ಬೆಂಗಳೂರು: ಭಾರತದ ಚಿನ್ನ ಉತ್ಪಾದನೆಯಲ್ಲಿ ಅಗ್ರಸ್ಥಾನದಲ್ಲಿರುವ ಹಟ್ಟಿ ಚಿನ್ನದ ಗಣಿ ಕಂಪೆನಿ (Hutti Gold Mines Company Limited)ಯು ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ (HGML Recruitment 2024). ಅಸಿಸ್ಟಂಟ್ ಫಾರ್‌ಮನ್, ಐಟಿಐ ಫಿಟ್ಟರ್, ಲ್ಯಾಬ್ ಅಸಿಸ್ಟಂಟ್ ಸೇರಿದಂತೆ ಸುಮಾರು 168 ಹುದ್ದೆಗಳಿವೆ. ಐಟಿಐ, ಡಿಪ್ಲೋಮಾ, ಪದವಿ ತೇರ್ಗಡೆಯಾದವರು ಅರ್ಜಿ ಸಲ್ಲಿಸಬಹುದು. ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನ ಮೇ 3 (Job Alert).
ಹುದ್ದೆಗಳ ವಿವರ ಮತ್ತು ವಿದ್ಯಾರ್ಹತೆ
ಅಸಿಸ್ಟೆಂಟ್ ಫಾರ್‌ಮನ್ (ಗಣಿ)- 16 ಹುದ್ದೆ, ವಿದ್ಯಾರ್ಹತೆ: ಡಿಪ್ಲೋಮಾ
ಅಸಿಸ್ಟೆಂಟ್ ಫಾರ್‌ಮನ್ (ಮೆಟಲರ್ಜಿ)- 7 ಹುದ್ದೆ, ವಿದ್ಯಾರ್ಹತೆ: ಡಿಪ್ಲೋಮಾ
ಲ್ಯಾಬ್ ಅಸಿಸ್ಟೆಂಟ್- 1 ಹುದ್ದೆ, ವಿದ್ಯಾರ್ಹತೆ: ಬಿ.ಎಸ್‌ಸಿ
ಅಸಿಸ್ಟೆಂಟ್ ಫಾರ್‌ಮನ್ (ಜಿಯಾಲಜಿ)- 3 ಹುದ್ದೆ, ವಿದ್ಯಾರ್ಹತೆ: ಬಿ.ಎಸ್‌ಸಿ
ಅಸಿಸ್ಟೆಂಟ್ ಫಾರ್‌ಮನ್ (ಡೈಮಂಡ್ ಡ್ರಿಲ್ಲಿಂಗ್ / ಅಂಡರ್ ಗ್ರೌಂಡ್)- 2 ಹುದ್ದೆ, ವಿದ್ಯಾರ್ಹತೆ: ಡಿಪ್ಲೋಮಾ
ಅಸಿಸ್ಟೆಂಟ್ ಫಾರ್‌ಮನ್ (ಮೆಕ್ಯಾನಿಕಲ್)- 19 ಹುದ್ದೆ, ವಿದ್ಯಾರ್ಹತೆ: ಡಿಪ್ಲೋಮಾ
ಐಟಿಐ ಫಿಟ್ಟರ್ (ಗಣಿಗಾರಿಕೆ)- 56 ಹುದ್ದೆ, ವಿದ್ಯಾರ್ಹತೆ: ಐಟಿಐ ಇನ್ ಫಿಟ್ಟರ್
ಐಟಿಐ ಫಿಟ್ಟರ್ (ಮೆಟಲ್)- 26 ಹುದ್ದೆ, ವಿದ್ಯಾರ್ಹತೆ: ಐಟಿಐ ಇನ್ ಫಿಟ್ಟರ್
ಐಟಿಐ ಎಲೆಕ್ಟ್ರಿಕಲ್- 4 ಹುದ್ದೆ, ವಿದ್ಯಾರ್ಹತೆ: ಐಟಿಐ ಇನ್ ಎಲೆಕ್ಟ್ರಿಕಲ್
ಅಸಿಸ್ಟೆಂಟ್ ಫಾರ್‌ಮನ್ (ಸಿವಿಲ್)- 1 ಹುದ್ದೆ, ವಿದ್ಯಾರ್ಹತೆ: ಡಿಪ್ಲೋಮಾ
ಅಸಿಸ್ಟೆಂಟ್ ಫಾರ್‌ಮನ್ (ಎಲೆಕ್ಟ್ರಿಕಲ್)- 1 ಹುದ್ದೆ, ವಿದ್ಯಾರ್ಹತೆ: ಡಿಪ್ಲೋಮಾ
ಸೆಕ್ಯುರಿಟಿ ಇನ್ಸ್‌ಪೆಕ್ಟರ್- 6 ಹುದ್ದೆ, ವಿದ್ಯಾರ್ಹತೆ: ಪದವಿ
ಐಟಿಐ ಫಿಟ್ಟರ್ (ಸರ್ವೆ)- 2 ಹುದ್ದೆ, ವಿದ್ಯಾರ್ಹತೆ: ಐಟಿಐ ಇನ್ ಫಿಟ್ಟರ್
ಸೆಕ್ಯುರಿಟಿ ಗಾರ್ಡ್- 24 ಹುದ್ದೆ, ವಿದ್ಯಾರ್ಹತೆ: ದ್ವಿತೀಯ ಪಿಯುಸಿ
ವಯೋಮಿತಿ
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ಗರಿಷ್ಠ ವಯಸ್ಸು 35 ವರ್ಷ. ಮೀಸಲಾತಿಗೆ ಅನುಗುಣವಾಗಿ ವಯೋಮಿತಿಯಲ್ಲಿ ಸಡಿಲಿಕೆ ಲಭ್ಯ. ಪ್ರವರ್ಗ 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ 3 ವರ್ಷ ಮತ್ತು ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ / ಪ್ರವರ್ಗ- 1 ಅಭ್ಯರ್ಥಿಗಳಿಗೆ 5 ವರ್ಷಗಳ ರಿಯಾಯಿತಿ ಇದೆ.
ಅರ್ಜಿ ಶುಲ್ಕ
ಅರ್ಜಿ ಶುಲ್ಕವಾಗಿ ಸಾಮಾನ್ಯ ವಿಭಾಗದ ಅಭ್ಯರ್ಥಿಗಳು 600 ರೂ., ಪ್ರವರ್ಗ 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳು 300 ರೂ. ಮತ್ತು ಎಸ್‌ಸಿ / ಎಸ್‌ಟಿ / ಮಾಜಿ ಸೈನಿಕರು / ಪಿಡಬ್ಲ್ಯುಡಿ ಅಭ್ಯರ್ಥಿಗಳು 100 ರೂ. ಅನ್ನು ಆನ್‌ಲೈನ್ ಮೂಲಕ ಪಾವತಿಸಬೇಕು.
ಆಯ್ಕೆ ವಿಧಾನ ಮತ್ತು ಮಾಸಿಕ ವೇತನ
ಕಂಪ್ಯೂಟರ್ ಆಧಾರಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ. ಆಯ್ಕೆಯಾದವರಿಗೆ 20,920 ರೂ. – 48,020 ರೂ. ಮಾಸಿಕ ವೇತನ ಸಿಗಲಿದೆ.
ಅಧಿಸೂಚನೆಗಾಗಿ ಇಲ್ಲಿ ಕ್ಲಿಕ್ ಮಾಡಿ (ಉಳಿಕೆ ಮೂಲ / ಸ್ಥಳೀಯೇತರ ವೃಂದ).
ಅಧಿಸೂಚನೆಗಾಗಿ ಇಲ್ಲಿ ಕ್ಲಿಕ್ ಮಾಡಿ (ಕಲ್ಯಾಣ ಕರ್ನಾಟಕ (ಸ್ಥಳೀಯ) ವೃಂದ).
ಅರ್ಜಿ ಸಲ್ಲಿಸಲು ವಿಧಾನ
- ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ.
- ಫೋನ್ ನಂಬರ್, ಇಮೇಲ್ ವಿಳಾಸ ನೀಡಿ ಹೆಸರು ನೋಂದಾಯಿಸಿ.
- HGML Assistant Foreman, ITI Fitter Apply Online ಲಿಂಕ್ ಕ್ಲಿಕ್ ಮಾಡಿ
- ಅಗತ್ಯ ಮಾಹಿತಿಗಳನ್ನು ಎಚ್ಚರಿಕೆಯಿಂದ ತುಂಬಿ ಅಪ್ಲಿಕೇಷನ್ ಫಾರಂ ಭರ್ತಿ ಮಾಡಿ.
- ಅಗತ್ಯ ಡಾಕ್ಯುಮೆಂಟ್ಗಳನ್ನು ಅಪ್ಲೋಡ್ ಮಾಡಿ.
- ಆನ್‌ಲೈನ್ ಮೂಲಕ ಅರ್ಜಿ ಶುಲ್ಕ ಪಾವತಿಸಿ.
- ಎಲ್ಲವೂ ಸರಿಯಾಗಿದೆ ಎನ್ನುವುದನ್ನು ಮತ್ತೊಮ್ಮೆ ಖಚಿತ ಪಡಿಸಿ Submit ಬಟನ್ ಕ್ಲಿಕ್ ಮಾಡಿ.
- ಅಪ್ಲಿಕೇಷನ್ ನಂಬರ್ ಅಥವಾ ರಿಕ್ವೆಸ್ಟ್ ನಂಬರ್ ನೋಟ್ ಮಾಡಿಟ್ಟುಕೊಳ್ಳಿ.
ಇದನ್ನೂ ಓದಿ: Job Alert: ಗುಪ್ತಚರ ಇಲಾಖೆಯಲ್ಲಿದೆ 660 ಹುದ್ದೆಗಳು; ಎಸ್ಸೆಸ್ಸೆಲ್ಸಿ ತೇರ್ಗಡೆಯಾದವರೂ ಅರ್ಜಿ ಸಲ್ಲಿಸಬಹುದು