Site icon Vistara News

BEML Group C Recruitment: ಐಟಿಐ ಪಾಸಾದವರಿಗೆ ಸಿಹಿ ಸುದ್ದಿ; ಬಿಇಎಂಎಲ್‌ನಲ್ಲಿ 119 ಹುದ್ದೆಗೆ ಅರ್ಜಿ ಸಲ್ಲಿಸಿ

beml

beml

ಬೆಂಗಳೂರು: ಕರ್ನಾಟಕ/ ಬೆಂಗಳೂರಿನಲ್ಲಿ ಉದ್ಯೋಗ ಹುಡುಕುತ್ತಿದ್ದೀರಾ? ಹಾಗಾದರೆ ಇಲ್ಲಿದೆ ಸುವರ್ಣಾವಕಾಶ. Bharat Earth Movers Limited (BEML) ಖಾಲಿ ಇರುವ 119  ಹುದ್ದೆಗಳ ಭರ್ತಿಗೆ ಆನ್‌ಲೈನ್‌ ಮೂಲಕ ಅರ್ಜಿ ಆಹ್ವಾನಿಸಿದೆ. ಆಸಕ್ತರು ಅಕ್ಟೋಬರ್‌ 18ರೊಳಗೆ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗೆ ವೆಬ್‌ಸೈಟ್‌ ವಿಳಾಸ https://www.bemlindia.in/ ಸಂದರ್ಶಿಸಿ.

ಶೈಕ್ಷಣಿಕ ಅರ್ಹತೆ

ಕಂಪ್ಯೂಟರ್‌ ಆಧಾರಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ನಡೆಯಲಿದೆ. ಜನರಲ್‌/ ಇಡಬ್ಲ್ಯುಎಸ್‌/ ಒಬಿಸಿ ಅಭ್ಯರ್ಥಿಗಳು ಅರ್ಜಿ ಶುಲ್ಕವಾಗಿ 200 ರೂ. ಪಾವತಿಸಬೇಕು. ಎಸ್‌ಸಿ/ಎಸ್‌ಟಿ/ಪಿಡಬ್ಲುಡಿಎಸ್‌ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕವಿಲ್ಲ. ಆನ್‌ಲೈನ್‌ ಮೂಲಕವೇ ಸುಲ್ಕ ಪಾವತಿಸಬೇಕು.

ವಯೋಮಿತಿ

ಡಿಪ್ಲೋಮಾ ಟ್ರೈನೀಸ್ (ಮೆಕ್ಯಾನಿಕಲ್), ಡಿಪ್ಲೋಮಾ ಟ್ರೈನೀಸ್‌ (ಎಲೆಕ್ಟ್ರಿಕಲ್‌), ಡಿಪ್ಲೋಮಾ ಟ್ರೈನೀಸ್ (ಸಿವಿಲ್‌), ಐಟಿಐ ಟ್ರೈನೀಸ್‌(ಟರ್ನರ್‌), ಐಟಿಐ ಟ್ರೈನೀಸ್‌(ಮೆಕ್ಯಾನಿಸ್ಟ್‌ ) ಹುದ್ದೆಗಳಿಗೆ ಸರ್ಜಿ ಸಲ್ಲಿಸುವ ಸಾಮಾನ್ಯ ವಿಭಾಗದವರ ವಯೋಮಿತಿ ಗರಿಷ್ಠ 29 ವರ್ಷ. ಮೀಸಲಾತಿಗೆ ಅನುಗುಣವಾಗಿ ರಿಯಾಯಿತಿ ಲಭ್ಯ. ಒಬಿಸಿ 32 ವರ್ಷ ಮತ್ತು ಎಸ್‌/ ಎಸ್‌ಟಿ ವಿಭಾಗದವರಿಗೆ 34 ವರ್ಷ.

ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್‌ ಮಾಡಿ.

ಇದನ್ನೂ ಓದಿ: Job News : ಅರಣ್ಯ ಇಲಾಖೆಯಲ್ಲಿ 310 ವೀಕ್ಷಕ ಹುದ್ದೆ ಭರ್ತಿ; ಅರ್ಜಿ ಸಲ್ಲಿಕೆ ಹೇಗೆ, ಕೊನೇ ದಿನಾಂಕ ಎಂದು?

Exit mobile version