ನವದೆಹಲಿ: ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯದ (Ministry of Home Affairs) ಗುಪ್ತಚರ ಬ್ಯೂರೋ (Intelligence Bureau) ಐಬಿ ಎಸಿಐಒ ಗ್ರೇಡ್ 2 / ಎಕ್ಸಿಕ್ಯೂಟಿವ್ (IB ACIO Grade 2/ Executive) ಹುದ್ದೆಗಳ ಭರ್ತಿಗೆ ನೋಂದಣಿ ಪ್ರಕ್ರಿಯೆ ಪ್ರಾರಂಭಿಸಿದೆ. ಡಿಸೆಂಬರ್ 15ರ ತನಕ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಒಟ್ಟು 995 ಹುದ್ದೆಗಳು ಖಾಲಿ ಇದ್ದು, ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ ಪಡೆದವರು ಅಥವಾ ತತ್ಸಮಾನ ವಿದ್ಯಾರ್ಹತೆಯನ್ನು ಹೊಂದಿದವರು ಅರ್ಜಿ ಸಲ್ಲಿಸಬಹುದು (Job Alert).
ಹುದ್ದೆಗಳ ವಿವರ ಮತ್ತು ವಯೋಮಿತಿ
ಸಾಮಾನ್ಯ-377, ಎಸ್‌ಸಿ-134, ಎಸ್‌ಟಿ-133, ಒಬಿಸಿ-222, ಇಡಬ್ಲ್ಯುಎಸ್ ವಿಭಾಗಕ್ಕೆ-129 ಹುದ್ದೆಗಳು ಖಾಲಿ ಇವೆ. 18-27 ವರ್ಷದೊಳಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಮೀಸಲಾತಿಗೆ ಅನುಗುಣವಾಗಿ ವಯೋಮಿತಿಯಲ್ಲಿ ಸಡಿಲಿಕೆ ಇದೆ. ಒಬಿಸಿ- 3 ವರ್ಷ, ಎಸ್‌ಸಿ/ಎಸ್‌ಟಿ-5 ವರ್ಷ, ವಿಧವಾ, ವಿಚ್ಛೇಧಿತ ಮಹಿಳೆ, ಗಂಡನಿಂದ ಕಾನೂನಾತ್ಮಕವಾಗಿ ಬೇರ್ಪಟ್ಟು ಇನ್ನೊಂದು ಮದುವೆಯಾಗದ ಮಹಿಳೆ- 8 ವರ್ಷ (ಸಾಮಾನ್ಯ ವರ್ಗ), 13 ವರ್ಷ (ಎಸ್/ಎಸ್‌ಟಿ)ಗಳ ಸಡಿಲಿಕೆ ಅನ್ವಯವಾಗುತ್ತದೆ.
ಆಯ್ಕೆ ವಿಧಾನ
3 ಹಂತಗಳಲ್ಲಿ ಆಯ್ಕೆ ನಡೆಯಲಿದೆ. ಮೊದಲ ಹಂತ: ಲಿಖಿತ ಪರೀಕ್ಷೆ (100 ಅಂಕಗಳು), ಎರಡನೇ ಹಂತ: ವಿವರಣಾತ್ಮಕ ಪರೀಕ್ಷೆ (ಪ್ರಬಂಧ ಮತ್ತು ಪ್ರೆಸಿಸ್ ಬರವಣಿಗೆ, ಇಂಗ್ಲಿಷ್ ಗ್ರಹಿಕೆ) ಮತ್ತು ಮೂರನೇ ಹಂತ: ಸಂದರ್ಶನ, ವ್ಯಕ್ತಿತ್ವ ಪರೀಕ್ಷೆ ಮತ್ತು ವೈವಾ.
ಮೊದಲ ಹಂತದ ಪರೀಕ್ಷೆ ಆಬ್ಜೆಕ್ಟಿವ್ ರೀತಿಯದ್ದಾಗಿದ್ದು, 100 ಅಂಕವನ್ನು ನಿಗದಿಪಡಿಸಲಾಗಿದೆ. ಪ್ರಚಲಿತ ವಿದ್ಯಮಾನಗಳು (Current Affairs), ಸಾಮಾನ್ಯ ಜ್ಞಾನ (General Studies), ನಂಬರಿಕಲ್ ಆಪ್ಟಿಟ್ಯೂಡ್, ರೀಸನಿಂಗ್ ಮತ್ತು ಲಾಜಿಕಲ್ ಆಪ್ಟಿಟ್ಯೂಡ್, ಇಂಗ್ಲಿಷ್ ಭಾಷೆಯನ್ನೊಳಗೊಂಡ ತಲಾ 20 ಅಂಕಗಳ ಪ್ರಶ್ನೆಗಳಿರುತ್ತವೆ. ಈ ಪರೀಕ್ಷೆ ಬರೆಯಲು 1 ಗಂಟೆಗಳ ಅವಧಿ ಇದೆ. ಇನ್ನು ಎರಡನೇ ಹಂತದ ಪರೀಕ್ಷೆಗೂ 1 ಗಂಟೆಗಳ ಅವಧಿ ನಿಗದಿಪಡಿಸಲಾಗಿದೆ. 50 ಅಂಕದ ಪರೀಕ್ಷೆ ಇದಾಗಿದ್ದು, ಪ್ರಬಂಧ ರಚನೆ (30 ಅಂಕ) ಮತ್ತು ಇಂಗ್ಲಿಷ್ ಗ್ರಹಿಕೆ ಮತ್ತು ಪ್ರೆಸಿಸ್ ಬರವಣಿಗೆ (20 ಅಂಕ)ಯನ್ನೊಳಗೊಂಡಿದೆ. ಸಂದರ್ಶನಕ್ಕೆ 100 ಅಂಕ ಇದೆ.
ಎಷ್ಟು ಅಂಕ ಪಡೆಯಬೇಕು? ವೇತನ ಎಷ್ಟು?
ಜನರಲ್/ಇಡಬ್ಲ್ಯುಎಸ್ ಅಭ್ಯರ್ಥಿಗಳು 35, ಒಬಿಸಿ ಅಭ್ಯರ್ಥಿಗಳು 34 ಮತ್ತು ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳು 33 ಅಂಕ ಪಡೆಯಬೇಕು. ಆಯ್ಕೆಯಾದವರಿಗೆ 44,900-1,42,400 ರೂ. ಮಾಸಿಕ ವೇತನ ದೊರೆಯಲಿದೆ. ಕರ್ನಾಟಕದಲ್ಲಿ ಬೆಳಗಾವಿ, ಬೆಂಗಳೂರು, ಹುಬ್ಬಳ್ಳಿ, ಕಲಬುರಗಿ, ಮಂಗಳೂರು, ಮೈಸೂರು, ಶಿವಮೊಗ್ಗ ಮತ್ತು ಉಡುಪಿಯಲ್ಲಿ ಪರೀಕ್ಷೆ ನಡೆಯಲಿದೆ.
ಅಧಿಸೂಚನೆಗಾಗಿ ಇಲ್ಲಿ ಕ್ಲಿಕ್ ಮಾಡಿ.
ಇದನ್ನೂ ಓದಿ: Job Alert: ನಮ್ಮ ಮೆಟ್ರೋದಲ್ಲಿದೆ ಉದ್ಯೋಗಾವಕಾಶ; ಇಂದೇ ಅರ್ಜಿ ಸಲ್ಲಿಸಿ
ಅರ್ಜಿ ಸಲ್ಲಿಸುವ ವಿಧಾನ
- ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ
- Whats New section ಆಯ್ಕೆ ಮೇಲೆ ಕ್ಲಿಕ್ ಮಾಡಿದರೆ ಹೊಸ ಪುಟ ತೆರೆಯುತ್ತದೆ.
- IB ACIO Grade 2/ Executive Exam 2023 ಲಿಂಕ್ ಮೇಲೆ ಕ್ಲಿಕ್ ಮಾಡಿ.
- ಹೊಸ ಪುಟ ತೆರೆಯುತ್ತದೆ. ಇಲ್ಲಿ ಹೆಸರು ನೋಂದಾಯಿಸಿ.
- ನೋಂದಣಿ ಆದ ಮೇಲೆ ಆ ಅಕೌಂಟ್ ಮೂಲಕ ಲಾಗಿನ್ ಆಗಿ.
- ಅರ್ಜಿ ಭರ್ತಿ ಮಾಡಿ ಆನ್‌ಲೈನ್ ಮೂಲಕ ಅರ್ಜಿ ಶುಲ್ಕ ಪಾವತಿಸಿ.
- ಅರ್ಜಿ ಸಲ್ಲಿಸಿ.
- ಅಪ್ಲಿಕೇಷನ್ ಫಾರಂ ಪ್ರಿಂಟ್ಔಟ್ ತೆಗೆದಿಡಿ.