Site icon Vistara News

Job Alert: ಎಐಇಎಸ್‌ಎಲ್‌ನ ಸೂಪರ್‌ವೈಸರ್‌ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ

job alert

job alert

ಬೆಂಗಳೂರು: ಎಐ ಇಂಜಿನಿಯರಿಂಗ್ ಸರ್ವೀಸಸ್‌ ಲಿಮಿಟೆಡ್‌ (AIESL) ತನ್ನಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಪದವೀಧರರಿಂದ ಅರ್ಜಿ ಆಹ್ವಾನಿಸಿದೆ (AIESL Assistant Supervisor Recruitment 2024). ಸುಮಾರು 209 ಸಹಾಯಕ ಮೇಲ್ವಿಚಾರಕ (ಅಸಿಸ್ಟಂಟ್ ಸೂಪರ್‌ವೈಸರ್) ಹುದ್ದೆಗಳು ಖಾಲಿ ಇದ್ದು, ಇದನ್ನು ಗುತ್ತಿಗೆ ಆಧಾರದಲ್ಲಿ 5 ವರ್ಷಗಳ ಅವಧಿಗೆ ಭರ್ತಿ ಮಾಡಲಾಗುವುದು. ಪದವೀಧರ / ಎಂಜಿನಿಯರಿಂಗ್‌ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 2024ರ ಜನವರಿ 15 (Job Alert).

ಹುದ್ದೆಗಳ ವಿವರ ಮತ್ತು ವಿದ್ಯಾರ್ಹತೆ

ನವದೆಹಲಿ: 87, ಮುಂಬೈ: 70, ಕೋಲ್ಕತ್ತಾ: 12, ಹೈದರಾಬಾದ್‌: 10, ನಾಗ್‌ಪುರ: 10 ಮತ್ತು ತಿರುವನಂತಪುರಂನಲ್ಲಿ 20 ಹುದ್ದೆಗಳಿವೆ. ಈ ಹುದ್ದೆಗಳಿಗೆ ಬಿಎಸ್ಸಿ / ಬಿ.ಕಾಂ / ಬಿಎ / ಬಿಸಿಎ/ ಐಟಿ, ಸಿಎಸ್‌ ಅಥವಾ ಇತರ ಯಾವುದೇ ಬ್ರ್ಯಾಂಚ್‌ನಲ್ಲಿ ಇಂಜಿನಿಯರಿಂಗ್ / ಪದವಿ ಪಾಸಾದವರು ಅರ್ಜಿ ಸಲ್ಲಿಸಬಹುದು. ಹೆಚ್ಚುವರಿಯಾಗಿ ಮಾನ್ಯತೆ ಪಡೆದ ಸಂಸ್ಥೆಯಿಂದ ಕಂಪ್ಯೂಟರ್‌ ಸರ್ಟಿಫಿಕೇಟ್ ಕೋರ್ಸ್ ಪೂರ್ಣಗೊಳಿಸಿರಬೇಕು. ಜತೆಗೆ ಡೇಟಾ ಎಂಟ್ರಿ / ಕಂಪ್ಯೂಟರ್ ಅಪ್ಲಿಕೇಶನ್‌ನಲ್ಲಿ ಕನಿಷ್ಠ ಒಂದು ವರ್ಷದ ಕೆಲಸದ ಅನುಭವವನ್ನು ಹೊಂದಿರುವುದು ಕಡ್ಡಾಯ ಎಂದು ಪ್ರಕಟಣೆ ತಿಳಿಸಿದೆ.

ವಯೋಮಿತಿ

ಅರ್ಜಿ ಸಲ್ಲಿಸುವ ಸಾಮಾನ್ಯ ವರ್ಗದ ಅಭ್ಯರ್ಥಿಗಳ ವಯಸ್ಸು 35 ವರ್ಷ ಮೀರಬಾರದು. ಇನ್ನು ಮೀಸಲಾತಿಗೆ ಅನುಗುಣವಾಗಿ ವಯೋಮಿತಿಯಲ್ಲಿ ಸಡಿಲಿಕೆ ಲಭ್ಯ. ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ ಮತ್ತು ಎಸ್‌ಸಿ / ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷಗಳ ವಯೋಮಿತಿ ಸಡಿಲಿಕೆ ಅನ್ವಯವಾಗುತ್ತದೆ.

ಆಯ್ಕೆ ವಿಧಾನ ಮತ್ತು ಅರ್ಜಿ ಶುಲ್ಕ

ಅರ್ಹ ಅಭ್ಯರ್ಥಿಗಳ ಪಟ್ಟಿಯನ್ನು ಲಿಖಿತ ಪರೀಕ್ಷೆ / ಕೌಶಲ್ಯ ಪರೀಕ್ಷೆಯ ದಿನಾಂಕದೊಂದಿಗೆ ಎಐಇಎಸ್ಎಲ್ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುವುದು. ಬಳಿಕ ಅಭ್ಯರ್ಥಿಗಳು ಲಿಖಿತ ಪರೀಕ್ಷೆಗೆ ಹಾಜರಾಗಬೇಕು. ಅದಾದ ಬಳಿಕ ಎಂಎಸ್-ವರ್ಡ್, ಎಂಎಸ್-ಎಕ್ಸೆಲ್ ಮತ್ತು ಎಂಎಸ್-ಪವರ್ ಪಾಯಿಂಟ್ ಇತ್ಯಾದಿಗಳಲ್ಲಿ ಸ್ಕಿಲ್ಡ್ ಟೆಸ್ಟ್ ನಡೆಯಲಿದೆ. ಜನರಲ್, ಇಡಬ್ಲ್ಯುಎಸ್‌, ಒಬಿಸಿ ಅಭ್ಯರ್ಥಿಗಳು 1,000 ರೂ. ಅರ್ಜಿ ಶುಲ್ಕ ಪಾವತಿಸಬೇಕು. ಇತರ ವರ್ಗದವರಿಗೆ ಶುಲ್ಕದಿಂದ ವಿನಾಯಿತಿ ನೀಡಲಾಗಿದೆ. ಅರ್ಜಿ ಶುಲ್ಕವನ್ನು ಆನ್‌ಲೈನ್‌ ಮೂಲಕ ಪಾವತಿಸುವುದು ಕಡ್ಡಾಯ.

ಎಐ ಇಂಜಿನಿಯರಿಂಗ್ ಸರ್ವೀಸಸ್‌ ಲಿಮಿಟೆಡ್‌ನ ಅಧಿಸೂಚನೆಗಾಗಿ ಇಲ್ಲಿ ಕ್ಲಿಕ್‌ ಮಾಡಿ.

ಅರ್ಜಿ ಸಲ್ಲಿಸುವ ವಿಧಾನ

ಹೆಚ್ಚಿನ ವಿವರಗಳಿಗೆ ಅಧಿಕೃತ ವೆಬ್‌ಸೈಟ್‌ https://www.aiesl.in/ಗೆ ಭೇಟಿ ನೀಡಿ.

ಇದನ್ನೂ ಓದಿ: Job alert: ರಕ್ಷಣಾ ಇಲಾಖೆಯಲ್ಲಿ 400 ಹುದ್ದೆಗಳಿವೆ; ಪಿಯುಸಿ ಪಾಸಾದವರು ಅರ್ಜಿ ಸಲ್ಲಿಸಿ

Exit mobile version