ನವ ದೆಹಲಿ: ದೇಶದ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಒಂದಾದ ಇಂಡಿಯನ್ ಬ್ಯಾಂಕ್ ಸ್ಪೆಷಲಿಸ್ಟ್ ಕೇಡರ್‌ನ 203 ಹುದ್ದೆಗಳ ನೇಮಕಕ್ಕೆ (Indian Bank Recruitment 2023) ಅರ್ಜಿ ಆಹ್ವಾನಿಸಿದೆ. ಆನ್‌ಲೈನ್‌ನಲ್ಲಿ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಅರ್ಜಿ ಸಲ್ಲಿಸಲು ಫೆ.28 ಕೊನೆಯ ದಿನವಾಗಿರುತ್ತದೆ.
ಐಟಿ/ಕಂಪ್ಯೂಟರ್ ಆಫೀಸರ್-23, ಇನ್‌ಫಾರ್ಮೆಷನ್ ಸೆಕ್ಯೂರಿಟಿ-7, ಮಾರ್ಕೆಟಿಂಗ್ ಆಫೀಸರ್-13, ಟ್ರೆಸರ್ ಆಫೀಸರ್-20, ಫೊರೆಕ್ಸ್ ಆಫೀಸರ್-10, ಇಂಡಸ್ಟ್ರಿ ಡೆವಲಪ್‌ಮೆಂಟ್ ಆಫೀಸರ್-50, ಎಚ್‌ಆರ್ ಆಫೀಸರ್-5 ಹೀಗೆ ಒಟ್ಟು 203 ಹುದ್ದೆಗಳಿಗೆ ನೇಮಕ ನಡೆಯಲಿದೆ.
ಕೆಲವು ಹುದ್ದೆಗಳಿಗೆ ಲಿಖಿತ ಪರೀಕ್ಷೆ ಮತ್ತು ಸಂದರ್ಶನ ನಡೆಸಿ ನೇಮಕ ಮಾಡಿಕೊಂಡರೆ, ಮತ್ತೆ ಕೆಲವು ಹುದ್ದೆಗಳಿಗೆ ಕೇವಲ ಸಂದರ್ಶನ ನಡೆಸಿ ನೇಮಕ ಮಾಡಿಕೊಳ್ಳಲಾಗುತ್ತದೆ. ಲಿಖಿತ ಪರೀಕ್ಷೆಯು ರಾಜ್ಯದಲ್ಲಿ ಬೆಂಗಳೂರು ಮತ್ತು ಹುಬ್ಬಳ್ಳಿಯಲ್ಲಿ ಮಾತ್ರ ನಡೆಯಲಿದೆ. ಲಿಖಿತ ಪರೀಕ್ಷೆಗೆ ಮತ್ತು ಸಂದರ್ಶನಕ್ಕೆ ತಲಾ 100 ಅಂಕ ನಿಗದಿಯಾಗಿರುತ್ತದೆ.
ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ (Click Here) ಮಾಡಿ
ಎಲ್ಲ ಹುದ್ದೆಗಳಿಗೂ ವಿದ್ಯಾರ್ಹತೆಯ ಜತೆಗೆ ಅನುಭವ ಇದ್ದವರು ಮಾತ್ರ ಅರ್ಜಿ ಸಲ್ಲಿಸಬಹುದಾಗಿದೆ. ೩/೫/೭ ವರ್ಷಗಳ ಅನುಭವ ಹೊಂದಿದವರಿಗೆ ಮಾತ್ರ ಅವಕಾಶವಿದೆ. ವಯೋಮಿತಿಯೂ ಹುದ್ದೆಯಿಂದ ಹುದ್ದೆಗೆ ಬೇರೆ ಬೇರೆಯಾಗಿದ್ದು, ಅಭ್ಯರ್ಥಿಗಳು ವಿದ್ಯಾರ್ಹತೆ, ಅನುಭವ ಮತ್ತು ವಯೋಮಿತಿಯ ಮಾಹಿತಿಯನ್ನು ಅಧಿಸೂಚನೆಯಲ್ಲಿ ನೋಡಿಕೊಂಡೇ ಅರ್ಜಿ ಸಲ್ಲಿಸುವಂತೆ ಸೂಚಿಸಲಾಗಿದೆ.
ಹೆಚ್ಚಿನ ಮಾಹಿತಿ ಪಡೆಯಲು ಅಧಿಸೂಚನೆಗಾಗಿ ಇಲ್ಲಿ (Click Here) ಕ್ಲಿಕ್ ಮಾಡಿ.
ಉದ್ಯೋಗಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ (Click Here)ಕ್ಲಿಕ್ ಮಾಡಿ.
ಇದನ್ನೂ ಓದಿ : IDBI Recruitment 2023 : ಐಡಿಬಿಐ ಬ್ಯಾಂಕ್‌ನಲ್ಲಿ 600 ಅಸಿಸ್ಟೆಂಟ್ ಮ್ಯಾನೇಜರ್ ಹುದ್ದೆ; ಪದವೀಧರರಿಂದ ಅರ್ಜಿ ಆಹ್ವಾನ