Site icon Vistara News

Job Alert: ಇಂಡಿಯಾ ಪೋಸ್ಟ್‌ ಪೇಮೆಂಟ್‌ ಬ್ಯಾಂಕ್‌ನಲ್ಲಿದೆ 54 ಹುದ್ದೆ; ಅರ್ಜಿ ಸಲ್ಲಿಸಲು ನಾಳೆಯೇ ಕೊನೆಯ ದಿನ

Job Alert

Job Alert

ಬೆಂಗಳೂರು: ಉದ್ಯೋಗಕ್ಕಾಗಿ ಹುಡುಕಾಡುತ್ತಿದ್ದರೆ ಇಲ್ಲಿದೆ ಗೋಲ್ಡನ್‌ ಚಾನ್ಸ್‌. ಇಂಡಿಯಾ ಪೋಸ್ಟ್‌ ಪೇಮೆಂಟ್‌ ಬ್ಯಾಂಕ್‌ (India Post Payments Bank) ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ (IPPB Recruitment 2024). ಇನ್ಫರ್ಮೇಷನ್‌ ಟೆಕ್ನಾಲಜಿ ಎಕ್ಸಿಕ್ಯೂಟಿವ್‌ ಹುದ್ದೆ ಇದಾಗಿದ್ದು, ಒಟ್ಟು 54 ಸ್ಥಾನಗಳನ್ನು ಭರ್ತಿ ಮಾಡಲು ಅಧಿಸೂಚನೆ ಹೊರಡಿಸಲಾಗಿದೆ. ಉದ್ಯೋಗದ ಸ್ಥಳ: ಚೆನ್ನೈ, ಮುಂಬೈ, ದೆಹಲಿ. ಬಿಸಿಎ, ಬಿಎಸ್‌ಸಿ ಓದಿದವರು ಅರ್ಜಿ ಸಲ್ಲಿಸಬಹುದು. ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕಿದ್ದು, ನಾಳೆಯೇ (ಮೇ 24) ಕೊನೆಯ ದಿನ (Job Alert).

ಹುದ್ದೆಗಳ ವಿವರ ಮತ್ತು ವಿದ್ಯಾರ್ಹತೆ

ಎಕ್ಸಿಕ್ಯೂಟಿವ್‌ (ಅಸೋಸಿಯೇಟ್‌ ಕನ್ಸಲ್‍ಟೆಂಟ್‍) (Executive (Associate Consultant)- 28, ಎಕ್ಸಿಕ್ಯೂಟಿವ್‌ (ಕನ್ಸಲ್‍ಟೆಂಟ್‍) (Executive (Consultant) – 21 ಮತ್ತು ಎಕ್ಸಿಕ್ಯೂಟಿವ್‌ (ಸೀನಿಯರ್ ಕನ್ಸಲ್‍ಟೆಂಟ್‍)‌ (Executive (Senior Consultant) – 5 ಹುದ್ದೆಗಳಿವೆ. IPPB official notification ಪ್ರಕಾರ ಅಭ್ಯರ್ಥಿಗಳು ಅಂಗೀಕೃತ ವಿಶ್ವವಿದ್ಯಾನಿಲಯದಿಂದ ಬಿಸಿಎ, ಬಿ.ಎಸ್‌ಸಿ, ಬಿ.ಇ. ಅಥವಾ ಬಿ.ಟೆಕ್‌, ಎಂಸಿಎ ಪದವಿ ಪಡೆದಿರಬೇಕು. ಜತೆಗೆ 1ರಿಂದ 6 ವರ್ಷದವರೆಗೆ ಅನುಭವ ಹೊಂದಿರುವುದು ಕಡ್ಡಾಯ.

ವಯೋಮಿತಿ ಮತ್ತು ಅರ್ಜಿ ಶುಲ್ಕ

ಅಭ್ಯರ್ಥಿಗಳ ಕನಿಷ್ಠ ವಯಸ್ಸು 22 ವರ್ಷ ಮತ್ತು ಗರಿಷ್ಠ ವಯಸ್ಸು 45 ವರ್ಷ. ಮೀಸಲಾತಿಗೆ ಅನುಗುಣವಾಗಿ ವಯೋಮಿತಿಯಲ್ಲಿ ಸಡಿಲಿಕೆ ಲಭ್ಯ. ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ, ಎಸ್‌ಸಿ / ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ ಮತ್ತು ಪಿಡಬ್ಲ್ಯುಡಿ ಅಭ್ಯರ್ಥಿಗಳಿಗೆ 10 ವರ್ಷಗಳ ಸಡಿಲಿಕೆ ಇದೆ. ಅರ್ಜಿ ಶುಲ್ಕವಾಗಿ ಎಸ್‌ಸಿ / ಎಸ್‌ಟಿ / ಪಿಡಬ್ಲ್ಯುಡಿ ಅಭ್ಯರ್ಥಿಗಳು 150 ರೂ. ಮತ್ತು ಉಳಿದೆಲ್ಲ ವರ್ಗಗಳ ಅಭ್ಯರ್ಥಿಗಳು 750 ರೂ. ಪಾವತಿಸಬೇಕು. ಇದಕ್ಕಾಗಿ ಆನ್‌ಲೈನ್‌ ವಿಧಾನ ಬಳಸಬೇಕು ಎಂದು ಪ್ರಕಟಣೆ ತಿಳಿಸಿದೆ.

ಆಯ್ಕೆ ವಿಧಾನ ಮತ್ತು ಮಾಸಿಕ ವೇತನ

ಆನ್‌ಲೈನ್‌ ಪರೀಕ್ಷೆ, ಗ್ರೂಪ್‌ ಡಿಸ್ಕಷನ್‌ ಮತ್ತು ಸಂದರ್ಶನದ ಮೂಲಕ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ. ಗುತ್ತಿಗೆ ಆಧಾರದಲ್ಲಿ ಈ ನೇಮಕಾತಿ ನಡೆಯಲಿದ್ದು, ಆಯ್ಕೆಯಾದವರಿಗೆ 10,00,000 ರೂ.-25,00,000 ರೂ. ವಾರ್ಷಿಕ ವೇತನ ದೊರೆಯಲಿದೆ.

IPPB Recruitment 2024 ಅಧಿಸೂಚನೆಗಾಗಿ ಇಲ್ಲಿ ಕ್ಲಿಕ್‌ ಮಾಡಿ.

ಅರ್ಜಿ ಸಲ್ಲಿಕೆ ವಿಧಾನ

ಹೆಚ್ಚಿನ ವಿವರಗಳಿಗೆ ಇಲ್ಲಿ ಕ್ಲಿಕ್‌ ಮಾಡಿ.

ಇದನ್ನೂ ಓದಿ: Job Alert: ಬಂಧನ್‌ ಬ್ಯಾಂಕ್‌ನಲ್ಲಿದೆ ಉದ್ಯೋಗಾವಕಾಶ; ದ್ವಿತೀಯು ಪಿಯು ಪಾಸಾದವರೂ ಅಪ್ಲೈ ಮಾಡಿ

Exit mobile version