Site icon Vistara News

IDBI Recruitment 2023 : ಐಡಿಬಿಐ ಬ್ಯಾಂಕ್‌ನಲ್ಲಿ 1,036 ಎಕ್ಸಿಕ್ಯೂಟಿವ್‌ ಹುದ್ದೆ; ಪದವೀಧರರಿಂದ ಅರ್ಜಿ ಆಹ್ವಾನ

IDBI Recruitment 2023 Executive recruitment notification released details in kannada

#image_title

ಭಾರತೀಯ ಜೀವ ವಿಮಾ ನಿಗಮ (ಎಲ್‌ಐಸಿ) ಮತ್ತು ಭಾರತ ಸರ್ಕಾರದ ಒಡೆತನಕ್ಕೆ ಸೇರಿದ, ದೇಶದ ಪ್ರಮುಖ ಅಭಿವೃದ್ಧಿಗೆ ಮೀಸಲಾದ ವಿತ್ತೀಯ ಸಂಸ್ಥೆಗಳಲ್ಲಿ (ಬ್ಯಾಂಕ್‌ಗಳಲ್ಲಿ) ಒಂದಾದ ಐಡಿಬಿಐ ಬ್ಯಾಂಕ್‌ ಗುತ್ತಿಗೆ ಆಧಾರದ ಮೇಲೆ ಎಕ್ಸಿಕ್ಯೂಟಿವ್‌ಗಳ ನೇಮಕಕ್ಕೆ (IDBI Recruitment 2023) ಅಧಿಸೂಚನೆ ಹೊರಡಿಸಿದೆ. ಒಟ್ಟು 1,036 ಎಕ್ಸಿಕ್ಯೂಟಿವ್‌ ಹುದ್ದೆಗಳಿಗೆ ನೇಮಕ ನಡೆಯುತ್ತಿದ್ದು, ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಜೂನ್‌ 07 ಕೊನೆಯ ದಿನವಾಗಿರುತ್ತದೆ.

ಈ 1,036 ಹುದ್ದೆಗಳಲ್ಲಿ ಎಸ್‌ಸಿ ಅಭ್ಯರ್ಥಿಗಳಿಗೆ 160, ಎಸ್‌ಟಿ ಅಭ್ಯರ್ಥಿಗಳಿಗೆ 67 ಒಬಿಸಿ ಅಭ್ಯರ್ಥಿಗಳಿಗೆ 255, ಇಡಬ್ಲ್ಯುಎಸ್‌ ಅಭ್ಯರ್ಥಿಗಳಿಗೆ 103 ಹುದ್ದೆಗಳನ್ನು ಹಾಗೂ ಉಳಿದ 451 ಹುದ್ದೆಗಳನ್ನು ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ಮೀಸಲಿಡಲಾಗಿದೆ. ಆನ್‌ಲೈನ್‌ನಲ್ಲಿ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದ್ದು, ಅರ್ಜಿ ಶುಲ್ಕ ನಿಗದಿಪಡಿಸಲಾಗಿಲ್ಲ.

ಅರ್ಜಿ ಸಲ್ಲಿಸಲು ಇಲ್ಲಿ (Click Here) ಕ್ಲಿಕ್‌ ಮಾಡಿ

ವಿದ್ಯಾರ್ಹತೆ ಏನು?

ಯಾವುದೇ ವಿಷಯದಲ್ಲಿ ಪದವಿ ಪಡೆದ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಡಿಪ್ಲೊಮಾ ಮಾಡಿದವರನ್ನು ಈ ಹುದ್ದೆಗಳಿಗೆ ಪರಿಗಣಿಸಲಾಗುವುದಿಲ್ಲ ಎಂದು ಅಧಿಸೂಚನೆಯಲ್ಲಿ ಸ್ಪಷ್ಟಪಡಿಸಲಾಗಿದೆ.

ಅಭ್ಯರ್ಥಿಗಳು ಕಂಪ್ಯೂಟರ್‌ನಲ್ಲಿ ಕಾರ್ಯನಿರ್ವಹಿಸುವ ಜ್ಞಾನ ಹೊಂದಿರಬೇಕಾದದು ಕಡ್ಡಾಯ.

ವಯೋಮಿತಿ ಎಷ್ಟು?

ಅಭ್ಯರ್ಥಿಯ ಕನಿಷ್ಠ ವಯಸ್ಸು 20 ವರ್ಷ. ಗರಿಷ್ಠ ವಯೋಮಿತಿ 25 ವರ್ಷ. ವಯೋಮಿತಿಯನ್ನು ಮೇ 1, 2023ಕಕ್ಕೆ ಲೆಕ್ಕಹಾಕಲಾಗುತ್ತದೆ. ಎಸ್‌ಸಿ, ಎಸ್‌ಟಿ, ಓಬಿಸಿ, ಮಾಜಿ ಸೈನಿಕ, ವಿಕಲಚೇತನ ಅಭ್ಯರ್ಥಿಗಳಿಗೆ ಸರ್ಕಾರದ ನಿಯಮದ ಪ್ರಕಾರ ಗರಿಷ್ಠ ವಯೋಮಿತಿಯಲ್ಲಿ ಸಡಿಲಿಕೆ ನೀಡಲಾಗಿರುತ್ತದೆ.

ಇತ್ತ ಗಮನಿಸಿ
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 07-06-2023
ಆನ್‌ಲೈನ್‌ನ ಪರೀಕ್ಷೆಯ ದಿನಾಂಕ : ಜುಲೈ 2, 2023
ಹೆಚ್ಚಿನ ಮಾಹಿತಿಗೆ ವೆಬ್‌ಸೈಟ್‌ ವಿಳಾಸ: https://www.idbibank.in

ವೇತನ ಎಷ್ಟಿರುತ್ತದೆ?

ಐಡಿಬಿಐ ಬ್ಯಾಂಕ್‌ನಲ್ಲಿನ ಎಕ್ಸಿಕ್ಯೂಟಿವ್‌ ಹುದ್ದೆಗಳನ್ನು ಮೂರು ವರ್ಷಗಳಿಗೆ ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳಲಾಗುತ್ತಿದೆ. ಮೊದಲ ವರ್ಷ ಮಾಸಿಕ ರೂ.29,000 ವೇತನ ನೀಡಲಾಗುತ್ತದೆ. ಎರಡನೇ ವರ್ಷ ಮಾಸಿಕ 31,000ರೂ. ವೇತನ ನೀಡಿದರೆ ಮೂರನೇ ವರ್ಷ ಮಾಸಿ ರೂ.34,000 ವೇತನ ನೀಡಲಾಗುತ್ತದೆ.

ಮೂರು ವರ್ಷ ಪೂರ್ಣಗೊಳಿಸಿದವರು ಗ್ರೇಡ್‌ ʻಎʼಯ ಅಸಿಸ್ಟೆಂಟ್‌ ಮ್ಯಾನೇಜರ್‌ ಹುದ್ದೆಗಳ ನೇಮಕಕ್ಕೆ ನಡೆಸಲಾಗುವ ನೇಮಕ ಪ್ರಕ್ರಿಯೆಯಲ್ಲಿ ಭಾಗವಹಿಸಲು ಅರ್ಹತೆ ಪಡೆಯುತ್ತಾರೆ. ಈ ಹುದ್ದೆಯ ಮಾಸಿಕ ಬೇಸಿಕ್‌ ವೇತನವು 36,000ಸಾವಿರ ರೂ.ಗಳಾಗಿರುತ್ತವೆ. ವೇತನ ಶ್ರೇಣಿ ಇಂತಿದೆ: 36,000-1,490(7)-46,430-1,740(2)–49,910–1,990(7)-63,840(17years)

ಉದ್ಯೋಗಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ (Click Here) ಮಾಡಿ

ನೇಮಕ ಹೇಗೆ?

ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಮೊದಲಿಗೆ ಆನ್‌ಲೈನ್‌ ಟೆಸ್ಟ್‌ (OT) ನಡೆಸಲಾಗುತ್ತದೆ. ಜುಲೈನಲ್ಲಿ ಈ ಪರೀಕ್ಷೆ ನಡೆಯಲಿದೆ. ಇಂಗ್ಲಿಷ್‌ ಮತ್ತು ಹಿಂದಿಯಲ್ಲಿ ಮಾತ್ರ ಈ ಪರೀಕ್ಷೆ ನಡೆಸಲಾಗುತ್ತಿದ್ದು, ಋಣಾತ್ಮಕ ಮೌಲ್ಯಮಾಪನವಿರುತ್ತದೆ. ಅಂದರೆ ತಪ್ಪು ಉತ್ತರಗಳಿಗೆ 0.25 ಅಂಕಗಳನ್ನು ಕಳೆಯಲಾಗುತ್ತದೆ.

ಒಟ್ಟು 200 ಅಂಕಗಳಿಗೆ ಪರೀಕ್ಷೆ ನಡೆಯಲಿದ್ದು, 200 ಪ್ರಶ್ನೆಗಳನ್ನು ಕೇಳಲಾಗಿರುತ್ತದೆ. ಪರೀಕ್ಷೆ ಬರೆಯಲು 2 ಗಂಟೆ ಕಾಲಾವಕಾಶ ನೀಡಲಾಗುತ್ತದೆ. ಪರೀಕ್ಷೆಯು ನಾಲ್ಕು ವಿಷಯಗಳನ್ನು ಒಳಗೊಂಡಿದ್ದು (1.Logical Reasoning, Data Analysis & Interpretation, 2. English Language, 3.Quantitative Aptitude, 4. General/Economy/ Banking Awareness/ Computer/IT), ಪ್ರತಿ ವಿಷಯದಲ್ಲಿಯೂ ಅಭ್ಯರ್ಥಿಯು ಅರ್ಹತಾ ಅಂಕ ಪಡೆದಿರಬೇಕಾಗುತ್ತದೆ.

ಆಲ್‌ಲೈನ್‌ ಪರೀಕ್ಷೆಯಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳ ದಾಖಲೆ ಪರಿಶೀಲನೆ ನಡೆಸಿ, ವೈದ್ಯಕೀಯ ಪರೀಕ್ಷೆಗೊಳಪಡಿಸಿ ನೇಮಕ ಮಾಡಿಕೊಳ್ಳಲಾಗುತ್ತದೆ.

ನೇಮಕಾತಿಯ ಸಂಪೂರ್ಣ ಮಾಹಿತಿಗೆ ಅಧಿಸೂಚನೆ (Click Here) ನೋಡಿ

ರಾಜ್ಯದಲ್ಲಿ ಎಲ್ಲೆಲ್ಲಿ ಪರೀಕ್ಷೆ?

ಎಕ್ಸಿಕ್ಯೂಟಿವ್‌ ಹುದ್ದೆಗಾಗಿ ನಡೆಸಲಾಗುವ ಆನ್‌ಲೈನ್‌ ಟೆಸ್ಟ್‌ ಅನ್ನು ರಾಜ್ಯದ ಬೆಂಗಳೂರು, ಬೆಳಗಾವಿ ಬೀದರ್‌, ದಾವಣಗೆರೆ, ಧಾರವಾಡ, ಕಲಬುರಗಿ, ಹಾಸನ, ಹುಬ್ಬಳ್ಳಿ, ಮಂಡ್ಯ, ಮಂಗಳೂರು, ಮೈಸೂರು, ಶಿವಮೊಗ್ಗ ಮತ್ತು ಉಡುಪಿಯಲ್ಲಿ ನಡೆಸಲಾಗುತ್ತದೆ.

ಇದನ್ನೂ ಓದಿ: Teacher Recruitment 2023 : 33 ಸಾವಿರ ಅತಿಥಿ ಶಿಕ್ಷಕರ ನೇಮಕಕ್ಕೆ ಒಪ್ಪಿಗೆ; ಎಲ್ಲ ಜಿಲ್ಲೆಗಳಲ್ಲಿಯೂ ಖಾಲಿ ಇವೆ ಹುದ್ದೆ

Exit mobile version