ದೇಶದ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಒಂದಾದ, ಗುಜರಾತ್ ಮೂಲದ ಬ್ಯಾಂಕ್ ಆಫ್ ಬರೋಡಾ (ಬಿಓಬಿ) ವೆಲ್ತ್ ಮ್ಯಾನೇಜ್‌ಮೆಂಟ್‌ನಲ್ಲಿನ ಒಟ್ಟು 546 ಹುದ್ದೆಗಳಿಗೆ ನೇಮಕ ಮಾಡಿಕೊಳ್ಳುತ್ತಿದ್ದು (BOB Recruitment 2023), ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನಿಸಿದೆ. ಅರ್ಜಿ ಸಲ್ಲಿಸಲು ಮಾರ್ಚ್ 14 ಕೊನೆಯ ದಿನವಾಗಿರುತ್ತದೆ.
ಒಟ್ಟು ಹುದ್ದೆಗಳಲ್ಲಿ 500 ಸ್ವಾಧೀನಾಧಿಕಾರಿ (Acquisition Officers) ಹುದ್ದೆಗಳಾದರೆ, ಉಳಿದವು ಇದೇ ವಿಭಾಗಕ್ಕೆ ಸಂಬಂಧಿಸಿದ ಬೇರೆ ಬೇರೆ ಹುದ್ದೆಗಳಾಗಿವೆ. ಗುತ್ತಿಗೆಯಾಧಾರದಲ್ಲಿ ಈ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲಾಗುವುದು ಎಂದು ಬ್ಯಾಂಕ್ ಪ್ರಕಟಣೆಯಲ್ಲಿ ತಿಳಿಸಿದೆ. ರಾಜ್ಯದ ಬೆಂಗಳೂರಿನಲ್ಲಿ 25, ಮಂಗಳೂರಿನಲ್ಲಿ 8 ಸ್ವಾಧೀನಾಧಿಕಾರಿ ಹುದ್ದೆಗಳಿವೆ.
ಈ ಸ್ವಾಧೀನಾಧಿಕಾರಿ 500 ಹುದ್ದೆಗಳಲ್ಲಿ ಎಸ್‌ಸಿ ಅಭ್ಯರ್ಥಿಗಳಿಗೆ 75, ಎಸ್‌ಟಿ ಅಭ್ಯರ್ಥಿಗಳಿಗೆ 37 ಒಬಿಸಿ ಅಭ್ಯರ್ಥಿಗಳಿಗೆ 135, ಇಡಬ್ಲ್ಯುಎಸ್ ಅಭ್ಯರ್ಥಿಗಳಿಗೆ 50 ಹುದ್ದೆಗಳನ್ನು ಹಾಗೂ ಉಳಿದ 203 ಹುದ್ದೆಗಳನ್ನು ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ಮೀಸಲಿಡಲಾಗಿದೆ.
ವಿದ್ಯಾರ್ಹತೆ ಏನು?
ಯಾವುದೇ ವಿಷಯದಲ್ಲಿ ಪದವಿ ಪಡೆದವರು ಸ್ವಾಧೀನಾಧಿಕಾರಿ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಆದರೆ ವಿದ್ಯಾರ್ಹತೆಯ ಜತೆಗೆ ಅಭ್ಯರ್ಥಿಯು, ರಾಷ್ಟ್ರೀಕೃತ ಬ್ಯಾಂಕ್/ಖಾಸಗಿ ಬ್ಯಾಂಕ್/ ವಿದೇಶಿ ಬ್ಯಾಂಕ್/ ಬ್ರೊಕಿಂಗ್ ಸಂಸ್ಥೆ/ ಅಸೆಟ್ ಮ್ಯಾನೇಜ್‌ಮೆಂಟ್ ಕಂಪನಿಯಲ್ಲಿ ಒಂದು ವರ್ಷ ಕಾರ್ಯ ನಿರ್ವಹಿಸಿದ ಅನುಭವ ಹೊಂದಿರಬೇಕು. ಸ್ಥಳೀಯ ಭಾಷೆಯಲ್ಲಿ ಮಾತನಾಡುವ ಜ್ಞಾನ ಹೊಂದಿರಬೇಕು.
ಇದಲ್ಲದೆ, NRI Wealth Products Manager , Group Sales Head, Wealth Strategist, Head Wealth, Product Manager, Senior Manager (Trade Regulation), Radiance Private Sales Head, Product Head, Private Banker, Regional Acquisition Manager, National Acquisition Head ಹುದ್ದೆಗಳಿಗೂ ನೇಮಕ ನಡೆಯಲಿದೆ. ಬಹುತೇಕವಾಗಿ ಈ ಎಲ್ಲ ಹುದ್ದೆಗಳಿಗೂ ಪದವಿ ವಿದ್ಯಾರ್ಹತೆ ನಿಗದಿಪಡಿಸಲಾಗಿದೆಯಾದರೂ, ಅನುಭವದಲ್ಲಿ ವ್ಯತ್ಯಾಸವಿರುತ್ತದೆ. ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮೊದಲು ಅಧಿಸೂಚನೆಯಲ್ಲಿ ಇದನ್ನು ನೋಡಿಕೊಂಡು ಅರ್ಜಿ ಸಲ್ಲಿಸಬಹುದಾಗಿರುತ್ತದೆ.
ಅರ್ಜಿ ಸಲ್ಲಿಸಲು ಇಲ್ಲಿ (Click Here) ಕ್ಲಿಕ್ ಮಾಡಿ
ವಯೋಮಿತಿ ಎಷ್ಟು?
ಅಭ್ಯರ್ಥಿಯ ಕನಿಷ್ಠ ವಯಸ್ಸು 21 ವರ್ಷ. ಗರಿಷ್ಠ ವಯೋಮಿತಿ 28 ವರ್ಷ. ಎಸ್‌ಸಿ, ಎಸ್‌ಟಿ, ಓಬಿಸಿ, ಮಾಜಿ ಸೈನಿಕ, ವಿಕಲಚೇತನ ಅಭ್ಯರ್ಥಿಗಳಿಗೆ ಸರ್ಕಾರದ ನಿಯಮದ ಪ್ರಕಾರ ಗರಿಷ್ಠ ವಯೋಮಿತಿಯಲ್ಲಿ ಸಡಿಲಿಕೆ ನೀಡಲಾಗಿರುತ್ತದೆ. ವಯೋಮಿತಿಯನ್ನು ದಿನಾಂಕ: 01-02-2023 ಕ್ಕೆ ಲೆಕ್ಕಹಾಕಲಾಗುತ್ತದೆ.
ಇತ್ತ ಗಮನಿಸಿ
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 14-03-2023
ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ: 14-03-2023
ಹೆಚ್ಚಿನ ಮಾಹಿತಿಗೆ ವೆಬ್‌ಸೈಟ್ ವಿಳಾಸ: https://www.bankofbaroda.in
ವೇತನ ಎಷ್ಟಿರುತ್ತದೆ?
ಸ್ವಾಧೀನಾಧಿಕಾರಿ ಹುದ್ದೆಗಳಿಗೆ ಮೆಟ್ರೋ ನಗರಗಳಲ್ಲಿ ವಾರ್ಷಿಕ 5 ಲಕ್ಷ ರೂ. ವೇತನ ನೀಡಲಾಗುತ್ತದೆ. ಮೆಟ್ರೋ ಹೊರತಾದ ನಗರಗಳಲ್ಲಿ 4 ಲಕ್ಷ ರೂ. ನೀಡಲಾಗುತ್ತದೆ. ಇದರ ಹೊರತಾಗಿ ಇನ್ನಿತರ ಭತ್ಯೆಗಳು ಇರುತ್ತವೆ. ಬೇರೆ ಹುದ್ದೆಗಳಿಗೆ ನೀಡಲಾಗುವ ವೇತನದ ಕುರಿತು ಅಧಿಸೂಚನೆಯಲ್ಲಿ ಸ್ಪಷ್ಟ ಮಾಹಿತಿ ನೀಡಲಾಗಿಲ್ಲ.
ಉದ್ಯೋಗಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ (Click Here) ಮಾಡಿ
ನೇಮಕ ಹೇಗೆ?
ಸ್ವಾಧೀನಾಧಿಕಾರಿ ಹುದ್ದೆಗಳ ನೇಮಕದಲ್ಲಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಮೊದಲಿಗೆ ಆನ್‌ಲೈನ್ ಟೆಸ್ಟ್ (OT) ನಡೆಸಲಾಗುತ್ತದೆ. ಇದರಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳಿಗೆ ಗುಂಪು ಚರ್ಚೆ ಅಥವಾ ಸಂದರ್ಶನ ನಡೆಸಲಾಗುತ್ತದೆ. ಆನ್‌ಲೈನ್ ಟೆಸ್ಟ್ ನೂರು ಅಂಕಗಳಿಗೆ ನಡೆಯಲಿದ್ದು, 90 ನಿಮಿಷ ಪರೀಕ್ಷೆ ಬರೆಯಲು ಅವಕಾಶ ನೀಡಲಾಗುತ್ತದೆ. ಇಂಗ್ಲಿಷ್ ಮತ್ತು ಹಿಂದಿಯಲ್ಲಿ ಮಾತ್ರ ಈ ಪರೀಕ್ಷೆ ಬರೆಯಬಹುದಾಗಿದೆ.
ಸ್ವಾಧೀನಾಧಿಕಾರಿ ಹುದ್ದೆ ಹೊರತುಪಡಿಸಿ ಬೇರೆ ಹುದ್ದೆಗಳಿಗೆ ಸಂದರ್ಶನ, ಗುಂಪು ಚರ್ಚೆ ಮೂಲಕ ನೇಮಕ ಮಾಡಿಕೊಳ್ಳಲಾಗುತ್ತದೆ. ಆನ್‌ಲೈನ್ ಪರೀಕ್ಷೆಯನ್ನು ರಾಜ್ಯದ ಬೆಂಗಳೂರು ಮತ್ತು ಮಂಗಳೂರಿನಲ್ಲಿ ಮಾತ್ರ ನಡೆಸಲಾಗುತ್ತದೆ.
ಇದನ್ನೂ ಓದಿ : IDBI Recruitment 2023 : ಐಡಿಬಿಐ ಬ್ಯಾಂಕ್‌ನಲ್ಲಿ 600 ಅಸಿಸ್ಟೆಂಟ್ ಮ್ಯಾನೇಜರ್ ಹುದ್ದೆ; ಪದವೀಧರರಿಂದ ಅರ್ಜಿ ಆಹ್ವಾನ