Site icon Vistara News

Job Alert: ಸೆಂಟ್ರಲ್‌ ಬ್ಯಾಂಕ್‌ನಲ್ಲಿದೆ ಉದ್ಯೋಗಾವಕಾಶ; ಅರ್ಜಿ ಸಲ್ಲಿಸಲು ನಾಳೆಯೇ ಕಡೆಯ ದಿನ

central bank

central bank

ಬೆಂಗಳೂರು: ಬ್ಯಾಂಕ್‌ನಲ್ಲಿ ಉದ್ಯೋಗ ಹೊಂದಬೇಕು ಎನ್ನುವ ಕನಸು ಕಾಣುತ್ತಿರುವವರಿಗೆ ಸೆಂಟ್ರಲ್‌ ಬ್ಯಾಂಕ್‌ ಆಫ್‌ ಇಂಡಿಯಾ ಉತ್ತಮ ಅವಕಾಶ ನೀಡುತ್ತದೆ (Central Bank of India Officer Recruitment 2023). ತನ್ನ ವಿವಿಧ ಬ್ರ್ಯಾಂಚ್‌ಗಳಲ್ಲಿ ಖಾಲಿ ಇರುವ ಸುಮಾರು 192 ಸ್ಪೆಷಲಿಸ್ಟ್‌ ಹುದ್ದೆಗಳಿಗೆ ಪದವೀಧರರು ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಬೇಕಾದ ಕೊನೆಯ ದಿನಾಂಕ ನಾಳೆ (ನವೆಂಬರ್‌ 19). ಆಸಕ್ತರು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕು ಎಂದು ಪ್ರಕಟಣೆ ತಿಳಿಸಿದೆ (Job Alert).

ಹುದ್ದೆಗಳ ವಿವರ ಮತ್ತು ವಿದ್ಯಾರ್ಹತೆ

ಇನ್ಫಾರ್ಮೇಷನ್‌ ಟೆಕ್ನಾಲಜಿ- ಹುದ್ದೆ 1-ವಿದ್ಯಾರ್ಹತೆ: ಪದವಿ/ಸ್ನಾತಕೋತ್ತರ ಪದವಿ (ಸಂಬಂಧಿಸಿದ ವಿಷಯಗಳಲ್ಲಿ)
ರಿಸ್ಕ್‌ ಮ್ಯಾನೇಜ್‌ಮೆಂಟ್‌/ಎಜಿಎಂ-ಸ್ಕೇಲ್‌ V-ಹುದ್ದೆ 1-ವಿದ್ಯಾರ್ಹತೆ: ಪದವಿ (ಇಂಜಿನಿಯರಿಂಗ್)
ರಿಸ್ಕ್‌ ಮ್ಯಾನೇಜ್‌ಮೆಂಟ್‌/ಎಜಿಎಂ-ಸ್ಕೇಲ್‌ IV-ಹುದ್ದೆ-1-ವಿದ್ಯಾರ್ಹತೆ: ಪದವಿ(ಸಂಬಂಧಿಸಿದ ವಿಷಯಗಳಲ್ಲಿ)
ಇನ್ಫಾರ್ಮೇಷನ್‌ ಟೆಕ್ನಾಲಜಿ ಎಸ್‌ಎಂ ಸ್ಕೇಲ್‌ III-ಹುದ್ದೆ 6-ವಿದ್ಯಾರ್ಹತೆ: ಪದವಿ(ಸಂಬಂಧಿಸಿದ ವಿಷಯಗಳಲ್ಲಿ)
ಫೈನಾನ್ಶಿಯಲ್‌ ಅನಾಲಿಸ್ಟ್‌/ಎಸ್‌ಎಂ ಸ್ಕೇಲ್‌ III-ಹುದ್ದೆ 5-ವಿದ್ಯಾರ್ಹತೆ: ಸಿಎ
ಇನ್ಫಾರ್ಮೇಷನ್‌ ಟೆಕ್ನಾಲಜಿ ಮ್ಯಾನೇಜತ್‌ ಸ್ಕೇಲ್‌ III-ಹುದ್ದೆ 73-ವಿದ್ಯಾರ್ಹತೆ: ಪದವಿ (ಇಂಜಿನಿಯರಿಂಗ್)
ಲಾ ಆಫೀಸರ್‌ ಸ್ಕೇಲ್‌ II-ಹುದ್ದೆ 15-ವಿದ್ಯಾರ್ಹತೆ: ಪದವಿ (ಲಾ)
ಕ್ರೆಡಿಟ್‌ ಆಫೀಸರ್‌ ಸ್ಕೇಲ್‌ II-ಹುದ್ದೆ 50-ವಿದ್ಯಾರ್ಹತೆ: ಪದವಿ/ಸ್ನಾತಕೋತ್ತರ ಪದವಿ (ಸಂಬಂಧಿಸಿದ ವಿಷಯಗಳಲ್ಲಿ)
ಫೈನಾನ್ಶಿಯಲ್‌ ಅನಾಲಿಸ್ಟ್‌ ಮ್ಯಾನೇಜರ್‌ ಸ್ಕೇಲ್‌ II-ಹುದ್ದೆ 4-ವಿದ್ಯಾರ್ಹತೆ: ಐಸಿಎಐ & ಐಸಿಡಬ್ಲ್ಯುಐ
ಸಿಎ ಫೈನಾನ್ಸ್‌ & ಅಕೌಂಟ್ಸ್‌ ಜಿಎಸ್‌ಟಿ/ ಇಂಡ್‌ ಎಎಸ್‌/ ಬ್ಯಾಲೆನ್ಸ್‌ ಶೀಟ್‌/ಟ್ಯಾಕ್ಸೇಷನ್‌ ಸ್ಕೇಲ್‌ II-ಹುದ್ದೆ 3: ವಿದ್ಯಾರ್ಹತೆ: ಐಸಿಎಐ
ಇನ್ಫಾರ್ಮೇಷನ್‌ ಟೆಕ್ನಾಲಜಿ ಎಎಂ ಸ್ಕೇಲ್‌ I- ಹುದ್ದೆ 15: ವಿದ್ಯಾರ್ಹತೆ: ಐಟಿ

ಇದನ್ನೂ ಓದಿ: Job Alert: ಎಸ್‌ಬಿಐಯಲ್ಲಿದೆ ಭರ್ಜರಿ 8,283 ಉದ್ಯೋಗಾವಕಾಶ; ಇಂದಿನಿಂದ ಅರ್ಜಿ ಸಲ್ಲಿಸಬಹುದು

ಅರ್ಜಿ ಶುಲ್ಕ ಮತ್ತು ವಯೋಮಿತಿ

ಜನರಲ್ / ಒಬಿಸಿ ಕೆಟಗರಿ ಅಭ್ಯರ್ಥಿಗಳು 850 ರೂ. ಅರ್ಜಿ ಶುಲ್ಕ ಪಾವತಿಸಬೇಕು. ಎಸ್‌ಸಿ /ಎಸ್‌ಟಿ /ಪಿಡಬ್ಲ್ಯುಡಿ / ಮಹಿಳಾ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ 175 ರೂ. ಆನ್‌ಲೈನ್‌ ಮೂಲಕವೇ ಅರ್ಜಿ ಶುಲ್ಕವನ್ನು ಪಾವತಿಸಬೇಕು. ಹುದ್ದೆಗಳಿಗೆ ಅನುಗುಣವಾಗಿ 30ರಿಂದ 45 ವರ್ಷದವರೆಗೆ ಗರಿಷ್ಠ ವಯಸ್ಸಿನ ಮಿತಿಯನ್ನು ನಿಗದಿಪಡಿಸಲಾಗಿದೆ.

ಅಧಿಸೂಚನೆಗಾಗಿ ಇಲ್ಲಿ ಕ್ಲಿಕ್‌ ಮಾಡಿ

ಅರ್ಜಿ ಸಲ್ಲಿಸುವ ವಿಧಾನ

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version