ಕೇಂದ್ರ ಸರ್ಕಾರದ ಗುಪ್ತಚರ ಇಲಾಖೆಯ ಅಧಿಕಾರಿಯಾಗಿ ದೇಶ ಸೇವೆ ಮಾಡಬೇಕೆಂಬ ಕನಸು ನಿಮ್ಮದೇ? ಹಾಗಿದ್ದರೆ ಈ ಅವಕಾಶ ಬಳಸಿಕೊಳ್ಳಿ. ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯಕ್ಕೆ ಸೇರಿದ ಇಂಟೆಲಿಜೆನ್ಸಿ ಬ್ಯುರೋ (Intelligence Bureau-IB), ʻಜೂನಿಯರ್ ಇಂಟೆಲಿಜೆನ್ಸ್ ಆಫೀಸರ್ʼ (ಗ್ರೇಡ್II ಟೆಕ್ನಿಕಲ್) ನೇರ ನೇಮಕಕ್ಕೆ (IB Recruitment 2023) ಅರ್ಜಿ ಆಹ್ವಾನಿಸಿದೆ.
ಒಟ್ಟು 797ಹುದ್ದೆಗಳಿಗೆ (Junior Intelligence Officer) ನೇಮಕ ನಡೆಯುತ್ತಿದ್ದು, ಇದರಲ್ಲಿ 375 ಹುದ್ದೆಗಳನ್ನು ಸಾಮಾನ್ಯ ಅಭ್ಯರ್ಥಿಗಳಿಗೆ, 79 ಹುದ್ದೆಗಳನ್ನು ಇಡಬ್ಲ್ಯುಎಸ್ ಅಭ್ಯರ್ಥಿಗಳಿಗೆ, 215 ಹುದ್ದೆಗಳನ್ನು ಓಬಿಸಿ, 119 ಹುದ್ದೆಗಳನ್ನು ಎಸ್‌ಸಿ ಮತ್ತು 59 ಹುದ್ದೆಗಳನ್ನು ಎಸ್‌ಟಿ ಅಭ್ಯರ್ಥಿಗಳಿಗೆ ಮೀಸಲಿಡಲಾಗಿದೆ.
ಲಿಖಿತ ಪರೀಕ್ಷೆ, ಕೌಶಲ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ನೇಮಕ ನಡೆಯಲಿದ್ದು, ಆನ್‌ಲೈನ್‌ನಲ್ಲಿ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಅರ್ಜಿ ಸಲ್ಲಿಸಲು ಜೂನ್ 23 ಕೊನೆಯ ದಿನವಾಗಿರುತ್ತದೆ.
ವಿದ್ಯಾರ್ಹತೆ ಏನು?
ಇವು ತಾಂತ್ರಿಕ ಕೆಲಸಗಳಿಗೆ ಸಂಬಂಧಿಸಿದ ಹುದ್ದೆಗಳಾಗಿರುವುದರಿಂದ ಎಲೆಕ್ಟ್ರಾನಿಕ್ಸ್ ಅಥವಾ ಎಲೆಕ್ಟ್ರಾನಿಕ್ಸ್ & ಟೆಲಿಕಮ್ಯುನಿಕೇಷನ್ ಅಥವಾ ಎಲೆಕ್ಟ್ರಾನಿಕ್ಸ್ & ಕಮ್ಯುನಿಕೇಷನ್ ಅಥವಾ ಎಲೆಕ್ಟ್ರಿಕಲ್ & ಎಲೆಕ್ಟ್ರಾನಿಕ್ಸ್ ಅಥವಾ ಇನ್‌ಫಾರ್ಮೇಷನ್ ಟೆಕ್ನಾಲಜಿ ಅಥವಾ ಕಂಪ್ಯೂಟರ್ ಸೈನ್ಸ್ ಅಥವಾ ಕಂಪ್ಯೂಟರ್ ಎಂಜಿನಿಯರಿಂಗ್ ಅಥವಾ ಕಂಪ್ಯೂಟರ್ ಅಪ್ಲಿಕೇಷನ್‌ನಲ್ಲಿ ಡಿಪ್ಲೊಮಾ ಮಾಡಿರುವ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ.
ಇದಲ್ಲದೆ ಎಲೆಕ್ಟ್ರಾನಿಕ್ಸ್ ಅಥವಾ ಕಂಪ್ಯೂಟರ್ ಸೈನ್ಸ್ ಅಥವಾ ಮ್ಯಾಥ್‌ಮೆಟಿಕ್ಸ್‌ನಲ್ಲಿ ಬಿಎಸ್ಸಿ ಮಾಡಿದವರು, ಕಂಪ್ಯೂಟರ್ ಅಪ್ಲಿಕೇಷನ್‌ನಲ್ಲಿ ಪದವಿ ಪಡೆದವರು ಕೂಡ ಅರ್ಜಿ ಸಲ್ಲಿಸಬಹುದಾಗಿದೆ.
ಇತ್ತ ಗಮನಿಸಿ
ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: 03-06-2023
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 23-06-2023
ಅರ್ಜಿ ಸಲ್ಲಿಸಲು ವೆಬ್‌ಸೈಟ್ ವಿಳಾಸ: https://www.ncs.gov.in/ https://www.mha.gov.in/en
ವಯೋಮಿತಿ ಎಷ್ಟು?
18 ರಿಂದ 27 ವರ್ಷದೊಳಗಿನ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿರುತ್ತದೆ. ಗರಿಷ್ಠ ವಯೋಮಿತಿಯಲ್ಲಿ ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ ಹಾಗೂ ಓಬಿಸಿ ಅಭ್ಯರ್ಥಿಗಳಿಗೆ 3 ವರ್ಷ ಸಡಿಲಿಕೆ ನೀಡಲಾಗಿರುತ್ತದೆ. ಸೇವಾ ನಿರತ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿ 40 ವರ್ಷ.
ಸಂಪೂರ್ಣ ಅಧಿಸೂಚನೆಯನ್ನು ನೋಡಲು ಇಲ್ಲಿ (Click Here) ಕ್ಲಿಕ್ ಮಾಡಿ.
ಅರ್ಜಿ ಶುಲ್ಕ ಎಷ್ಟು?
ಅರ್ಜಿ ಸಲ್ಲಿಸುವಾಗಲೇ ಪರೀಕ್ಷಾ ಶುಲ್ಕ 50 ರೂ. ಮತ್ತು ನೇಮಕಾತಿ ಪ್ರಕ್ರಿಯೆ ಶುಲ್ಕ 450 ರೂ. ಪಾವತಿಸಬೇಕಿರುತ್ತದೆ. ಎಲ್ಲ ಅಭ್ಯರ್ಥಿಗಳೂ ನೇಮಕಾತಿ ಪ್ರಕ್ರಿಯೆ ಶುಲ್ಕ ಪಾವತಿಸುವುದು ಕಡ್ಡಾಯ. ಮಹಿಳಾ ಅಭ್ಯರ್ಥಿಗಳಿಗೆ, ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ ಪರೀಕ್ಷಾ ಶುಲ್ಕದಿಂದ ವಿನಾಯಿತಿ ನೀಡಲಾಗಿರುತ್ತದೆ. ಆನ್‌ಲೈನ್‌ನಲ್ಲಿಯೇ ಶುಲ್ಕ ಪಾವತಿಸಲು ಅವಕಾಶ ನೀಡಲಾಗಿರುತ್ತದೆ. ಎಸ್‌ಬಿಐ ಚಲನ್ ಮೂಲಕವೂ ಶುಲ್ಕ ಪಾವತಿಸಬಹುದು.
ಉದ್ಯೋಗಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ (Click Here) ಮಾಡಿ.
ನೇಮಕ ಹೇಗೆ?
ಮೊದಲಿಗೆ ಆನ್‌ಲೈನ್‌ನಲ್ಲಿ ಪರೀಕ್ಷೆ ನಡೆಸಲಾಗುತ್ತದೆ. ಬಹು ಆಯ್ಕೆಯ ಉತ್ತರಗಳನ್ನೊಳಗೊಂಡ ನೂರು ಪ್ರಶ್ನೆಗಳನ್ನು ನೀಡಲಾಗಿರುತ್ತದೆ. ನೂರು ಅಂಕ ನಿಗದಿಪಡಿಸಲಾಗಿರುತ್ತದೆ. ಉತ್ತರ ಬರೆಯಲು ಎರಡು ಗಂಟೆ ಕಾಲಾವಕಾಶ ನೀಡಲಾಗಿರುತ್ತದೆ. ನೂರು ಪ್ರಶ್ನೆಗಳಲ್ಲಿ ಜನರಲ್ ಮೆಂಟಲ್ ಎಬಿಲಿಟಿಗೆ ಸಂಬಂಧಿಸಿದ ಶೇ. 25 ರಷ್ಟು ಪ್ರಶ್ನೆಗಳಿರಲಿವೆ. ಋಣಾತ್ಮಕ ಮೌಲ್ಯಮಾಪನವೂ ಇರುತ್ತವೆ. ಪರೀಕ್ಷೆ ಕೇಂದ್ರವನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶವನ್ನು ಅರ್ಜಿ ಸಲ್ಲಿಸುವಾಗಲೇ ನೀಡಲಾಗುತ್ತದೆ.
ಆನ್‌ಲೈನ್ ಟೆಸ್ಟ್‌ನಲ್ಲಿ ಅರ್ಹತೆ ಪಡೆದವರನ್ನು 1:5 ರ ಅನುಪಾತದಲ್ಲಿ ಕೌಶಲ ಪರೀಕ್ಷೆ (ಸ್ಕಿಲ್ ಟೆಸ್ಟ್) ಮತ್ತು ಸಂದರ್ಶನಕ್ಕೆ ಆಹ್ವಾನಿಸಲಾಗುತ್ತದೆ. ಸ್ಕಿಲ್ ಟೆಸ್ಟ್‌ಗೆ 30 ಅಂಕ, ಸಂದರ್ಶನಕ್ಕೆ 20 ಅಂಕ ನಿಗದಿಯಾಗಿರುತ್ತದೆ. ಅಭ್ಯರ್ಥಿಯು ಈ ಪರೀಕ್ಷೆಗಳಲ್ಲಿ ಪಡೆದ ಅಂಕಗಳ ಆಧಾರದಲ್ಲಿ ನೇಮಕ ನಡೆಯಲಿದೆ.
ಇದನ್ನೂ ಓದಿ : DRDO Recruitment 2023 : ಎಂಜಿನಿಯರಿಂಗ್ ಮುಗಿಯಿತಾ? ಡಿಆರ್‌ಡಿಒನಲ್ಲಿ ಸೈಂಟಿಸ್ಟ್ ಆಗಿ!