Site icon Vistara News

Job Alert: ಕೆನರಾ ಬ್ಯಾಂಕ್ ನಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

Job Alert

ಬೆಂಗಳೂರು: ಬ್ಯಾಂಕ್ ಉದ್ಯೋಗ (bank job) ಬಯಸುತ್ತಿರುವವರಿಗೆ ಸಿಹಿ ಸುದ್ದಿ. ಸುಪ್ರಸಿದ್ದ ಕೆನರಾ ಬ್ಯಾಂಕ್ (bank) ಒಂದರಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ (Job Alert) ಆಹ್ವಾನಿಸಲಾಗಿದೆ. ಬಿಕಾಂ ಪದವೀಧರರು, ಕಂಪ್ಯೂಟರ್, ಅಕೌಂಟಿಂಗ್ ಜ್ಞಾನ ಹೊಂದಿರುವ ಅನುಭವಿಗಳು ಅರ್ಜಿ ಸಲ್ಲಿಸಬಹುದು.

ಆಸಕ್ತ ಅಭ್ಯರ್ಥಿಗಳು ಕೆನರಾ ಬ್ಯಾಂಕ್ ನ (canara bank) ಅಧಿಕೃತ ವೆಬ್ ಸೈಟ್ ಮೂಲಕ ಸಂಪೂರ್ಣ ಮಾಹಿತಿ ಪಡೆದು ಅರ್ಜಿ ಸಲ್ಲಿಸಬಹುದು. ಈ ಕುರಿತು ಸಂಪೂರ್ಣ ವಿವರ ಇಲ್ಲಿದೆ.

ಹುದ್ದೆ ವಿವರ

ಕೆನರಾ ಬ್ಯಾಂಕ್‌ನಲ್ಲಿ ಖಾಲಿ ಇರುವ ಅಕೌಂಟ್ಸ್ ಮತ್ತು ಅಡ್ಮಿನಿಸ್ಟ್ರೇಷನ್ ಸೆಕ್ರೆಟರಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಕೆನರಾ ಬ್ಯಾಂಕಿನ ಲೆಕ್ಕಪತ್ರ ಮತ್ತು ಆಡಳಿತ ಪ್ರಕ್ರಿಯೆಯ ಜವಾಬ್ದಾರಿ ನೀಡಲಾಗುತ್ತದೆ. ಆಯ್ಕೆಯ ಬಳಿಕ ಅಭ್ಯರ್ಥಿಗಳಿಗೆ ಮಾಸಿಕ 30,000 ರೂ. ವೇತನ, ಇತರ ಸೌಲಭ್ಯಗಳು ದೊರೆಯಲಿದೆ.

ಅರ್ಹತೆ ಏನು?

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಕನಿಷ್ಠ 28 ವರ್ಷ, ಎಸ್ ಸಿ/ಎಸ್ ಟಿ ಮತ್ತು ಇತರೆ ವರ್ಗದ ಅಭ್ಯರ್ಥಿಗಳಿಗೆ 25 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ. ಬಿಕಾಂ ಪದವಿ ಪಡೆದಿರುವ, ಕಂಪ್ಯೂಟರ್ ಮತ್ತು ಅಕೌಂಟಿಂಗ್ ಸಾಫ್ಟ್‌ವೇರ್ ಜ್ಞಾನದ ಜೊತೆಗೆ ಖಾತೆಗಳು ಮತ್ತು ಸಾಮಾನ್ಯ ಆಡಳಿತ ನಿರ್ವಹಿಸುವಲ್ಲಿ ಕನಿಷ್ಠ 2 ವರ್ಷಗಳ ಅನುಭವ ಹೊಂದಿರುವವರು ಅರ್ಜಿ ಸಲ್ಲಿಸಬಹುದು.

ಆಯ್ಕೆ ಪ್ರಕ್ರಿಯೆ

ಶೈಕ್ಷಣಿಕ ಅರ್ಹತೆ ಮತ್ತು ಅನುಭವದ ಆಧಾರದ ಮೇಲೆ ಅಭ್ಯರ್ಥಿಗಳು ಆಯ್ಕೆ ಮಾಡಿ ಮುಖಾಮುಖಿ ಸಂದರ್ಶನದ ಬಳಿಕ ಅಂತಿಮ ಆಯ್ಕೆಯನ್ನು ಮಾಡಲಾಗುತ್ತದೆ. ಆಯ್ಕೆಯಾದ ಅಭ್ಯರ್ಥಿಗಳು 12 ತಿಂಗಳ ಪ್ರೊಬೇಷನರಿ ಅವಧಿಯನ್ನು ಪೂರ್ಣಗೊಳಿಸಬೇಕಾಗುತ್ತದೆ.

ಅರ್ಜಿ ಸಲ್ಲಿಸುವ ವಿಧಾನ

ಕೆನರಾ ಬ್ಯಾಂಕ್‌ನ ಅಧಿಕೃತ ವೆಬ್‌ಸೈಟ್‌ https://canarabank.com/pages/Recruitment ಗೆ ಭೇಟಿ ನೀಡಿ ನೇಮಕಾತಿ ವಿಭಾಗದಡಿ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿ. ಕೇಳಿರುವ ಮಾಹಿತಿಯನ್ನು ತುಂಬಿಸಿ ಅರ್ಜಿಯನ್ನು ಭರ್ತಿ ಮಾಡಿ. ಫೋಟೋ, ಸಹಿ, ಶೈಕ್ಷಣಿಕ ಪ್ರಮಾಣಪತ್ರ, ಅನುಭವದ ಪುರಾವೆ ಸೇರಿದಂತೆ ಇತರ ಎಲ್ಲಾ ಅಗತ್ಯ ದಾಖಲೆಗಳನ್ನು ಲಗತ್ತಿಸಿ.

ಇದನ್ನೂ ಓದಿ: Job Alert: ಅಂಚೆ ಇಲಾಖೆಯಲ್ಲಿ 50,000ಕ್ಕೂ ಹೆಚ್ಚಿನ ಹುದ್ದೆಗೆ ಅರ್ಜಿ ಆಹ್ವಾನ

ಎಸ್ ಸಿ, ಎಸ್ ಟಿ ಅಭ್ಯರ್ಥಿಗಳಿಗೆ 300 ರೂ. ಮತ್ತು ಇತರೆ ಅಭ್ಯರ್ಥಿಗಳಿಗೆ 500 ರೂ. ಅರ್ಜಿ ಶುಲ್ಕವಿದೆ. ಇದನ್ನು ʼCANBANK VENTURE CAPITAL FUND LIMITEDʼ ಹೆಸರಿನಲ್ಲಿ ಡಿಮ್ಯಾಂಡ್ ಡ್ರಾಫ್ಟ್ ಮಾಡಿ. ಭರ್ತಿ ಮಾಡಿದ ಅರ್ಜಿ ಮತ್ತು ದಾಖಲೆಗಳನ್ನು CANBANK VENTURE CAPITAL FUND LIMITED (CVCFL) ಬೆಂಗಳೂರು – 560004 ಈ ವಿಳಾಸಕ್ಕೆ ಅಂಚೆ ಮೂಲಕ ಜೂನ್ 30ರೊಳಗೆ ಸಲ್ಲಿಸಬೇಕಿದೆ.

Exit mobile version