Site icon Vistara News

Job Alert: ಬೆಂಗಳೂರು ಗ್ರಾಮಾಂತರ ಕೋರ್ಟ್‌ನಲ್ಲಿದೆ 58 ಹುದ್ದೆ; ಎಸ್ಸೆಸ್ಸೆಲ್ಸಿ ಪಾಸಾದವರು ಅರ್ಜಿ ಸಲ್ಲಿಸಿ

typist

typist

ಬೆಂಗಳೂರು: ಬೆಂಗಳೂರು ಗ್ರಾಮಾಂತರ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿ ಖಾಲಿ ಇರುವ ವಿವಿಧ ಟೈಪಿಸ್ಟ್‌ ಮತ್ತು ಪಿಯೋನ್‌ (ಜವಾನ) ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ (Bengaluru Rural district court recruitment 2024). ಒಟ್ಟು 58 ಹುದ್ದೆಗಳು ಖಾಲಿ ಇದ್ದು, ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕು. ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿ ತೇರ್ಗಡೆಯಾದವರು ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಕೆಗೆ ಕೊನೆಯ ದಿನ ಮಾರ್ಚ್‌ 20 (Job Alert).

ಹುದ್ದೆಗಳ ವಿವರ ಮತ್ತು ವಿದ್ಯಾರ್ಹತೆ

ಜವಾನ (Peon): 28 ಹುದ್ದೆಗಳಿದ್ದು, ಎಸ್ಸೆಸ್ಸೆಲ್ಸಿ ತೇರ್ಗಡೆಯಾದವರು ಅರ್ಜಿ ಸಲ್ಲಿಸಬಹುದು. ಕನ್ನಡ ಓದಲು ಮತ್ತು ಬರೆಯಲು ಗೊತ್ತಿರಬೇಕು. ಆಯ್ಕೆ ವಿಧಾನ: ಎಸ್ಸೆಸ್ಸೆಲ್ಸಿಯಲ್ಲಿ ಪಡೆದ ಅಂಕಗಳಿಗೆ ಅನುಗುಣವಾಗಿ ಮೆರಿಟ್‌ ಪಟ್ಟಿಯನ್ನು ಸಿದ್ಧಪಡಿಸಿ ಅರ್ಹರನ್ನು ಸಂದರ್ಶನಕ್ಕೆ ಕರೆಯಲಾಗುತ್ತದೆ. ಸಂದರ್ಶನಕ್ಕೆ 10 ಅಂಕ ನಿಗದಿಪಡಿಸಲಾಗಿದ್ದು, ಇದರಲ್ಲಿ ಅತ್ಯಧಿಕ ಅಂಕ ಪಡೆದವರನ್ನು ಆಯ್ಕೆ ಮಾಡಲಾಗುತ್ತದೆ.

ಟೈಪಿಸ್ಟ್‌: 30 ಹುದ್ದೆಗಳಿದ್ದು, ಪಿಯುಸಿ, ಡಿಪ್ಲೋಮಾ ಜತೆಗೆ ಡಿಪಾರ್ಟ್‌ಮೆಂಟ್‌ ಆಫ್‌ ಪಬ್ಲಿಕ್‌ ಇನ್‌ಸ್ಟ್ರಕ್ಷನ್‌ ಆಯೋಜಿಸುವ ಕನ್ನಡ ಮತ್ತು ಇಂಗ್ಲಿಷ್‌ ಸೀನಿಯರ್‌ ಗ್ರೇಡ್‌ ಟೈಪ್‌ ರೈಟಿಂಗ್‌ ಪರೀಕ್ಷೆಯಲ್ಲಿ ತೇರ್ಗಡೆಯಾಗಿರಬೇಕು ಅಥವಾ ಡಿಪ್ಲೋಮಾ ಇನ್‌ ಕಮರ್ಷಿಯಲ್‌ ಪ್ರಾಕ್ಟೀಸ್‌ / ತತ್ಸಮಾನ ಪರೀಕ್ಷೆಯಲ್ಲಿ ಪಾಸ್‌ ಆಗಿರಬೇಕು. ಆಯ್ಕೆ ವಿಧಾನ: ಅಭ್ಯರ್ಥಿಯು ನೀಡಲಾದ ವಿಷಯವನ್ನು ಟೈಪ್ ಮಾಡಬೇಕು. ಇದರ ಅವಧಿ 15 ನಿಮಿಷ. ಈ ಅರ್ಹತಾ ಪರೀಕ್ಷೆಯು ಗರಿಷ್ಠ 100 ಅಂಕಗಳನ್ನು ಹೊಂದಿದ್ದು, ಕನಿಷ್ಠ ಅಂಕಗಳು 50 ಪಡೆಯಬೇಕು. ಇದರಲ್ಲಿ ತೇರ್ಗಡೆಯಾದವರನ್ನು ಸಂದರ್ಶನಕ್ಕ ಕರೆಯಲಾಗುತ್ತದೆ. ಸಂದರ್ಶನ 5 ಅಂಕಗಳನ್ನು ಹೊಂದಿದೆ. ಈ ಎರಡೂ ಪರೀಕ್ಷೆಗಳ ಅಂಕವನ್ನು ಗಮನಿಸಿ ಗರಿಷ್ಠ ಅಂಕ ಹೊಂದಿದವರನ್ನು ಆಯ್ಕೆ ಮಾಡಲಾಗುತ್ತದೆ. ಆಯ್ಕೆಯಾಗುವವರು ಕನಿಷ್ಠ 2 ವರ್ಷಗಳ ಕಾಲ ಅಪ್ರೊಬೇಷನರಿ ಅವಧಿಯಲ್ಲಿರುತ್ತಾರೆ.

ಅರ್ಜಿ ಶುಲ್ಕ

ಅರ್ಜಿ ಶುಲ್ಕವಾಗಿ ಸಾಮಾನ್ಯ ವಿಭಾಗದ ಅಭ್ಯರ್ಥಿಗಳು 200 ರೂ. ಮತ್ತು ಕ್ಯಾಟಗರಿ 2ಎ, 2ಬಿ, 3ಎ ಮತ್ತು 3ಬಿ ಅಭ್ಯರ್ಥಿಗಳು 100 ರೂ. ಸಲ್ಲಿಸಬೇಕು. ಎಸ್‌ಸಿ / ಎಸ್‌ಟಿ ಮತ್ತು ವಿಶೇಷ ಚೇತನ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕವಿಲ್ಲ. ಅರ್ಜಿ ಶುಲ್ಕವನ್ನು ಆನ್‌ಲೈನ್‌ ಮೂಲಕ ಪಾವತಿಸಬೇಕು. ಇದಕ್ಕಾಗಿ ನೆಟ್‌ ಬ್ಯಾಂಕಿಂಗ್‌ / ಕ್ರೆಡಿಟ್‌ / ಡೆಬಿಟ್‌ ಕಾರ್ಡ್‌ / ಯುಪಿಐ ಬಳಸಬಹುದು.

ವಯೋಮಿತಿ

ಅರ್ಜಿ ಸಲ್ಲಿಸಲು ಕನಿಷ್ಠ ವಯಸ್ಸು 18 ವರ್ಷ ಮತ್ತು ಗರಿಷ್ಠ ವಯಸ್ಸು 35 ವರ್ಷ. ಮೀಸಲಾತಿಗೆ ಅನುಗುಣವಾಗಿ ವಯೋಮಿತಿಯಲ್ಲಿ ಸಡಿಲಿಕೆ ಇದೆ. ಕ್ಯಾಟಗರಿ 2ಎ, 2ಬಿ, 3ಎ ಮತ್ತು 3ಬಿ ವಿಭಾಗದ ಅಭ್ಯರ್ಥಿಗಳಿಗೆ 3 ವರ್ಷ ಮತ್ತು ಎಸ್‌ಸಿ / ಎಸ್‌ಟಿ, ಕ್ಯಾಟಗರಿ 1 ವಿಭಾಗದ ಅಭ್ಯರ್ಥಿಗಳಿಗೆ 5 ವರ್ಷಗಳ ಸಡಿಲಿಕೆ ಲಭ್ಯ.

ಟೈಪಿಸ್ಟ್‌ ಹುದ್ದೆಗಳ ಅಧಿಸೂಚನೆಗಾಗಿ ಇಲ್ಲಿ ಕ್ಲಿಕ್‌ ಮಾಡಿ.

ಪಿಯೋನ್‌ ಹುದ್ದೆಗಳ ಅಧಿಸೂಚನೆಗಾಗಿ ಇಲ್ಲಿ ಕ್ಲಿಕ್‌ ಮಾಡಿ.

ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್‌ ಮಾಡಿ.

ಇದನ್ನೂ ಓದಿ: Job Alert: ಡಿಪ್ಲೋಮಾ ಪದವೀಧರರಿಗೆ ಗುಡ್‌ನ್ಯೂಸ್‌; ರೈಲ್ವೇ ನೇಮಕಾತಿ ಮಂಡಳಿಯಿಂದ 9,000 ಹುದ್ದೆ ಭರ್ತಿ

Exit mobile version