Site icon Vistara News

IBPS RRB POXII Admit Card‌ : ಐಬಿಪಿಎಸ್‌ನಿಂದ ಗ್ರೂಪ್‌ ಎ ಅಧಿಕಾರಿಗಳ ನೇಮಕಾತಿಗೆ ಅಡ್ಮಿಟ್‌ ಕಾರ್ಡ್ ಬಿಡುಗಡೆ

banking

ನವ ದೆಹಲಿ: ಇನ್‌ಸ್ಟಿಟ್ಯೂಟ್‌ ಆಫ್‌ ಬ್ಯಾಂಕಿಂಗ್ ಪರ್ಸನಲ್‌ ಸೆಲೆಕ್ಷನ್‌ ಸೆಲೆಕ್ಷನ್‌ (Institute of Banking Personnel Selection – IBPS) ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಗ್ರೂಪ್‌ ಎ ಅಧಿಕಾರಿಗಳ ನೇಮಕಾತಿ ಸಲುವಾಗಿ ಆರ್‌ಆರ್‌ಬಿ-XII ಅಭ್ಯರ್ಥಿಗಳಿಗೆ ಅಡ್ಮಿಟ್‌ ಕಾರ್ಡ್‌ (admit card) ಅನ್ನು ಬಿಡುಗಡೆಗೊಳಿಸಿದೆ. ಅಭ್ಯರ್ಥಿಗಳು ibps.in ವೆಬ್‌ ಪೋರ್ಟನಲ್ಲಿ ಇದರ ಲಿಂಕ್‌ ಬಳಸಿ ಡೌನ್‌ಲೋಡ್‌ ಮಾಡಿಕೊಳ್ಳಬಹುದು.

ಇನ್‌ಸ್ಟಿಟ್ಯೂಟ್‌ ಆಫ್‌ ಬ್ಯಾಂಕಿಂಗ್‌ ಪರ್ಸನಲ್‌ ಸೆಲೆಕ್ಷನ್‌ (IBPS) ಕೇಂದ್ರೀಯ ನೇಮಕಾತಿ ಏಜೆನ್ಸಿಯಾಗಿದ್ದು, ಹಣಕಾಸು ಸಚಿವಾಲಯದ ಅಡಿಯಲ್ಲಿ ಬರುತ್ತದೆ. ಸಾರ್ವಜನಿಕ ಬ್ಯಾಂಕ್‌ ಮತ್ತು ಪ್ರಾದೇಶಿ ಗ್ರಾಮೀಣ ಬ್ಯಾಂಕ್‌ಗಳಲ್ಲಿ ನೇಮಕಾತಿಯನ್ನು ನಡೆಸುತ್ತದೆ. ಗ್ರೂಪ್‌ ಎ ಅಧಿಕಾರಿ, ಗ್ರೂಪ್‌ ಬಿ, ಗ್ರೂಪ್‌ ಸಿ ಮತ್ತು ಗ್ರೂಪ್‌ ಡಿ ಸಿಬ್ಬಂದಿಯ್ನು ನೇಮಿಸುತ್ತದೆ.

ಇದನ್ನೂ ಓದಿ: London Mansion: ಬ್ರಿಟನ್‌ನ ಪ್ರತಿಷ್ಠಿತ ‘ಲಂಡನ್‌ ಮ್ಯಾನ್ಶನ್’‌ ಮನೆ ಖರೀದಿಸಿದ ಭಾರತೀಯ! ಬೆಲೆ ಕೇಳಿದರೆ ಅಚ್ಚರಿ

ಈ ಅಡ್ಮಿಟ್‌ ಕಾರ್ಡ್ ಕುರಿತ ಡಾಕ್ಯುಮೆಂಟ್‌ಗಳನ್ನು ಆಗಸ್ಟ್‌ 6ರ ತನಕ ಡೌನ್‌ಲೋಡ್‌ ಮಾಡಿಕೊಳ್ಳಬಹುದು (https://ibpsonline.ibps.in)‌ ಅಡ್ಮಿಟ್‌ ಕಾರ್ಡ್‌ ಅನ್ನು ಡೌನ್‌ ಲೋಡ್‌ ಮಾಡಿಕೊಳ್ಳುವ ವಿಧಾನ:

  1. ibps.in. ವೆಬ್‌ ಪೋರ್ಟಲ್‌ಗೆ ಲಾಗಿನ್‌ ಆಗಿ. 2. CRP RRB ಪೇಜ್‌ಗೆ ಹೋಗಿ. 3. RRB Phase XII ಪೇಜ್‌ ತೆರೆಯಿರಿ. 4. ಕಾಲ್‌ ಲೆಟರ್‌ ಡೌನ್‌ ಲೋಡ್‌ ಮಾಡಿಕೊಳ್ಳುವ ಸಲುವಾಗಿ ಲಿಂಕ್‌ ಬಳಸಿ. 5. ನಿಮ್ಮ ರಿಜಿಸ್ಟ್ರೇಶನ್‌ ನಂಬರ್‌, ರೋಲ್‌ ನಂಬರ್‌, ಪಾಸ್‌ ವರ್ಡ್‌, ಜನ್ಮ ದಿನಾಂಕ ನಮೂದಿಸಿ. 6. ಅಡ್ಮಿಟ್‌ ಕಾರ್ಡ್‌ ಡೌನ್‌ಲೋಡ್‌ ಮಾಡಿಕೊಳ್ಳಿ.

ಟೊಮ್ಯಾಟೊ ಮಾರಾಟದಿಂದ ಕೋಟ್ಯಧಿಪತಿಯಾದ ಸ್ಕೂಲ್‌ ಡ್ರಾಪೌಟ್‌ ರೈತ:

ತೆಲಂಗಾಣದಲ್ಲಿ ರೈತರೊಬ್ಬರು ಟೊಮ್ಯಾಟೊ ಮಾರಾಟ ಮೂಲಕ ಕೋಟ್ಯಧಿಪತಿಯಾಗಿದ್ದಾರೆ. ಟೊಮ್ಯಾಟೊ ದರ ಗಗನಕ್ಕೇರಿರುವುದು ಇದಕ್ಕೆ ಕಾರಣ. ಶಾಲಾ ವಿದ್ಯಾಭ್ಯಾಸವನ್ನು ಅರ್ಧಕ್ಕೆ ಕೈಬಿಟ್ಟಿರುವ ಅವರು ಬಳಿಕ ಕೃಷಿಗೆ ತಿರುಗಿದ್ದರು. ಟೊಮ್ಯಾಟೊ ಬೆಳೆಯ ಮೂಲಕ ಪ್ರಸಕ್ತ ಋತುವಿನಲ್ಲಿ 2 ಕೋಟಿ ರೂ. ಆದಾಯವನ್ನು ಈ ರೈತರು ಗಳಿಸಿದ್ದಾರೆ.

Exit mobile version