ಬೆಂಗಳೂರು: ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಆಯುರ್ವೇದದಲ್ಲಿ (All India Institute of Ayurveda-AIIA) ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ (AIIA Recruitment 2024). ಸ್ಟಾಫ್ ನರ್ಸ್, ಫಾರ್ಮಾಸಿಸ್ಟ್, ಸ್ಟಾಫ್ ಸರ್ಜನ್, ಜೂನಿಯರ್ ಸ್ಟಾಫ್ ಸರ್ಜನ್, ಮೆಡಿಕಲ್ ಆಫೀಸರ್, ಲ್ಯಾಬ್ ಅಟೆಂಡಂಟ್ ಸೇರಿ ಒಟ್ಟು 140 ಹುದ್ದೆಗಳಿದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನ ಜನವರಿ 31 (Job Alert).
ಹುದ್ದೆಗಳ ವಿವರ
ಮೆಡಿಕಲ್ ಸೂಪರಿಂಟೆಂಡಂಟ್: 1, ಸೈಂಟಿಸ್ಟ್ ಡಿ: 2, ಸೈಂಟಿಸ್ಟ್ ಸಿ: 3, ಸ್ಟಾಫ್ ಸರ್ಜನ್: 1, ಜೂನಿಯರ್ ಸ್ಟಾಫ್ ಸರ್ಜನ್ (ಡೆಂಟಲ್): 1, ಮೆಡಿಕಲ್ ಆಫೀಸರ್: 4, ಸ್ಟಾಫ್ ನರ್ಸ್: 40, ಸಿಎಸ್‌ಎಸ್‌ಡಿ ಅಸಿಸ್ಟಂಟ್: 1, ಸ್ಯಾನಿಟರಿ ಇನ್ಸ್‌ಪೆಕ್ಟರ್: 1, ಸೀನಿಯರ್ ಯೋಗ ಇನ್‌ಸ್ಟ್ರಕ್ಟರ್: 1, ಜೂನಿಯರ್ ಮೆಡಿಕಲ್ ರೆಕಾರ್ಡ್ ಆಫೀಸರ್: 1, ಸೀನಿಯರ್ ಫಾರ್ಮಾಸಿಸ್ಟ್: 1, ಸಿಎಸ್‌ಎಸ್‌ಡಿ ಸೂಪರ್‌ವೈಸರ್: 1, ಮೆಡಿಕಲ್ ಲ್ಯಾಬ್ ಟೆಕ್ನಾಲಜಿಸ್ಟ್: 9, ರಿಸರ್ಚ್ ಅಸಿಸ್ಟಂಟ್: 5, ಜೂನಿಯರ್ ಫಿಸಿಯೋಥೆರಪಿಸ್ಟ್: 3, ಆಡಿಯೋ ಮೆಟ್ರಿಸ್ಟ್: 1, ಆಪ್ಟೊಮೆಟ್ರಿಸ್ಟ್: 1, ಎಂಆರ್‌ಐ ಟೆಕ್ನೀಷಿಯನ್: 1 ಹುದ್ದೆಗಳಿವೆ. ಹುದ್ದೆಗಳಿಗೆ ಅನುಗುಣವಾಗಿ ದ್ವಿತೀಯ ಪಿಯುಸಿ, ಡಿಪ್ಲೋಮಾ, ಪದವಿ, ಸ್ನಾತಕೋತ್ತರ ಪದವಿ ತೇರ್ಗಡೆಯಾದವರು ಅರ್ಜಿ ಸಲ್ಲಿಸಬಹುದು.
ವೇತನ ಶ್ರೇಣಿ ಮತ್ತು ಆಯ್ಕೆ ವಿಧಾನ
ಹುದ್ದೆಗಳಿಗೆ ಅನುಗುಣವಾಗಿ 19,900 ರೂ.-2,15,900 ರೂ. ಮಾಸಿಕ ವೇತನ ಲಭ್ಯ. ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.
ಅರ್ಜಿ ಶುಲ್ಕ
ಗ್ರೂಪ್ ಎ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಸಾಮಾನ್ಯ / ಇತರ ಹಿಂದುಳಿದ ವರ್ಗದ ಅಭ್ಯರ್ಥಿಗಳು 1,000 ರೂ., ಎಸ್‌ಸಿ / ಎಸ್‌ಟಿ ವರ್ಗದ ಅಭ್ಯರ್ಥಿಗಳು 500 ರೂ. ಪಾವತಿಸಬೇಕು. ಗ್ರೂಪ್ ಬಿ ಮತ್ತು ಸಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಸಾಮಾನ್ಯ / ಇತರ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ 500 ರೂ., ಎಸ್‌ಸಿ / ಎಸ್‌ಟಿ ವರ್ಗದ ಅಭ್ಯರ್ಥಿಗಳಿಗೆ 250 ರೂ.
AIIA Recruitment 2024 ಅಧಿಸೂಚನೆಗಾಗಿ ಇಲ್ಲಿ ಕ್ಲಿಕ್ ಮಾಡಿ.
ಅರ್ಜಿ ಸಲ್ಲಿಸುವ ವಿಧಾನ
- ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ
- ಹೆಸರು ನೋಂದಾಯಿಸಿ, ಲಾಗಿನ್ ಆಗಿ.
- Careers ಅಥವಾ Recruitment ಆಯ್ಲೆ ಮೇಲೆ ಕ್ಲಿಕ್ ಮಾಡಿ.
- AIIA Jobs ಆಯ್ಕೆಯನ್ನು ಸೆಲೆಕ್ಟ್ ಮಾಡಿ.
- Apply link ಮೇಲೆ ಕ್ಲಿಕ್ ಮಾಡಿ.
- ಸರಿಯಾದ ಮಾಹಿತಿ ನೀಡಿ ಅರ್ಜಿಯನ್ನು ಭರ್ತಿ ಮಾಡಿ.
- ಅರ್ಜಿ ಶುಲ್ಕವನ್ನು ಪಾವತಿಸಿ.
- ಮತ್ತೊಮ್ಮೆ ಅರ್ಜಿಯ ಮಾಹಿತಿಯನ್ನು ಪರಿಶೀಲಿಸಿ Submit ಬಟನ್ ಕ್ಲಿಕ್ ಮಾಡಿ.
- ಭವಿಷ್ಯದ ಅಗತ್ಯಗಳಿಗಾಗಿ ಅಪ್ಲಿಕೇಷನ್ ನಂಬರ್ ತೆಗೆದಿಡಿ.
ಹೆಚ್ಚಿನ ವಿವರಗಳಿಗೆ ಅಧಿಕೃತ ವೆಬ್‌ಸೈಟ್ https://aiia.gov.in/ಗೆ ಭೇಟಿ ನೀಡಿ.
ಇದನ್ನೂ ಓದಿ: Job Alert: ಆಯಿಲ್ ಇಂಡಿಯಾ ಕಂಪನಿಯಲ್ಲಿ 421 ಹುದ್ದೆ ಭರ್ತಿ, 10ನೇ ತರಗತಿ ಪಾಸಾದವರು ಅರ್ಜಿ ಸಲ್ಲಿಸಿ