Site icon Vistara News

IBPS RRB Recruitment 2022: ರಾಜ್ಯದ ಎರಡು ಗ್ರಾಮೀಣ ಬ್ಯಾಂಕ್‌ಗಳಲ್ಲಿವೆ ಒಟ್ಟು 832 ಹುದ್ದೆ

IBPS RRB Recruitment 2022

ಬೆಂಗಳೂರು: ಬ್ಯಾಂಕ್‌ ಸಿಬ್ಬಂದಿ ನೇಮಕಾತಿ ಸಂಸ್ಥೆ (ಐಬಿಪಿಎಸ್‌) ದೇಶದ 43 ಗ್ರಾಮೀಣ ಬ್ಯಾಂಕುಗಳಲ್ಲಿ (ಆರ್‌ಆರ್‌ಬಿ) ಖಾಲಿ ಇರುವ ಆಫೀಸ್‌ ಅಸಿಸ್ಟೆಂಟ್‌ (ಮಲ್ಪಿ ಪರ್ಪಸ್‌) ಮತ್ತು ಆಫೀಸರ್‌ ಹುದ್ದೆಗಳ ನೇಮಕಕ್ಕೆ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ (IBPS RRB Recruitment 2022) ಅರ್ಜಿ ಆಹ್ವಾನಿಸಿದೆ.

ಈ ಬಾರಿ 8,106 ಹುದ್ದೆಗಳಿಗೆ ನೇಮಕ ನಡೆಯಲಿದ್ದು, ಇದರಲ್ಲಿ ಆಫೀಸ್‌ ಅಸಿಸ್ಟೆಂಟ್‌ (ಮಲ್ಪಿ ಪರ್ಪಸ್‌) ಹುದ್ದೆಗಳ ಸಂಖ್ಯೆಯೇ 4,483. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದ್ದು, ಆನ್‌ಲೈನ್‌ನಲ್ಲಿಯೇ ಶುಲ್ಕ ಪಾವತಿಸಬಹುದಾಗಿದೆ.

ಯಾವ ಹುದ್ದೆ ಎಷ್ಟಿದೆ? ಮೀಸಲಾತಿ ಹಂಚಿಕೆ ಹೇಗಿದೆ?

ಹುದ್ದೆಯ ಹೆಸರುಸಾಮಾನ್ಯಇಡಬ್ಲ್ಯುಎಸ್‌ಒಬಿಸಿಎಸ್‌ಸಿಎಸ್‌ಟಿಒಟ್ಟು
ಆಫೀಸ್‌ ಅಸಿಸ್ಟೆಂಟ್‌196941510077043884483
ಆಫೀಸರ್‌ ಸ್ಕೇಲ್‌- I11372556814101932676
ಜನರಲ್ ಬ್ಯಾಂಕಿಂಗ್ ಆಫೀಸರ್‌- II3256919710351745
ಐಟಿ ಆಫೀಸರ್‌ ಸ್ಕೇಲ್‌- II 300312060657
ಚಾರ್ಟೆಡ್‌ ಅಕೌಂಟೆಂಟ್‌ ಸ್ಕೇಲ್‌ II ಸಿಎ1400302019
ಕಾನೂನು ಅಧಿಕಾರಿ- II1501020018
ಟ್ರೆಸರಿ ಆಫೀಸರ್‌ ಸ್ಕೇಲ್‌- II090010010
ಮಾರ್ಕೆಟಿಂಗ್‌ ಆಫೀಸರ್‌ ಸ್ಕೇಲ್‌- II040020006
ಕೃಷಿ ಅಧಿಕಾರಿ ಸ್ಕೇಲ್‌- II040204010112
ಆಫೀಸರ್‌ ಸ್ಕೇಲ್‌- III450419060680

ರಾಜ್ಯದಲ್ಲಿವೆ 832 ಹುದ್ದೆ

ರಾಜ್ಯದ ಬಳ್ಳಾರಿಯ ಕರ್ನಾಟಕ ಗ್ರಾಮೀಣ ಬ್ಯಾಂಕ್‌ ಮತ್ತು ಧಾರವಾಡದ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕುಗಳು ಈ ನೇಮಕ ಪ್ರಕ್ರಿಯೆಯಲ್ಲಿ ಭಾಗವಹಿಸುತ್ತಿದ್ದು, ಒಟ್ಟು 832 ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲಾಗುತ್ತಿದೆ.

ಇದರಲ್ಲಿ ಆಫೀಸ್‌ ಅಸಿಸ್ಟೆಂಟ್‌ (ಮಲ್ಪಿ ಪರ್ಪಸ್‌)(OFFICE ASSISTANTS (MULTIPURPOSE)) ಹುದ್ದೆಗಳ ಸಂಖ್ಯೆಯೇ 173. ಕರ್ನಾಟಕ ಗ್ರಾಮೀಣ ಬ್ಯಾಂಕ್‌ 104 ಮತ್ತು ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕು 69 ಹುದ್ದೆಗಳಿಗೆ ನೇಮಕ ಮಾಡಿಕೊಳ್ಳುತ್ತಿವೆ. ಆಫೀಸರ್‌ ಸ್ಕೇಲ್‌-Iನ (OFFICER SCALE-I) ಒಟ್ಟು 429 ಹುದ್ದೆಗಳಿದ್ದು, ಇದರಲ್ಲಿ ಕರ್ನಾಟಕ ಗ್ರಾಮೀಣ ಬ್ಯಾಂಕ್‌ ಅತಿ ಹೆಚ್ಚು ಎಂದರೆ 231 ಹುದ್ದೆಗಳಿಗೆ ಹಾಗೂ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್‌ 198 ಹುದ್ದೆಗಳಿಗೆ ನೇಮಕ ಮಾಡಿಕೊಳ್ಳುತ್ತಿವೆ.
ಇದಲ್ಲದೆ, ಒಟ್ಟು 230 ಆಫೀಸರ್‌ ಸ್ಕೇಲ್‌ -II (Officer Scale II (General Banking Officer) ಹುದ್ದೆಗಳಿಗೆ ನೇಮಕ ಮಾಡಿಕೊಳ್ಳುತ್ತಿವೆ. ಕರ್ನಾಟಕ ಗ್ರಾಮೀಣ ಬ್ಯಾಂಕ್‌ 151 ಹಾಗೂ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್‌ನಲ್ಲಿ 79 ಹುದ್ದೆಗಳಿವೆ.

ವಿದ್ಯಾರ್ಹತೆ ಏನು?

ಆಫೀಸ್‌ ಅಸಿಸ್ಟೆಂಟ್‌ (ಮಲ್ಪಿ ಪರ್ಪಸ್‌): ಈ ಹುದ್ದೆಗೆ ಅಂಗೀಕೃತ ವಿಶ್ವವಿದ್ಯಾಲಯದಿಂದ ಯಾವುದೇ ಪದವಿ ಪಡೆದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಸ್ಥಳೀಯ ಭಾಷೆಯನ್ನು ತಿಳಿದಿರಬೇಕಾದದು ಅವಶ್ಯಕ. ಜತೆಗೆ ಕಂಪ್ಯೂಟರ್‌ನಲ್ಲಿ ಕಾರ್ಯನಿರ್ವಹಿಸುವ ಜ್ಞಾನ ಹೊಂದಿರಬೇಕು.

ಆಫೀಸರ್‌ ಸ್ಕೇಲ್‌-I: ಅಂಗೀಕೃತ ವಿಶ್ವವಿದ್ಯಾಲಯದಿಂದ ಯಾವುದೇ ಪದವಿ ಪಡೆದ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದು.‌ ಆದರೆ ಕೃಷಿ, ತೋಟಗಾರಿಕೆ, ಅರಣ್ಯಶಾಸ್ತ್ರ, ಪಶುಸಂಗೋಪನೆ, ಪಶು ವಿಜ್ಞಾನ (Veterinary Science), ಅಗ್ರಿಕಲ್ಚರ್ ಎಂಜಿನಿಯರಿಂಗ್, ಅಗ್ರಿಕಲ್ಚರಲ್‌ ಮಾರ್ಕೆಟಿಂಗ್ ಅಂಡ್ ಕೋ-ಆಪರೇಷನ್, ಇನ್‌ಫಾರ್ಮೇಷನ್ ಟೆಕ್ನಾಲಜಿ, ಮ್ಯಾನೇಜ್‌ಮೆಂಟ್‌, ಲಾ, ಎಕನಾಮಿಕ್ಸ್‌ ಅಥವಾ ಅಕೌಂಟೆನ್ಸಿ ಈ ಯಾವುದಾದರೂ ವಿಷಯಗಳಲ್ಲಿ ಪದವಿ ಪಡೆದಿರುವವರಿಗೆ ಆದ್ಯತೆ ನೀಡಲಾಗುತ್ತದೆ.

ಇದಲ್ಲದೆ, ಪ್ರಾದೇಶಿಕ ಗ್ರಾಮೀಣ ಬ್ಯಾಂಕು ಯಾವ ರಾಜ್ಯಕ್ಕೆ ಸೇರಿದೆಯೋ ಅಲ್ಲಿಯ ಸ್ಥಳೀಯ ಭಾಷೆಯನ್ನು ಚೆನ್ನಾಗಿ ತಿಳಿದಿರಬೇಕು. (8ನೇ ತರಗತಿಯವರೆಗೆ ಅಥವಾ ಅದಕ್ಕಿಂತಲೂ ಹೆಚ್ಚಿನ ತರಗತಿಗಳಲ್ಲಿ ಸ್ಥಳೀಯ ಭಾಷೆಯನ್ನು ರಾಜ್ಯ ಪಠ್ಯಕ್ರಮದ ಪ್ರಕಾರ ಅಭ್ಯಾಸಿಸಿರಬೇಕು) ಜತೆಗೆ ಕಂಪ್ಯೂಟರ್ ಜ್ಞಾನ ಹೊಂದಿರಬೇಕಾದದು ಅಪೇಕ್ಷಣೀಯ.

ಆಫೀಸರ್‌ ಸ್ಕೇಲ್‌-II: ಈ ಸ್ಕೇಲ್‌ನ ಜನರಲ್ ಬ್ಯಾಂಕಿಂಗ್ ಆಫೀಸರ್‌ ಹುದ್ದೆಗೆ ಅಂಗೀಕೃತ ವಿವಿಯಿಂದ ಶೇಕಡಾ 50 ಅಂಕಗಳೊಂದಿಗೆ ಯಾವುದೇ ಪದವಿ ಪಡೆದಿರುವ ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

ಕೃಷಿ, ತೋಟಗಾರಿಕೆ, ಅರಣ್ಯಶಾಸ್ತ್ರ, ಪಶುಸಂಗೋಪನೆ, ಪಶು ವಿಜ್ಞಾನ (Veterinary Science), ಅಗ್ರಿಕಲ್ಚರ್ ಎಂಜಿನಿಯರಿಂಗ್, ಅಗ್ರಿಕಲ್ಚರಲ್‌ ಮಾರ್ಕೆಟಿಂಗ್ ಅಂಡ್ ಕೋ-ಆಪರೇಷನ್, ಇನ್‌ಫಾರ್ಮೇಷನ್ ಟೆಕ್ನಾಲಜಿ, ಮ್ಯಾನೇಜ್‌ಮೆಂಟ್‌, ಲಾ, ಎಕನಾಮಿಕ್ಸ್‌ ಅಥವಾ ಅಕೌಂಟೆನ್ಸಿ ಈ ಯಾವುದಾದರೂ ವಿಷಯಗಳಲ್ಲಿ ಪದವಿ ಪಡೆದಿರುವವರಿಗೆ ಆದ್ಯತೆ ನೀಡಲಾಗುತ್ತದೆ.

ಇದರೊಂದಿಗೆ ಯಾವುದೇ ಬ್ಯಾಂಕ್ ಅಥವಾ ಹಣಕಾಸಿಗೆ ಸಂಬಂಧಿಸಿದ ಸಂಸ್ಥೆಗಳಲ್ಲಿ ಎರಡು ವರ್ಷಗಳ ಕಾಲ ಆಫೀಸರ್ ಹುದ್ದೆಯಲ್ಲಿ ಸೇವೆ ಸಲ್ಲಿಸಿದ ಅನುಭವ ಹೊಂದಿರಬೇಕು.

ಆಫೀಸರ್‌ ಸ್ಕೇಲ್‌-IIನ ಇನ್ನಿತರ ಹುದ್ದೆಗಳಿಗೆ ರಾಜ್ಯದಲ್ಲಿ ಸದ್ಯ ನೇಮಕ ನಡೆಯುತ್ತಿಲ್ಲ. ಅಂತೆಯೇ ಆಫೀಸರ್‌ ಸ್ಕೇಲ್‌-III ರ ಹುದ್ದೆಗಳು ರಾಜ್ಯದ ಗ್ರಾಮೀಣ ಬ್ಯಾಂಕ್‌ನಲ್ಲಿ ಖಾಲಿ ಇಲ್ಲ. ಹೀಗಾಗಿ ಇವುಗಳ ವಿದ್ಯಾರ್ಹತೆಯನ್ನು ಇಲ್ಲಿ ನೀಡಲಾಗಿಲ್ಲ.

ಅರ್ಜಿಸಲ್ಲಿಸಲು ವೇಳಾಪಟ್ಟಿ ಇಂತಿದೆ

ಅರ್ಜಿ ಶುಲ್ಕ ಎಷ್ಟು?

ಆಫೀಸರ್‌ ಹುದ್ದೆಗೆ ಮತ್ತು ಆಫೀಸ್‌ ಅಸಿಸ್ಟೆಂಟ್‌ ಹುದ್ದೆಗಳಿಗೆ ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳು 175 ರೂ. ಹಾಗೂ ಇತರರು 850 ರೂ. ಅರ್ಜಿ ಶುಲ್ಕ ಪಾವತಿಸಬೇಕಿರುತ್ತದೆ.

ಇಂಟರ್‌ನೆಟ್‌ ಬ್ಯಾಂಕಿಂಗ್‌, ಕ್ರೆಡಿಟ್‌- ಡೆಬಿಟ್‌ ಕಾರ್ಡ್‌ಗಳ ಮೂಲಕ, ಮೊಬೈಲ್‌ ವ್ಯಾಲೆಟ್‌ಗಳ ಮೂಲಕ ಅಥವಾ ಐಎಂಪಿಎಸ್‌ ಮೂಲಕ ಶುಲ್ಕ ಪಾವತಿಸಬಹುದಾಗಿದೆ. ಹೆಚ್ಚಿನ ಮಾಹಿತಿಗೆ ವೆಬ್‌: https://www.ibps.in

Exit mobile version