ಬೆಂಗಳೂರು: ಬ್ಯಾಂಕ್‌ನಲ್ಲಿ ಉದ್ಯೋಗ (Bank job) ನಿರ್ವಹಿಸಬೇಕು ಎನ್ನುವ ನಿಮ್ಮ ಕನಸು ನನಸಾಗುವ ದಿನ ಹತ್ತಿರದಲ್ಲೇ ಇದೆ. ಬ್ಯಾಂಕ್ ಆಫ್ ಇಂಡಿಯಾ (Bank of India)ದ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಕಾನೂನು ಅಧಿಕಾರಿ, ಸೀನಿಯರ್ ಮ್ಯಾನೇಜರ್ ಸೇರಿ ಸುಮಾರು 143 ಹುದ್ದೆಗಳನ್ನು ಭರ್ತಿ ಮಾಡಲಾಗುವುದು ಎಂದು ಅಧಿಸೂಚನೆ ತಿಳಿಸಿದೆ (BOI Recruitment 2024). ಆಸಕ್ತರು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕಿದ್ದು, ಕೊನೆಯ ದಿನ ಏಪ್ರಿಲ್ 10 (Job Alert).
ಹುದ್ದೆಗಳ ವಿವರ
ಕ್ರೆಡಿಟ್ ಆಫೀಸರ್ – 25, ಚೀಫ್ ಮ್ಯಾನೇಜರ್-ಎಕನಾಮಿಸ್ಟ್- 1, ಟೆಕ್ನಿಕಲ್ ಅನಾಲಿಸ್ಟ್- 1, ಕಾನೂನು ಅಧಿಕಾರಿ (ಎಂಎಂಜಿಎಸ್-II)-25, ಚೀಫ್ ಮ್ಯಾನೇಜರ್-ಐಟಿ-ಡೇಟಾಬೇಸ್ ಅಡ್ಮಿನಿಸ್ಟ್ರೇಟರ್- 2, ಚೀಫ್ ಮ್ಯಾನೇಜರ್-ಐಟಿ-ಕ್ಲೌಡ್ ಆಪರೇಷನ್ – 1, ಚೀಫ್ ಮ್ಯಾನೇಜರ್-ಐಟಿ-ನೆಟ್‌ವರ್ಕ್- 1, ಚೀಫ್ ಮ್ಯಾನೇಜರ್-ಐಟಿ-ಸಿಸ್ಟಮ್- 1, ಚೀಫ್ ಮ್ಯಾನೇಜರ್-ಐಟಿ-ಇನ್ಫ್ರಾ- 1, ಚೀಫ್ ಮ್ಯಾನೇಜರ್-ಐಟಿ-ಇನ್ಫೋ. ಸೆಕ್ಯುರಿಟಿ – 1, ಚೀಫ್ ಮ್ಯಾನೇಜರ್-ಮಾರ್ಕೆಟಿಂಗ್ – 1, ಕಾನೂನು ಅಧಿಕಾರಿ (ಎಂಎಂಜಿಎಸ್-III)- 31, ಡೇಟಾ ಸೈಂಟಿಸ್ಟ್ – 2, ಎಂಎಲ್ ಓಪ್ಸ್ ಫುಲ್ ಸ್ಟಾಕ್ ಡೆವಲಪರ್- 2, ಡೇಟಾಬೇಸ್ ಅಡ್ಮಿನಿಸ್ಟ್ರೇಟರ್- 2, ಡೇಟಾ ಕ್ವಾಲಿಟಿ ಡೆವಲಪರ್- 2, ಡೇಟಾ ಗವರ್ನಸ್ ಎಕ್ಸ್‌ಪರ್ಟ್- 2, ಪ್ಲಾಟ್ ಫಾರ್ಮ್ ಎಂಜಿನಿಯರಿಂಗ್ ಎಕ್ಸ್‌ಪರ್ಟ್- 2, ಲಿನಕ್ಸ್ ಅಡ್ಮಿನಿಸ್ಟ್ರೇಟರ್- 2, ಒರಾಕಲ್ ಎಕ್ಸಾಡೇಟಾ ಅಡ್ಮಿನಿಸ್ಟ್ರೇಟರ್- 2, ಸೀನಿಯರ್ ಮ್ಯಾನೇಜರ್-ಐಟಿ- 4, ಸೀನಿಯರ್ ಮ್ಯಾನೇಜರ್-ಐಟಿ-ಡೇಟಾ ಅನಾಲಿಸ್ಟ್- 4, ಸೀನಿಯರ್ ಮ್ಯಾನೇಜರ್-ಐಟಿ-ಡೇಟಾಬೇಸ್- 3, ಸೀನಿಯರ್ ಮ್ಯಾನೇಜರ್-ಐಟಿ-ಕ್ಲೌಡ್ ಆಪರೇಷನ್- 2, ಸೀನಿಯರ್ ಮ್ಯಾನೇಜರ್-ಐಟಿ-ನೆಟ್‌ವರ್ಕ್- ಸೆಕ್ಯುರಿಟಿ/ ಆಪರೇಷನ್ – 3, ಸೀನಿಯರ್ ಮ್ಯಾನೇಜರ್-ಐಟಿ-ಸಿಸ್ಟಮ್ (ವಿಂಡೋಸ್ / ಸೋಲಾರಿಸ್ / ಆರ್‌ಎಚ್‌ಇಎಲ್)- 4, ಸೀನಿಯರ್ ಮ್ಯಾನೇಜರ್-ಐಟಿ-ಇನ್ಫ್ರಾ- 2, ಸೀನಿಯರ್ ಎಂಜಿಆರ್ – ಟೂಲ್ ಮ್ಯಾನೇಜ್‌ಮೆಂಟ್‌ಗಾಗಿ ಐಟಿ ಎಂಡ್ ಪಾಯಿಂಟ್ ಸೆಕ್ಯುರಿಟಿ ಮ್ಯಾನೇಜರ್- 1, ಸೀನಿಯರ್ ಮ್ಯಾನೇಜರ್-ಐಟಿ – ಸೆಕ್ಯುರಿಟಿ ಅನಾಲಿಸ್ಟ್ – 4, ಸೀನಿಯರ್ ಎಂಜಿಆರ್-ಐಟಿ – ಜಿಆರ್‌ಸಿ (ರಿಸ್ಕ್ & ಕಂಟ್ರೋಲ್)- 1, ಸೀನಿಯರ್ ಮ್ಯಾನೇಜರ್-ಐಟಿ (ಫಿನ್‌ಟೆಕ್)- 5, ಸೀನಿಯರ್ ಮ್ಯಾನೇಜರ್-ಐಟಿ-ಸ್ಟ್ಯಾಟಿಸ್ಟಿಷಿಯನ್- 2 ಹುದ್ದೆಗಳಿವೆ.
ವಿದ್ಯಾರ್ಹತೆ
ಹುದ್ದೆಗಳಿಗೆ ಅನುಗುಣವಾಗಿ ಸಿಎ / ಐಸಿಡಬ್ಲ್ಯುಎ / ಸಿಎಸ್ / ಯಾವುದೇ ಪದವಿ / ಎಂಬಿಎ / ಪಿಜಿಡಿಬಿಎಂ / ಪಿಜಿಡಿಎಂ / ಪಿಜಿಡಿಬಿಎ / ಮಾರ್ಕೆಟಿಂಗ್ / ಫೈನಾನ್ಸ್ / ಎಂಸಿಎ/ ಬಿಇ / ಬಿ.ಟೆಕ್ / ಬಿಎಸ್‌ಸಿ / ಎಂಎಸ್‌ಸಿ / ಇತರ ಶೈಕ್ಷಣಿಕ ಅರ್ಹತೆಯನ್ನು ಹೊಂದಿರುವವರು ಅರ್ಜಿ ಸಲ್ಲಿಸಬಹುದು.
ಅರ್ಜಿ ಶುಲ್ಕ
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಸಾಮಾನ್ಯ ವರ್ಗದವರು 850 ರೂ., ಎಸ್‌ಸಿ / ಎಸ್‌ಟಿ / ಪಿಡಬ್ಲ್ಯುಡಿ ಅಭ್ಯರ್ಥಿಗಳು 175 ರೂ. ಅರ್ಜಿ ಶುಲ್ಕವಾಗಿ ಪಾವತಿಸಬೇಕು. ಅರ್ಜಿ ಶುಲ್ಕವನ್ನು ಆನ್‌ಲೈನ್ ಮೂಲಕ ಪಾವತಿಸಬಹುದು. ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ನಡೆಯಲಿದೆ.
ವಯೋಮಿತಿ
ಅರ್ಜಿ ಸಲ್ಲಿಸಲು ಹುದ್ದೆಗೆ ಅನುಗುಣವಾಗಿ ಕನಿಷ್ಠ ವಯಸ್ಸು 21 ವರ್ಷ ಮತ್ತು ಗರಿಷ್ಠ ವಯಸ್ಸು 40 ವರ್ಷ. ಮೀಸಲಾತಿಗೆ ಅನುಗುಣವಾಗಿ ವಯೋಮಿತಿಯಲ್ಲಿ ಸಡಿಲಿಕೆ ಲಭ್ಯ. ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ, ಎಸ್‌ಸಿ / ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ ಮತ್ತು ಪಿಡಬ್ಲ್ಯುಬಿಡಿ ಅಭ್ಯರ್ಥಿಗಳಿಗೆ 10 ವರ್ಷಗಳ ರಿಯಾಯಿತಿ ಇದೆ.
ಅಧಿಸೂಚನೆಗಾಗಿ ಇಲ್ಲಿ ಕ್ಲಿಕ್ ಮಾಡಿ.
ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ.
ಇದನ್ನೂ ಓದಿ: Job Alert: ಸಿಬಿಎಸ್‌ಇಯಲ್ಲಿದೆ ಉದ್ಯೋಗಾವಕಾಶ; ಏಪ್ರಿಲ್ 11ರೊಳಗೆ ಅರ್ಜಿ ಸಲ್ಲಿಸಿ