Site icon Vistara News

Ekalavya School Recruitment : 38,800 ಶಿಕ್ಷಕರ ನೇಮಕ; ಬಜೆಟ್‌ನಲ್ಲಿ ಘೋಷಣೆ

ekalavya school recruitment

ನವ ದೆಹಲಿ : ಮುಂದಿನ ಮೂರು ವರ್ಷದೊಳಗೆ ಏಕಲವ್ಯ ಮಾದರಿ ವಸತಿ ಶಾಲೆಗಳಿಗಾಗಿ 38,800 ಶಿಕ್ಷಕರನ್ನು ನೇಮಕ ಮಾಡಿಕೊಳ್ಳುವುದಾಗಿ (Ekalavya School Recruitment) ಈ ಬಾರಿಯ ಬಜೆಟ್‌ನಲ್ಲಿ ಪ್ರಕಟಿಸಲಾಗಿದೆ.

ಶಿಕ್ಷಕರನ್ನು ಮಾತ್ರವಲ್ಲದೆ, ಬೋಧಕೇತರ ಸಿಬ್ಬಂದಿಯನ್ನೂ ನೇಮಕ ಮಾಡಿಕೊಳ್ಳಲಾಗುತ್ತದೆ. ಈಗ 740 ಏಕಲವ್ಯ ಮಾದರಿ ಶಾಲೆಗಳಲ್ಲಿ 3.5 ವಿದ್ಯಾರ್ಥಿಗಳು ಓದುತ್ತಿದ್ದಾರೆ.

ಪರಿಶಿಷ್ಟ ವರ್ಗಗಳ ವಿದ್ಯಾರ್ಥಿಗಳಿಗೆ ಗುಣಮಟ್ಟ ಶಿಕ್ಷಣ ಕಲ್ಪಿಸುವ ನಿಟ್ಟಿನಲ್ಲಿ ಏಕಲವ್ಯ ಮಾದರಿ ವಸತಿ ಶಾಲೆಗಳನ್ನು ಕೇಂದ್ರ ಸರ್ಕಾರದ ಪರಿಶಿಷ್ಟ ಬುಡಕಟ್ಟು ಮಂತ್ರಾಲಯದವತಿಯಿಂದ (Ministry of Tribal Affairs) ಮಂಜೂರಾಗಿದ್ದು, ಈ ವಸತಿ ಶಾಲೆಗಳ ನಿರ್ವಹಣೆ ಮತ್ತು ಕಟ್ಟಡ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಅನುದಾನ ಒದಗಿಸುತ್ತಿದೆ.

ಈಗ ನಡೆಯುತ್ತಿರುವ 394 ಏಕಲವ್ಯ ಶಾಲೆಗಳಿಗೆ 7,030 ಶಿಕ್ಷಕರ ಅವಶ್ಯಕತೆ ಇದ್ದು, ಈಗ ಕೇವಲ 4,138 ಶಿಕ್ಷಕರಿದ್ದಾರೆ ಎಂದು ಕಳೆದ ಸಂಸತ್‌ ಅಧಿವೇಶನದಲ್ಲಿ ಕೇಂದ್ರ ಸರ್ಕಾರ ರಾಜ್ಯ ಸಭೆಗೆ ಮಾಹಿತಿ ನೀಡಿತ್ತು. ಕರ್ನಾಟಕದ ಸಂಸದ ಮಲ್ಲಿಕಾರ್ಜು ಖರ್ಗೆ ಈ ಸಂಬಂಧ ಪ್ರಶ್ನೆ ಕೇಳಿದ್ದರು.

ಪ್ರಸ್ತುತ ನಮ್ಮ ರಾಜ್ಯದಲ್ಲಿ 12 ಏಕಲವ್ಯ ವಸತಿ ಶಾಲೆಗಳು ಮಂಜೂರಾಗಿವೆ. 10 ವಸತಿ ಶಾಲೆಗಳು ಪ್ರಾರಂಭವಾಗಿವೆ. ಇನ್ನೂ 2 ವಸತಿ ಶಾಲೆಗಳ ಕಾಮಗಾರಿ ನಡೆಯುತ್ತಿದೆ. ಈ ವಸತಿ ಶಾಲೆಗಳು ಸಹ ಶಿಕ್ಷಣ (Co-education)ದಲ್ಲಿ 6ನೇ ತರಗತಿಯಿಂದ 12ನೇ ತರಗತಿಯವರೆಗೆ ಕಾರ್ಯನಿರ್ವಹಿಸುತ್ತಿವೆ. ಪ್ರತಿ ತರಗತಿಗೆ 60 ವಿದ್ಯಾರ್ಥಿಗಳಂತೆ ಒಟ್ಟು ವಿದ್ಯಾರ್ಥಿಗಳ ಮಂಜೂರಾತಿ ಸಂಖ್ಯೆಯು 420 ಆಗಿರುತ್ತದೆ. ಇದರಲ್ಲಿ ಬಾಲಕ/ಬಾಲಕಿಯರಿಗೆ ಶೇ.50ರಷ್ಟು ಸ್ಥಾನಗಳನ್ನು ಕಲ್ಪಿಸಲಾಗಿದೆ.

ಈ ಶಾಲೆಗಳಲ್ಲಿ ಶಿಕ್ಷಕಿಯರಾಗಿ ನೇಮಕವಾಗಬೇಕಾದರೆ ಅಭ್ಯರ್ಥಿಗಳು ಬಿಎಡ್‌ ಮಾಡಿರಬೇಕು ಇಲ್ಲವೇ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು. ಅಲ್ಲದೆ, ಸಿಟಿಇಟಿಯಲ್ಲಿ ಅರ್ಹತೆ ಪಡೆದಿರಬೇಕು.

ಉದ್ಯೋಗಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ (Click Here ) ಮಾಡಿ.

ಇದನ್ನೂ ಓದಿ: Teacher Recruitment : ಆಯ್ಕೆ ಪಟ್ಟಿ ರದ್ದು; ಹೈಕೋರ್ಟ್‌ ತೀರ್ಪಿನ ವಿರುದ್ಧ ಶಿಕ್ಷಣ ಇಲಾಖೆಯಿಂದ ಮೇಲ್ಮನವಿ?

Exit mobile version