ಬೆಂಗಳೂರು: ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (Central Board of Secondary Education) ಖಾಲಿ ಇರುವ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅಧಿಸೂಚನೆ ಹೊರಡಿಸಿದೆ (CBSE Recruitment 2024). ಗ್ರೂಪ್ ಎ, ಬಿ, ಸಿಯ ಒಟ್ಟು 118 ಅಸಿಸ್ಟೆಂಟ್ ಸೆಕ್ರೆಟರಿ, ಜೂನಿಯರ್ ಅಕೌಂಟೆಂಟ್ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಮಾರ್ಚ್ 12ರಿಂದ ಅರ್ಜಿ ಸಲ್ಲಿಕೆ ಆರಂಭವಾಗಲಿದ್ದು, ಕೊನೆಯ ದಿನ ಏಪ್ರಿಲ್ 11 (Job Alert).
ಹುದ್ದೆಗಳ ವಿವರ
ಅಸಿಸ್ಟೆಂಟ್ ಸೆಕ್ರೆಟರಿ- 64, ಅಕೌಂಟ್ಸ್ ಆಫೀಸರ್- 3, ಜೂನಿಯರ್ ಎಂಜಿನಿಯರ್- 17, ಜೂನಿಯರ್ ಟ್ರಾನ್ಸ್ಲೇಶನ್ ಆಫೀಸರ್-7, ಅಕೌಂಟೆಂಟ್-7, ಜೂನಿಯರ್ ಅಕೌಂಟೆಂಟ್-20 ಹುದ್ದೆಗಳಿವೆ.
ಉದ್ಯೋಗದ ಸ್ಥಳ ಮತ್ತು ಅರ್ಜಿ ಶುಲ್ಕ
ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ ನೇಮಕಾತಿ ಅಧಿಸೂಚನೆ ಪ್ರಕಾರ, ಆಯ್ಕೆಯಾಗುವ ಅಭ್ಯರ್ಥಿಗಳು ಭಾರತದಲ್ಲಿ ಎಲ್ಲಿ ಬೇಕಾದರೂ ಉದ್ಯೋಗ ನಿರ್ವಹಿಸಲು ತಯಾರಿರಬೇಕು. ಅಭ್ಯರ್ಥಿಗಳು ಯಾವುದೇ ಶುಲ್ಕ ಪಾವತಿಸಬೇಕಾಗಿಲ್ಲ.
ಆಯ್ಕೆ ವಿಧಾನ
ಸಂದರ್ಶನ ಮತ್ತು ಡಾಕ್ಯುಮೆಂಟ್ ಪರಿಶೀಲನೆ ಮೂಲಕ ಅಭ್ಯರ್ಥಿಗಳ ಆಯ್ಕೆ ಮಾಡಲಾಗುತ್ತದೆ. ವಯೋಮಿತಿ, ಮಾಸಿಕ ವೇತನ, ವಿದ್ಯಾರ್ಹತೆ ಮುಂತಾದ ವಿವರಗಳು ಸದ್ಯದಲ್ಲೇ ಹೊರ ಬೀಳಲಿದೆ.
ಸಂಕ್ಷಿಪ್ತ ಅಧಿಸೂಚನೆಗಾಗಿ ಇಲ್ಲಿ ಕ್ಲಿಕ್ ಮಾಡಿ.
ಅರ್ಜಿ ಸಲ್ಲಿಸುವ ವಿಧಾನ
- ಅರ್ಜಿ ಸಲ್ಲಿಸಲು ಅಧಿಕೃತ ವೆಬ್ಸೈಟ್ https://www.cbse.gov.in/ಗೆ ಭೇಟಿ ನೀಡಿ.
- ಹೋಮ್ಪೇಜ್ನಲ್ಲಿ Recruitment ಆಯ್ಕೆಯನ್ನು ಕ್ಲಿಕ್ ಮಾಡಿ.
- ಹೆಸರು ನೋಂದಾಯಿಸಿ.
- ವೈಯಕ್ತಿಕ, ಶೈಕ್ಷಣಿಕ ವಿವರ ನೀಡಿ ಅಪ್ಲಿಕೇಷನ್ ಫಾರಂ ಭರ್ತಿ ಮಾಡಿ.
- ಅಗತ್ಯವಾದ ಡಾಕ್ಯುಮೆಂಟ್ ಅಪ್ಲೋಡ್ ಮಾಡಿ.
- ಎಲ್ಲ ಮಾಹಿತಿ ಸರಿಯಾಗಿದೆ ಎನ್ನುವುದನ್ನು ಖಚಿತಪಡಿಸಿ Submit ಬಟನ್ ಕ್ಲಿಕ್ ಮಾಡಿ.
- ಭವಿಷ್ಯದ ಅಗತ್ಯಗಳಿಗಾಗಿ ಅಪ್ಲಿಕೇಷನ್ ಫಾರಂನ ಪ್ರಿಂಟ್ ಔಟ್ ತೆಗೆದಿಡಿ.
ಇದನ್ನೂ ಓದಿ: Job Alert: ವಿಜ್ಞಾನಿಯಾಗಬೇಕೆ? ಸೆಂಟ್ರಲ್ ಸಿಲ್ಕ್ ಬೋರ್ಡ್‌ನಲ್ಲಿದೆ ಗೋಲ್ಡನ್ ಚಾನ್ಸ್; ಇಂದೇ ಅರ್ಜಿ ಸಲ್ಲಿಸಿ