Site icon Vistara News

India Post GDS recruitment: 30,041 ಗ್ರಾಮೀಣ ಅಂಚೆ ಸೇವಕ ಹುದ್ದೆಗೆ ಅರ್ಜಿ ಆಹ್ವಾನ, ಅಪ್ಲೈ ಮಾಡಲು ಆ.23 ಕೊನೆ ದಿನ

India Post

ನವದೆಹಲಿ: ಭಾರತೀಯ ಅಂಚೆ ಇಲಾಖೆಯು ಖಾಲಿ ಇರುವ 30,041 ಗ್ರಾಮೀಣ ಅಂಚೆ ಸೇವಕ(Gramin Dak Sevaks – GDS) ಹುದ್ದೆಗಳ ನೇಮಕಾತಿ ಪ್ರಕ್ರಿಯೆಯನ್ನು ಆರಂಭಿಸಿದೆ(India Post GDS recruitment 2023). ಗ್ರಾಮೀಣ ಅಂಚೆ ಸೇವಕರ ಹುದ್ದೆಗಳು ಬ್ರ್ಯಾಂಚ್ ಪೋಸ್ಟ್ ಮಾಸ್ಟರ್ ಮತ್ತು ಅಸಿಸ್ಟಂಟ್ ಬ್ರ್ಯಾಂಚ್ ಪೋಸ್ಟ್ ಮಾಸ್ಟರ್ ಹುದ್ದೆಗಳನ್ನು ಒಳಗೊಂಡಿರುತ್ತವೆ. ಆಗಸ್ಟ್ 3ರಿಂದಲೇ ಅರ್ಜಿ ಪ್ರಕ್ರಿಯೆ ಶುರುವಾಗಿದೆ. ಆಸಕ್ತ ಅಭ್ಯರ್ಥಿಗಳು ಭಾರತೀಯ ಅಂಚೆ ಇಲಾಖೆಯ ಅಧಿಕೃತ ಜಾಲತಾಣ indiapostgdsonline.gov.in ಮೂಲಕ ಅರ್ಜಿ ಸಲ್ಲಿಸಬೇಕಾಗುತ್ತದೆ. ಅರ್ಜಿ ಸಲ್ಲಿಸಲು ಆಗಸ್ಟ್ 23 ಕೊನೆಯ ದಿನವಾಗಿದೆ. ಅಭ್ಯರ್ಥಿಗಳಿಗೆ ತಮ್ಮ ಅರ್ಜಿಗಳನ್ನು ಎಡಿಟ್ ಮಾಡಲು ಆಗಸ್ಟ್ 24 ಮತ್ತು 26ರಂದು ಅವಕಾಶವನ್ನು ಕಲ್ಪಿಸಲಾಗುತ್ತದೆ. ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ.

ವಯೋಮಿತಿ ಎಷ್ಟು?

ಭಾರತೀಯ ಅಂಚೆ ಇಲಾಖೆಯು ಒಟ್ಟು 30041 ಗ್ರಾಮೀಣ ಅಂಚೆ ಸೇವಕ ಹುದ್ದೆಗಳನ್ನು(GDS) ಭರ್ತಿ ಮಾಡಿಕೊಳ್ಳುತ್ತಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಛಿಸುವ ಅಭ್ಯರ್ಥಿಗಳು ವಯೋಮಿತಿಯನ್ನು ನಿಗದಿಪಡಿಸಲಾಗಿದೆ. ಅಭ್ಯರ್ಥಿಗಳ ವಯಸ್ಸು 18ರಿಂದ 40 ವರ್ಷದೊಳಗಿರಬೇಕು.
ಗ್ರಾಮೀಣ ಅಂಚೆ ಸೇವಕ ಹುದ್ದೆಗಳ ನೇಮಕಾತಿಯ ಅಧಿಸೂಚನೆಗಾಗಿ ಇಲ್ಲಿ ಕ್ಲಿಕ್ ಮಾಡಿ.

ಶೈಕ್ಷಣಿಕ ಅರ್ಹತೆಗಳೇನು?

ಗಣಿತ ಮತ್ತು ಇಂಗ್ಲಿಷ್ ವಿಷಯಗಳನ್ನು ಒಳಗೊಂಡಿರುವ ಮಾಧ್ಯಮಿಕ ಶಾಲಾ ಪರೀಕ್ಷೆಯನ್ನು ಪೂರೈಸಿರಬೇಕು. ಅಂದರೆ, 10ನೇ ತರಗತಿ ಪಾಸಾದ ಸರ್ಟಿಫಿಕೇಟ್ ಇರಬೇಕು. ಗಣಿತ ಮತ್ತು ಇಂಗ್ಲಿಷ್ ವಿಷಯಗಳನ್ನು ಅಥವಾ ಅದಕ್ಕೆ ಸಮನಾದ ವಿಷಯಗಳ ಪರೀಕ್ಷೆ ಬರೆದಿರಬೇಕು. ಅಭ್ಯರ್ಥಿಗಳು ಸ್ಥಳೀಯ ಭಾಷೆಯನ್ನು ಕಡ್ಡಾಯ ಅಥವಾ ಐಚ್ಛಿಕ ವಿಷಯವಾಗಿ ಕನಿಷ್ಠ ದ್ವಿತೀಯ ದರ್ಜೆಯವರೆಗೆ ಅಧ್ಯಯನ ಮಾಡಿರಬೇಕು.

ಅರ್ಜಿ ಶುಲ್ಕ ಎಷ್ಟು?

ಗ್ರಾಮೀಣ ಅಂಚೆ ಸೇವಕ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಶುಲ್ಕವನ್ನು ನಿಗದಿಪಡಿಸಲಾಗಿದೆ. ಅಭ್ಯರ್ಥಿಗಳು 100 ರೂ. ಶುಲ್ಕ ಭರಿಸಬೇಕಾಗುತ್ತದೆ. ಆದರೆ, ಎಲ್ಲ ಮಹಿಳಾ ಹಾಗೂ ಮಂಗಳಮುಖಿಗಳು ಮತ್ತು ಎಲ್ಲ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ಶುಲ್ಕದಿಂದ ವಿನಾಯ್ತಿ ನೀಡಲಾಗಿದೆ.

ಗ್ರಾಮೀಣ ಅಂಚೆ ಸೇವಕರ ವೇತನ ಎಷ್ಟು?

ಬ್ರ್ಯಾಂಚ್ ಪೋಸ್ಟ್ ಮಾಸ್ಟರ್ ಹುದ್ದೆಗಳಿಗೆ 12000 ರೂ.ನಿಂದ 29,380 ರೂ. ಮತ್ತು ಅಸ್ಟಿಸ್ಟಂಟ್ ಬ್ರ್ಯಾಂಚ್ ಪೋಸ್ಟ್ ಮಾಸ್ಟರ್/ಅಂಚೆ ಸೇವಕ ಹುದ್ದಗಳಿಗೆ 10,000 ರೂ.ನಿಂದ 24,470 ರೂ. ನಿಗದಿಪಡಿಸಲಾಗಿದೆ.

ಈ ಸುದ್ದಿಯನ್ನೂ ಓದಿ: IBPS PO Apply Online 2023: ಮೂರು ಸಾವಿರಕ್ಕೂ ಅಧಿಕ ಬ್ಯಾಂಕ್‌ ಹುದ್ದೆಗಳಿಗೆ ಐಬಿಪಿಎಸ್ ಅರ್ಜಿ ಆಹ್ವಾನ, ಕನ್ನಡದಲ್ಲಿ ಪರೀಕ್ಷೆ ಇದೆಯೆ?

ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವುದು ಹೇಗೆ?

ಅಭ್ಯರ್ಥಿಗಳು ಮೊದಲಿಗೆ indiapostgdsonline.gov.in ಜಾಲತಾಣಕ್ಕೆ ಭೇಟಿ ನೀಡಬೇಕು. ಅಲ್ಲಿರುವ ಹೋಮ್‌ಪೇಜ್‌ನಲ್ಲಿರುವ registration link ಮೇಲೆ ಕ್ಲಿಕ್ ಮಾಡಬೇಕು. ಬಳಿಕ ರಿಜಿಸ್ಟರ್ ಮಾಡಿ ಅಪ್ಲಿಕೇಷನ್ ಭರ್ತಿಯನ್ನು ಮುಂದುವರಿಸಬೇಕು. ಬಳಿಕ ಅರ್ಜಿ ಶುಲ್ಕ ಪೇ ಮಾಡಿ. ಅಗತ್ಯವಿರುವ ಎಲ್ಲ ದಾಖಲೆಗಳನ್ನು ಅಪ್‌ಲೋಡ್ ಮಾಡಿ. ಇಷ್ಟೆಲ್ಲ ಆದ ಮೇಲೆ ಸಬ್‌ಮಿಟ್ ಬಟನ್ ಒತ್ತಿ ಮತ್ತು ಭವಿಷ್ಯದಲ್ಲಿ ರೆಫರೆನ್ಸ್‌ಗಾಗಿ ಭರ್ತಿಯಾದ ಅರ್ಜಿಯ ಒಂದು ಪ್ರಿಂಟ್ ತೆಗೆದುಕೊಳ್ಳಿ..

ಇನ್ನಷ್ಟು ಉದ್ಯೋಗ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version