Site icon Vistara News

Indian Army Recruitment 2023 : ಎಂಜಿನಿಯರಿಂಗ್‌ ಪದವೀಧರರಿಗೆ ಸೇನೆಯಲ್ಲಿ ಆಫೀಸರ್‌ ಹುದ್ದೆ; ಕೂಡಲೇ ಅರ್ಜಿ ಸಲ್ಲಿಸಿ!

Indian Army Recruitment 2023

#image_title

ನವ ದೆಹಲಿ: ಸೇನೆ ಸೇರಿ ದೇಶ ಸೇವೆ ಮಾಡಬೇಕೆಂದು ಕನಸು ಕಾಣುತ್ತಿರುವ ಎಂಜಿನಿಯರಿಂಗ್‌ ಪದವೀಧರರರಿಗೆ ಅಪೂರ್ವ ಅವಕಾಶವೊಂದು ಇಲ್ಲಿದೆ. ಭಾರತೀಯ ಸೇನೆಯು (Indian Army) ಶಾರ್ಟ್‌ ಸರ್ವೀಸ್‌ ಕಮೀಷನ್‌ ಅಡಿ ತಾಂತ್ರಿಕ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳುತ್ತಿದ್ದು (Indian Army Recruitment 2023), ಎಂಜಿನಿಯರಿಂಗ್‌ ಪದವೀಧರರಾಗಿರುವ ಅವಿವಾಹಿತ ಪುರಷ ಹಾಗೂ ಮಹಿಳಾ ಅಭ್ಯರ್ಥಿಗಳಿಂದ ಮತ್ತು ಕರ್ತವ್ಯದಲ್ಲಿರುವಾಗಲೇ ಮಡಿದ ಸೇನಾ ಸಿಬ್ಬಂದಿ ವಿಧವೆಯರಿಂದ ಅರ್ಜಿ ಆಹ್ವಾನಿಸಿದೆ.

ಅರ್ಹ ಅಭ್ಯರ್ಥಿಗಳನ್ನು ಮೊದಲಿಗೆ ಚೆನ್ನೈನಲ್ಲಿರುವ ಆಫೀಸರ್‌ ಟ್ರೈನಿಂಗ್‌ ಅಕಾಡೆಮಿಯಲ್ಲಿ (ಒಟಿಎ) ನಡೆಯಲಿರುವ ಕೋರ್ಸ್‌ಗೆ ಆಯ್ಕೆ ಮಾಡಲಾಗುತ್ತದೆ ನಂತರ ಸೇನೆಯ ಅಧಿಕಾರಿ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲಾಗುತ್ತದೆ. SSC(Tech)-62 Men (175 ಅಭ್ಯರ್ಥಿಗಳಿಗೆ ಅವಕಾಶ) ಮತ್ತು SSCW(Tech)-33 Women (19 ಅಭ್ಯರ್ಥಿಗಳಿಗೆ ಅವಕಾಶ) ಎಂಬ ಎರಡು ಕೋರ್ಸ್‌ಗಳಿವೆ.

ಯಾವ ಎಂಜಿನಿಯರಿಂಗ್‌ ಪದವೀಧರರಿಗೆ ಎಷ್ಟು ಹುದ್ದೆ?

ಸಿವಿಲ್‌ ಎಂಜಿನಿಯರಿಂಗ್‌ ಪದವೀಧರರಿಗೆ 51 ಹುದ್ದೆಗಳಿವೆ. Building Construction & Technology ಮತ್ತು Architecture ಎಂಜಿನಿಯರಿಂಗ್‌ ಪದವಿ ಪಡೆದವರೂ ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿದವರು ಅರ್ಜಿ ಸಲ್ಲಿಸಬಹುದಾಗಿದೆ.
ಕಂಪ್ಯೂಟರ್‌ ಸೈನ್ಸ್‌ ಪದವೀಧರರಿಗೆ 48 ಹುದ್ದೆಗಳಿವೆ. ಕಂಪ್ಯೂಟರ್‌ ಟೆಕ್ನಾಲಜಿ, ಎಂಎಸ್ಸಿ ಕಂಪ್ಯೂಟರ್‌, ಇನ್‌ಫಾರ್ಮೇಷನ್‌ ಟೆಕ್ನಾಲಜಿಯಲ್ಲಿ ಎಂಜಿನಿಯರಿಂಗ್‌ ಪದವಿ ಪಡೆದವರು ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿದವರು ಅರ್ಜಿ ಸಲ್ಲಿಸಬಹುದಾಗಿದೆ.

ಇತ್ತ ಗಮನಿಸಿ
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 19-07-2023
ಸಹಾಯವಾಣಿ ಸಂಖ್ಯೆ: 011-26173215 and 011-26175473
ವೆಬ್‌ಸೈಟ್‌ ವಿಳಾಸ: https://joinindianarmy.nic.in/

ಎಲೆಕ್ಟ್ರಿಕಲ್‌ ಎಂಜಿನಿಯರಿಂಗ್‌ ಪದವೀಧರರಿಗೆ 19 ಹುದ್ದೆಗಳಿವೆ. ಎಲೆಕ್ಟ್ರಿಕಲ್‌, ಎಲೆಕ್ಟ್ರಿಕಲ್‌ & ಎಲೆಕ್ಟ್ರಾನಿಕ್ಸ್‌, ಎಲೆಕ್ಟ್ರಾನಿಕ್ಸ್‌&ಇನ್‌ಸ್ಟ್ರುಮೆಂಟೇಷನ್‌, ಇನ್‌ಸ್ಟ್ರುಮೆಂಟೇಷನ್‌ ಎಂಜಿನಿಯರಿಂಗ್‌ನಲ್ಲಿ ಪದವಿ ಪಡೆದಿರುವ ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.
ಎಲೆಕ್ಟ್ರಾನಿಕ್ಸ್‌ ಎಂಜಿನಿಯರಿಂಗ್‌ ಪದವೀಧರರಿಗೆ 29 ಹುದ್ದೆಗಳಿವೆ. ಎಲೆಕ್ಟ್ರಾನಿಕ್ಸ್‌, ಎಲೆಕ್ಟ್ರಾನಿಕ್ಸ್‌ & ಟೆಲಿಕಾಮ್‌, ಎಲೆಕ್ಟ್ರಾನಿಕ್ಸ್‌ &ಕಮ್ಯುನಿಕೇಷನ್‌, ಟೆಲಿಕಮ್ಯುನಿಕೇಷನ್‌, ಮೈಕ್ರೋ ಎಲೆಕ್ಟ್ರಾನಿಕ್ಸ್‌ & ಮೈಕ್ರೋವೇವ್‌, ಸ್ಯಾಟಲೈಟ್‌ ಕಮ್ಯುನಿಕೇಷನ್‌ ಎಂಜಿನಿಯರಿಂಗ್‌ ಪದವೀಧರರು ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿದವರು ಅರ್ಜಿ ಸಲ್ಲಿಸಬಹುದಾಗಿದೆ.

ಉದ್ಯೋಗಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ (Click Here ) ಮಾಡಿ.

ಮೆಕ್ಯಾನಿಕಲ್‌ ಎಂಜಿನಿಯರಿಂಗ್‌ ಪದವೀಧರರಿಗೆ 38 ಹುದ್ದೆಗಳಿವೆ. ಮೆಕ್ಯಾನಿಕಲ್‌, ಪ್ರೊಡಕ್ಷನ್‌, ಆಟೋಮೊಬೈಲ್‌, ಇಂಡಸ್ಟ್ರಿಯಲ್‌, ವರ್ಕ್‌ಶಾಪ್‌ ಟೆಕ್ನಾಲಜಿ, ಏರೋನಾಟಿಕಲ್‌ ಏರೋಸ್ಪೇಸ್‌ ಎಂಜಿನಿಯರಿಂಗ್‌ ಪದವೀಧರರು ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿದವರು ಅರ್ಜಿ ಸಲ್ಲಿಸಬಹುದಾಗಿದೆ.
Misc Engg Streams ಎಂಜಿನಿಯರಿಂಗ್‌ ಪದವೀಧರರಿಗೆ 9 ಹುದ್ದೆಗಳಿವೆ. ಪ್ಲಾಸ್ಟಿಕ್‌ ಟೆಕ್‌, ರಿಮೋಟ್‌ ಸೆನ್ಸಿಂಗ್‌, ಬ್ಲಾಸ್ಟಿಕ್ಸ್‌, ಬಯೋ ಮೆಡಿಕಲ್‌ ಎಂಜಿನಿಯರಿಂಗ್‌, ಫುಡ್‌ ಟೆಕ್‌, ಅಗ್ರಿಕಲ್ಚರ್‌, ಲೇಸರ್‌ ಟೆಕ್‌, ಬಯೋಟೆಕ್‌, ಕೆಮಿಕಲ್‌ ಎಂಜಿನಿಯರಿಂಗ್, ನ್ಯೂಕ್ಲಿಯರ್‌ ಟೆಕ್ನಾಲಜಿ ಎಂಜಿನಿಯರಿಂಗ್‌ ಪದವೀಧರರು ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರುವವರು ಅರ್ಜಿ ಸಲ್ಲಿಸಬಹುದಾಗಿದೆ.

ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್‌ (Click Here) ಮಾಡಿ.

ವಯೋಮಿತಿ ಎಷ್ಟು?

20 ರಿಂದ 27ವರ್ಷದೊಳಗಿನ ಎಂಜಿನಿಯರಿಂಗ್‌ ಪದವೀಧರರು ಅರ್ಜಿ ಸಲ್ಲಿಸಬಹುದಾಗಿದೆ. (ಏಪ್ರಿಲ್‌ 02, 1997ರಿಂದ ಏಪ್ರಿಲ್‌ 01, 2004 ರೊಳಗೆ ಜನಿಸಿರಬೇಕು). ವಿಧವೆಯರಿಗೆ ಗರಿಷ್ಠ ವಯೋಮಿತಿ 35 ವರ್ಷ. ವಯೋಮಿತಿಯನ್ನು ಏಪ್ರಿಲ್‌1, 2024 ಕ್ಕೆ ಲೆಕ್ಕಹಾಕಲಾಗುತ್ತದೆ.

ನೇಮಕ ಹೇಗೆ?

ಎಂಜಿನಿಯರಿಂಗ್‌ ಪದವಿಯಲ್ಲಿ ಅಭ್ಯರ್ಥಿಗಳು ಪಡೆದ ಅಂಕಗಳ ಆಧಾರದಲ್ಲಿ ಅರ್ಹ ಅಭ್ಯರ್ಥಿಗಳನ್ನು ನೇಮಕ ಪ್ರಕ್ರಿಯೆಗೆ ಆಹ್ವಾನಿಸಲಾಗುತ್ತದೆ. ಸಂದರ್ಶನ ಸೇರಿದಂತೆ ಎರಡು ಹಂತದ ನೇಮಕ ಪ್ರಕ್ರಿಯೆ ನಡೆಯಲಿದ್ದು, ಬೆಂಗಳೂರಿನಲ್ಲಿಯೇ ನೇಮಕ ಪ್ರಕ್ರಿಯೆ ನಡೆಸಲಾಗುತ್ತದೆ. ಇದರಲ್ಲಿ ಅರ್ಹತೆ ಪಡೆದವರನ್ನು ವೈದ್ಯಕೀಯ ಪರೀಕ್ಷೆ ನಡೆಸಿ ಕೋರ್ಸ್‌ಗೆ ಆಯ್ಕೆ ಮಾಡಲಾಗುತ್ತದೆ. ಕೋರ್ಸ್‌ನ ಅವಧಿಯು 49 ವಾರಗಳಾಗಿವೆ. ಈ ಕೋರ್ಸ್‌ಗಳು 2024 ರ ಏಪ್ರಿಲ್‌ ತಿಂಗಳಲ್ಲಿ ಆರಂಭವಾಗಲಿವೆ.

ಸಂಪೂರ್ಣ ಮಾಹಿತಿಗೆ ಅಧಿಸೂಚನೆ ನೋಡಲು ಇಲ್ಲಿ ಕ್ಲಿಕ್‌ (Click Here) ಮಾಡಿ.

ವೇತನ ಎಷ್ಟಿರುತ್ತದೆ?

ಮತ್ತು ಇತರ ಭತ್ಯೆಗಳು.

ಇದನ್ನೂ ಓದಿ : PDO Recruitment 2023 : ಪಿಡಿಒ ನೇಮಕಕ್ಕೆ ಮುಂದಾದ ಸರ್ಕಾರ; ಅರ್ಜಿ ಸಲ್ಲಿಸಲು ಈಗಲೇ ರೆಡಿಯಾಗಿ!

Exit mobile version