Site icon Vistara News

Job Alert: ಐಡಿಬಿಐ ಬ್ಯಾಂಕ್‌ನಲ್ಲಿದೆ 2,100 ಉದ್ಯೋಗಾವಕಾಶ; ಇಂದಿನಿಂದಲೇ ಅರ್ಜಿ ಸಲ್ಲಿಸಿ

idbi bank

idbi bank

ಬೆಂಗಳೂರು: ದೇಶದ ಪ್ರಮುಖ ಬ್ಯಾಂಕ್‌ಗಳ ಪೈಕಿ ಒಂದಾದ ಐಡಿಬಿಐ ಸುಮಾರು 2,100 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ (IDBI Bank recruitment 2023). ಜ್ಯೂನಿಯರ್‌ ಅಸಿಸ್ಟೆಂಟ್‌ ಮ್ಯಾನೇಜರ್‌ ಗ್ರೇಡ್‌ ‘O’ (Junior Assistant Manager-JAM) ಮತ್ತು ಎಕ್ಸಿಕ್ಯುಟೀವ್‌ ಸೇಲ್ಸ್‌ & ಆಪರೇಷನ್ಸ್‌ (Executive Sales and Operations-ESO) ಹುದ್ದೆಗಳನ್ನು ಭರ್ತಿ ಮಾಡಲಾಗುವುದು. ಪದವಿ ಹೊಂದಿದ ಆಸಕ್ತರು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಕೆ ನವೆಂಬರ್‌ 22ರಂದು ಆರಂಭವಾಗಿದ್ದು, ಕೊನೆಯ ದಿನ ಡಿಸೆಂಬರ್‌ 6 ಎಂದು ಪ್ರಕಟಣೆ ತಿಳಿಸಿದೆ (Job Alert).

ಹುದ್ದೆಗಳ ವಿವರ

ಜ್ಯೂನಿಯರ್‌ ಅಸಿಸ್ಟೆಂಟ್‌ ಮ್ಯಾನೇಜರ್‌ ಗ್ರೇಡ್‌ ‘O’-800 ಹುದ್ದೆಗಳು (ಜನರಲ್‌-324, ಒಬಿಸಿ-216, ಎಸ್‌ಸಿ-120, ಎಸ್‌ಟಿ-60, ಇಡಬ್ಲ್ಯುಎಸ್‌-80) ಮತ್ತು ಎಕ್ಸಿಕ್ಯುಟೀವ್‌ ಸೇಲ್ಸ್‌ & ಆಪರೇಷನ್ಸ್‌-1,300 ಹುದ್ದೆ (ಜನರಲ್‌-558, ಒಬಿಸಿ-326, ಎಸ್‌ಸಿ-200, ಎಸ್‌ಟಿ-86, ಇಡಬ್ಲ್ಯುಎಸ್‌-130)ಗಳಿವೆ.

ವಿದ್ಯಾರ್ಹತೆ

ಜ್ಯೂನಿಯರ್‌ ಅಸಿಸ್ಟೆಂಟ್‌ ಮ್ಯಾನೇಜರ್‌ ಗ್ರೇಡ್‌ ‘Oʼ: ಸಾಮಾನ್ಯ ಮತ್ತು ಒಬಿಸಿ ಅಭ್ಯರ್ಥಿಗಳು ಕನಿಷ್ಠ 60% (ಎಸ್‌ಸಿ / ಎಸ್‌ಟಿ / ಪಿಡಬ್ಲ್ಯುಡಿ ಅಭ್ಯರ್ಥಿಗಳು 55%)ದೊಂದಿಗೆ ಮಾನ್ಯತೆ ಪಡೆದ / ಅನುಮೋದಿಸಿದ ವಿಶ್ವವಿದ್ಯಾಲಯದಿಂದ ಪದವಿ ಪಡೆದಿರಬೇಕು.

ಎಕ್ಸಿಕ್ಯುಟೀವ್‌ ಸೇಲ್ಸ್‌ & ಆಪರೇಷನ್ಸ್‌: ಎಐಸಿಟಿಇ, ಯುಜಿಸಿ ಇತ್ಯಾದಿ ಸಂಸ್ಥೆಗಳಿಂದ ಮಾನ್ಯತೆ ಪಡೆದ / ಅನುಮೋದಿಸಿದ ವಿಶ್ವವಿದ್ಯಾಲಯದಿಂದ ಯಾವುದೇ ವಿಷಯದಲ್ಲಿ ಪದವಿ ಹೊಂದಿರಬೇಕು.

ಅರ್ಜಿ ಶುಲ್ಕ ಮತ್ತು ವಯೋಮಿತಿ

ಎಸ್‌ಸಿ / ಎಸ್‌ಟಿ / ಅಭ್ಯರ್ಥಿಗಳು 200 ರೂ. ಅರ್ಜಿ ಶುಲ್ಕ ಪಾವತಿಸಬೇಕು. ಇತರ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ 1,000 ರೂ. ಆನ್‌ಲೈನ್‌ ಮೂಲಕವೇ ಶುಲ್ಕ ಪಾವತಿಸಬೇಕು. ಇದಕ್ಕಾಗಿ ಇಂಟರ್‌ನೆಟ್‌ ಬ್ಯಾಂಕಿಂಗ್‌, ಡೆಬಿಟ್‌, ಕ್ರೆಡಿಟ್‌ ಕಾರ್ಡ್‌ ಇತ್ಯಾದಿ ಬಳಸಬಹುದು. 20ರಿಂದ 25 ವರ್ಷದೊಳಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

ಆಯ್ಕೆ ವಿಧಾನ ಮತ್ತು ಮಾಸಿಕ ವೇತನ

ಆಯ್ಕೆ ಪ್ರಕ್ರಿಯೆಯು ಆನ್‌ಲೈನ್‌ ಪರೀಕ್ಷೆ, ಡಾಕ್ಯುಮೆಂಟ್ ಪರಿಶೀಲನೆ, ವೈಯಕ್ತಿಕ ಸಂದರ್ಶನ ಮತ್ತು ನೇಮಕಾತಿ ಪೂರ್ವ ವೈದ್ಯಕೀಯ ಪರೀಕ್ಷೆಯನ್ನು ಒಳಗೊಂಡಿರುತ್ತದೆ. ಡಿಸೆಂಬರ್‌ ಕೊನೆಯ ವಾರ ಪರೀಕ್ಷೆ ನಡೆಯಲಿದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಆರಂಭದಲ್ಲಿ 29,000 ರೂ. ಮಾಸಿಕ ವೇತನ ದೊರೆಯಲಿದೆ.

IDBI Bank recruitment 2023 ಅಧಿಸೂಚನೆಗಾಗಿ ಇಲ್ಲಿ ಕ್ಲಿಕ್‌ ಮಾಡಿ

ಅರ್ಜಿ ಸಲ್ಲಿಸುವ ವಿಧಾನ

ಹೆಚ್ಚಿನ ಮಾಹಿತಿಗೆ ಬ್ಯಾಂಕ್‌ನ ಅಧಿಕೃತ ವೆಬ್‌ಸೈಟ್‌ ವಿಳಾಸ www.idbibank.inಗೆ ಭೇಟಿ ನೀಡಿ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ

Exit mobile version