Site icon Vistara News

IBPS SO Recruitment 2022 | ರಾಷ್ಟ್ರೀಕೃತ ಬ್ಯಾಂಕ್‌ಗಳ ಸ್ಪೆಷಲಿಸ್ಟ್‌ ಆಫೀಸರ್‌ ಹುದ್ದೆಗಳಿಗೆ ಅರ್ಜಿ ಆಹ್ವಾನ

IBPS SO Recruitment 2022

ನವ ದೆಹಲಿ: ಬ್ಯಾಂಕ್‌ ಸಿಬ್ಬಂದಿ ನೇಮಕಾತಿ ಸಂಸ್ಥೆ (ಐಬಿಪಿಎಸ್‌) ದೇಶದ 11 ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಖಾಲಿ ಇರುವ ಸ್ಪೆಷಲಿಸ್ಟ್‌ ಆಫೀಸರ್‌ ಹುದ್ದೆಗಳಿಗೆ (IBPS SO Recruitment 2022) ನೇಮಕ ಮಾಡಲು ಸಾಮಾನ್ಯ ನೇಮಕ ಪ್ರಕ್ರಿಯೆ (ಸಿಆರ್‌ಪಿ) ನಡೆಸುತ್ತಿದ್ದು, ಆಸಕ್ತ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.

ಈ ನೇಮಕ ಪ್ರಕ್ರಿಯೆ ಮೂಲಕ ಐಟಿ ಆಫೀಸರ್‌ (ಮಾಹಿತಿ ತಂತ್ರಜ್ಞಾನ ಅಧಿಕಾರಿ), ಅಗ್ರಿಕಲ್ಚರಲ್‌ ಫೀಲ್ಡ್‌ ಆಫೀಸರ್‌ (ಕೃಷಿ ಅಧಿಕಾರಿ), ರಾಜ್‌ ಭಾಷಾ ಅಧಿಕಾರಿ, ಲಾ ಆಫೀಸರ್‌ (ಕಾನೂನು ಅಧಿಕಾರಿ), ಎಚ್‌ಆರ್‌ ಪರ್ಸನಲ್‌ ಆಫೀಸರ್‌ ಹಾಗೂ ಮಾರ್ಕೆಟಿಂಗ್‌ ಆಫೀಸರ್‌ (ಎಲ್ಲವೂ ಸ್ಕೇಲ್‌-1 ಹುದ್ದೆಗಳು) ಹುದ್ದೆಗಳಿಗೆ ಈ ಪರೀಕ್ಷೆ ಮೂಲಕ ನೇಮಕ ಮಾಡಿಕೊಳ್ಳಲಾಗುತ್ತದೆ.

ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದ್ದು, 21-11-2022 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿರುತ್ತದೆ. ಅರ್ಜಿ ಶುಲ್ಕವನ್ನು ಆನ್‌ಲೈನ್‌ನಲ್ಲಿಯೇ ಪಾವತಿಸಬಹುದಾಗಿರುತ್ತದೆ.

ಯಾವ ಹುದ್ದೆ ಎಷ್ಟು?
ಐಟಿ ಆಫೀಸರ್‌-44, ಅಗ್ರಿಕಲ್ಚರಲ್‌ ಫೀಲ್ಡ್‌ ಆಫೀಸರ್‌-516, ರಾಜಭಾಷಾ ಅಧಿಕಾರಿ-25, ಲಾ ಆಫೀಸರ್‌-10, ಎಚ್‌ಆರ್‌ ಪರ್ಸೊನಲ್‌ ಆಫೀಸರ್‌-15 ಹಾಗೂ ಮಾರ್ಕೆಟಿಂಗ್‌ ಆಫೀಸರ್‌ -100 ಒಟ್ಟು 710 ಹುದ್ದೆಗಳಿಗೆ ನೇಮಕ ನಡೆಯಲಿದೆ.

ಅರ್ಜಿ ಸಲ್ಲಿಕೆ ಮತ್ತು ಪರೀಕ್ಷೆಯ ವೇಳಾಪಟ್ಟಿ ಇಂತಿದೆ;

ವಿದ್ಯಾರ್ಹತೆ ಏನೇನು?
ಕೃಷಿ ಅಧಿಕಾರಿ (ಅಗ್ರಿಕಲ್ಚರಲ್‌ ಫೀಲ್ಡ್‌ ಆಫೀಸರ್‌): ಕೃಷಿ/ ತೋಟಗಾರಿಕೆ/ಪಶುಸಂಗೋಪನೆ/ ಪಶು ವಿಜ್ಞಾನ/ ಡೇರಿ ಸೈನ್ಸ್‌/ ಅಗ್ರಿ ಎಂಜಿನಿಯರಿಂಗ್‌/ಮೀನುಗಾರಿಕೆ ವಿಜ್ಞಾನ/ ಮೀನು ಸಾಕಣೆ/ ಅಗ್ರಿ ಮಾರ್ಕೆಟಿಂಗ್‌ ಆ್ಯಂಡ್‌ ಕೋ ಆಪರೇಷನ್‌/ ಕೋ ಆಪರೇಷನ್‌ ಆ್ಯಂಡ್‌ ಬ್ಯಾಂಕಿಂಗ್‌/ ಅಗ್ರೊ ಫಾರೆಸ್ಟ್ರಿಯಲ್ಲಿ ನಾಲ್ಕು ವರ್ಷಗಳ ಪದವಿ ಪಡೆದವರು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದು.
ಮಾಹಿತಿ ತಂತ್ರಜ್ಞಾನ ಅಧಿಕಾರಿ (ಐಟಿ ಆಫೀಸರ್‌): ಕಂಪ್ಯೂಟರ್‌ ಸೈನ್ಸ್‌/ ಕಂಪ್ಯೂಟರ್‌ ಅಪ್ಲಿಕೇಷನ್‌/ ಇನ್‌ಫಾರ್‌ಮೇಷನ್‌ ಟೆಕ್ನಾಲಜಿ/ ಎಲೆಕ್ಟ್ರಾನಿಕ್ಸ್‌ /ಎಲೆಕ್ಟ್ರಾನಿಕ್ಸ್‌ ಆ್ಯಂಡ್‌ ಟೆಲಿಕಮ್ಯುನಿಕೇಷನ್ಸ್‌/ ಎಲೆಕ್ಟ್ರಾನಿಕ್ಸ್‌ ಆ್ಯಂಡ್‌ ಕಮ್ಯುನಿಕೇಷನ್‌/ ಎಲೆಕ್ಟ್ರಾನಿಕ್ಸ್‌ ಆ್ಯಂಡ್‌ ಇನ್‌ಸ್ಟ್ರುಮೆಂಟೇಷನ್‌ನಲ್ಲಿ ನಾಲ್ಕು ವರ್ಷಗಳ ಎಂಜಿನಿಯರಿಂಗ್‌ ಅಥವಾ ಟೆಕ್ನಾಲಜಿ ಪದವಿ ಅಥವಾ ಎಲೆಕ್ಟ್ರಾನಿಕ್ಸ್‌ / ಎಲೆಕ್ಟ್ರಾನಿಕ್ಸ್‌ ಆ್ಯಂಡ್‌ ಟೆಲಿಕಮ್ಯುನಿಕೇಷನ್‌/ ಎಲೆಕ್ಟ್ರಾನಿಕ್ಸ್‌ ಆ್ಯಂಡ್‌ ಕಮ್ಯುನಿಕೇಷನ್‌/ಎಲೆಕ್ಟ್ರಾನಿಕ್ಸ್‌ ಆ್ಯಂಡ್‌ ಇನ್‌ಸ್ಟ್ರುಮೆಂಟೇಷನ್‌ನಲ್ಲಿ/ಕಂಪ್ಯೂಟರ್‌ ಸೈನ್ಸ್‌/ ಇನ್‌ಫಾರ್‌ಮೇಷನ್‌ ಟೆಕ್ನಾಲಜಿ/ ಕಂಪ್ಯೂಟರ್‌ ಅಪ್ಲಿಕೇಷನ್‌ನಲ್ಲಿಸ್ನಾತಕೋತ್ತರ ಪದವಿ ಪಡೆದಿರಬೇಕು.
ಎಚ್‌ಆರ್‌/ಪರ್ಸನಲ್‌ ಆಫೀಸರ್‌: ಪದವೀಧರರಾಗಿರಬೇಕು ಮತ್ತು ಪರ್ಸನಲ್‌ ಮ್ಯಾನೇಜ್‌ ಮೆಂಟ್‌/ ಇಂಡಸ್ಟ್ರಿಯಲ್‌ ರಿಲೇಷನ್ಸ್‌/ ಎಚ್‌ಆರ್‌/ ಎಚ್‌ ಆರ್‌ಡಿ/ ಸೋಷಿಯಲ್‌ ವರ್ಕ್/ ಕಾರ್ಮಿಕ ಕಾನೂನು ಇದ್ಯಾವುದಾದರೂ ವಿಷಯದಲ್ಲಿಪೂರ್ಣಾವಧಿಯ ಸ್ನಾತಕೋತ್ತರ ಪದವಿ ಅಥವಾ ಪೂರ್ಣಾವಧಿಯ ಸ್ನಾತಕೋತ್ತರ ಡಿಪ್ಲೊಮಾ ಮಾಡಿರಬೇಕು.
ಕಾನೂನು ಅಧಿಕಾರಿ (ಲಾ ಆಫೀಸರ್‌): ಎಲ್‌ಎಲ್‌ಬಿ (ಕಾನೂನು ಪದವಿ) ಮಾಡಿರಬೇಕು ಮತ್ತು ಬಾರ್‌ ಕೌನ್ಸಿಲ್‌ನ ಸದಸ್ಯತ್ವ ಪಡೆದಿರಬೇಕು.
ಮಾರ್ಕೆಟಿಂಗ್‌ ಆಫೀಸರ್‌: ಪದವೀಧರರಾಗಿರಬೇಕು ಮತ್ತು ಪೂರ್ಣಾ ವಧಿಯ ಎಂಎಂಎಸ್‌ (ಮಾರ್ಕೆಟಿಂಗ್‌)/ ಎಂಬಿಎ (ಮಾರ್ಕೆಟಿಂಗ್‌)/ಪಿಜಿಡಿಬಿಎ ಮಾಡಿರಬೇಕು.
ರಾಜ್ಯ ಭಾಷಾ ಅಧಿಕಾರಿ: ಹಿಂದಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿರಬೇಕು. ಜೊತೆಗೆ ಪದವಿಯಲ್ಲಿ ಇಂಗ್ಲಿಷ್‌ ಅನ್ನು ಒಂದು ವಿಷಯವಾಗಿ ಅಭ್ಯಾಸ ಮಾಡಿರಬೇಕು ಅಥವಾ ಸಂಸ್ಕೃತದಲ್ಲಿ ಸ್ನಾತಕೋತ್ತರ ಪದವಿ ಪಡೆದಿರಬೇಕು. ಜೊತೆಗೆ ಪದವಿಯಲ್ಲಿ ಇಂಗ್ಲಿಷ್‌ ಮತ್ತು ಹಿಂದಿಯನ್ನು ವಿಷಯವಾಗಿ ಅಭ್ಯಾಸ ಮಾಡಿರಬೇಕು.

ವಯೋಮಿತಿ ಎಷ್ಟು?
20 ವರ್ಷದಿಂದ ೩೦ ವರ್ಷದೊಳಗಿನವರು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಮೀಸಲಾತಿ ನಿಯಮಾನುಸಾರ ಪರಿಶಿಷ್ಟ ಜಾತಿ (ಎಸ್‌ಸಿ) / ಪರಿಶಿಷ್ಟ ಪಂಗಡದ (ಎಸ್‌ಟಿ) ಅಭ್ಯರ್ಥಿಗಳಿಗೆ 5 ವರ್ಷ, ಇತರ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ 3 ವರ್ಷ ಮತ್ತು ವಿಕಲಚೇತನ ಅಭ್ಯರ್ಥಿಗಳಿಗೆ 10 ವರ್ಷ ವಯೋಮಿತಿಯಲ್ಲಿ ಸಡಿಲಿಕೆ ಇರುತ್ತದೆ.

ಅರ್ಜಿ ಶುಲ್ಕ ಎಷ್ಟು ಕಟ್ಟಬೇಕು?
ಆನ್‌ಲೈನ್‌ನಲ್ಲಿ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದ್ದು, ಆನ್‌ಲೈನ್‌ನಲ್ಲಿಯೇ ಅರ್ಜಿ ಶುಲ್ಕ ಪಾವತಿಸಬಹುದಾಗಿರುತ್ತದೆ.
ಈ ಹಿಂದಿಗೆ ಹೋಲಿಸಿದರೆ ಅರ್ಜಿ ಶುಲ್ಕವನ್ನು ಸ್ವಲ್ಪ ಹೆಚ್ಚಿಸಲಾಗಿದೆ. ಈ ಬಾರಿ ಎಸ್‌ಸಿ/ಎಸ್‌ಟಿ/ ವಿಕಲಚೇತನ ಮತ್ತು ಮಾಜಿ ಸೈನಿಕ ಅಭ್ಯರ್ಥಿಗಳು ೧೭೫ ರೂ. ಅರ್ಜಿ ಶುಲ್ಕ ಪಾವತಿಸಬೇಕು ( ಈ ಹಿಂದೆ 100 ರೂ. ಇತ್ತು) ಇತರ ಎಲ್ಲ ಅಭ್ಯರ್ಥಿಗಳು ೮೫೦ ರೂ. ಶುಲ್ಕ ಪಾವತಿಸಬೇಕಿರುತ್ತದೆ. (ಈ ಹಿಂದೆ ೬00 ರೂ. ಇತ್ತು) ಈ ಅರ್ಜಿ ಶುಲ್ಕವು ಜಿಎಸ್‌ಟಿ ಯನ್ನು ಒಳಗೊಂಡಿರುತ್ತದೆ. ಹೀಗಾಗಿ ಅಭ್ಯರ್ಥಿಗಳು ಇದಕ್ಕೆ ಜಿಎಸ್‌ಟಿ ಪಾವತಿಸಬೇಕಾಗಿಲ್ಲ.

ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಎಲ್ಲೆಲ್ಲಿ ನಡೆಯಲಿದೆ ಪರೀಕ್ಷೆ?
ರಾಜ್ಯದ 9 ಜಿಲ್ಲಾ ಕೇಂದ್ರಗಳಲ್ಲಿ ಪೂರ್ವಭಾವಿ (ಪ್ರಿಲಿಮ್ಸ್‌) ಪರೀಕ್ಷೆ ನಡೆಯಲಿದೆ. ಈ ಜಿಲ್ಲಾ ಕೇಂದ್ರಗಳೆಂದರೆ ಬೆಂಗಳೂರು, ಬೆಳಗಾವಿ, ಬೀದರ್‌, ಕಲಬುರಗಿ, ಹುಬ್ಬಳ್ಳಿ, ಮಂಗಳೂರು, ಮೈಸೂರು, ಶಿವಮೊಗ್ಗ ಮತ್ತು ಉಡುಪಿ. ಮುಖ್ಯಪರೀಕ್ಷೆಯನ್ನು (ಮೇನ್‌ ಎಕ್ಸಾಮ್‌) ಬೆಂಗಳೂರು ಮತ್ತು ಹುಬ್ಬಳ್ಳಿಯಲ್ಲಿ ಮಾತ್ರ ನಡೆಸಲಾಗುತ್ತದೆ.

ಪೂರ್ವಭಾವಿ ಪರೀಕ್ಷೆ (ಪ್ರಿಲಿಮ್ಸ್‌), ಮುಖ್ಯ ಪರೀಕ್ಷೆ (ಮೇನ್‌ ಎಕ್ಸಾಮ್‌) ಹಾಗೂ ಸಂದರ್ಶನದ ಮೂಲಕ ಈ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲಾಗುತ್ತದೆ.

ಹೆಚ್ಚಿನ ಮಾಹಿತಿಗೆ ವೆಬ್‌: https://www.ibps.in/

ಇದನ್ನೂ ಓದಿ| KPSC Recruitment 2022 | ಸಾಂಖ್ಯಿಕ ನಿರೀಕ್ಷಕರ 105 ಹುದ್ದೆಗಳಿಗೆ ಇಂದಿನಿಂದ ಅರ್ಜಿ ಸಲ್ಲಿಸಲು ಅವಕಾಶ

Exit mobile version