Site icon Vistara News

BOI PO Recruitment 2023 : ಬ್ಯಾಂಕ್ ಆಫ್ ಇಂಡಿಯಾದಲ್ಲಿ ಪಿಓ ಹುದ್ದೆ; ಎಂಜಿನಿಯರಿಂಗ್‌ ಪದವೀಧರರಿಗೂ ಅವಕಾಶ

BOI PO Recruitment 2023

BOI PO Recruitment 2023

ದೇಶದ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಒಂದಾಗಿರುವ ಬ್ಯಾಂಕ್ ಆಫ್ ಇಂಡಿಯಾ (ಬಿಓಐ) ಪ್ರೊಬೇಷನರಿ ಆಫೀಸರ್‌ (PO) ಹುದ್ದೆಗಳ ನೇಮಕಕ್ಕೆ (BOI PO Recruitment 2023) ಅರ್ಜಿ ಆಹ್ವಾನಿಸಿದೆ. ಆನ್‌ಲೈನ್‌ನಲ್ಲಿ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದ್ದು, ಅರ್ಜಿ ಸಲ್ಲಿಸಲು ಫೆವ್ರವರಿ 25 ಕೊನೆಯ ದಿನವಾಗಿರುತ್ತದೆ. ಆನ್‌ಲೈನ್‌ನಲ್ಲಿಯೇ ಅರ್ಜಿ ಶುಲ್ಕವನ್ನೂ ಪಾವತಿಸಬಹುದಾಗಿರುತ್ತದೆ.

ಒಟ್ಟು 500 ಹುದ್ದೆಗಳಿಗೆ ನೇಮಕ ನಡೆಯಲಿದ್ದು, ಇದರಲ್ಲಿ 350 ಹುದ್ದೆಗಳು ಕ್ರೆಡಿಟ್‌ ಆಫೀಸರ್‌ (Credit Officer in General Banking stream ) ಹುದ್ದೆಗಳಾದರೆ 150 ಹುದ್ದೆಗಳು ಐಟಿ ಆಫೀಸರ್‌ (IT Officer in Specialist stream) ಹುದ್ದೆಗಳಾಗಿವೆ. ಈ ಹುದ್ದೆಗಳಲ್ಲಿ ಎಸ್‌ಸಿ ಅಭ್ಯರ್ಥಿಗಳಿಗೆ 76, ಎಸ್‌ಟಿ ಅಭ್ಯರ್ಥಿಗಳಿಗೆ 40, ಒಬಿಸಿ ಅಭ್ಯರ್ಥಿಗಳಿಗೆ 138 ಹಾಗೂ ಇಡಬ್ಲ್ಯುಎಸ್‌ ಅಭ್ಯರ್ಥಿಗಳಿಗೆ 48 ಹುದ್ದೆಗಳನ್ನು ಮೀಸಲಿಡಲಾಗಿದೆ. ಉಳಿದ 198 ಹುದ್ದೆಗಳು ಸಾಮಾನ್ಯ ಅಭ್ಯರ್ಥಿಗಳಿಗೆ ದೊರೆಯಲಿವೆ.

ಹುದ್ದೆಗಳ ಹಂಚಿಕೆ ಹೀಗಿದೆ;

ವಿದ್ಯಾರ್ಹತೆ ಏನು?

ಕ್ರೆಡಿಟ್‌ ಆಫೀಸರ್‌ ಹುದ್ದೆ: ಅಂಗೀಕೃತ ವಿಶ್ವವಿದ್ಯಾಲಯದಿಂದ ಯಾವುದೇ ವಿಷಯದಲ್ಲಿ ಪದವಿ ಪಡೆದ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿರುತ್ತದೆ. ಅರ್ಜಿ ಸಲ್ಲಿಸುವಾಗ ಪದವಿಯಲ್ಲಿ ಪಡೆದ ಅಂಕಗಳ ಮಾಹಿತಿಯನ್ನು (percentage of marks) ಒದಗಿಸಬೇಕಿರುತ್ತದೆ.

ಇತ್ತ ಗಮನಿಸಿ
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 25-02-2023
ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ: 25-02-2023

ವಿದ್ಯಾರ್ಹತೆ, ವಯೋಮಿತಿ ಪರಿಗಣನೆ ದಿನಾಂಕ: 01-02-2023
ಸಹಾಯವಾಣಿ ಸಂಖ್ಯೆ: 1800 103 1906
ಹೆಚ್ಚಿನ ಮಾಹಿತಿಗೆ ವೆಬ್‌ ಸೈಟ್‌: https://bankofindia.co.in

ಐಟಿ ಆಫೀಸರ್‌ : ಕಂಪ್ಯೂಟರ್‌ ಸೈನ್ಸ್‌, ಕಂಪ್ಯೂಟರ್‌ ಅಪ್ಲಿಕೇಷನ್ಸ್‌, ಇನ್‌ಫಾರ್ಮೆಷನ್‌ ಟೆಕ್ನಾಲಜಿ, ಎಲೆಕ್ಟ್ರಾನಿಕ್ಸ್‌, ಎಲೆಕ್ರಾನಿಕ್ಸ್‌ & ಟೆಲಿ ಕಮ್ಯುನಿಕೇಷನ್ಸ್‌, ಎಲೆಕ್ಟ್ರಾನಿಕ್ಸ್‌ & ಕಮ್ಯುನಿಕೇಷನ್‌, ಎಲೆಕ್ಟ್ರಾನಿಕ್ಸ್‌ & ಇನ್‌ಸ್ಟ್ರುಮೆಂಟೇಷನ್‌ನಲ್ಲಿ ಇವುಗಳಲ್ಲಿ ಯಾವುದಾದರೂ ಒಂದು ವಿಷಯದಲ್ಲಿ ನಾಲ್ಕು ವರ್ಷಗಳ ಎಂಜಿನಿಯರಿಂಗ್‌ ಅಥವಾ ತಾಂತ್ರಿಕ ಪದವಿ ಪಡೆದಿರಬೇಕು.
ಅಥವಾ, ಯಾವುದೇ ವಿಷಯದಲ್ಲಿ ಪದವಿ ಪಡೆದು, ಎಲೆಕ್ಟ್ರಾನಿಕ್ಸ್‌, ಎಲೆಕ್ರಾನಿಕ್ಸ್‌ & ಟೆಲಿ ಕಮ್ಯುನಿಕೇಷನ್ಸ್‌, ಎಲೆಕ್ಟ್ರಾನಿಕ್ಸ್‌ & ಕಮ್ಯುನಿಕೇಷನ್‌, ಎಲೆಕ್ಟ್ರಾನಿಕ್ಸ್‌ & ಇನ್‌ಸ್ಟ್ರುಮೆಂಟೇಷನ್‌, ಇನ್‌ಫಾರ್ಮೆಷನ್‌ ಟೆಕ್ನಾಲಜಿ, ಕಂಪ್ಯೂಟರ್‌ ಅಪ್ಲಿಕೇಷನ್ಸ್‌ ಇವುಗಳಲ್ಲಿ ಯಾವುದಾದರೂ ಒಂದರಲ್ಲಿ AND ಸ್ನಾತಕೋತ್ತರ ಪದವಿ ಪಡೆದಿರಬೇಕು.

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ದಿನಾಂಕ 01.02.2023ರ ಒಳಗೆ ಪದವಿ ಪಡೆದಿರಬೇಕಾದದು ಅವಶ್ಯಕ.

ವಯೋಮಿತಿ ಎಷ್ಟು?

21 ರಿಂದ 29 ವರ್ಷದೊಳಗಿನ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಬಹುದಾಗಿದೆ. ಗರಿಷ್ಠ ವಯೋಮಿತಿಯಲ್ಲಿ ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ ಮತ್ತು ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ ಸಡಿಲಿಕೆ ನೀಡಲಾಗಿರುತ್ತದೆ.

ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್‌ (Click Here) ಮಾಡಿ

ಅರ್ಜಿ ಶುಲ್ಕ ಎಷ್ಟು?

ಸಾಮಾನ್ಯ, ಒಬಿಸಿ ಮತ್ತು ಇಡಬ್ಲ್ಯುಎಸ್‌ ಅಭ್ಯರ್ಥಿಗಳಿಗೆ 850 ರೂ.ಅರ್ಜಿ ಶುಲ್ಕ ನಿಗದಿಪಡಿಸಲಾಗಿದೆ. ಆನ್‌ಲೈನ್‌ನಲ್ಲಿಯೇ ಶುಲ್ಕ ಪಾವತಿಸಬಹುದಾಗಿದೆ. ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕದಿಂದ ವಿನಾಯಿತಿ ನೀಡಲಾಗಿರುತ್ತದೆ. ಆದರೆ ಅವರು 175 ರೂ. ಇಂಟಿಮೇಷನ್‌ ಶುಲ್ಕ ನೀಡಬೇಕಾಗಿರುತ್ತದೆ.

ವೇತನ ಶ್ರೇಣಿ ಹೇಗಿರುತ್ತದೆ?

ನೇಮಕವಾದವರಿಗೆ ಜೂನಿಯರ್‌ ಮ್ಯಾನೇಜ್‌ಮೆಂಟ್‌ ಸ್ಕೇಲ್‌ ((JMGS I) ವೇತನ ನೀಡಲಾಗುತ್ತದೆ. ವೇತನ ಶ್ರೇಣಿ ಇಂತಿದೆ: ರೂ.36,000-1,490/7-46,430-1740/2-49,910-1,990/7-63,840.

ಅಧಿಸೂಚನೆ ನೋಡಲು ಇಲ್ಲಿ ಕ್ಲಿಕ್‌ (Click Here) ಮಾಡಿ

ನೇಮಕ ಹೇಗೆ?

ಎರಡು ಹಂತದ ನೇಮಕ ಪ್ರಕ್ರಿಯೆ ಮೂಲಕ ಈ ಹುದ್ದೆಗಳಿಗೆ ನೇಮಕ ನಡೆಯಲಿದೆ. ಮೊದಲಿಗೆ ಆನ್‌ಲೈನ್‌ ಪರೀಕ್ಷೆ ನಡೆಸಲಾಗುತ್ತದೆ, ಇದರಲ್ಲಿ ವಿವರಣಾತ್ಮಕ ಪರೀಕ್ಷೆ ಕೂಡ ಇರುತ್ತದೆ. 225 ಅಂಕಗಳಿಗೆ ನಡೆಯುವ ಈ ಪರೀಕ್ಷೆಯಲ್ಲಿ ಪ್ರತಿಯೊಂದು ವಿಷಯಕ್ಕೂ ಪ್ರತ್ಯೇಕ ಸಮಯ ನಿಗದಿಯಾಗಿರುತ್ತದೆ.

ಇದರಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳನ್ನು ಗುಂಪು ಚರ್ಚೆ ಮತ್ತು ಸಂದರ್ಶನಕ್ಕೆ ಆಹ್ವಾನಿಸಲಾಗುತ್ತದೆ. ಸಂದರ್ಶನಕ್ಕೆ 60 ಅಂಕ ಹಾಗೂ ಗುಂಪು ಚರ್ಚೆಗೆ (Group Discussion) 40 ಅಂಕ ನಿಗದಿಪಡಿಸಲಾಗಿರುತ್ತದೆ. ಆನ್‌ಲೈನ್‌ ಪರೀಕ್ಷೆ, ಸಂದರ್ಶನ ಮತ್ತು ಗುಂಪು ಚರ್ಚೆಯಲ್ಲಿ ಪಡೆದ ಅಂಕಗಳ ಆಧಾರದಲ್ಲಿ ನೇಮಕ ನಡೆಯಲಿದೆ.

ಹೀಗೆ ನೇಮಕಗೊಂಡ ಅಭ್ಯರ್ಥಿಗಳು ಮೊದಲಿಗೆ ಬ್ಯಾಂಕಿಂಗ್‌ ಮತ್ತು ಫೈನಾನ್ಸ್‌ ವಿಷಯದಲ್ಲಿ ಸ್ನಾತಕೋತ್ತರ ಡಿಪ್ಲೊಮಾ (Post Graduate Diploma in Banking & Finance (PGDBF) ಮಾಡಬೇಕಿರುತ್ತದೆ.

ಉದ್ಯೋಗಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ (Click Here ) ಮಾಡಿ.

ಬ್ಯಾಂಕ್ ಆಫ್ ಇಂಡಿಯಾ ರಾಷ್ಟ್ರೀಕೃತ ಬ್ಯಾಂಕ್‌ ಆಗಿದ್ದರೂ ನೇಮಕಾತಿ ಪರೀಕ್ಷೆಯನ್ನು ಇಂಗ್ಲಿಷ್‌ ಮತ್ತು ಹಿಂದಿಯಲ್ಲಿ ಮಾತ್ರ ನಡೆಸಲಾಗುತ್ತದೆ. ಕನ್ನಡದಲ್ಲಿ ಪರೀಕ್ಷೆ ಬರೆಯಲು ಅವಕಾಶವಿರುವುದಿಲ್ಲ. ರಾಜ್ಯದಲ್ಲಿನ ಹುದ್ದೆಗಳ ಸಂಖ್ಯೆಯನ್ನೂ ಪ್ರಕಟಿಸಿರುವುದಿಲ್ಲ.

ಆನ್‌ಲೈನ್‌ ಪರೀಕ್ಷೆ ಎಲ್ಲೆಲ್ಲಿ?

ರಾಜ್ಯದ ಬೆಳಗಾವಿ, ಬೆಂಗಳೂರು, ಬೀದರ್‌, ದಾವಣಗೆರೆ, ಧಾರವಾಡ, ಕಲಬುರಗಿ, ಹಾಸನ, ಹುಬಳ್ಳಿ, ಮಂಡ್ಯ, ಮಂಗಳೂರು, ಮೈಸೂರು, ಶಿವಮೊಗ್ಗ ಮತ್ತು ಉಡುಪಿಯಲ್ಲಿ ಪರೀಕ್ಷಾ ಕೇಂದ್ರ ಇರಲಿದೆ.

ಇದನ್ನೂ ಓದಿ : DCC Bank Recruitment 2023 : ಬೆಂಗಳೂರು ಡಿಸಿಸಿ ಬ್ಯಾಂಕ್‌ನಲ್ಲಿ 96 ಹುದ್ದೆಗಳಿಗೆ ನೇಮಕ; ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ

Exit mobile version