Site icon Vistara News

Job Alert: ಗಮನಿಸಿ; ರೂರಲ್ ಲೈವ್ಲಿಹುಡ್ ಪ್ರಮೋಷನ್ ಸೊಸೈಟಿಯ ಹುದ್ದೆಗೆ ಅರ್ಜಿ ಸಲ್ಲಿಸಲು ಇಂದೇ ಕೊನೆಯ ದಿನ

job alert

job alert

ಬೆಂಗಳೂರು: ಕರ್ನಾಟಕ ರಾಜ್ಯ ರೂರಲ್ ಲೈವ್ಲಿಹುಡ್ ಪ್ರಮೋಷನ್ ಸೊಸೈಟಿ (Karnataka State Rural Livelihood Promotion Society) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದೆ (KSRLPS Recruitment 2024). ಕ್ಲಸ್ಟರ್ ಸೂಪರ್​​ವೈಸರ್, ಜಿಲ್ಲಾ​ ಮ್ಯಾನೇಜರ್ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸಲು ಇಂದೇ (ಮಾರ್ಚ್​ 15) ಕೊನೆಯ ದಿನ (Job Alert).

ಹುದ್ದೆಗಳ ವಿವರ

ಜಿಲ್ಲಾ​ ಮ್ಯಾನೇಜರ್- 1, ಕ್ಲಸ್ಟರ್ ಸೂಪರ್ ​​ವೈಸರ್- 2, ಡಿಇಒ / ಎಂಐಎಸ್‌ ಕೋ ಆರ್ಡಿನೇಟರ್- 3, ತಾಲೂಕು ಪ್ರೋಗ್ರಾಮ್ ಮ್ಯಾನೇಜರ್- 1, ಬ್ಲಾಕ್ ಮ್ಯಾನೇಜರ್- 2 ಸೇರಿ ಒಟ್ಟು 9 ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ.

ವಿದ್ಯಾರ್ಹತೆ

ಜಿಲ್ಲಾ​ ಮ್ಯಾನೇಜರ್- ಬಿ.ಎಸ್ಸಿ, ಎಂ.ಎಸ್ಸಿ, ಕ್ಲಸ್ಟರ್ ಸೂಪರ್​​ ವೈಸರ್- ಪದವಿ, ಡಿಇಒ / ಎಂಐಎಸ್‌ ಕೋ ಆರ್ಡಿನೇಟರ್- ಪದವಿ, ತಾಲೂಕು ಪ್ರೋಗ್ರಾಮ್ ಮ್ಯಾನೇಜರ್- ಸ್ನಾತಕೋತ್ತರ ಪದವಿ, ಬ್ಲಾಕ್ ಮ್ಯಾನೇಜರ್- ಸ್ನಾತಕೋತ್ತರ ಪದವಿ ಪಡೆದಿರಬೇಕು.

ಅರ್ಜಿ ಶುಲ್ಕ ಮತ್ತು ಆಯ್ಕೆ ವಿಧಾನ

ಯಾವುದೇ ಅಭ್ಯರ್ಥಿಗಳು ಅರ್ಜಿ ಶುಲ್ಕ ಪಾವತಿಸಬೇಕಾಗಿಲ್ಲ. ಅಭ್ಯರ್ಥಿಗಳನ್ನು ಸಂದರ್ಶನದ ಮೂಲಕ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಉದ್ಯೋಗ ಸ್ಥಳ: ಯಾದಗಿರಿ.

ಹೆಚ್ಚಿನ ಮಾಹಿತಿಗೆ ವೆಬ್‌ಸೈಟ್‌ ksrlps.karnataka.gov.inಗೆ ಭೇಟಿ ನೀಡಿ.

ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್‌ ಮಾಡಿ.

ಇದನ್ನೂ ಓದಿ: Job Alert: ನ್ಯಾಷನಲ್‌ ಹೈಡ್ರೋಎಲೆಕ್ಟ್ರಿಕ್‌ ಪವರ್‌ ಕಾರ್ಪೋರೇಷನ್‌ನ 269 ಹುದ್ದೆಗಳಿಗೆ ಅರ್ಜಿ ಆಹ್ವಾನ

Exit mobile version