ಬೆಂಗಳೂರು: ನ್ಯಾಷನಲ್ ಅಲ್ಯೂಮಿನಿಯಂ ಕಂಪನಿ ಲಿಮಿಟೆಡ್ (National Aluminium Company Limited) ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ಸುಮಾರು 277 ಗ್ರಾಜುಯೇಟ್ ಎಂಜಿನಿಯರ್ ಟ್ರೈನಿ ಹುದ್ದೆ ಇದಾಗಿದ್ದು, ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು (NALCO Recruitment 2024). ಆಸಕ್ತರು ಮಾರ್ಚ್ 4ರಿಂದ ಅರ್ಜಿ ಸಲ್ಲಿಸಬಹುದಾಗಿದ್ದು, ಕೊನೆಯ ದಿನ ಏಪ್ರಿಲ್ 2 (Job Alert).
ಹುದ್ದೆಗಳ ವಿವರ ಮತ್ತು ವಿದ್ಯಾರ್ಹತೆ
ಮೆಕ್ಯಾನಿಕಲ್- 127, ಎಲೆಕ್ಟ್ರಿಕಲ್- 100, ಇನ್‌ಸ್ಟ್ರುಮೆಂಟೇಷನ್- 20, ಲೋಹಶಾಸ್ತ್ರ (Metallurgy)- 10, ಕೆಮಿಕಲ್- 13, ಕೆಮಿಸ್ಟ್ರಿ- 7 ಹುದ್ದೆಗಳಿವೆ. ಗ್ರಾಜುಯೇಟ್ ಎಂಜಿನಿಯರ್ ಟ್ರೈನಿ ಹುದ್ದೆಗೆ ಸ್ನಾತಕೋತ್ತರ ಪದವಿ, ಎಂ.ಎಸ್‌ಸಿ, ಕೆಮಿಕಲ್, ಲೋಹಶಾಸ್ತ್ರ, ಎಲೆಕ್ಟ್ರಿಕಲ್, ಇನ್‌ಸ್ಟ್ರುಮೆಂಟೇಷನ್ ಮತ್ತು ಮೆಕ್ಯಾನಿಕಲ್ ಎಂಜಿನಿಯರಿಂಗ್‌ನಲ್ಲಿ ಬಿ.ಇ / ಬಿ.ಟೆಕ್ ಮಾಡಿದವರು ಅರ್ಜಿ ಸಲ್ಲಿಸಬಹುದು.
ವಯೋಮಿತಿ
ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳ ವಯಸ್ಸು 30 ವರ್ಷ ವಯಸ್ಸು ಮೀರಿರಬಾರದು. ಮೀಸಲಾತಿಗೆ ಅನುಗುಣವಾಗಿ ವಯೋಮಿತಿಯಲ್ಲಿ ಸಡಿಲಿಕೆ ಇದೆ. 2ಎ / 2ಬಿ / 3ಎ / 3ಬಿ ಅಭ್ಯರ್ಥಿಗಳಿಗೆ 3 ವರ್ಷ, ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ / ಪ್ರವರ್ಗ-1 ಅಭ್ಯರ್ಥಿಗಳಿಗೆ 5 ವರ್ಷಗಳ ರಿಯಾಯಿತಿ ಲಭ್ಯ.
ಅರ್ಜಿ ಶುಲ್ಕ
ಸಾಮಾನ್ಯ, ಒಬಿಸಿ, ಇಡಬ್ಲ್ಯುಎಸ್ ವಿಭಾಗದ ಅಭ್ಯರ್ಥಿಗಳು ಅರ್ಜಿ ಶುಲ್ಕವಾಗಿ 500 ರೂ. ಪಾವತಿಸಬೇಕು. ಉಳಿದ ಎಲ್ಲ ವಿಭಾಗದ ಅಭ್ಯರ್ಥಿಗಳು ಅರ್ಜಿ ಶುಲ್ಕವಾಗಿ 100 ರೂ. ಪಾವತಿಸಿದರೆ ಸಾಕು. ಅರ್ಜಿ ಶುಲ್ಕವನ್ನು ಆನ್‌ಲೈನ್ ಮೂಲಕ ಸಲ್ಲಿಸಬೇಕು. ಇದಕ್ಕಾಗಿ ಇಂಟರ್‌ನೆಟ್ ಬ್ಯಾಂಕಿಂಗ್ / ಡೆಬಿಟ್ / ಕ್ರೆಡಿಟ್ ಕಾರ್ಟ್ / ಯುಪಿಐ ಪಾವತಿ ವಿಧಾನವನ್ನು ಬಳಸಬಹುದು.
ಆಯ್ಕೆ ವಿಧಾನ ಮತ್ತು ಮಾಸಿಕ ವೇತನ
GATEರಲ್ಲಿ ಪಡೆದ ಅಂಕಗಳ ಆಧಾರದಲ್ಲಿ ಅಭ್ಯರ್ಥಿಗಳ ಶಾರ್ಟ್ ಲಿಸ್ಟ್ ಮಾಡಲಾಗುತ್ತದೆ. ಬಳಿಕ ವೈಯಕ್ತಿಕ ಸಂದರ್ಶನ, ಡಾಕ್ಯುಮೆಂಟ್ ಪರಿಶೀಲನೆ ಮೂಲಕ ಆಯ್ಕೆ ಮಾಡಲಾಗುತ್ತದೆ. ನೇಮಕ ಹೊಂದುವವರಿಗೆ 40,000 ರೂ. – 1,80,000 ರೂ. ಮಾಸಿಕ ವೇತನವಿದೆ. ಆಯ್ಕೆಯಾಗುವವರಿಗೆ ಕಂಪೆನಿಯ ವಿವಿಧ ಬ್ರ್ಯಾಂಚ್‌ಗಳಲ್ಲಿ ಒಂದು ವರ್ಷ ತರಬೇತಿ ನೀಡಲಾಗುತ್ತದೆ. ಈ ಅವಧಿಯಲ್ಲಿನ ಅವರ ಸಾಮರ್ಥ್ಯವನ್ನು ಗಮನಿಸಿ ಬಳಿಕ ಅವರನ್ನು ಉದ್ಯೋಗಕ್ಕೆ ನೇಮಿಸಿಕೊಳ್ಳಲಾಗುತ್ತದೆ. ಉದ್ಯೋಗದ ಸ್ಥಳ: ಭಾರತದಾದ್ಯಂತ ಅಥವಾ ವಿದೇಶ. ಸ್ಥಳವನ್ನು ಬಳಿಕ ನಿರ್ಧರಿಸಲಾಗುತ್ತದೆ.
ಅಧಿಸೂಚನೆಗಾಗಿ ಇಲ್ಲಿ ಕ್ಲಿಕ್ ಮಾಡಿ.
ಅರ್ಜಿ ಸಲ್ಲಿಸುವ ವಿಧಾನ
- ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ.
- Apply Now ಆಯ್ಕೆ ಮೇಲೆ ಕ್ಲಿಕ್ ಮಾಡಿ ನಿಮ್ಮ ಇಮೇಲ್ ಐಡಿ, ಫೋನ್ ನಂಬರ್ ನೀಡಿ ಹೆಸರು ನೋಂದಾಯಿಸಿ.
- ಸರಿಯಾದ ಮಾಹಿತಿ ನೀಡಿ ಅಪ್ಲಿಕೇಷನ್ ಫಾರಂ ಭರ್ತಿ ಮಾಡಿ.
- ಅಗತ್ಯವಾದ ಡಾಕ್ಯುಮೆಂಟ್ ಅಪ್ಲೋಡ್ ಮಾಡಿ.
- ಆನ್‌ಲೈನ್ ಮೂಲಕ ಅರ್ಜಿ ಶುಲ್ಕ ಪಾವತಿಸಿ.
- ಎಲ್ಲ ಮಾಹಿತಿ ಸರಿಯಾಗಿದೆ ಎನ್ನುವುದನ್ನು ಮತ್ತೊಮ್ಮೆ ಪರಿಶೀಲಿಸಿ Submit ಬಟನ್ ಕ್ಲಿಕ್ ಮಾಡಿ.
- ಭವಿಷ್ಯದ ಅಗತ್ಯಗಳಿಗಾಗಿ ಅಪ್ಲಿಕೇಷನ್ ಫಾರಂನ ಪ್ರಿಂಟ್ಔಟ್ ತೆಗೆದಿಡಿ.
ಇದನ್ನೂ ಓದಿ: Job Alert: ಎನ್‌ಬಿಸಿಸಿಯಲ್ಲಿದೆ ಉದ್ಯೋಗಾವಕಾಶ; ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿ