Site icon Vistara News

Job Alert: ವಿವಿಧ ಇಲಾಖಾ ಪರೀಕ್ಷೆಗಳ ವೇಳಾಪಟ್ಟಿ ಪ್ರಕಟಿಸಿದ ಕರ್ನಾಟಕ ಲೋಕಸೇವಾ ಆಯೋಗ; ಟೈಮ್‌ ಟೇಬಲ್‌ ಇಲ್ಲಿ ವೀಕ್ಷಿಸಿ

Job Alert

Job Alert

ಬೆಂಗಳೂರು: ಸರ್ಕಾರಿ ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳ ಗಮನಕ್ಕೆ. ಕರ್ನಾಟಕ ಲೋಕಸೇವಾ ಆಯೋಗ (KPSC)ವು 2024ನೇ ಸಾಲಿನ ಪ್ರಥಮ ಅಧಿವೇಶನದ ವಿವಿಧ ಇಲಾಖಾ ಪರೀಕ್ಷೆಗಳ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಪ್ರಥಮ ಹಂತದ ಪರೀಕ್ಷೆಗಳು ಜೂನ್‌ 7ರಿಂದ 9ರ ತನಕ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ನಡೆಯಲಿದೆ. ಈ ಕುರಿತಾದ ವಿವರ ಇಲ್ಲಿದೆ (Job Alert).

ಪ್ರಥಮ ಹಂತದ ಪರೀಕ್ಷೆಗಳು

ಜೂನ್‌ 7ರಂದು ಬೆಳಗ್ಗೆ 10ರಿಂದ 12ರ ತನಕ ಅಕೌಂಟ್ಸ್‌ ಲೋಯರ್‌ (01) ಮತ್ತು ಮಧ್ಯಾಹ್ನ 2ರಿಂದ 4ರ ತನಕ ಜನರಲ್‌ ಲಾ ವಿಭಾಗ-II (08) ಪರೀಕ್ಷೆ ನಡೆಯಲಿದೆ.
ಜೂನ್‌ 8ರಂದು ಬೆಳಗ್ಗೆ 10ರಿಂದ 12ರ ತನಕ ಅಕೌಂಟ್ಸ್‌ ಹೈಯರ್‌-ಪತ್ರಿಕೆ -1 (22/1) ಮತ್ತು ಮಧ್ಯಾಹ್ನ 2ರಿಂದ 4 ಗಂಟೆ ತನಕ ಹೈಯರ್‌-ಪತ್ರಿಕೆ -2 (22/2) ಪರೀಕ್ಷೆ ಆಯೋಜಿಸಲಾಗಿದೆ.
ಜೂನ್‌ 9ರಂದು ಬೆಳಗ್ಗೆ 10ರಿಂದ 12ರ ತನಕ ಜನರಲ್‌ ಲಾ ಭಾಗ-I ಪತ್ರಿಕೆ-1 (36/1) ಮತ್ತು ಮಧ್ಯಾಹ್ನ 2ರಿಂದ 4 ಗಂಟೆವರೆಗೆ ಜನರಲ್‌ ಲಾ ಭಾಗ-I ಪತ್ರಿಕೆ-2 (36/2) ಪರೀಕ್ಷೆ ನಡೆಯಲಿದೆ.

ದ್ವಿತೀಯ ಹಂತದ ಪರೀಕ್ಷೆಗಳು

ಇನ್ನು ದ್ವಿತೀಯ ಹಂತದ ಪರೀಕ್ಷೆಗಳು ವಿಭಾಗೀಯ ಕೇಂದ್ರಗಳಲ್ಲಿ ಜೂನ್‌ 11ರಿಂದ 23ರ ತನಕ ಆಯೋಜಿಸಲಾಗಿದೆ. ಬೆಂಗಳೂರು, ಬೆಳಗಾವಿ, ಕಲಬುರಗಿ, ಮೈಸೂರು ಮತ್ತು ಶಿವಮೊಗ್ಗ ಕೇಂದ್ರಗಳಲ್ಲಿ ಈ ಪರೀಕ್ಷೆ ನಡೆಯಲಿದೆ.

ತೃತೀಯ ಹಂತದ ಪರೀಕ್ಷೆ

ಮೂರನೇ ಹಂತದ ಪರೀಕ್ಷೆ ಜೂನ್‌ 24ರಿಂದ 29ರ ತನಕ ಬೆಂಗಳೂರು ಕೇಂದ್ರದಲ್ಲಿ ಮಾತ್ರ ನಡೆಯಲಿದೆ ಎಂದು ಕರ್ನಾಟಕ ಲೋಕಸೇವಾ ಆಯೋಗದ ಕಾರ್ಯದರ್ಶಿ ಡಾ. ರಾಕೇಶ್‌ ಕುಮಾರ್‌ ಕೆ. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ಕುರಿತಾದ ವಿವರವಾದ ವೇಳಾಪಟ್ಟಿಯನ್ನು ವೀಕ್ಷಿಸಲು ಇಲ್ಲಿ ಕ್ಲಿಕ್‌ ಮಾಡಿ.

ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳ ಅರ್ಜಿ ಸಲ್ಲಿಕೆ ದಿನಾಂಕ ವಿಸ್ತರಣೆ

ಕೆಲವು ದಿನಗಳ ಹಿಂದೆ  ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಉಳಿಕೆ ಮೂಲ ವೃಂದ ಮತ್ತು ಕಲ್ಯಾಣ ಕರ್ನಾಟಕ (ಸ್ಥಳೀಯ) ವೃಂದದಲ್ಲಿರುವ ಒಟ್ಟು 1,000 ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳ ಭರ್ತಿಗೆ ಅರ್ಜಿ ಸಲ್ಲಿಸುವ ದಿನಾಂಕವನ್ನು ವಿಸ್ತರಿಸಿ ಪ್ರಕಟಣೆ ಹೊರಡಿಸಿತ್ತು. ಆನ್‌ಲೈನ್‌ ಅರ್ಜಿಯಲ್ಲಿ ಕೆಲವು ಬದಲಾವಣೆಯ ಕಾರಣ ಅರ್ಜಿ ಸಲ್ಲಿಸಲಿರುವ ದಿನಾಂಕವನ್ನು ಮುಂದೂಡಲಾಗಿದೆ. ಅದರಂತೆ ಏಪ್ರಿಲ್‌ 5ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಕೊನೆಯ ದಿನಾಂಕ ಮೇ 5 ಎಂದು ಪರಿಷ್ಕೃತ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ಆಯ್ಕೆ ಹೇಗೆ?

ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಭರ್ತಿ ಮಾಡಲಿದೆ. ಕರ್ನಾಟಕ ಪರೀಕ್ಷಾ ಪ್ರಾದಿಕಾರ ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ತೇರ್ಗಡೆಯಾಗುವ ಅಭ್ಯರ್ಥಿಗಳು ಆಯ್ಕೆ ಮಾಡಲಾಗುತ್ತದೆ. ಈ ಪರೀಕ್ಷೆಯನ್ನು ಆಫ್‌ಲೈನ್‌-ಒಎಂಆರ್‌ ಮಾದರಿಯಲ್ಲಿ ನಡೆಸಲಾಗುತ್ತದೆ. ಪರೀಕ್ಷೆಗೆ 200 ಅಂಕಗಳನ್ನು ಒಳಗೊಂಡ 2 ಪತ್ರಿಕೆ ಇರುತ್ತದೆ. ಜತೆಗೆ ಕನ್ನಡ ಭಾಷಾ ಪರೀಕ್ಷೆ ಕಡ್ಡಾಯವಾಗಿದ್ದು, ಇದರಲ್ಲಿ ಕನಿಷ್ಠ 50 ಅಂಕ ಗಳಿಸಬೇಕು. ಪರೀಕ್ಷೆಗಳನ್ನು ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ನಡೆಸಲಾಗುತ್ತದೆ ಎಂದು ಪ್ರಕಟಣೆ ತಿಳಿಸಿದೆ. ಈ ಹಿಂದೆ ದ್ವಿತೀಯ ಪಿಯುಸಿ ಅಥವಾ 12ನೇ ತರಗತಿ ಅಂಕಗಳ ಆಧಾರದಲ್ಲಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಮೆರಿಟ್‌ ಆಧಾರದಲ್ಲಿ ಹುದ್ದೆಗಳಿಗೆ ಆಯ್ಕೆ ನಡೆಯುತ್ತಿತ್ತು. ಆದರೆ ಈ ಸಲದಿಂದ ಆಯ್ಕೆ ವಿಧಾನವನ್ನು ಬದಲಾಯಿಸಲಾಗಿದೆ.

ಪರಿಷ್ಕೃತ ವೇಳಾಪಟ್ಟಿಗಾಗಿ ಇಲ್ಲಿ ಕ್ಲಿಕ್‌ ಮಾಡಿ.

ಇದನ್ನೂ ಓದಿ: Job Alert: ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳ ಶೈಕ್ಷಣಿಕ ವಿದ್ಯಾರ್ಹತೆಗೆ ತಿದ್ದುಪಡಿ; ಹೊಸ ಅಧಿಸೂಚನೆಯಲ್ಲಿ ಏನಿದೆ?

Exit mobile version