Site icon Vistara News

BPNL Recruitment 2024: ಭಾರತೀಯ ಪಶುಪಾಲನಾ ನಿಗಮದಲ್ಲಿದೆ 2,250 ಹುದ್ದೆ; 10ನೇ ತರಗತಿ ಪಾಸಾದವರೂ ಅಪ್ಲೈ ಮಾಡಿ

BPNL Recruitment 2024

ಬೆಂಗಳೂರು: ಭಾರತೀಯ ಪಶುಪಾಲನಾ ನಿಗಮ ಲಿಮಿಟೆಡ್‌ (Bhartiya Pashupalan Nigam Limited) ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ (BPNL Recruitment 2024). ಬರೋಬ್ಬರಿ 2,250 ಹುದ್ದೆಗಳನ್ನು ಭರ್ತಿ ಮಾಡಲು ಅಧಿಸೂಚನೆ ಪ್ರಕಟಿಸಲಾಗಿದ್ದು, ಎಸ್ಸೆಸ್ಸೆಲ್ಸಿ, ದ್ವಿತೀಯ ಪಿಯುಸಿ, ಪದವಿ ವಿದ್ಯಾರ್ಹತೆಯ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಆಸಕ್ತರು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕು. ಕೊನೆಯ ದಿನ ಆಗಸ್ಟ್‌ 5 (Job Alert).

ಹುದ್ದೆಗಳ ವಿವರ ಮತ್ತು ವಿದ್ಯಾರ್ಹತೆ

ಗೋ ಸಂವರ್ಧನಾ ವಿಸ್ತಾರಕ (Cow Promotion Extender)- 225 ಹುದ್ದೆ, ವಿದ್ಯಾರ್ಹತೆ: ಪದವಿ
ಕೌ ಬ್ರೀಡಿಂಗ್‌ ಅಸಿಸ್ಟಂಟ್‌ (Cow Breeding Assistant)- 675 ಹುದ್ದೆ, ವಿದ್ಯಾರ್ಹತೆ: 12ನೇ ತರಗತಿ
ಗೋ ಸೇವಕ (Cow Servant)- 1,350 ಹುದ್ದೆ, ವಿದ್ಯಾರ್ಹತೆ: 10ನೇ ತರಗತಿ

ವಯೋಮಿತಿ

ಗೋ ಸಂವರ್ಧನಾ ವಿಸ್ತಾರಕ ಹುದ್ದೆಗೆ 25 – 45 ವರ್ಷ, ಕೌ ಬ್ರೀಡಿಂಗ್‌ ಅಸಿಸ್ಟಂಟ್‌ ಹುದ್ದೆಗೆ 21 – 40 ವರ್ಷ, ಗೋ ಸೇವಕ ಹುದ್ದೆಗೆ 18 – 40 ವರ್ಷದವರು ಅರ್ಜಿ ಸಲ್ಲಿಸಬಹುದು. ಮೀಸಲಾತಿಗೆ ಅನುಗುಣವಾಗಿ ವಯೋಮಿತಿಯಲ್ಲಿ ಸಡಿಲಿಕೆ ಲಭ್ಯ. ಒಬಿಸಿ ವರ್ಗಕ್ಕೆ 3 ವರ್ಷ ಮತ್ತು ಎಸ್‌ಸಿ / ಎಸ್‌ಟಿ ವರ್ಗಕ್ಕೆ 5 ವರ್ಷಗಳ ರಿಯಾಯಿತಿ ಇದೆ.

ಅರ್ಜಿ ಶುಲ್ಕ ಮತ್ತು ಆಯ್ಕೆ ವಿಧಾನ

ವಿವಿಧ ಹುದ್ದೆಗಳಿಗೆ ಅನುಗುಣವಾಗಿ ಅರ್ಜಿ ಶುಲ್ಕದಲ್ಲಿ ವ್ಯತ್ಯಾಸವಿದೆ. ಗೋ ಸಂವರ್ಧನಾ ವಿಸ್ತಾರಕ ಹುದ್ದೆಗೆ – 944 ರೂ., ಕೌ ಬ್ರೀಡಿಂಗ್‌ ಅಸಿಸ್ಟಂಟ್‌ ಹುದ್ದೆಗೆ – 826 ರೂ. ಮತ್ತು ಗೋ ಸೇವಕ ಹುದ್ದೆಗೆ – 708 ರೂ. ಅರ್ಜಿ ಶುಲ್ಕ ಪಾವತಿಸಬೇಕು. ಎಲ್ಲ ವರ್ಗದ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ಒಂದೇ ತೆರನಾಗಿದ್ದು, ಆನ್‌ಲೈನ್‌ ಮೂಲಕ ಪಾವತಿಸಬೇಕು. ಆನ್‌ಲೈನ್‌ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ಮಾಸಿಕ ವೇತನ

ಆಯ್ಕೆಯಾದವರಿಗೆ ಗೋ ಸಂವರ್ಧನಾ ವಿಸ್ತಾರಕ ಹುದ್ದೆಗೆ – 26,000 ರೂ., ಕೌ ಬ್ರೀಡಿಂಗ್‌ ಅಸಿಸ್ಟಂಟ್‌ ಹುದ್ದೆಗೆ – 23,000 ರೂ. ಮತ್ತು ಗೋ ಸೇವಕ ಹುದ್ದೆಗೆ – 18,000 ರೂ. ಮಾಸಿಕ ವೇತನ ಲಭ್ಯ.

BPNL Recruitment 2024 ಅಧಿಸೂಚನೆಗಾಗಿ ಇಲ್ಲಿ ಕ್ಲಿಕ್‌ ಮಾಡಿ.

ಅರ್ಜಿ ಸಲ್ಲಿಸುವ ವಿಧಾನ

ಹೆಚ್ಚಿನ ವಿವರಗಳಿಗೆ ಭಾರತೀಯ ಪಶುಪಾಲನಾ ನಿಗಮ ಲಿಮಿಟೆಡ್‌ನ ವೆಬ್‌ಸೈಟ್‌ ವಿಳಾಸ: bharatiyapashupalan.comಗೆ ಭೇಟಿ ನೀಡಿ ಎಂದು ಪ್ರಕಟಣೆ ತಿಳಿಸಿದೆ.

Exit mobile version