ಬೆಂಗಳೂರು: ಕೇಂದ್ರ ಸಿಬ್ಬಂದಿ ನೇಮಕಾತಿ ಆಯೋಗವು (ಎಸ್‌ಎಸ್‌ಸಿ) ಬರೋಬ್ಬರಿ 11,025 ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಿದೆ. ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‌ಎಫ್)ಯ ಕಾನ್‌ಸ್ಟೇಬಲ್ (ಜನರಲ್ ಡ್ಯೂಟಿ) ಹುದ್ದೆ ಇದಾಗಿದ್ದು, ಆಸಕ್ತರು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು (CISF GD Constable Recruitment 2023). ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಡಿಸೆಂಬರ್ 31 (Job Alert).
ಹುದೆಗಳ ವಿವರ ಮತ್ತು ವಿದ್ಯಾರ್ಹತೆ
ಈ ಹುದ್ದೆಗಳಿಗೆ ಮಹಿಳೆಯರು ಮತ್ತು ಪುರುಷರು ಅರ್ಜಿ ಸಲ್ಲಿಸಬಹುದು. ಪುರುಷರಿಗೆ 9,913 ಮತ್ತು ಮಹಿಳೆಯರಿಗೆ 1,112 ಹುದ್ದೆಗಳಿವೆ. ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ಮಂಡಳಿ/ ವಿಶ್ವವಿದ್ಯಾನಿಲಯದಿಂದ ಮೆಟ್ರಿಕ್ಯುಲೇಷನ್ ಅಥವಾ 10ನೇ ತರಗತಿ ಉತ್ತೀರ್ಣರಾಗಿರಬೇಕು.
ವಯೋಮಿತಿ
ಅರ್ಜಿ ಸಲ್ಲಿಕೆಗೆ ಕನಿಷ್ಠ ವಯಸ್ಸು 18 ವರ್ಷ ಮತ್ತು ಗರಿಷ್ಠ ವಯಸ್ಸು 23 ವರ್ಷ. ಮೀಸಲಾತಿಗೆ ಅನುಗುಣವಾಗಿ ವಯೋಮಿತಿಯಲ್ಲಿ ಸಡಿಲಿಕೆ ಲಭ್ಯ. ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ, ಒಬಿಸಿ ವರ್ಗಕ್ಕೆ ಸೇರಿದವರಿಗೆ 3 ವರ್ಷ, ಮೊದಲ ಬ್ಯಾಚ್‌ನ ಮಾಜಿ ಅಗ್ನಿವೀರರಿಗೆ 5 ವರ್ಷ ಮತ್ತು ಮಾಜಿ ಅಗ್ನಿವೀರರಿಗೆ 3 ವರ್ಷಗಳ ಸಡಿಲಿಕೆ ಇದೆ.
ಅರ್ಜಿ ಶುಲ್ಕ
ಎಸ್‌ಸಿ/ಎಸ್‌ಟಿ, ಮಾಜಿ ಸೈನಿಕರಿಗೆ ಅರ್ಜಿ ಶುಲ್ಕವಿಲ್ಲ. ಇತರ ಅಭ್ಯರ್ಥಿಗಳು ಅರ್ಜಿ ಶುಲ್ಕವಾಗಿ 100 ರೂ. ಪಾವತಿಸಬೇಕು. ಆನ್‌ಲೈನ್ ಮೂಲಕವೇ ಅರ್ಜಿ ಶುಲ್ಕ ಪಾವತಿಸುವುದು ಕಡ್ಡಾಯ. ಇದಕ್ಕಾಗಿ ಯುಪಿಐ, ನೆಟ್ ಬ್ಯಾಂಕಿಂಗ್, ಕ್ರೆಡಿಟ್/ಡೆಬಿಟ್ ಕಾರ್ಡ್ ಇತ್ಯಾದಿ ಬಳಸಬಹುದು.
ಆಯ್ಕೆ ವಿಧಾನ ಮತ್ತು ಮಾಸಿಕ ವೇತನ
ಕಂಪ್ಯೂಟರ್ ಆಧಾರಿತ ಪರೀಕ್ಷೆ(ಸಿಬಿಇ), ಫಿಸಿಕಲ್ ಸ್ಟ್ಯಾಂಡರ್ಡ್ ಟೆಸ್ಟ್(ಪಿಎಸ್‌ಟಿ), ಫಿಸಿಕಲ್ ಎಫಿಯ್ಶೆನ್ಸಿ ಟೆಸ್ಟ್ (ಪಿಇಟಿ), ವೂದ್ಯಕೀಯ ಪರೀಕ್ಷೆ ಮತ್ತು ಡಾಕ್ಯುಮೆಂಟ್ ಪರಿಶೀಲನೆಯ ಮೂಲಕ ಆಯ್ಕೆ ನಡೆಯಲಿದೆ. ಆಯ್ಕೆಯಾದವರಿಗೆ 21,700 ರೂ.-69,100 ರೂ. ಮಾಸಿಕ ವೇತನವಿದೆ. ವೇತನದ ಜತೆಗೆ ಇತರ ಕೆಲವು ಅನುಕೂಲಗಳೂ ಲಭ್ಯ.
ಅಧಿಕೃತ ಅಧಿಸೂಚನೆಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: Job Alert: ಸ್ಮಾಲ್ ಇಂಡಸ್ಟ್ರೀಸ್ ಡೆವಲಪ್‌ಮೆಂಟ್ ಬ್ಯಾಂಕ್ ಆಫ್ ಇಂಡಿಯಾದ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ
ಅರ್ಜಿ ಸಲ್ಲಿಸುವ ವಿಧಾನ
- ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ
- ಹೋಮ್ ಪೇಜ್ನಲ್ಲಿ CISF GD Constable Recruitment 2023 ಆಯ್ಕೆ ಮೇಲೆ ಕ್ಲಿಕ್ ಮಾಡಿ
- ನೀವು ಹೊಸ ಬಳಕೆದಾರರಾಗಿದ್ದರೆ ಒದಗಿಸಿದ ನೋಂದಣಿ ಪ್ರಕ್ರಿಯೆಯನ್ನು ಬಳಸಿಕೊಂಡು ಖಾತೆಯನ್ನು ರಚಿಸಿ ಮತ್ತು ನೀವು ಖಾತೆಯನ್ನು ಹೊಂದಿದ್ದರೆ ಅದರ ಮೂಲಕ ಲಾಗ್ ಇನ್ ಆಗಿ
- ನಿಖರವಾದ ಮತ್ತು ನವೀಕೃತ ವೈಯಕ್ತಿಕ ಮಾಹಿತಿಯೊಂದಿಗೆ ಆನ್‌ಲೈನ್ ಅರ್ಜಿ ನಮೂನೆಯನ್ನು ಭರ್ತಿ ಮಾಡಿ
- ಅಗತ್ಯವಾದ ಡಾಕ್ಯುಮೆಂಟ್ನ ಪ್ರತಿಗಳನ್ನು ಅಪ್ಲೋಡ್ ಮಾಡಿ
- ಅರ್ಜಿ ಶುಲ್ಕವನ್ನು ಆನ್‌ಲೈನ್ ಮೂಲಕ ಪಾವತಿಸಿ (ಅಗತ್ಯವಿದ್ದವರು ಮಾತ್ರ)
- ಮತ್ತೊಮ್ಮೆ ಅರ್ಜಿ ಫಾರಂ ಅನ್ನು ಗಮನಿಸಿದ ಎಲ್ಲ ಸರಿಯಾಗಿದೆ ಎನ್ನುವುದು ಖಚಿತವಾದ ಬಳಿಕ Submit ಬಟನ್ ಕ್ಲಿಕ್ ಮಾಡಿ
- CISF GD Constable ಅಪ್ಲಿಕೇಷನ್ ಫಾರಂನ ಪ್ರಿಂಟ್ ಔಟ್ ತೆಗೆದಿಡಿ