Site icon Vistara News

Job Alert: ಕರ್ನಾಟಕ ಪಂಚಾಯತ್‌ ರಾಜ್‌; ಸಂಯೋಜಕರ ನೇಮಕಾತಿಗೆ ಅರ್ಜಿ ಆಹ್ವಾನ

panchayath raj

panchayath raj

ಬೆಂಗಳೂರು: ಕರ್ನಾಟಕ ಪಂಚಾಯತ್‌ ರಾಜ್‌ ಆಯುಕ್ತಾಲಯ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ಗುತ್ತಿಗೆ ಆಧಾರದಲ್ಲಿ ಈ ನೇಮಕಾತಿ ನಡೆಯಲಿದೆ. ಖಾಲಿ ಇರುವ ಒಟ್ಟು 5 ಹುದ್ದೆಗಳಿಗೆ ಆಸಕ್ತರು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಜನವರಿ 21 (Job Alert).

ಹುದ್ದೆಗಳ ವಿವರ

Mainstreaming the Sustainable Water Sanitation and Hygiene (WASH) ಮತ್ತು
Menstrual Hygiene Management (MHM) ಕಾರ್ಯಕ್ರಮದಡಿ ತರಬೇತಿ ಹಾಗೂ ಸಂಶೋಧನಾ ಸಂಯೋಜಕರು (Training and Research Coordinator)-1 ಹುದ್ದೆ ಮತ್ತು Advancing Sustainable Menstrual Hygiene – An Initiative for Zero Menstrual Waste ಕಾರ್ಯಕ್ರಮದಡಿ ಜಿಲ್ಲಾ ಎಸ್‌.ಎಂ.ಎಚ್‌.ಎಂ. ಸಂಯೋಜಕರು (District SMHM Coordinator)-4 ಹುದ್ದೆಗಳಿವೆ.

ಯುನಿಸೆಫ್‌ ಮತ್ತು ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯ ನಿಯಮಿತ ಸಹಯೋಗದೊಂದಿಗೆ ರಾಜ್ಯದ ಗ್ರಾಮೀಣ ಪ್ರದೇಶದಲ್ಲಿ ಪಂಚಾಯತ್‌ ರಾಜ್‌ ಸಂಸ್ಥೆಗಳ ಮೂಲಕ WASH ಮತ್ತು MHM ಸೇವೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಈ ನೇಮಕಾತಿ ನಡೆಯಲಿದೆ.

ಅರ್ಹತೆ

ಆಸಕ್ತರು ಕನ್ನಡ ಜ್ಞಾನ ಹೊಂದಿರಬೇಕು. ರಾಜ್ಯದ ವಿವಿಧ ಜಿಲ್ಲೆ / ತಾಲೂಕು / ಗ್ರಾಮ ಪಂಚಾಯತ್‌ಗಳಿಗೆ ಪ್ರವಾಸ ಮಾಡುವುದು ಕಡ್ಡಾಯ. ತರಬೇತಿ ಹಾಗೂ ಸಂಶೋಧನಾ ಸಂಯೋಜಕರು ಹುದ್ದೆಗೆ ಅರ್ಜಿ ಸಲ್ಲಿಸುವವರು ಸೋಶಿಯಾಲಜಿ / ಪಬ್ಲಿಕ್‌ ಹೆಲ್ತ್‌ / ಕಮ್ಯುನಿಕೇಷನ್‌ / ಪ್ಯಾಪುಲೇಶನ್ ಸ್ಟಡೀಸ್‌ / ರೂರಲ್‌ ಡೆವಲಪ್‌ಮೆಂಟ್‌ / ಸೋಶಿಯಲ್‌ ವರ್ಕ್‌ / ನರ್ಸಿಂಗ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದಿರಬೇಕು. ಜತೆಗೆ 2 ವರ್ಷಗಳ ಅನುಭವ ಹೊಂದಿರಬೇಕು.

ಜಿಲ್ಲಾ ಎಸ್‌.ಎಂ.ಎಚ್‌.ಎಂ. ಸಂಯೋಜಕರು ಹುದ್ದೆಗೆ ಅರ್ಜಿ ಸಲ್ಲಿಸುವವರು ಸೋಶಿಯಾಲಜಿ / ಪಬ್ಲಿಕ್‌ ಹೆಲ್ತ್‌ / ಕಮ್ಯುನಿಕೇಷನ್‌ / ಪ್ಯಾಪುಲೇಶನ್ ಸ್ಟಡೀಸ್‌ / ರೂರಲ್‌ ಡೆವಲಪ್‌ಮೆಂಟ್‌ / ಸೋಶಿಯಲ್‌ ವರ್ಕ್‌ / ನರ್ಸಿಂಗ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದಿರಬೇಕು. ಜತೆಗೆ 1-2 ವರ್ಷಗಳ ಅನುಭವ ಹೊಂದಿರಬೇಕು.

ತರಬೇತಿ ಹಾಗೂ ಸಂಶೋಧನಾ ಸಂಯೋಜಕರು ಹುದ್ದೆಯ ಅಧಿಸೂಚನೆಗಾಗಿ ಇಲ್ಲಿ ಕ್ಲಿಕ್‌ ಮಾಡಿ.

ಜಿಲ್ಲಾ ಎಸ್‌.ಎಂ.ಎಚ್‌.ಎಂ. ಸಂಯೋಜಕರು ಹುದ್ದೆಯ ಅಧಿಸೂಚನೆಗಾಗಿ ಇಲ್ಲಿ ಕ್ಲಿಕ್‌ ಮಾಡಿ.

ಅರ್ಜಿ ಸಲ್ಲಿಸುವ ವಿಧಾನ

ಆಸಕ್ತರು ಜನವರಿ 21ರ ಸಂಜೆ 5.30ರೊಳಗೆ ಅರ್ಜಿಯನ್ನು ಇಮೇಲ್‌ ವಿಳಾಸ prckar.recruitment@gmail.comಗೆ ಕಳುಹಿಸಬೇಕು.‌

ಇದನ್ನೂ ಓದಿ: Job Alert: ಎನ್‌ಟಿಪಿಸಿಯ ಹುದ್ದೆಗಳಿಗೆ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಿ

Exit mobile version