Site icon Vistara News

Job Alert: ಸೇನೆ ಸೇರಲು ಬಯಸುವವರಿಗೆ ಸುವರ್ಣಾವಕಾಶ; ಅಗ್ನಿವೀರ್‌ ಹುದ್ದೆಗಳಿಗೆ ಇಂದಿನಿಂದ ಅರ್ಜಿ ಸಲ್ಲಿಸಿ

agniveer

agniveer

ನವದೆಹಲಿ: ಭಾರತೀಯ ಸೇನೆಯ ಅಗ್ನಿವೀರ್‌ ನೇಮಕಾತಿ 2024ರ ಅಧಿಸೂಚನೆ (Indian Army Agniveer Recruitment 2024) ಇಂದು (ಫೆಬ್ರವರಿ 8) ಬಿಡುಗಡೆಯಾಗಲಿದೆ. ಅಗ್ನಿವೀರ್‌-ಜನರಲ್‌ ಡ್ಯೂಟಿ, ಟೆಕ್ನಿಕಲ್‌, ಕ್ಲರ್ಕ್‌ / ಸ್ಟೋರ್‌ ಕೀಪರ್‌ ಮತ್ತು ಟ್ರೇಡ್‌ ಮ್ಯಾನ್‌ ಹುದ್ದೆಗಳನ್ನು ಭರ್ತಿ ಮಾಡಲಾಗುವುದು. 8 / 10 / 12ನೇ ತರಗತಿ ತೇರ್ಗಡೆಯಾದವರು ಅರ್ಜಿ ಸಲ್ಲಿಸಬಹುದು. ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನ ಮಾರ್ಚ್‌ 21 (Job Alert).

ವಿದ್ಯಾರ್ಹತೆ

ಅಗ್ನಿವೀರ್‌ ಜನರಲ್‌ ಡ್ಯೂಟಿ: 10ನೇ ತರಗತಿಯಲ್ಲಿ ಪ್ರತಿ ವಿಷಯದಲ್ಲಿಯೂ ಶೇ. 45 ಅಂಕಗಳೊಂದಿಗೆ ತೇರ್ಗಡೆಯಾಗಿರಬೇಕು.
ಅಗ್ನಿವೀರ್‌ ಟೆಕ್ನಿಕಲ್‌: ಮಾನ್ಯತೆ ಪಡೆದ ಮಂಡಳಿಯಿಂದ 12ನೇ ತರಗತಿಯಲ್ಲಿ ಶೇ. 60 ಅಂಕಗಳೊಂದಿಗೆ ತೇರ್ಗಡೆಯಾಗಿರಬೇಕು.
ಅಗ್ನಿವೀರ್‌ ಕ್ಲರ್ಕ್‌ / ಸ್ಟೋರ್‌ ಕೀಪರ್‌: ಮಾನ್ಯತೆ ಪಡೆದ ಮಂಡಳಿಯಿಂದ 12ನೇ ತರಗತಿಯಲ್ಲಿ ಶೇ. 60 ಅಂಕಗಳೊಂದಿಗೆ ತೇರ್ಗಡೆಯಾಗಿರಬೇಕು.
ಅಗ್ನಿವೀರ್‌ ಟ್ರೇಡ್ಸ್‌ಮ್ಯಾನ್‌ (10ನೇ ತರಗತಿ): 10ನೇ ತರಗತಿಯಲ್ಲಿ ತೇರ್ಗಡೆಯಾಗಿರಬೇಕು. ಪ್ರತಿ ವಿಷಯದಲ್ಲಿಯೂ ಶೇ. 33ರಷ್ಟು ಅಂಕ ಕಡ್ಡಾಯ.
ಅಗ್ನಿವೀರ್‌ ಟ್ರೇಡ್ಸ್‌ಮ್ಯಾನ್‌ (8ನೇ ತರಗತಿ): 8ನೇ ತರಗತಿಯಲ್ಲಿ ತೇರ್ಗಡೆಯಾಗಿರಬೇಕು. ಪ್ರತಿ ವಿಷಯದಲ್ಲಿಯೂ ಶೇ. 33ರಷ್ಟು ಅಂಕ ಕಡ್ಡಾಯ.

ಪರೀಕ್ಷಾ ಶುಲ್ಕ ಮತ್ತು ವಯೋಮಿತಿ

ಅಭ್ಯರ್ಥಿಗಳು ಅರ್ಜಿ ಶುಲ್ಕವಾಗಿ 550 ರೂ. ಪಾವತಿಸಬೇಕು. ಅರ್ಜಿ ಸಲ್ಲಿಸುವವರ ಕನಿಷ್ಠ ವಯಸ್ಸು 17 ವರ್ಷ 6 ತಿಂಗಳು ಮತ್ತು ಗರಿಷ್ಠ ವಯಸ್ಸು 21 ವರ್ಷ.

ಆಯ್ಕೆ ವಿಧಾನ

ಮೂರು ಹಂತಗಳಲ್ಲಿ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ. ಮೊದಲ ಹಂತ ಆನ್‌ಲೈನ್‌ ಪರೀಕ್ಷೆ. ಇದರಲ್ಲಿ ಟೈಪಿಂಗ್‌ ಟೆಸ್ಟ್‌ ಕೂಡ ಇರಲಿದೆ. ಎರಡನೇ ಹಂತದಲ್ಲಿ ನೇಮಕಾತಿ ರ‍್ಯಾಲಿ ನಡೆಯಲಿದೆ. ಇದರಲ್ಲಿ ತೇರಗಡೆಯಾದವರನ್ನು ಮೂರನೇ ಹಂತಕ್ಕೆ ಆಯ್ಕೆ ಮಾಡಲಾಗುತ್ತದೆ. ಇಲ್ಲಿ ದಾಖಲೆಗಳ ಪರೀಶೀಲನೆ, ವೈದ್ಯಕೀಯ ಪರೀಕ್ಷೆ ಮತ್ತು ಮೆರಿಟ್‌ ಲಿಸ್ಟ್‌ ತಯಾರಿಸಿ ಆಯ್ಕೆ ನಡೆಸಲಾಗುತ್ತದೆ.

ಅರ್ಜಿ ಸಲ್ಲಿಸುವ ವಿಧಾನ

ಆಸಕ್ತರು https://joinindianarmy.nic.in/ ವೆಬ್‌ಸೈಟ್‌ಗೆ ತೆರಳಿ ಹೆಸರು ನೋಂದಾಯಿಸಿ ಅರ್ಜಿ ಸಲ್ಲಿಸಬಹುದು.

ಇದನ್ನೂ ಓದಿ: Job Alert: ಸರ್ಕಾರಿ ಉದ್ಯೋಗ ಹುಡುಕುವವರಿಗೆ ಗುಡ್‌ನ್ಯೂಸ್‌; 64 ಹುದ್ದೆಗಳಿಗೆ ಫೆ. 10ರಿಂದ ಅರ್ಜಿ ಸಲ್ಲಿಸಿ

Exit mobile version