ಬೆಂಗಳೂರು: ನೀವು ಬೆಂಗಳೂರಿನಲ್ಲಿ ಉದ್ಯೋಗ ಅರಸುತ್ತಿದ್ದೀರಾ? ಹಾಗಾದರೆ ಭಾರತ ಸರ್ಕಾರದ ಮಿನಿಸ್ಟ್ರಿ ಆಫ್ ಟೆಕ್ಸ್‌ಟೈಲ್ಸ್ ಅಧೀನದಲ್ಲಿ ಕಾರ್ಯನಿರ್ವಹಿಸುವ ಸೆಂಟ್ರಲ್ ಸಿಲ್ಕ್ ಬೋರ್ಡ್ (Central Silk Board) ಉತ್ತಮ ಅವಕಾಶ ಒದಗಿಸುತ್ತಿದೆ. ಸಿಎಸ್‌ಬಿ ತನ್ನಲ್ಲಿ ಖಾಲಿ ಇರುವ 122 ಸೈಂಟಿಸ್ಟ್ ಬಿ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ (CSB Recruitment 2024). ಸ್ನಾತಕೋತ್ತರ ಪದವಿ (Master’s Degree) ಪಡೆದವರು ಅರ್ಜಿ ಸಲ್ಲಿಸಬಹುದು. ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನ ಸೆಪ್ಟೆಂಬರ್ 5 (Job Alert).
ವಿದ್ಯಾರ್ಹತೆ ಮತ್ತು ಹುದ್ದೆಗಳ ವಿವರ
ಸಿಎಸ್‌ಬಿಯ ಈ ವಿಜ್ಞಾನಿ ಹುದ್ದೆಗೆ ಅರ್ಜಿ ಸಲ್ಲಿಸುವವರು ಅಂಗೀಕೃತ ಶಿಕ್ಷಣ ಮಂಡಳಿ ಅಥವಾ ವಿಶ್ವ ವಿದ್ಯಾನಿಲಯದಿಂದ ವಿಜ್ಞಾನ / ಕೃಷಿ ವಿಜ್ಞಾನ (Science/Agricultural Science) ವಿಷಯದಲ್ಲಿ ಸ್ನಾತಕೋತ್ತರ ಪದವಿ (Master’s Degree) ಪಡೆದಿರಬೇಕು. ಸಾಮಾನ್ಯ ವರ್ಗಕ್ಕೆ-50, ಎಸ್‌ಸಿ-20, ಎಸ್‌ಟಿ-9, ಒಬಿಸಿ-31, ಇಡಬ್ಲ್ಯುಎಸ್-12 ಮತ್ತು ಪಿಡಬ್ಲ್ಯುಬಿಡಿ ವರ್ಗಕ್ಕೆ 8 ಹುದ್ದೆಗಳಿವೆ.
ವಯೋಮಿತಿ ಮತ್ತು ಅರ್ಜಿ ಶುಲ್ಕ
ಸಿಎಸ್‌ಬಿ ಅಧಿಸೂಚನೆ ಪ್ರಕಾರ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸು 35 ವರ್ಷ ಮೀರಬಾರದು. ಮೀಸಲಾತಿಗೆ ಅನುಗುಣವಾಗಿ ವಯೋಮಿತಿಯಲ್ಲಿ ಸಡಿಲಿಕೆ ಇದೆ. ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ, ಎಸ್‌ಸಿ / ಎಸ್‌ಟಿ / ಪಿಡಬ್ಲ್ಯುಬಿಡಿ ಅಭ್ಯರ್ಥಿಗಳಿಗೆ 5 ವರ್ಷಗಳ ರಿಯಾಯಿತಿ ಲಭ್ಯ.
ಆಯ್ಕೆ ವಿಧಾನ ಮತ್ತು ಮಾಸಿಕ ಸಂಬಳ
ಜೆಆರ್‌ಎಫ್ ಹಾಗೂ ಎಸ್‌ಆರ್‌ಎಫ್ ಅಥವಾ ಪಿಎಚ್‌ಡಿ ಪ್ರವೇಶಕ್ಕಾಗಿ ಇಂಡಿಯನ್ ಕೌನ್ಸಿಲ್ ಆಫ್ ಅಗ್ರಿಕಲ್ಚರ್ ರಿಸರ್ಚ್ (ICAR) ನಡೆಸುವ ಆಲ್ ಇಂಡಿಯಾ ಕಾಂಪಿಟೇಟಿವ್ ಎಕ್ಸಾಮ್ (AICE) ಅನ್ನು ಬರೆದಿರಬೇಕು. ಈ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳ ಆಧಾರದಲ್ಲಿ ಶಾರ್ಟ್ ಲಿಸ್ಟ್ ಮಾಡಿ, ನೇಮಕ ಮಾಡಿಕೊಳ್ಳಲಾಗುತ್ತದೆ. ಆಯ್ಕೆಯಾದವರಿಗೆ 56,100 ರೂ. – 1,77,500 ರೂ. ಮಾಸಿಕ ವೇತನ ಲಭ್ಯ.
ಅರ್ಜಿ ಶುಲ್ಕ
ಅರ್ಜಿ ಶುಲ್ಕವಾಗಿ ಸಾಮಾನ್ಯ ವಿಭಾಗ / ಒಬಿಸಿ / ಇಡಬ್ಲ್ಯುಎಸ್ / ಮಾಜಿ ಯೋಧರು 1,000 ರೂ. ಪಾವತಿಸಬೇಕು. ಅರ್ಜಿ ಶುಲ್ಕವನ್ನು ಪೋಸ್ಟ್ ಆಫೀಸ್ ಮೂಲಕ ಪಾವತಿಸಬೇಕು. ಎಸ್‌ಸಿ / ಎಸ್‌ಟಿ / ಪಿಡಬ್ಲ್ಯುಬಿಡಿ / ಮಹಿಳಾ ಅಭ್ಯರ್ಥಿಗಳಿಗೆ ಅರ್ಜಿ ಸುಲ್ಕವಿಲ್ಲ.
CSB Recruitment 2024 ಅಧಿಸೂಚನೆಗಾಗಿ ಇಲ್ಲಿ ಕ್ಲಿಕ್ ಮಾಡಿ
ಅರ್ಜಿ ಸಲ್ಲಿಸುವ ವಿಧಾನ
- ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ (https://karnemaka.kar.nic.in/CSB_rec_24/)
- SUBMIT APPLICATION
- ಇಲ್ಲಿ ಕಂಡುಬರುವ ಅಪ್ಲಿಕೇಷನ್ ಫಾರಂ ಅನ್ನು ಎಚ್ಚರಿಕೆಯಿಂದ ಭರ್ತಿ ಮಾಡಿ.
- ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ.
- ಭರ್ತಿ ಮಾಡಿದ ವಿವರಗಳನ್ನು ಮತ್ತೊಮ್ಮೆ ಪರಿಶೀಲಿಸಿ ಎಲ್ಲವೂ ಸರಿ ಇದ್ದರೆ Submit ಬಟನ್ ಕ್ಲಿಕ್ ಮಾಡಿ.
- ಭವಿಷ್ಯದ ಅಗತ್ಯಗಳಿಗೆ ಅಪ್ಲಿಕೇಷನ್ ಫಾರಂನ ಪ್ರಿಂಟ್ಔಟ್ ತೆಗೆದಿಡಿ.
ಹೆಚ್ಚಿನ ವಿವರಗಳಿಗೆ ಹೆಲ್ಪ್‌ಲೈನ್ ನಂಬರ್: 011-4075 9000, 011-6922770ಗೆ ಕರೆ ಮಾಡಿ ಅಥವಾ ಇಬೇಲ್ ಐಡಿ: icar@nta.ac.in ಮೇಲ್ ಮಾಡಿ.
ಅಧಿಕೃತ ವೆಬ್‌ಸೈಟ್ ವಿಳಾಸ: csb.gov.in
ಇದನ್ನೂ ಓದಿ: RRB Recruitment 2024: ಗುಡ್‌ನ್ಯೂಸ್; ಬರೋಬ್ಬರಿ 14,298 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದ ರೈಲ್ವೆ ಇಲಾಖೆ