ಬೆಂಗಳೂರು: ಉದ್ಯೋಗದ ಹುಡುಕಾಟದಲ್ಲಿದ್ದೀರಾ? ಹಾಗಾದರೆ ಇಲ್ಲಿದೆ ಗುಡ್ ನ್ಯೂಸ್. ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (Hindustan Aeronautics Limited)ನಲ್ಲಿ ಖಾಲಿ ಇರುವ 160 ಹುದ್ದೆಗಳ ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ (HAL Recruitment 2024). ಡಿಪ್ಲೋಮಾ ಟೆಕ್ನಿಶಿಯನ್ ಮತ್ತು ಏರ್ಕ್ರಾಫ್ಟ್ ಟೆಕ್ನಿಶಿಯನ್ ಹುದ್ದೆ ಇದಾಗಿದ್ದು, ಡಿಪ್ಲೋಮಾ ಪದವಿ ಪಡೆದವರು ಅರ್ಜಿ ಸಲ್ಲಿಸಲು ಅರ್ಹರು. ಗುತ್ತಿಗೆ ಆಧಾರದಲ್ಲಿ ಈ ನೇಮಕಾತಿ ನಡೆಯಲಿದೆ. ಆಸಕ್ತರು ಮಾರ್ಚ್ 16ರೊಳಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು ಎಂದು ಪ್ರಕಟಣೆ ತಿಳಿಸಿದೆ (Job Alert).
ಹುದ್ದೆಗಳ ವಿವರ ಮತ್ತು ವಿದ್ಯಾರ್ಹತೆ
ಡಿಪ್ಲೋಮಾ ಟೆಕ್ನಿಶಿಯನ್- 137 ಮತ್ತು ಏರ್ಕ್ರಾಫ್ಟ್ ಟೆಕ್ನಿಶಿಯನ್- 23 ಹುದ್ದೆಗಳಿವೆ. ಡಿಪ್ಲೋಮಾ ಟೆಕ್ನಿಶಿಯನ್ ಹುದ್ದೆಗೆ ಅರ್ಜಿ ಸಲ್ಲಿಸುವವರು ಇಸಿಇ / ಇಇಇ / ಮೆಕ್ಯಾನಿಕಲ್ ಡಿಪ್ಲೋಮಾ (Diploma in ECE/EEE/Mechanical) ಓದಿರಬೇಕು. ಏರ್ಕ್ರಾಫ್ಟ್ ಟೆಕ್ನಿಶಿಯನ್ ಹುದ್ದೆಗೆ ಅರ್ಜಿ ಸಲ್ಲಿಸಲು ಎಲೆಕ್ಟ್ರಿಕಲ್ / ಮೆಕ್ಯಾನಿಕಲ್ ಡಿಪ್ಲೋಮಾ (Diploma in Electrical/Mechanical) ವಿದ್ಯಾರ್ಹತೆ ಪಡೆದಿರಬೇಕು.
ವಯೋಮಿತಿ
ಅರ್ಜಿ ಸಲ್ಲಿಸುವವರ ವಯಸ್ಸು 28 ವರ್ಷ ಮೀರಬಾರದು. ಮೀಸಲಾತಿಗೆ ಅನುಗುಣವಾಗಿ ವಯೋಮಿತಿಯಲ್ಲಿ ಸಡಿಲಿಕೆ ಲಭ್ಯ. ಒಬಿಸಿ-ಎನ್ಸಿಎಸ್ ಅಭ್ಯರ್ಥಿಗಳಿಗೆ 3 ವರ್ಷ, ಎಸ್ಸಿ / ಎಸ್ಟಿ ಅಭ್ಯರ್ಥಿಗಳಿಗೆ 5 ವರ್ಷ, ಪಿಡಬ್ಲ್ಯುಬಿಡಿ (ಸಾಮಾನ್ಯ ವರ್ಗ) ಅಭ್ಯರ್ಥಿಗಳಿಗೆ 10 ವರ್ಷ, ಪಿಡಬ್ಲ್ಯುಬಿಡಿ (ಒಬಿಸಿ) ಅಭ್ಯರ್ಥಿಗಳಿಗೆ 13 ವರ್ಷ ಮತ್ತು ಪಿಡಬ್ಲ್ಯುಬಿಡಿ (ಎಸ್ಸಿ / ಎಸ್ಟಿ) ಅಭ್ಯರ್ಥಿಗಳಿಗೆ 15 ವರ್ಷಗಳ ರಿಯಾಯಿತಿ ಇದೆ.
ಆಯ್ಕೆ ವಿಧಾನ
ಲಿಖಿತ ಪರೀಕ್ಷೆ, ಡಾಕ್ಯುಮೆಂಟ್ ಪರಿಶೀಲನೆ, ವೈದ್ಯಕೀಯ ಪರೀಕ್ಷೆ, ಅಭ್ಯರ್ಥಿಯ ಹಿನ್ನಲೆಯ ಪರಿಶೀಲನೆ ಮೂಲಕ ಆಯ್ಕೆ ನಡೆಯಲಿದೆ. ಲಿಖಿತ ಪರೀಕ್ಷೆ ಮಾರ್ಚ್ 24ರಂದು ನಡೆಯುವ ಸಾಧ್ಯತೆ ಇದೆ ಎಂದು ಪ್ರಕಟಣೆ ತಿಳಿಸಿದೆ.
ಮಾಸಿಕ ವೇತನ ಮತ್ತು ಅರ್ಜಿ ಶುಲ್ಕ
ಆಯ್ಕೆಯಾಗುವ ಅಭ್ಯರ್ಥಿಗಳಿಗೆ 23,000 ರೂ. – 57,000 ರೂ. ಮಾಸಿಕ ವೇತನವಿದೆ. ಅಭ್ಯರ್ಥಿಗಳನ್ನು ನಾಲ್ಕು ವರ್ಷಗಳ ಅವಧಿಗೆ ನೇಮಿಸಿಕೊಳ್ಳಲಾಗುತ್ತದೆ. ಯಾವ ಅಭ್ಯರ್ಥಿಗಳಿಗೂ ಅರ್ಜಿ ಶುಲ್ಕವಿಲ್ಲ.
ಡಿಪ್ಲೋಮಾ ಟೆಕ್ನಿಶಿಯನ್ ಹುದ್ದೆಯ ಅಧಿಸೂಚನೆಗಾಗಿ ಇಲ್ಲಿ ಕ್ಲಿಕ್ ಮಾಡಿ.
ಏರ್ಕ್ರಾಫ್ಟ್ ಟೆಕ್ನಿಶಿಯನ್ ಹುದ್ದೆಯ ಅಧಿಸೂಚನೆಗಾಗಿ ಇಲ್ಲಿ ಕ್ಲಿಕ್ ಮಾಡಿ.
ಅರ್ಜಿ ಸಲ್ಲಿಸುವ ವಿಧಾನ
- ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ.
- ಅರ್ಜಿ ಸಲ್ಲಿಸುವ ಮುನ್ನ ಇಮೇಲ್ ಐಡಿ, ಮೊಬೈಲ್ ನಂಬರ್ ನೀಡಿ ಹೆಸರು ನೋಂದಾಯಿಸಿ.
- Apply Online ಆಯ್ಕೆ ಮೇಲೆ ಕ್ಲಿಕ್ ಮಾಡಿ ರಿಜಿಸ್ಟ್ರೇಷನ್ ನಂಬರ್, ಪಾಸ್ವರ್ಡ್ ಬಳಸಿ ಲಾಗಿನ್ ಆಗಿ.
- ವೈಯಕ್ತಿಕ, ಶೈಕ್ಷಣಿಕ ಮಾಹಿತಿ ನೀಡಿ ಅಪ್ಲಿಕೇಷನ್ ಫಾರಂ ಭರ್ತಿ ಮಾಡಿ.
- ಅಗತ್ಯ ಡಾಕ್ಯುಮೆಂಟ್, ಫೋಟೊ, ಸಹಿಗಳನ್ನು ಸೂಚಿಸಿದ ಅಳತೆಯಲ್ಲಿ ಅಪ್ಲೋಡ್ ಮಾಡಿ.
- ಭರ್ತಿ ಮಾಡಿದ ವಿವರಗಳನ್ನು ಮತ್ತೊಮ್ಮೆ ಪರಿಶೀಲಿಸಿ Submit ಬಟನ್ ಕ್ಲಿಕ್ ಮಾಡಿ.
- ಭವಿಷ್ಯದ ಅಗತ್ಯಗಳಿಗಾಗಿ ಅಪ್ಲಿಕೇಷನ್ ಫಾರಂನ ಪ್ರಿಂಟ್ ಔಟ್ ತೆಗೆದಿಡಿ.
ಇದನ್ನೂ ಓದಿ: Job Alert: ನೌಕರರ ರಾಜ್ಯ ವಿಮಾ ನಿಗಮದಲ್ಲಿದೆ ಬರೋಬ್ಬರಿ 1,930 ಹುದ್ದೆ; ಆನ್ಲೈನ್ ಮೂಲಕ ಇಂದೇ ಅರ್ಜಿ ಸಲ್ಲಿಸಿ