Site icon Vistara News

BMRCL Recruitment 2023 : ನಮ್ಮ ಮೆಟ್ರೋದಲ್ಲಿ 236 ಹುದ್ದೆಗಳಿಗೆ ನೇಮಕ; ಬಿಇ, ಡಿಪ್ಲೊಮಾ, ಐಟಿಐ ಮಾಡಿದವರಿಗೆ ಅವಕಾಶ

BMRCL Recruitment 2023 Check posts, eligibility, and how to apply

metro

ಬೆಂಗಳೂರು: ಉದ್ಯೋಗದ ನಿರೀಕ್ಷೆಯಲ್ಲಿರುವವರಿಗೆ ಯುಗಾದಿಯ ಹಬ್ಬದಂದು ʻನಮ್ಮ ಮೆಟ್ರೋʼ ಬೆಲ್ಲದಂತಹ ಸಿಹಿ ಸುದ್ದಿ ನೀಡಿದೆ. ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತವು (ಬಿಎಂಆರ್‌ಸಿ) ಖಾಲಿ ಇರುವ ವಿವಿಧ 236 ಹುದ್ದೆಗಳಿಗೆ ನೇಮಕ ಮಾಡಿಕೊಳ್ಳುವುದಾಗಿ (BMRCL Recruitment 2023) ಪ್ರಕಟಿಸಿದ್ದು, ಅಧಿಸೂಚನೆ ಹೊರಡಿಸಿದೆ.

ಮಾರ್ಚ್‌ 24 ರಿಂದ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗುತ್ತಿದ್ದು, ಏಪ್ರಿಲ್‌ 24 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿರುತ್ತದೆ. ಆನ್‌ಲೈನ್‌ನಲ್ಲಿ ಮಾತ್ರ ಅರ್ಜಿ ಸ್ವೀಕರಿಸಲಾಗುತ್ತದೆ. ಕಾಗದದ ಅರ್ಜಿಗಳು ಅಥವಾ ಪೋಸ್ಟ್‌ /ಇ-ಮೇಲ್‌ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ಮೆಟ್ರೋ ಸ್ಪಷ್ಟಪಡಿಸಿದೆ.

ಈ ಎಲ್ಲ ಹುದ್ದೆಗಳು ಕನ್ನಡಿಗರಿಗೇ ಮೀಸಲಾಗಿದ್ದು, ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಕನ್ನಡ ಜ್ಞಾನ ಅತ್ಯಗತ್ಯ ಎಂದು ಸೂಚಿಸಲಾಗಿದೆ. ಅಭ್ಯರ್ಥಿಗೆ ಕನ್ನಡದಲ್ಲಿ ಓದಲು, ಮಾತನಾಡಲು, ಅರ್ಥಮಾಡಿಕೊಳ್ಳಲು ಮತ್ತು ಬರೆಯಲು ಕಡ್ಡಾಯವಾಗಿ ಗೊತ್ತಿರಬೇಕೆಂದು ಅಧಿಸೂಚನೆಯಲ್ಲಿ ಸ್ಪಷ್ಟವಾಗಿ ತಿಳಿಸಲಾಗಿದೆ. ದಾಖಲೆ ಪರಿಶೀಲನೆಯ ಸಂದರ್ಭದಲ್ಲಿ ಕನ್ನಡ ಜ್ಞಾನವನ್ನು ಪರೀಕ್ಷಿಸಲಾಗುತ್ತದೆ.

ಒಟ್ಟು 236 ಹುದ್ದೆಗಳಲ್ಲಿ 29 ಹುದ್ದೆಗಳು ಕಲ್ಯಾಣ ಕರ್ನಾಟಕಕ್ಕೆ ಮೀಸಲಾದ ಹುದ್ದೆಗಳಾಗಿವೆ. ಈ ಹುದ್ದೆಗಳಿಗೆ ಸರ್ಕಾರದ ಆದೇಶದಂತೆ ಪ್ರತ್ಯೇಕವಾಗಿ ಅಧಿಸೂಚನೆ ಪ್ರಕಟಿಸಲಾಗಿದೆ.

ಯಾವೆಲ್ಲಾ ಹುದ್ದೆಗಳಿಗೆ ನೇಮಕ?

ಮೆಟ್ರೋ ನೇಮಕ ಮಾಡಿಕೊಳ್ಳುತ್ತಿರುವ ಹುದ್ದೆಗಳ ವಿವರ ಇಂತಿದೆ;
ಸ್ಟೇಷನ್‌ ಕಂಟ್ರೋಲರ್‌ / ಟ್ರೈನ್‌ ಆಪರೇಟರ್‌ – 92 + 16 ಹೈಕ = 108 ಹುದ್ದೆಗಳು
ಸೆಕ್ಷನ್‌ ಎಂಜಿನಿಯರ್‌ ಸಿಸ್ಟಮ್ಸ್‌ – 10 ಹುದ್ದೆಗಳು
ಸೆಕ್ಷನ್‌ ಎಂಜಿನಿಯರ್‌ ಸಿವಿಲ್‌ -04 ಹುದ್ದೆಗಳು
ಮೇಂಟೇನರ್ಸ್‌ ಸಿಸ್ಟಮ್ಸ್‌ -44 + 06 (ಹೈಕ) = 50 ಹುದ್ದೆಗಳು

ಮೇಂಟೇನರ್ಸ್‌ ಸಿವಿಲ್‌ – 57 + 7 (ಹೈಕ) = 64 ಹುದ್ದೆಗಳು

ಇತ್ತ ಗಮನಿಸಿ
ಅರ್ಜಿ ಸಲ್ಲಿಸಲು ಪ್ರಾರಂಭಿಕ ದಿನಾಂಕ: 24-03-2023
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 24-04-2023
ಪರೀಕ್ಷಾ ಶುಲ್ಕವನ್ನು ಪಾವತಿಸಲು ಪ್ರಾರಂಭಿಕ ದಿನಾಂಕ: 27-03-2023
ಪರೀಕ್ಷಾ ಶುಲ್ಕವನ್ನು ಪಾವತಿಸಲು ಕೊನೆಯ ದಿನಾಂಕ: 27-04-2023
ಪರೀಕ್ಷೆಯ ದಿನಾಂಕ: ಮೇಂಟೇನರ್‌-07/06/2023 (ಬೆಳಗ್ಗೆ), ಸೆಕ್ಷನ್‌ ಎಂಜಿನಿಯರ್‌-07/06/2023 (ಮಧ್ಯಾಹ್ನ), ಸ್ಟೇಷನ್‌ ಕಂಟ್ರೋಲರ್‌/ಟ್ರೈನ್‌ ಆಪರೇಟರ್‌-08/06/2023 (ಬೆಳಗ್ಗೆ).
ಸಹಾಯವಾಣಿ ಸಂಖ್ಯೆ: 080-22969400/22969200
ಇಮೇಲ್‌: helpdesk@bmrc.co.in
ಹೆಚ್ಚಿನ ಮಾಹಿತಿಗೆ ವೆಬ್‌ ಸೈಟ್‌:
https://kannada.bmrc.co.in/

ವಿದ್ಯಾರ್ಹತೆ ಏನು?

ಸ್ಟೇಷನ್‌ ಕಂಟ್ರೋಲರ್‌ / ಟ್ರೈನ್‌ ಆಪರೇಟರ್‌ : ಈ ಹುದ್ದೆಗೆ ಎಸ್‌ಎಸ್‌ಎಲ್‌ಸಿಯಲ್ಲಿ ತೇರ್ಗಡೆಯಾಗಿರಬೇಕು ಜತೆಗೆ ಎಲೆಕ್ಟ್ರಿಕಲ್‌ ಎಂಜಿನಿಯರಿಂಗ್‌/ ಎಲೆಕ್ಟ್ರಿಕಲ್‌ ಮತ್ತು ಎಲೆಕ್ಟ್ರಾನಿಕ್ಸ್‌ ಎಂಜಿನಿಯರಿಂಗ್‌/ಟೆಲಿಕಮ್ಯುವಿಕೇಷನ್ಸ್‌/ ಎಲೆಕ್ಟ್ರಾನಿಕ್ಸ್‌ ಮತ್ತು ಕಮ್ಯುನಿಕೇಷನ್‌ ಎಂಜಿನಿಯರಿಂಗ್‌ /ಎಲೆಕ್ಟ್ರಿಕಲ್‌ ಪವರ್‌ ಸಿಸ್ಟಮ್ಸ್‌ / ಇಂಡಸ್ಟ್ರಿಯಲ್‌ ಎಲೆಕ್ಟ್ರಾನಿಕ್ಸ್‌ /ಮೆಕ್ಯಾನಿಕಲ್‌ ಎಂಜಿನಿಯರಿಂಗ್‌ ಈ ಯಾವುದಾದರೂ ವಿಷಯದಲ್ಲಿ ಮೂರು ವರ್ಷಗಳ ಡಿಪ್ಲೊಮಾ ಮಾಡಿರಬೇಕು ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು.

ಸೆಕ್ಷನ್‌ ಎಂಜಿನಿಯರ್‌ ಸಿಸ್ಟಮ್ಸ್‌ : ಎಲೆಕ್ಟ್ರಿಕಲ್‌ ಮತ್ತು ಎಲೆಕ್ಟ್ರಾನಿಕ್ಸ್‌ ಎಂಜಿನಿಯರಿಂಗ್‌/ ಎಲೆಕ್ಟ್ರಾನಿಕ್ಸ್‌ ಮತ್ತು ಕಮ್ಯುನಿಕೇಷನ್‌ ಎಂಜಿನಿಯರಿಂಗ್‌/ ಇನ್‌ಸ್ಟ್ರು ಮೆಂಟೇಷನ್‌ ಮತ್ತು ಕಂಟ್ರೋಲ್‌ ಎಂಜಿನಿಯರಿಂಗ್‌/ಮೆಕ್ಯಾನಿಕಲ್‌/ಟೆಲಿಕಮ್ಯುನಿಕೇಷನ್‌/ಅಪ್ಲೈಡ್‌ ಎಲೆಕ್ಟ್ರಾನಿಕ್ಸ್‌ & ಇನ್‌ಸ್ಟ್ರಮೆಂಟೇಷನ್‌/ಕಂಪ್ಯೂಟರ್‌ ಸೈನ್ಸ್‌ ಈ ಯಾವುದಾದರೂ ವಿಷಯದಲ್ಲಿ ಎಂಜಿನಿಯರಿಂಗ್‌ ಪದವಿ ಪಡೆದಿರಬೇಕು ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು.

ಸೆಕ್ಷನ್‌ ಎಂಜಿನಿಯರ್‌ ಸಿವಿಲ್‌ : ಸಿವಿಲ್‌ ಎಂಜಿನಿಯರಿಂಗ್‌ ಪದವಿ ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು.

ಮೇಂಟೇನರ್ಸ್‌ ಸಿಸ್ಟಮ್ಸ್‌ : ಎಸ್‌ಎಸ್‌ಎಲ್‌ಸಿಯಲ್ಲಿ ಉತ್ತೀರ್ಣರಾಗಿರಬೇಕು ಜತೆಗೆ ಎಲೆಕ್ಟ್ರಿಷಿಯನ್‌/ಇನ್‌ಸ್ಟ್ರುಮೆಂಟ್‌ ಮೆಕ್ಯಾನಿಕ್‌/ ಮೆಕ್ಯಾನಿಕ್‌ ರೇಡಿಯೋ ಮತ್ತು ಟಿವಿ/ ಎಲೆಕ್ಟ್ರಾನಿಕ್ಸ್‌ ಮೆಕ್ಯಾನಿಕ್ಸ್‌/ ವೈರ್‌ ಮ್ಯಾನ / ಮೆಕ್ಯಾನಿಕ್‌ ಕಂಪ್ಯೂಟರ್‌ ಹಾರ್ಡ್‌ವೇರ್‌/ ಮೆಕ್ಯಾನಿಕ್‌ -ಇಂಡಸ್ಟ್ರಿಯಲ್‌ ಎಲೆಕ್ಟ್ರಾನಿಕ್ಸ್‌/ಇನ್‌ ಫಾರ್ಮೇಷನ್‌ ಟೆಕ್ನಾಲಾಜಿ ಮತ್ತು ಎಲೆಕ್ಟ್ರಾನಿಕ್ಸ್‌ ಸಿಸ್ಮಮ್‌ ಮೆಂಟೆನೆನ್ಸ್‌/ ಮೆಕ್‌.ಕಮ್ಯುನಿಕೇಷನ್ಸ್‌ ಎಕ್ಯುಪ್‌ಮೆಂಟ್‌ ಮೆಂಟೇನರ್ಸ್‌/ ರೆಫ್ರಿಜಿರೆಷನ್‌ ಮತ್ತು ಎಸಿ ಮೆಕ್ಯಾನಿಕ್ಸ್‌/ ಮಕಾಟ್ರಾನಿಕ್ಸ್‌ ಈ ಯಾವುದಾದರೂ ಎಂಜಿನಿಯರಿಂಗ್‌ ಟ್ರೇಡ್‌ನಲ್ಲಿ ಐಟಿಐ ಮಾಡಿರಬೇಕು ಇಲ್ಲವೇ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು.

ಮೇಂಟೇನರ್ಸ್‌ ಸಿವಿಲ್‌ : ಎಸ್‌ಎಸ್‌ಎಲ್‌ಸಿಯಲ್ಲಿ ಉತ್ತೀರ್ಣರಾಗಿರಬೇಕು ಹಾಗೂ ಮ್ಯಾಸನ್ರಿ/ ಕಾರ್ಪೆಂಟ್ರಿ/ ಬಿಲ್ಡಿಂಗ್‌/ವೆಲ್ಡರ್‌ ಇವುಗಳಲ್ಲಿ ಯಾವುದೇ ನಿರ್ದಿಷ್ಟ ಎಂಜಿನಿಯರಿಂಗ್‌ ಟ್ರೇಡ್‌ನಲ್ಲಿ ಐಟಿಐ ಮಾಡಿರಬೇಕು ಇಲ್ಲವೇ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು.

ಅಭ್ಯರ್ಥಿಯು ನಿಗದಿಪಡಿಸಿದ ಶೈಕ್ಷಣಿಕ ಅರ್ಹತೆಯಲ್ಲಿ ಕನಿಷ್ಠ ಶೇ.50 ಅಂಕಗಳನ್ನು ಗಳಿಸಿರಬೇಕಾದದು ಕಡ್ಡಾಯ.

135 ಹುದ್ದೆಗಳಿಗೆ ಗುತ್ತಿಗೆ ಆಧಾರದಲ್ಲಿ ನೇಮಕ
ಇದಲ್ಲದೆ ನಮ್ಮ ಮೆಟ್ರೋ ಗುತ್ತಿಗೆ ಆಧಾರದಲ್ಲಿಯೂ 135 ಹುದ್ದೆಗಳಿಗೆ ನೇಮಕ ಮಾಡಿಕೊಳ್ಳುತ್ತಿದೆ. ಡೆಪ್ಯುಟಿ ಚೀಫ್‌ ಫೈರ್‌ ಆಫೀಸರ್‌- 1, ಪೈರ್‌ಮನ್‌-25, ಡೆಪ್ಯುಟಿ ಚೀಫ್‌ ಸೆಕ್ಯುರಿಟಿ ಆಫೀಸರ್‌-1, ಅಸಿಸ್ಟೆಂಟ್‌ ಚೀಫ್‌ ಸೆಕ್ಯುರಿಟಿ ಆಫೀಸರ್‌-2, ಅಸಿಸ್ಟೆಂಟ್‌ ಸೆಕ್ಯುರಿಟಿ ಆಫೀಸರ್‌-38, ಡೆಪ್ಯುಟಿ ಚೀಫ್‌ ಎಂಜಿನಿಯರ್‌-3, ಎಕ್ಸಿಕ್ಯೂಟಿವ್‌ ಎಂಜಿನಿಯರ್‌-10, ಅಸಿಸ್ಟೆಂಟ್‌ ಎಕ್ಸಿಕ್ಯೂಟಿವ್‌ ಎಂಜಿನಿಯರ್‌-17, ಅಸಿಸ್ಟೆಂಟ್‌ ಎಂಜಿನಿಯರ್‌-38 ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲಾಗುತ್ತಿದೆ.
ಈ ಹುದ್ದೆಗಳಿಗೂ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕಿರುತ್ತದೆ. ಅರ್ಜಿ ಸಲ್ಲಿಸಲು ಏಪ್ರಿಲ್‌ 20 ಕೊನೆಯ ದಿನವಾಗಿದ್ದು, ಸಲ್ಲಿಸಿದ ಅರ್ಜಿಯ ಪ್ರಿಂಟ್‌ಔಟ್‌ ತೆಗೆದುಕೊಂಡು, ಅದಕ್ಕೆ ಸಹಿ ಮಾಡಿ ಅದನ್ನು ಕೂಡ ಸಲ್ಲಿಸಬೇಕಿರುತ್ತದೆ. ಇದಕ್ಕೆ ಏಪ್ರಿಲ್‌ 24 ಕೊನೆಯ ದಿನವಾಗಿರುತ್ತದೆ. ಗುತ್ತಿಗೆಯ ಅವಧಿಯು 1 ರಿಂದ 3 ವರ್ಷಗಳಾಗಿರುತ್ತವೆ. ವಿದ್ಯಾರ್ಹತೆ, ವಯೋಮಿತಿ, ನೇಮಕ ಪ್ರಕ್ರಿಯೆಯ ಕುರಿತ ಸಂಪೂರ್ಣ ಮಾಹಿತಿಯನ್ನು ಕೂಡ ವೆಬ್‌ಸೈಟ್‌ನಲ್ಲಿ ನೀಡಲಾಗಿದೆ.

ಉದ್ಯೋಗಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ (Click Here ) ಮಾಡಿ.

ಗರಿಷ್ಠ ವಯೋಮಿತಿ

ಅಭ್ಯರ್ಥಿಯ ಗರಿಷ್ಠ ವಯೋಮಿತಿಯು 35 ವರ್ಷ. ಪ.ಜಾ/ಪ.ಪಂ ಮತ್ತು ಪ್ರವರ್ಗ-1ರ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿ 40 ವರ್ಷ. ಪ್ರವರ್ಗ 2ಎ, 2ಬಿ, 3ಎ ಹಾಗೂ 3ಬಿಯ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿ 38 ವರ್ಷ ಎಂದು ನಿಗದಿಪಡಿಸಲಾಗಿದೆ. ವಯಸ್ಸನ್ನು ದಿನಾಂಕ 22-03-2023ಕ್ಕೆ ಲೆಕ್ಕ ಹಾಕಲಾಗುತ್ತದೆ.

ಅರ್ಜಿ ಶುಲ್ಕ ಎಷ್ಟು?

ಪ.ಜಾ/ಪ.ಪಂ ಅಭ್ಯರ್ಥಿಗಳು ರೂ. 590 (ಜಿಎಸ್‌ಟಿ ಸೇರಿ) ಅರ್ಜಿ ಶುಲ್ಕ ಪಾವತಿಸಬೇಕಿರುತ್ತದೆ. ಸಾಮಾನ್ಯ ಅಭ್ಯರ್ಥಿಗಳು, ಪ್ರವರ್ಗ-1, ಪ್ರವರ್ಗ-2ಎ, ಪ್ರವರ್ಗ-2ಬಿ, ಪ್ರವರ್ಗ -3ಎ ಮತ್ತು ಪ್ರವರ್ಗ-3ಬಿ ಅಭ್ಯರ್ಥಿಗಳು ರೂ. 1,180 ಶುಲ್ಕ ಪಾವತಿಸಬೇಕಿರುತ್ತದೆ. ಆನ್‌ಲೈನ್‌ ಪಾವತಿ/ಚಲನ್‌ ಮೂಲಕ ಅರ್ಜಿ ಶುಲ್ಕ ಪಾವತಿಸಲು ಅವಕಾಶ ನೀಡಲಾಗುತ್ತದೆ.

ಆನ್‌ಲೈನ್‌ನಲ್ಲಿ ನೆಟ್‌ ಬ್ಯಾಂಕಿಂಗ್‌/ಡೆಬಿಟ್‌ ಕಾರ್ಡ್‌/ಕ್ರೆಡಿಟ್‌ ಕಾರ್ಡ್‌ ಮೂಲಕ ಅಥವಾ ಎಸ್‌ಬಿಐ ಬ್ಯಾಂಕ್‌ನ ಯಾವುದೇ ಶಾಖೆಯಲ್ಲಿ ಚಲನ್‌ ಮೂಲಕ ಪಾವತಿಸುವ ಮೂಲಕ ನೀವು ಪರೀಕ್ನಾ ಶುಲ್ಕವನ್ನು ಪಾವತಿಸಬಹುದು.

ನೇಮಕಾತಿಯ ಸಂಪೂರ್ಣ ಮಾಹಿತಿಯ ಅಧಿಸೂಚನೆಗಾಗಿ ಇಲ್ಲಿ (Click Here) ಕ್ಲಿಕ್‌ ಮಾಡಿ.

ನೇಮಕ ಹೇಗೆ?

ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ಈ ನೇಮಕ ನಡೆಯಲಿದೆ. ಮೊದಲಿಗೆ ಲಿಖಿತ ಪರೀಕ್ಷೆಯನ್ನು ನಡೆಸಲಾಗುತ್ತದೆ. ಲಿಖಿತ ಪರೀಕ್ಷೆಯು ನೂರು ಅಂಕಗಳಿಗೆ ನಡೆಯಲಿದ್ದು, ವಸ್ತುನಿಷ್ಠ ಮಾದರಿಯಲ್ಲಿ ನಡೆಯಲಿದೆ. ಪರೀಕ್ಷೆ ಬರೆಯಲು ಎರಡು ಗಂಟೆ ಕಾಲಾವಕಾಶ ನೀಡಲಾಗುತ್ತದೆ. ಪ್ರಶ್ನೆ ಪತ್ರಿಕೆಯು ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ನಡೆಯಲಿದೆ. ಓಎಂಆರ್‌ ಶೀಟ್‌ನಲ್ಲಿ ಕನ್ನಡದಲ್ಲಿ ಬರೆಯುವ ಅವಕಾಶವನ್ನೂ ನೀಡಲಾಗಿರುತ್ತದೆ. ಇಲ್ಲಿ ಕನ್ನಡ ಬರೆಯದ ಅಭ್ಯರ್ಥಿಯನ್ನು ನೇಮಕಕ್ಕೆ ಪರಿಗಣಿಸಲಾಗುವುದಿಲ್ಲ. ಈ ಪರೀಕ್ಷೆಯಲ್ಲಿ ಋಣಾತ್ಮಕ ಮೌಲ್ಯಮಾಪನವಿರುತ್ತದೆ.

ಈ ಲಿಖಿತ ಪರೀಕ್ಷೆಯಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳನ್ನು ಮೂಲ ದಾಖಲೆಗಳ ಪರಿಶೀಲನೆಗಾಗಿ ಮತ್ತು ಕನ್ನಡ ಭಾಷಾ ಪರೀಕ್ಷೆಗೆ ಕರೆಯಲಾಗುತ್ತದೆ. ದಾಖಲಾತಿ ಮತ್ತು ಕನ್ನಡ ಪರೀಕ್ಷೇಯಲ್ಲಿ ಉತ್ತಿರ್ಣರಾದವರನ್ನು ನಂತರ ವೈದ್ಯಕೀಯ ಫಿಟ್‌ನೆಸ್‌ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಸ್ಟೇಷನ್‌ ಕಂಟ್ರೋಲರ್‌/ಟ್ರೈನ್‌ ಆಪರೇಟರ್‌ ಹುದ್ದೆಗೆ 1:5 ಅನುಪಾತದಲ್ಲಿ ಸೈಕೋಮೆಟ್ರಿಕ್‌(Psychometric) ಪರೀಕ್ಷೆ ನಡೆಸಲಾಗುತ್ತದೆ. ಆನಂತರ ನೇಮಕ ಮಾಡಿಕೊಳ್ಳಲಾಗುತ್ತದೆ.

ಇದನ್ನೂ ಓದಿ : KPSC Recruitment 2023 : 67 ಕಿರಿಯ ಲೆಕ್ಕ ಸಹಾಯಕರ ಹುದ್ದೆಗಳಿಗೆ ನೇಮಕ; ಪಿಯುಸಿ ಪಾಸಾದವರಿಂದ ಅರ್ಜಿ ಆಹ್ವಾನ

Exit mobile version