ನವದೆಹಲಿ: ಬ್ಯಾಂಕಿಂಗ್ ಸಿಬ್ಬಂದಿ ನೇಮಕಾತಿ ಸಂಸ್ಥೆ (The Institute Of banking And Personnel Selection – IBPS) ಬ್ಯಾಂಕ್ ಪ್ರೊಬೆಷನರಿ ಆಫೀಸರ್(Probationary Officer), ಮ್ಯಾನೇಜ್‌ಮೆಂಟ್ ಟ್ರೇನಿ (Management Trainee) ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಆನ್‌ಲೈನ್ ಅರ್ಜಿ ಸಲ್ಲಿಕೆ ಪ್ರಕ್ರಿಯೆಯು 2023ರ ಆಗಸ್ಟ್ 1ರಿಂದಲೇ ಆರಂಭವಾಗಿದ್ದು, ಅರ್ಜಿ ಸಲ್ಲಿಸಲು ಆಗಸ್ಟ್ 21 ಕೊನೆಯ ದಿನವಾಗಿದೆ. ಈ ಮಧ್ಯೆ, ಕನ್ನಡಿಗರಿಗೆ ಈ ಬಾರಿಯೂ ನಿರಾಶೆಯಾಗಲಿದೆ. ಯಾಕೆಂದರೆ, ಪ್ರಿಲಿಮ್ಸ್ ಮತ್ತು ಮುಖ್ಯ ಪರೀಕ್ಷೆಗಳೆರಡನ್ನೂ ಹಿಂದಿ ಮತ್ತು ಇಂಗ್ಲಿಷ್ ಭಾಷೆಯಲ್ಲಿ ನಡೆಸುವುದಾಗಿ ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಕನ್ನಡವೂ ಸೇರಿದಂತೆ ಇತರ ಪ್ರಾದೇಶಿಕ ಭಾಷೆಯಲ್ಲಿ ಐಬಿಪಿಎಸ್ ಎಕ್ಸಾಮ್ ಬರೆಯಲು ಅವಕಾಶವಿಲ್ಲ. ಒಟ್ಟು 3000ಕ್ಕೂ ಅಧಿಕ ಹುದ್ದೆಗಳಿಗೆ ನೇಮಕಾತಿಯನ್ನು ಮಾಡಿಕೊಳ್ಳಲಾಗುತ್ತಿದೆ. ಈ ಎಲ್ಲ ಹುದ್ದೆಗಳನ್ನು ಸಾಮಾನ್ಯ ನೇಮಕಾತಿ ಪ್ರಕ್ರಿಯೆ ಮೂಲಕ ಭರ್ತಿ ಮಾಡಲಾಗುತ್ತದೆ. ಕರ್ನಾಟಕ ಮೂಲದ ಕೆನರಾ ಬ್ಯಾಂಕ್ ಸೇರಿದಂತೆ ಒಟ್ಟು 11 ಬ್ಯಾಂಕುಗಳಿಗಾಗಿ ಈ ನೇಮಕಾತಿ ಪ್ರಕ್ರಿಯೆ ಕೈಗೊಳ್ಳಲಾಗುತ್ತಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ.
ಐಬಿಪಿಎಸ್ ಪಿಒ ಆನ್‌ಲೈನ್ ಅಪ್ಲೈ
ಐಬಿಪಿಎಸ್ ಪಿಒ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದ ಸುದೀರ್ಘ ಮಾಹಿತಿಯನ್ನು ಅಧಿಕೃತ ಅಧಿಸೂಚನೆಯಲ್ಲಿ ನೀಡಲಾಗಿದೆ. ಅರ್ಜಿ ಸಲ್ಲಿಸುವ ಪ್ರಕ್ರಿಯೆ, ಲಿಖಿತ ದೃಢೀಕರಣ, ಶುಲ್ಕ, ಅರ್ಹತೆ ಇತ್ಯಾದಿ ವಿಷಯಗಳ ಬಗ್ಗೆ ನಿಖರ ಮಾಹಿತಿಯನ್ನು ಪಡೆದುಕೊಳ್ಳಬೇಕಾಗುತ್ತದೆ. ಅರ್ಜಿ ಸಲ್ಲಿಸುವ ಕೊನೆಯ ದಿನಾಂಕಕ್ಕಿಂತ ಮುಂಚೆಯೇ ಅರ್ಹ ಅಭ್ಯರ್ಥಿಗಳು ಐಬಿಪಿಎಸ್ ಪಿಒಗಾಗಿ ಆನ್‌ಲೈನ್‌ನಲ್ಲಿ ನೋಂದಣಿ ಮಾಡಿಕೊಳ್ಳಬೇಕಾಗುತ್ತದೆ.
IBPS PO Apply Online 2023 ಅಧಿಸೂಚನೆ
ಐಪಿಪಿಎಸ್ ಪಿಒ ಅರ್ಜಿ ಸಲ್ಲಿಕೆಯ ವೇಳಾಪಟ್ಟಿ
2023ರ ಆಗಸ್ಟ್ 1ರಿಂದ ಅಧಿಸೂಚನೆಯು ಹೊರ ಬಿದ್ದಿದ್ದು, ಸಂಸ್ಥೆಯ ಅಧಿಕೃತ ವೆಬ್‌ಸೈಟ್‌ನಲ್ಲಿ ಆನ್ಲೈನ್ ಪ್ರಕ್ರಿಯೆ ಕೂಡ ಶುರುವಾಗಿದೆ. ಅರ್ಜಿ ಸಲ್ಲಿಸಲು ಆಗಸ್ಟ್ 21 ಕೊನೆಯ ದಿನವಾಗಿದೆ. ಶುಲ್ಕ ಪಾವತಿಸಲು ಆಗಸ್ಟ್ 21 ಕೂಡ ಕೊನೆಯ ದಿನವಾಗಿರುತ್ತದೆ ಎಂಬುದನ್ನು ಅಭ್ಯರ್ಥಿಗಳು ಗಮನದಲ್ಲಿಟ್ಟುಕೊಳ್ಳಬೇಕು. 2023ರ ಸೆಪ್ಟೆಂಬರ್ 23, 30 ಮತ್ತು ಅಕ್ಟೋಬರ್ 1ರಂದು ಐಬಿಪಿಎಸ್ ಪಿಒ ಪ್ರಿಲಿಮ್ಸ್ ಎಕ್ಸಾಮ್ ನಡೆಯಲಿದೆ.
ರಾಜ್ಯದಲ್ಲಿ ಎಲ್ಲೆಲ್ಲಿ ಪರೀಕ್ಷಾ ಕೇಂದ್ರಗಳು
ಪ್ರಿಲಿಮನರಿ ಎಕ್ಸಾಮ್ ಸೆಂಟರ್: ಬೆಂಗಳೂರು, ಬೆಳಗಾವಿ, ಬೀದರ್, ಕಲಬುರಗಿ, ಹುಬ್ಬಳ್ಳಿ-ಧಾರವಾಡ, ಮಂಗಳೂರು, ಮೈಸೂರು, ಶಿವಮೊಗ್ಗ ಉಡುಪಿ.
ಮೇನ್ ಎಕ್ಸಾಮ್ ಸೆಂಟರ್: ಬೆಂಗಳೂರು, ಹುಬ್ಬಳ್ಳಿ-ಧಾರವಾಡ, ಮಂಗಳೂರು.
ಈ ಸುದ್ದಿಯನ್ನೂ ಓದಿ: Kar TET 2023 : ಸೆ.3ಕ್ಕೆ ಶಿಕ್ಷಕರ ಅರ್ಹತಾ ಪರೀಕ್ಷೆ; ಅರ್ಜಿ ಆಹ್ವಾನ
ಅರ್ಜಿ ಶುಲ್ಕ ಎಷ್ಟು?
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ, ಅಂಗವಿಕಲ ಅಭ್ಯರ್ಥಿಗಳಿಗೆ 175 ಮತ್ತು ಇವರನ್ನು ಹೊರತುಪಡಿಸಿ ಉಳಿದ ಎಲ್ಲ ಅಭ್ಯರ್ಥಿಗಳಿಗೆ 850 ಶುಲ್ಕ ನಿಗದಿ ಪಡಿಸಲಾಗಿದೆ. ಈ ವೇಳೆ, ಬ್ಯಾಂಕುಗಳ ಟ್ರಾನ್ಸ್‌ಕ್ಷನ್ ಅಥವಾ ಆನ್‌ಲೈನ್ ಪೇಮೆಂಟ್ ಚಾರ್ಜ್ಸ್ ಅನ್ನು ಅಭ್ಯರ್ಥಿಗಳೇ ಭರಿಸಬೇಕಾಗುತ್ತದೆ. ಈ ಶುಲ್ಕವನ್ನು ಅಭ್ಯರ್ಥಿಗಳು ಆಗಸ್ಟ್ 1ರಿಂದ ಆಗಸ್ಟ್ 21ರೊಳಗೇ ಪಾವತಿಸಬೇಕು.
ಶೈಕ್ಷಣಿಕ ಅರ್ಹತೆಗಳೇನು?
ಸರ್ಕಾರದಿಂದ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ಪದವೀಧರರು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಜತೆಗೆ, ಕೇಂದ್ರ ಸರ್ಕಾರದಿಂದ ಮಾನ್ಯತೆ ಪಡೆದ ಯಾವುದೇ ಸಮಾನ ಅರ್ಹತೆಯನ್ನು ಹೊಂದಿದವರಾಗಿರಬೇಕು. ಅಭ್ಯರ್ಥಿಯು ಅವನು/ಅವಳು ಪದವೀಧರರೆಂದು ಮಾನ್ಯವಾದ ಮಾರ್ಕ್-ಶೀಟ್ / ಪದವಿ ಪ್ರಮಾಣಪತ್ರವನ್ನು ಹೊಂದಿರಬೇಕು.
ವಯೋಮಿತಿ ಎಷ್ಟು?
ಐಬಿಪಿಎಸ್ ಪಿಒ 2023 ಆನ್‌ಲೈನ್ ಅಪ್ಲೈ ಮಾಡಲು ಅರ್ಹ ಅಭ್ಯರ್ಥಿಗಳಿಗೆ ವಯೋಮಿತಿಯನ್ನು ನಿಗದಪಡಿಸಲಾಗಿದೆ. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ವಯೋಮಿತಿ ಕನಿಷ್ಠ 20 ವರ್ಷ ಹಾಗೂ ಗರಿಷ್ಠ 30 ವರ್ಷವಾಗಿದೆ. ಹೀಗಿದ್ದೂ, ಎಸ್‌ಸಿ/ಎಸ್‌ಟಿ ವರ್ಗಕ್ಕೆ 5 ವರ್ಷ ಒಬಿಸಿ ವರ್ಗಕ್ಕೆ 3 ವರ್ಷ, ಪಿಡಬ್ಲ್ಯೂಡಿ 10 ವರ್ಷ, ನಿವೃತ್ತ ಸೈನಿಕ 5 ಹಾಗೂ 1984 ದಂಗೆ ಸಂತ್ರಸ್ತ ಅಭ್ಯರ್ಥಿಗಳಿಗೆ 5 ವರ್ಷ ವಯೋಮಿತಿ ಸಡಿಲಿಕೆ ಇದೆ.
ಈ ಸುದ್ದಿಯನ್ನೂ ಓದಿ: KARBWWB Recruitment 2023 : ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ 186 ಹುದ್ದೆ; ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ
ಯಾವ ಬ್ಯಾಂಕುಗಳಿಗೆ ನೇಮಕಾತಿ?
ಆಯ್ಕೆಯಾದ ಅಭ್ಯರ್ಥಿಗಳಿಗೆ ಬ್ಯಾಂಕ್ ಆಫ್ ಬರೋಡಾ, ಬ್ಯಾಂಕ್ ಆಫ್ ಇಂಡಿಯಾ, ಬ್ಯಾಂಕ್ ಮಹಾರಾಷ್ಟ್ರ, ಕೆನರಾ ಬ್ಯಾಂಕ್, ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ, ಇಂಡಿಯನ್ ಬ್ಯಾಂಕ್, ಇಂಡಿಯನ್ ಓವರ್‌ಸೀಸ್ ಬ್ಯಾಂಕ್, ಪಂಜಾಬ್ ನ್ಯಾಷನಲ್ ಬ್ಯಾಂಕ್, ಪಂಜಾಬ್ ಮತ್ತು ಸಿಂಡ್ ಬ್ಯಾಂಕ್, ಯುಕೋ ಬ್ಯಾಂಕ್ ಹಾಗೂ ಯೂನಿಯನ್ ಬ್ಯಾಂಕ್ ಇಂಡಿಯಾ ಬ್ಯಾಂಕ್‌ಗಳಿಗೆ ನಿಯೋಜನೆ ಮಾಡಲಾಗುತ್ತದೆ.
ಉದ್ಯೋಗದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.