Site icon Vistara News

DRDO Recruitment 2023 : ಎಂಜಿನಿಯರಿಂಗ್‌ ಮುಗಿಯಿತಾ? ಡಿಆರ್‌ಡಿಒನಲ್ಲಿ ಸೈಂಟಿಸ್ಟ್‌ ಆಗಿ!

DRDO Recruitment 2023 drdo job vacancy 2023

#image_title

ಭಾರತೀಯ ರಕ್ಷಣಾ ಇಲಾಖೆಗೆ ಸೇರಿದ, ಬೆಂಗಳೂರಿನಲ್ಲಿ ಕೇಂದ್ರ ಕಚೇರಿ ಹೊಂದಿರುವ ʻರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆʼ (ಡಿಆರ್‌ಡಿಒ) ಸೈಂಟಿಸ್ಟ್‌ ʻಬಿʼ ಹುದ್ದೆಗಳ ನೇಮಕಕ್ಕೆ (DRDO Recruitment 2023) ಅಧಿಸೂಚನೆ ಹೊರಡಿಸಿದೆ. ಒಟ್ಟು 181 ಹುದ್ದೆಗಳಿಗೆ ನೇಮಕ ನಡೆಯಲಿದ್ದು, ಎಂಜಿನಿಯರಿಂಗ್‌ ಪದವೀಧರರು, ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವವರು ಹಾಗೂ ಈಗ ಅಂತಿಮ ವರ್ಷದಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ.

ನೇಮಕಗೊಂಡ ಅಭ್ಯರ್ಥಿಗಳಿಗೆ ಎಚ್‌ಆರ್‌ಎ ಹಾಗೂ ಇತರ ಎಲ್ಲ ಭತ್ಯೆಗಳು ಸೇರಿ ಮಾಸಿಕ ಒಂದು ಲಕ್ಷ ರೂ. ವೇತನ ನೀಡಲಾಗುತ್ತದೆ. ಕೇಂದ್ರ ಸರ್ಕಾರದ ವೇತನ ಶ್ರೇಣಿ ಅನ್ವಯವಾಗುತ್ತದೆ. ಗೇಟ್‌ ಸ್ಕೋರ್‌ ಹಾಗೂ ಸಂದರ್ಶನದ ಮೂಲಕ ನೇಮಕ ನಡೆಯಲಿದೆ. ಆನ್‌ಲೈನ್‌ನಲ್ಲಿ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿರುತ್ತದೆ.

ಇತ್ತ ಗಮನಿಸಿ
ಅರ್ಜಿ ಸಲ್ಲಿಸಲು ಅವಕಾಶ : 21 ದಿನಗಳು.
ಹೆಚ್ಚಿನ ಮಾಹಿತಿಗೆ ವೆಬ್‌ಸೈಟ್‌ ವಿಳಾಸ: https://rac.gov.in
ಸಹಾಯವಾಣಿ ಸಂಖ್ಯೆ: 011‐23889528

ಯಾವೆಲ್ಲಾ ಹುದ್ದೆಗಳಿಗೆ ನೇಮಕ?

1. ಎಲೆಕ್ಟ್ರಾನಿಕ್ಸ್‌ & ಕಮ್ಯುನಿಕೇಷನ್‌ ಎಂಜಿನಿಯರಿಂಗ್‌- 49 ಹುದ್ದೆಗಳು
ವಿದ್ಯಾರ್ಹತೆ : ಎಲೆಕ್ಟ್ರಾನಿಕ್ಸ್‌ & ಕಮ್ಯುನಿಕೇಷನ್‌ ಎಂಜಿನಿಯರಿಂಗ್‌ನಲ್ಲಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿರಬೇಕು. ಎಲೆಕ್ಟ್ರಾನಿಕ್ಸ್‌ ಎಂಜಿನಿಯರಿಂಗ್‌, ಟೆಲಿ ಕಮ್ಯುನಿಕೇಷನ್‌ ಎಂಜಿನಿಯರಿಂಗ್‌, ಎಲೆಕ್ಟ್ರಿಕಲ್‌ ಎಂಜಿನಿಯರಿಂಗ್‌ ಸೇರಿದಂತೆ ಒಟ್ಟು 19 ವಿಷಯಗಳನ್ನು ತತ್ಸಮಾನ ಎಂದು ಗುರುತಿಸಲಾಗಿದೆ. ಈ ಬಗ್ಗೆ ಅಧಿಸೂಚನೆಯಲ್ಲಿ ಮಾಹಿತಿ ನೀಡಲಾಗಿದೆ.

2.ಮೆಕ್ಯಾನಿಕಲ್‌ ಎಂಜಿನಿಯರಿಂಗ್‌-44 ಹುದ್ದೆಗಳು
ವಿದ್ಯಾರ್ಹತೆ: ಮೆಕ್ಯಾನಿಕಲ್‌ ಎಂಜಿನಿಯರಿಂಗ್‌ನಲ್ಲಿ ಪ್ರಥಮ ದರ್ಜೆಯಲ್ಲಿ ಪದವಿ ಪಡೆದಿರಬೇಕು. ಮೆಕ್ಯಾನಿಕಲ್‌ & ಆಟೋಮೇಷನ್‌ ಎಂಜಿನಿಯರಿಂಗ್‌, ಮೆಕ್ಯಾನಿಕಲ್‌ & ಪ್ರೊಡಕ್ಷನ್‌ ಎಂಜಿನಿಯರಿಂಗ್‌ ಪದವೀಧರರೂ ಅರ್ಜಿ ಸಲ್ಲಿಸಬಹುದು.

3.ಕಂಪ್ಯೂಟರ್‌ ಸೈನ್ಸ್‌ & ಎಂಜಿನಿಯರಿಂಗ್‌ -34 ಹುದ್ದೆಗಳು
ವಿದ್ಯಾರ್ಹತೆ: ಕಂಪ್ಯೂಟರ್‌ ಸೈನ್ಸ್‌ & ಎಂಜಿನಿಯರಿಂಗ್‌ನಲ್ಲಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದವರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಕಂಪ್ಯೂಟರ್‌ ಸೈನ್ಸ್‌/ಎಂಜಿನಿಯರಿಂಗ್‌/ ಟೆಕ್ನಾಲಜಿ, ಕಂಪ್ಯೂಟರ್‌ ಸೈನ್ಸ್‌ & ಎಂಜಿನಿಯರಿಂಗ್‌, ಕಂಪ್ಯೂಟರ್‌ ಸೈನ್ಸ್‌ & ಇನ್ಫೋ ಟೆಕ್‌, ಕಂಪ್ಯೂಟರ್ ನೆಟ್‌ವರ್ಕಿಂಗ್‌ ಹೀಗೆ ಒಟ್ಟು 13 ವಿಷಯಗಳನ್ನು ತತ್ಸಮಾನ ಎಂದು ಗುರುತಿಸಲಾಗಿದೆ. ಈ ಬಗ್ಗೆ ಅಧಿಸೂಚನೆಯಲ್ಲಿ ಮಾಹಿತಿ ನೀಡಲಾಗಿದೆ.

4. ಮೆಟಿರಿಯಲ್‌ ಎಂಜಿನಿಯರಿಂಗ್‌/ ಮೆಟಿರಿಯಲ್‌ ಸೈನ್ಸ್‌ & ಎಂಜಿನಿಯರಿಂಗ್‌/ ಮೆಟಲರ್ಜಿಕಲ್‌ ಎಂಜಿನಿಯರಿಂಗ್‌- 10 ಹುದ್ದೆಗಳು
ವಿದ್ಯಾರ್ಹತೆ: ಮೆಟಲರ್ಜಿಯಲ್ಲಿ ಪ್ರಥಮ ದರ್ಜೆಯಲ್ಲಿ ಎಂಜಿನಿಯರಿಂಗ್‌ ಪದವಿ ಪಡೆದವರು ಅರ್ಜಿ ಸಲ್ಲಿಸಬಹುದು. ಇದರೊಂದಿಗೆ ಮೆಟಿರಿಯಲ್‌ ಎಂಜಿನಿಯರಿಂಗ್‌, ಮೆಟಿರಿಯಲ್‌ ಸೈನ್ಸ್‌ & ಎಂಜಿನಿಯರಿಂಗ್‌, ಮೆಟಲರ್ಜಿಕಲ್‌ ಎಂಜಿನಿಯರಿಂಗ್‌ ಮಾಡಿದವರಿಗೂ ಅವಕಾಶ ನೀಡಲಾಗುತ್ತದೆ.

ಅರ್ಜಿ ಸಲ್ಲಿಸಲು ಇಲ್ಲಿ (Click Here) ಕ್ಲಿಕ್‌ ಮಾಡಿ

5.ಪಿಜಿಕ್ಸ್‌ -10 ಹುದ್ದೆಗಳು
ವಿದ್ಯಾರ್ಹತೆ: ಪಿಜಿಕ್ಸ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದವರು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ. Physics (Electronics), Applied Physics, Solid State Physics, Computational Physics, Engineering Physics Physics & Electronics ನಲ್ಲಿ ಸ್ನಾತಕೋತ್ತರ ಪದವಿ ಪಡೆದವರೂ ಅರ್ಜಿ ಸಲ್ಲಿಸಬಹುದು.

6.ಕೆಮಿಸ್ಟ್ರಿ -5 ಹುದ್ದೆಗಳು
ವಿದ್ಯಾರ್ಹತೆ: ಕೆಮಿಸ್ಟ್ರಿಯಲ್ಲಿ ಸ್ನಾತಕೋತ್ತರ ಪದವಿ ಪಡೆದವರು (ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿರಬೇಕು) ಅರ್ಜಿ ಸಲ್ಲಿಸಬಹುದು. ಇದರಲ್ಲದೆ, Organic Chemistry, Inorganic Chemistry, Analytical Chemistry, Physical Chemistry, Applied Chemistry, Chemical Sciences ನಲ್ಲಿ ಸ್ನಾತಕೋತ್ತರ ಪದವಿ ಪಡೆದವರೂ ಅರ್ಜಿ ಸಲ್ಲಿಸಬಹುದಾಗಿದೆ.

7.ಕೆಮಿಕಲ್‌ ಎಂಜಿನಿಯರಿಂಗ್- 13 ಹುದ್ದೆಗಳು
ವಿದ್ಯಾರ್ಹತೆ: ಕೆಮಿಕಲ್‌ ಎಂಜಿನಿಯರಿಂಗ್‌ನಲ್ಲಿ ಎಂಜಿನಿಯರಿಂಗ್‌ ಪದವಿ ಪಡೆದವರು ( ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿರಬೇಕು) ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ. Chemical Technology, Chemical Plant Engg, Applied Chemical & Polymer Technology, Polymer Science & Chemical Technology, Chemical Science & Technologyನಲ್ಲಿ ಎಂಜಿನಿಯರಿಂಗ್‌ ಮಾಡಿದವರೂ ಅರ್ಜಿ ಸಲ್ಲಿಸಬಹುದಾಗಿರುತ್ತದೆ.

ಉದ್ಯೋಗಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ (Click Here) ಮಾಡಿ

8. ಎರೋನಾಟಿಕಲ್‌/ಎರೋಸ್ಪೇಸ್‌ ಎಂಜಿನಿಯರಿಂಗ್‌ – 07 ಹುದ್ದೆಗಳು
ವಿದ್ಯಾರ್ಹತೆ : ಎರೋನಾಟಿಕಲ್‌ ಅಥವಾ ಎರೋಸ್ಪೇಸ್‌ ಎಂಜಿನಿಯರಿಂಗ್‌ನಲ್ಲಿ ಪದವಿ ಪಡೆದವರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿರಬೇಕಾದದು ಕಡ್ಡಾಯ.

9.ಮ್ಯಾಥ್‌ಮೆಟಿಕ್ಸ್‌- 2 ಹುದ್ದೆ
ವಿದ್ಯಾರ್ಹತೆ: ಗಣಿತದಲ್ಲಿ ಸ್ನಾತಕೋತ್ತರ ಪದವಿ ಪಡೆದವರು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದು. ಇವರೂ ಕೂಡ ಗೇಟ್‌ ಪರೀಕ್ಷೆ ಬರೆದಿರಬೇಕು. Applied Mathematics, Mathematics & Computing, Mathematical Sciences ನಲ್ಲಿ ಸ್ನಾತಕೋತ್ತರ ಪದವಿ ಪಡೆದವರಿಗೂ ಅವಕಾಶವಿದೆ.

10.ಸಿವಿಲ್‌ ಎಂಜಿನಿಯರಿಂಗ್‌ -2 ಹುದ್ದೆ
ವಿದ್ಯಾರ್ಹತೆ: ಸಿವಿಲ್‌ ಎಂಜಿನಿಯರಿಂಗ್‌ನಲ್ಲಿ ಪದವಿ ಪಡೆದವರು ಅರ್ಜಿ ಸಲ್ಲಿಸಬಹುದು. Civil & Structural Engg, Civil & Environmental Engg, Civil & Rural Engg, Civil & Water Management Engg, Civil & Infrastructure Engg, Construction Engg & Management ನಲ್ಲಿ ಎಂಜಿನಿಯರಿಂಗ್‌ ಪದವಿ ಪಡೆದವರೂ ಅರ್ಜಿ ಸಲ್ಲಿಸಬಹುದು.

ವಯೋಮಿತಿ ಎಷ್ಟು?

ಸಾಮಾನ್ಯ ಅಭ್ಯರ್ಥಿಗಳಿಗೆ ಗರಿಷ್ಟ ವಯೋಮಿತಿ 28 ವರ್ಷ. ಒಬಿಸಿ ಅಭ್ಯರ್ಥಿಗಳಿಗೆ 31 ವರ್ಷ ಹಾಗೂ ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ 33 ವರ್ಷ ಗರಿಷ್ಠ ವಯೋಮಿತಿ ನಿಗದಿಪಡಿಸಲಾಗಿದೆ.

ಅಧಿಸೂಚನೆಯನ್ನು ಓದಲು ಇಲ್ಲಿ ಕ್ಲಿಕ್‌ (Click Here) ಮಾಡಿ

ಅರ್ಜಿ ಶುಲ್ಕ ಎಷ್ಟು?

ಸಾಮಾನ್ಯ ಮತ್ತು ಒಬಿಸಿ ಅಭ್ಯರ್ಥಿಗಳಿಗೆ ನೂರು ರೂ. ಅರ್ಜಿ ಶುಲ್ಕ ನಿಗದಿಪಡಿಸಲಾಗಿದೆ. ಮಹಿಳಾ ಅಭ್ಯರ್ಥಿಗಳಿಗೆ ಹಾಗೂ ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ಇರುವುದಿಲ್ಲ. ಆನ್‌ಲೈನ್‌ನಲ್ಲಿಯೇ ಶುಲ್ಕ ಪಾವತಿಸಲು ಅವಕಾಶ ನೀಡಲಾಗಿರುತ್ತದೆ.

ಇದನ್ನೂ ಓದಿ : IDBI Recruitment 2023 : ಐಡಿಬಿಐ ಬ್ಯಾಂಕ್‌ನಲ್ಲಿ 1,036 ಎಕ್ಸಿಕ್ಯೂಟಿವ್‌ ಹುದ್ದೆ; ಪದವೀಧರರಿಂದ ಅರ್ಜಿ ಆಹ್ವಾನ

Exit mobile version