ: ವಿಶಾಖಪಟ್ಟಣದಲ್ಲಿನ 52 ಹುದ್ದೆ; UR – 22, EWS–5, OBC–14, SC–7, ST-4. ನವದೆಹಲಿ, ಗಾಜಿಯಾಬಾದ್ ಮತ್ತು ಬೆಂಗಳೂರಿನಲ್ಲಿ 58 ಹುದ್ದೆ; UR–21, EWS–7, OBC–16, SC–8, ST-6.
ವಾಕ್ ಇನ್ ಸೆಲೆಕ್ಷನ್‌ನಲ್ಲಿ (WALK-IN SELECTION) ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆ, ಸಂದರ್ಶನ ನಡೆಸಲಾಗುತ್ತದೆ. ಇದಕ್ಕೆ ಸಿದ್ಧರಾಗಿಯೇ ಅಭ್ಯರ್ಥಿಗಳು ಹಾಜರಾಗಬೇಕೆಂದು ಸೂಚಿಸಲಾಗಿದೆ. ಮೊದಲಿಗೆ ಅರ್ಜಿ ಸಲ್ಲಿಸಿದ ಅರ್ಹ ಅಭ್ಯರ್ಥಿಗಳನ್ನು ನೇಮಕ ಪ್ರಕ್ರಿಯೆಗೆ ಆಹ್ವಾನಿಸಲಾಗುತ್ತದೆ. ಮೊದಲು ಲಿಖಿತ ಪರೀಕ್ಷೆ ನಡೆಯಲಿದ್ದು, ಇದರಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳನ್ನು 1:5 ರ ಅನುಪಾತದಲ್ಲಿ ಸಂದರ್ಶನಕ್ಕೆ ಕರೆಯಲಾಗುತ್ತದೆ. ಇದರಲ್ಲಿ ಪಡೆದ ಅಂಕಗಳ ಆಧಾರದಲ್ಲಿ ಮೀಸಲಾತಿಯನ್ವ ನೇಮಕ ನಡೆಯಲಿದೆ.
ವಿದ್ಯಾರ್ಹತೆ ಏನು?
ಅಭ್ಯರ್ಥಿಯು ಎಲೆಕ್ಟ್ರಾನಿಕ್ಸ್/ಟೆಲಿಕಮ್ಯುನಿಕೇಷನ್/ಎಲೆಕ್ಟ್ರಾನಿಕ್ಸ್ & ಕಮ್ಯುನಿಕೇಷನ್/ ಎಲೆಕ್ಟ್ರಾನಿಕ್ಸ್ & ಟೆಲಿಕಮ್ಯುನಿಕೇಷನ್/ ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್/ ಎಲೆಕ್ಟ್ರಿಕಲ್/ ಕಮ್ಯುನಿಕೇಷನ್/ ಮೆಕಾನಿಕಲ್/ ಕಂಪ್ಯೂಟರ್ ಸೈನ್ಸ್/ ಕಂಪ್ಯೂಟರ್ ಸೈನ್ಸ್& ಎಂಜಿನಿಯರಿಂಗ್/ ಕಂಪ್ಯೂಟರ್ ಎಂಜಿನಿಯರಿಂಗ್/ ಇನ್ಫಾಮೇಷನ್ ಸೈನ್ಸ್/ ಇನ್ಫಾರ್ಮೇಷನ್ ಟೆಕ್ನಾಲಜಿ ಈ ಯಾವುದಾದರೂ ವಿಷಯದಲ್ಲಿ ಬಿಇ/ಬಿಟೆಕ್ ಅಥವಾ ನಾಲ್ಕು ವರ್ಷಗಳ ಬಿಎಸ್ಸಿ ಪದವಿ ಪಡೆದಿರಬೇಕು.
ಸಾಮಾನ್ಯ, ಒಬಿಸಿ ಮತ್ತು ಇಡಬ್ಲ್ಯುಎಸ್ ಅಭ್ಯರ್ಥಿಗಳು ಶೇ. 55 ಅಂಕಗಳೊಂದಿಗೆ ಪದವಿ ಪಡೆದಿರಬೇಕಾದದು ಕಡ್ಡಾಯ. ಎಸ್‌ಸಿ ಮತ್ತು ಎಸ್ಟ್ ಅಭ್ಯರ್ಥಿಗಳು ಉತ್ತೀರ್ಣರಾಗಿದ್ದರೆ ಈ ಸಂದರ್ಶನದಲ್ಲಿ ಭಾಗವಹಿಸಬಹುದು.
ಇತ್ತ ಗಮನಿಸಿ
ಅರ್ಜಿ ಸಲ್ಲಿಸಲು ಗೂಗಲ್ ಫಾರ್ಮ್‌ಗಾಗಿ ಇಲ್ಲಿ ಕ್ಲಿಕ್ (Click Here) ಮಾಡಿ.
ಸಹಾಯವಾಣಿ ಸಂಖ್ಯೆ: 080-22197160
ಹೆಚ್ಚಿನ ಮಾಹಿತಿಗೆ ವೆಬ್‌ಸೈಟ್ ವಿಳಾಸ: https://www.bhel.com
ವಯೋಮಿತಿ ಎಷ್ಟು?
ಅಭ್ಯರ್ಥಿಗಳ ಗರಿಷ್ಠ ವಯೋಮಿತಿಯು ದಿನಾಂಕ 01-02-2023ಕ್ಕೆ 32ವರ್ಷ ಮೀರಿರಬಾರದು. ಗರಿಷ್ಠ ವಯೋಮಿತಿಯಲ್ಲಿ ಒಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಹಾಗೂ ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ ಸಡಿಲಿಕೆ ಇರುತ್ತದೆ.
ಇನ್ನಿತರ ಉದ್ಯೋಗದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ (Click Here) ಮಾಡಿ.
ವೇತನ ಎಷ್ಟಿರುತ್ತದೆ?
ವಿಶಾಖಪಟ್ಟಣದಲ್ಲಿನ ಹುದ್ದೆಗಳು ಎರಡು ವರ್ಷಗಳ ಗುತ್ತಿಗೆಯಾಧಾರಿತ ಹುದ್ದೆಗಳಾಗಿದ್ದು, ಮೊದಲ ವರ್ಷ 40,000 ರೂ. ಎರಡನೇ ವರ್ಷ 45,000 ರೂ. ವೇತನ ನೀಡಲಾಗುತ್ತದೆ. ನವ ದೆಹಲಿ, ಗಾಜಿಯಾಬಾದ್ ಮತ್ತು ಬೆಂಗಳೂರಿನಲ್ಲಿ ಹುದ್ದೆಗಳು ಮೂರು ವರ್ಷಗಳ ಹುದ್ದೆಗಳಾಗಿದ್ದು, ಇದನ್ನು ನಾಲ್ಕು ವರ್ಷಗಳವರೆಗೂ ವಿಸ್ತರಿಸಬಹುದಾಗಿದೆ. ಈ ಹುದ್ದೆಗಳಿಗೆ ಕ್ರಮವಾಗಿ 40, 45, 50, 55 ಸಾವಿರ ರೂ. ವೇತನ ನೀಡಲಾಗುತ್ತದೆ. ಮೂರು ವರ್ಷ ಕಾರ್ಯನಿರ್ವಹಿಸಿದ ಅಭ್ಯರ್ಥಿಗಳು ಬಿಇಎಲ್ ಟ್ರೈನೀ ಎಂಜಿನಿಯರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿರುತ್ತದೆ.
ಇದನ್ನೂ ಓದಿ: Air India Recruitment 2023 : ಪಿಯುಸಿ ಆದವರಿಗೂ ಏರಿ ಇಂಡಿಯಾದಲ್ಲಿ ಉದ್ಯೋಗ; ಇಲ್ಲಿದೆ ಸಂಪೂರ್ಣ ಮಾಹಿತಿ