Site icon Vistara News

Job Alert: ದ್ವಿತೀಯ ಪಿಯುಸಿ ಪಾಸಾದವರಿಗೆ ಗೋಲ್ಡನ್‌ ಚಾನ್ಸ್‌; 540 ಫಾರೆಸ್ಟ್‌ ಗಾರ್ಡ್‌ ಹುದ್ದೆಗಳಿಗೆ ಅರ್ಜಿ ಆಹ್ವಾನ

forest guard

forest guard

ಬೆಂಗಳೂರು: ಸರ್ಕಾರಿ ಉದ್ಯೋಗ ಹುಡುಕುತ್ತಿರುವವರಿಗೆ ಉತ್ತಮ ಅವಕಾಶವನ್ನು ಕರ್ನಾಟಕ ಅರಣ್ಯ ಇಲಾಖೆ (Karnataka Forest Department-KFD) ಒದಗಿಸುತ್ತಿದೆ. ಖಾಲಿ ಇರುವ ಸುಮಾರು 540 ಫಾರೆಸ್ಟ್‌ ಗಾರ್ಡ್‌ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ (KFD Recruitment 2023). ಆಸಕ್ತರು ಡಿಸೆಂಬರ್‌ 30ರೊಳಗೆ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕು. 12ನೇ ತರಗತಿ ಅಥವಾ ದ್ವಿತೀಯ ಪಿಯುಸಿ ತೇರ್ಗಡೆಯಾದವರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬಹುದು (Job Alert).

ಹುದ್ದೆಗಳ ವಿವರ

ವಿವಿಧ ವೃತ್ತಗಳು ಮತ್ತು ಅಲ್ಲಿ ಖಾಲಿ ಇರುವ ಹುದ್ದೆಗಳ ಸಂಖ್ಯೆಯ ವಿವರ ಇಲ್ಲಿದೆ. ಬೆಂಗಳೂರು-49, ಬೆಳಗಾವಿ-12, ಬಳ್ಳಾರಿ-29, ಚಾಮರಾಜನಗರ-83, ಚಿಕ್ಕಮಗಳೂರು-52, ಧಾರವಾಡ-5, ಹಾಸನ-18, ಕಲಬುರ್ಗಿ-58, ಕೆನರಾ-33, ಕೊಡಗು-26, ಮಂಗಳೂರು-62, ಮೈಸೂರು-47, ಶಿವಮೊಗ್ಗ-66 ಹುದ್ದೆಗಳಿವೆ.

ವಯೋಮಿತಿ

ಕರ್ನಾಟಕ ಅರಣ್ಯ ಇಲಾಖೆ ನೇಮಕಾತಿ ಅಧಿಸೂಚನೆ ಪ್ರಕಾರ ಅಭ್ಯರ್ಥಿಗಳ ವಯಸ್ಸು ಡಿಸೆಂಬರ್ 30, 2023ಕ್ಕೆ ಕನಿಷ್ಠ 18 ವರ್ಷ ಆಗಿರಬೇಕು ಮತ್ತು ಗರಿಷ್ಠ 35 ವರ್ಷ ಮೀರಿರಬಾರದು. ಮೀಸಲಾತಿಗೆ ಅನುಗುಣವಾಗಿ ಸಡಿಲಿಕೆ ಲಭ್ಯ. 2ಎ, 2ಬಿ, 3ಎ, 3ಬಿ, ಒಬಿಸಿ ಅಭ್ಯರ್ಥಿಗಳಿಗೆ 2 ವರ್ಷ ಮತ್ತು ಎಸ್‌ಸಿ/ಎಸ್‌ಟಿ/ಪ್ರವರ್ಗ-1 ಅಭ್ಯರ್ಥಿಗಳಿಗೆ 3 ವರ್ಷಗಳ ಸಡಿಲಿಕೆ ಇದೆ.

ಅರ್ಜಿ ಶುಲ್ಕ ಮತ್ತು ಮಾಸಿಕ ವೇತನ

ಸಾಮಾನ್ಯ ಅಭ್ಯರ್ಥಿಗಳು 200 ರೂ. ಮತ್ತು ಎಸ್‌ಸಿ/ಎಸ್‌ಟಿ/ಪ್ರವರ್ಗ-1 ಅಭ್ಯರ್ಥಿಗಳು 100 ರೂ. ಅರ್ಜಿ ಶುಲ್ಕ ಪಾವತಿಸಬೇಕು. ಲಿಖಿತ ಪರೀಕ್ಷೆ, ಸಂದರ್ಶನ ಮತ್ತು ಮೆಡಿಕಲ್ ಫಿಟ್​​ನೆಸ್​ ಟೆಸ್ಟ್​ ಮೂಲಕ ಆಯ್ಕೆ ನಡೆಯಲಿದೆ. ಲಿಖಿತ ಪರೀಕ್ಷೆ ಆಪ್ಟಿಟ್ಯೂಡ್‌ ಮಾದರಿಯದ್ದಾಗಿದ್ದು, 100 ಅಂಕಗಳನ್ನು ಹೊಂದಿದೆ. ಗಣಿತದ 40 ಅಂಕದ ಪ್ರಶ್ನೆ ಮತ್ತು ಸಾಮಾನ್ಯ ಜ್ಞಾನದ 60 ಅಂಕಗಳ ಪ್ರಶ್ನೆಗಳನ್ನು ಇದು ಒಳಗೊಂಡಿದೆ. ಪ್ರಶ್ನೆ ಪತ್ರಿಕೆ ಕನ್ನಡ ಮತ್ತು ಇಂಗ್ಲಿಷ್‌ನಲ್ಲಿರುತ್ತದೆ. ತಪ್ಪು ಉತ್ತರಕ್ಕೆ ನೆಗೆಟಿವ್‌ ಅಂಕವಿದ್ದು, ಎಚ್ಚರಿಕೆಯಿಂದ ಉತ್ತರ ಬರೆಯಬೇಕು ಎಂದು ಪ್ರಕಟಣೆ ತಿಳಿಸಿದೆ. ಆಯ್ಕೆಯಾದವರಿಗೆ ಮಾಸಿಕ ವೇತನ 18,600 ರೂ.-32,600 ರೂ. ನೀಡಲಾಗುತ್ತದೆ. ಅಭ್ಯರ್ಥಿಗಳು ಆನ್‌ಲೈನ್‌ ಮೂಲಕವೇ ಅರ್ಜಿ ಶುಲ್ಕ ಪಾವತಿಸಬೇಕು. ಇದನ್ನು ಹೊರತುಪಡಿಸಿ ನೇರವಾಗಿ/ಕೊರಿಯರ್‌/ನೋಂದಾಯಿತ ಅಂಚೆ/ಸಾಧಾರಣ ಅಂಚೆ/ಇಮೇಲ್ ಇತ್ಯಾದಿ ವಿಧಾನಗಳ ಮೂಲಕ ಅರ್ಜಿ ಶುಲ್ಕ ಪಾವತಿಸುವಂತಿಲ್ಲ ಎಂದು ಪ್ರಕಟಣೆ ತಿಳಿಸಿದೆ.

ಅಧಿಕೃತ ಅಧಿಸೂಚನೆಗಾಗಿ ಇಲ್ಲಿ ಕ್ಲಿಕ್‌ ಮಾಡಿ.

ಇದನ್ನೂ ಓಇ: Job Alert: ಉದ್ಯೋಗ ಹುಡುಕುತ್ತಿರುವವರಿಗೆ ಗುಡ್‌ನ್ಯೂಸ್‌; ಸಿಐಎಸ್‌ಎಫ್‌ನಲ್ಲಿದೆ 11,025 ಹುದ್ದೆ

ಅರ್ಜಿ ಸಲ್ಲಿಸುವ ವಿಧಾನ

ಹೆಚ್ಚಿನ ವಿವರಗಳಿಗೆ ಅಧಿಕೃತ ವೆಬ್‌ಸೈಟ್‌ ವಿಳಾಸ https://aranya.gov.inಗೆ ಭೇಟಿ ನೀಡಿ.

Exit mobile version