Site icon Vistara News

Job alert: ನ್ಯಾಷನಲ್ ಇನ್‌ಸ್ಟಿಟ್ಯೂಟ್‌ ಆಫ್ ವೈರಾಲಜಿಯಲ್ಲಿ 80 ಹುದ್ದೆ; ಡಿಪ್ಲೋಮಾ ಓದಿದವರು ಅರ್ಜಿ ಸಲ್ಲಿಸಿ

pune

pune

ಬೆಂಗಳೂರು: ನ್ಯಾಷನಲ್ ಇನ್‌ಸ್ಟಿಟ್ಯೂಟ್‌ ಆಫ್ ವೈರಾಲಜಿ (National Institute of Virology-NIV) ಖಾಲಿ ಇರುವ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ಸುಮಾರು 80 ಹುದ್ದೆಗಳು ಖಾಲಿ ಇದ್ದು, ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕು. ಟೆಕ್ನಿಕಲ್ ಅಸಿಸ್ಟೆಂಟ್ ಮತ್ತು ಟೆಕ್ನಿಶಿಯನ್ ಹುದ್ದೆಗಳು ಇವಾಗಿದ್ದು, ತಾತ್ಕಾಲಿಕ ಆಧಾರದ ಮೇಲೆ ಭರ್ತಿ ಮಾಡಲಾಗುವುದು ಎಂದು ಅಧಿಸೂಚನೆ ತಿಳಿಸಿದೆ. ಅರ್ಜಿ ಸಲ್ಲಿಕೆಗೆ ಡಿಸೆಂಬರ್‌ 10 ಕೊನೆಯ ದಿನ (Job alert).

ಹುದ್ದೆಗಳ ವಿವರ ಮತ್ತು ವಿದ್ಯಾರ್ಹತೆ

ಟೆಕ್ನಿಕಲ್‌ ಅಸಿಸ್ಟೆಂಟ್‌ (ಗ್ರೂಪ್‌ ಬಿ)- 49 ಹುದ್ದೆಗಳು ಖಾಲಿ ಇದ್ದು, ಡಿಪ್ಲೋಮಾ (ಎಂಜಿನಿಯರಿಂಗ್‌)/ಪದವಿ ಅಥವಾ ತತ್ಸಮಾನ ಶೈಕ್ಷಣಿಕ ಅರ್ಹತೆ ಹೊಂದಿರಬೇಕು. ಟೆಕ್ನೀಶಿಯನ್‌ (ಗ್ರೂಪ್‌ ಸಿ)-31 ಹುದ್ದೆಗಳಿದ್ದು, 12ನೇ ತರಗತಿ/ಡಿಪ್ಲೋಮಾ (ಎಂಜಿನಿಯರಿಂಗ್‌) ಓದಿದವರು ಅರ್ಜಿ ಸಲ್ಲಿಸಬಹುದು. ಟೆಕ್ನಿಕಲ್‌ ಅಸಿಸ್ಟೆಂಟ್‌ ಹುದ್ದೆಗೆ ಅರ್ಜಿ ಸಲ್ಲಿಸುವವರ ಗರಿಷ್ಠ ವಯೋಮಿತಿ 30 ವರ್ಷ ಮತ್ತು ಟೆಕ್ನೀಶಿಯನ್‌ ಹುದ್ದೆಗೆ ಗರಿಷ್ಠ ವಯೋಮಿತಿ 28 ವರ್ಷ. ಮೀಸಲಾತಿಗೆ ಅನುಗುಣವಾಗಿ ವಯೋಮಿತಿಯಲ್ಲಿ ಸಡಿಲಿಕೆ ಲಭ್ಯ. ಎಸ್‌ಸಿ/ಎಸ್‌ಟಿ 5 ವರ್ಷ, ಒಬಿಸಿ 3 ವರ್ಷ, ಪಿಡಬ್ಲ್ಯುಬಿಡಿ 10 ವರ್ಷ, ಪಿಡಬ್ಲ್ಯುಬಿಡಿ + ಒಬಿಸಿ 13 ವರ್ಷ, ಪಿಡಬ್ಲ್ಯುಬಿಡಿ + ಎಸ್‌ಸಿ/ಎಸ್‌ಟಿ 15 ವರ್ಷಗಳ ಸಡಿಲಿಕೆ ಇದೆ.

ಅರ್ಜಿ ಶುಲ್ಕ

ಎಸ್‌ಸಿ/ಎಸ್‌ಟಿ/ವಿಶೇಷ ಚೇತನರು/ಎಲ್ಲ ವರ್ಗದ ಮಹಿಳೆಯರಿಗೆ ಶುಲ್ಕವಿಲ್ಲ. ಜನರಲ್‌/ಒಬಿಸಿ/ಇಡಬ್ಲ್ಯುಎಸ್‌ ಅಭ್ಯರ್ಥಿಗಳು 300 ರೂ. ಅರ್ಜಿ ಶುಲ್ಕ ಪಾವತಿಸಬೇಕು. ಅರ್ಜಿ ಶುಲ್ಕವನ್ನು ಆನ್‌ಲೈನ್‌ ಮೂಲಕವೇ ಪಾವತಿಸಬೇಕು. ಇದಕ್ಕಾಗಿ ಡೆಬಿಟ್‌, ಕ್ರೆಡಿಟ್‌ ಕಾರ್ಡ್‌, ನೆಟ್‌ ಬ್ಯಾಂಕಿಂಗ್‌ ಬಳಸಬಹುದು.

ಆಯ್ಕೆ ವಿಧಾನ

ಆನ್‌ಲೈನ್‌ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ. ಡಿಸೆಂಬರ್‌ 16 ಮತ್ತು 17ರಂದು ಪರೀಕ್ಷೆ ನಡೆಯಲಿದೆ. ಗಮನಿಸಿ ಪ್ರಶ್ನೆ ಪತ್ರಿಕೆ ಇಂಗ್ಲಿಷ್‌ ಮತ್ತು ಹಿಂದಿಯಲ್ಲಿ ಮಾತ್ರ ಲಭ್ಯ. ತಪ್ಪಾದ ಉತ್ತರಕ್ಕೆ ನೆಗೆಟಿವ್‌ ಅಂಕಗಳಿದ್ದು ಎಚ್ಚರಿಕೆಯಿಂದ ಉತ್ತರ ಬರೆಯಬೇಕು ಎಂದು ಪ್ರಕಟಣೆ ತಿಳಿಸಿದೆ. ಆಯ್ಕೆಯಾದವರಿಗೆ 35,400 ರೂ.-1,12,400 ರೂ. (ಟೆಕ್ನಿಕಲ್‌ ಅಸಿಸ್ಟೆಂಟ್‌ ), 19,900 ರೂ.-63,200 ರೂ. (ಟೆಕ್ನಿಶಿಯನ್) ಮಾಸಿಕ ವೇತನ ಸಿಗಲಿದೆ.

ಅಧಿಕೃತ ಅಧಿಸೂಚನೆಗಾಗಿ ಇಲ್ಲಿ ಕ್ಲಿಕ್‌ ಮಾಡಿ.

ಅರ್ಜಿ ಸಲ್ಲಿಸುವ ವಿಧಾನ

ಹೆಚ್ಚಿನ ವಿವರಗಳಿಗೆ, ಸಂಶಯ ನಿವಾರಣೆಗೆ ಅಧಿಕೃತ ವೆಬ್‌ಸೈಟ್‌ https://niv.icmr.org.in/ಗೆ ಭೇಟಿ ನೀಡಿ.

ಇದನ್ನೂ ಓದಿ: Job Alert: ಪದವೀಧರರಿಗೆ ಗುಡ್‌ನ್ಯೂಸ್‌; ಗೃಹ ಸಚಿವಾಲಯದ 995 ಹುದ್ದೆಗಳಿಗೆ ಅರ್ಜಿ ಆಹ್ವಾನ

Exit mobile version