Site icon Vistara News

BMTC Recruitment 2023 : ಬಿಎಂಟಿಸಿಯಲ್ಲಿ 636 ಶಿಶಿಕ್ಷುಗಳ ನೇಮಕ; ಪರೀಕ್ಷೆ ಇಲ್ಲದೆ ಅಭ್ಯರ್ಥಿಗಳ ಆಯ್ಕೆ

BMTC Recruitment 2023 Apply for 636 Apprentice Posts

ಬಿಎಂಟಿಸಿ ನೇಮಕ

ಬೆಂಗಳೂರು : ಸಾರ್ವಜನಿಕ ಸಾರಿಗೆ ವ್ಯವಸ್ಥೆಯಲ್ಲಿ ದೇಶದಲ್ಲಿಯೇ ಹೆಸರು ಮಾಡಿರುವ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು(ಬಿಎಂಟಿಸಿ) ಶಿಶಿಕ್ಷು ತರಬೇತಿಗೆ ಅರ್ಹ ಅಭ್ಯರ್ಥಿಗಳಿಂದ (BMTC Recruitment 2023) ಅರ್ಜಿ ಆಹ್ವಾನಿಸಿದೆ. ಪೂರ್ಣಾವಧಿ ಶಿಶಿಕ್ಷು 550, ಡಿಪ್ಲೊಮಾ ಮತ್ತು ಪದವಿ ಶಿಶಿಕ್ಷು ತಲಾ 43 ಒಟ್ಟು 636 ಶಿಶಿಕ್ಷುಗಳನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ.

ಎಸ್‌ಎಸ್‌ಎಲ್‌ಸಿ, ಡಿಪ್ಲೊಮಾ ಮತ್ತು ಪದವಿ ಪಡೆದ ಅಭ್ಯರ್ಥಿಗಳು ಈ ಶಿಶಿಕ್ಷು ತರಬೇತಿ ಪಡೆಯಬಹುದಾಗಿದೆ. ತರಬೇತಿಯ ಅವಧಿಯಲ್ಲಿ ಮಾಸಿಕವಾಗಿ, ಎಸ್‌.ಎಸ್‌.ಎಲ್‌.ಸಿಯಲ್ಲಿ ತೇರ್ಗಡೆಹೊಂದಿರುವ ಅಭ್ಯರ್ಥಿಗಳಿಗೆ 6,000 ರೂ., ಐ.ಟಿ.ಐ ತೇರ್ಗಡೆ ಹೊಂದಿರುವ ಅಭ್ಯರ್ಥಿಗಳಿಗೆ 7,000 ರೂ., ಡಿಪ್ಲೊಮಾ ತೇರ್ಗಡೆ ಹೊಂದಿರುವ ಅಭ್ಯರ್ಥಿಗಳಗೆ 8,000ರೂ. ಪದವಿ ಪಡೆದ ಅಭ್ಯರ್ಥಿಗಳಿಗೆ 9,000 ರೂ. ತರಬೇತಿ ಭತ್ಯೆ ನೀಡಲಾಗುತ್ತದೆ.

ಯಾರಿಗೆ ಎಷ್ಟು ಅವಧಿಯ ತರಬೇತಿ?

ವಿದ್ಯಾರ್ಹತೆ ಏನು?

ಎಸ್‌ಎಸ್‌ಎಲ್‌ಸಿಯಲ್ಲಿ ಉತ್ತೀರ್ಣರಾದವರು, ಐಟಿಐ, ಡಿಪ್ಲೊಮಾ ಮಾಡಿದವರು ಮತ್ತು ಪದವೀಧರರು ಈ ಶಿಶಿಕ್ಷು ತರಬೇತಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಅಭ್ಯರ್ಥಿಗಳು ನೇಮಕದ ಸಂದರ್ಭದಲ್ಲಿ ಅಂಕಪಟ್ಟಿಯನ್ನು ಹಾಜರು ಪಡಿಸಬೇಕಾಗಿರುತ್ತದೆ.

ವಯೋಮಿತಿ ಎಷ್ಟು?

ಅಭ್ಯರ್ಥಿಗಳಿಗೆ ದಿನಾಂಕ:15-03-2023 ಕಕ್ಕೆ ಕನಿಷ್ಠ 16 ವರ್ಷ ತುಂಬಿರಬೇಕು ಮತ್ತು 30 ವರ್ಷ ಮೀರಿರಬಾರದು.

ಅರ್ಜಿ ನಮೂನೆಯನ್ನು ಪಡೆಯಲು ಇಲ್ಲಿ (Click Here) ಕ್ಲಿಕ್‌ ಮಾಡಿ.

ನೇಮಕ ಹೇಗೆ?

ಶಿಶಿಕ್ಷು ತರಬೇತಿ ಪಡೆಯಲು ಇಚ್ಛಿಸುವ ಅಭ್ಯರ್ಥಿಗಳು ಹೆಸರು, ವಿಳಾಸ, ಹುಟ್ಟಿದ ದಿನಾಂಕ, ವಿದ್ಯಾರ್ಹತೆ, ಜಾತಿ, ಅಪೇಕ್ಷಿತ ವೃತ್ತಿಯ ಮಾಹಿತಿಗಳನ್ನೊಳಗೊಂಡ ಹಾಗೂ ಸ್ಪಷ್ಟವಾಗಿ ಬೆರಳಚ್ಚುಮಾಡಿದ ಅರ್ಜಿಯೊಂದಿಗೆ ಇತ್ತೀಚಿನ 02 ಪಾಸ್‌ಪೋರ್ಟ್‌ ಅಳತೆಯ ಭಾವಚಿತ್ರ ಮತ್ತು ಸಂಬಂಧಪಟ್ಟ ಎಲ್ಲಾ ಮೂಲ ದಾಖಲಾತಿಗಳಾದ ಎಸ್‌.ಎಸ್‌.ಎಲ್‌.ಸಿ ಅಂಕಪಟ್ಟಿ, ಐ.ಟಿ.ಐ ತೇರ್ಗಡೆ ಹೊಂದಿದಲ್ಲಿ ಅದರ ಮೂಲ ಅಂಕಪಟ್ಟಿ, ಡಿಪ್ಲೊಮಾ ಅಂಕಪಟ್ಟಿಗಳು, ಪದವಿ ಅಂಕಪಟ್ಟಿಗಳು, ಚಾಲ್ತಿಯಲ್ಲಿರುವ ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಆಧಾರ್‌ ಕಾರ್ಡ್‌, ಆಧಾರ್‌ ಲಿಂಕ್‌ ಬ್ಯಾಂಕ್‌ ಖಾತೆಯ ಪ್ರತಿಯೊಂದಿಗೆ ದಿನಾಂಕ: 15-೦3-2023 ರಂದು ದಾಖಲಾತಿ ಪರಿಶೀಲನೆಗೆ ಹಾಜರಾಗಬೇಕೆಂದು ಸೂಚಿಸಲಾಗಿದೆ.

ಅಭ್ಯರ್ಥಿಗಳು ನಿಗದಿತ ದಿನದಂದು ಬೆಳಗ್ಗೆ 10.3೦ ಗಂಟೆಯಿಂದ ೮.೦೦ ಗಂಟೆಯೊಳಗೆ ಬೆಂಗಳೂರಿನ ಶಾಂತಿನಗರ ಬಸ್‌ನಿಲ್ದಾಣದಲ್ಲಿರುವ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಆಡಳಿತ ಕಚೇರಿಯ ೮ನೇ ಮಹಡಿಯಲ್ಲಿ ಅಭ್ಯರ್ಥಿಗಳು ಖುದ್ದಾಗಿ ಮೂಲ ದಾಖಲಾತಿಗಳ ಪರಿಶೀಲನೆಗೆ ಹಾಜರಾಗ ಬೇಕಿರುತ್ತದೆ ಹಾಗೂ ಮೂಲ ದಾಖಲಾತಿಗಳ ಒಂದು ಸೆಟ್‌ ಜೆರಾಕ್ಸ್‌ ಪ್ರತಿಗಳನ್ನು ಸಹ ಹಾಜರುಪಡಿಸಬೇಕಿರುತ್ತದೆ. ಅಪೂರ್ಣ ಅಥವಾ ವಿಳಂಬವಾಗಿ ಸಲ್ಲಿಸುವ ಅರ್ಜಿಗಳನ್ನು ಆಯ್ಕೆಗೆ ಪರಿಗಣಿಸಲಾಗುವುದಿಲ್ಲ ಎಂದು ಬಿಎಂಟಿಸಿ ಸ್ಪಷ್ಟಪಡಿಸಿದೆ.

ಶಿಶಿಕ್ಷು ಕಾಯ್ದೆ 1961 ನಿಯಮಗಳ ಪ್ರಕಾರ ಪರಿಶಿಷ್ಟ ಜಾತಿಗೆ ಸೇರಿದ ಅಭ್ಯರ್ಥಿಗಳಿಗೆ 1 :7 ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದ ಅಭ್ಯರ್ಥಿಗಳಿಗೆ 1:15ರ ಪ್ರಮಾಣದಲ್ಲಿ ಒಟ್ಟು ಹುದ್ದೆಗಳಲ್ಲಿ ಮೀಸಲಾತಿ ಕಾಯ್ದಿರಿಸಲಾಗಿದೆ.

ಉದ್ಯೋಗಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ (Click Here ) ಮಾಡಿ.

ತಾಂತ್ರಿಕ ಶಿಶಿಕ್ಷು ತರಬೇತಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಉತ್ತಮ ದೇಹದಾರ್ಡ್ಯತೆ ಹೊಂದಿರಬೇಕು. ಒಂದಕ್ಕಿಂತ ಹೆಚ್ಚಿನ ವೃತ್ತಿಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಆಭ್ಯರ್ಥಿಗಳು ಪ್ರತಿಯೊಂದು ವೃತ್ತಿಗೂ ಪ್ರತ್ಯೇಕ ಅರ್ಜಿ ಸಲ್ಲಿಸಬೇಕು. ಆಯ್ಕೆಗೆ ಸಂಬಂಧಿನಿದಂತೆ ಯಾವುದೇ ಪತ್ರ ವ್ಯವಹಾರಕ್ಕೆ ಅವಕಾಶವಿರುವುದಿಲ್ಲ ಎಂದು ಬಿಎಂಟಿಸಿಯು ಸ್ಪಷ್ಟಪಡಿಸಿದೆ.

ಇದನ್ನೂ ಓದಿ : KMF SHIMUL Recruitment 2023 : ಹಾಲು ಒಕ್ಕೂಟದಲ್ಲಿ 194 ಹುದ್ದೆ; ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ

Exit mobile version