Site icon Vistara News

Job Alert: ಎನ್‌ಸಿಇಆರ್‌ಟಿಯ 170 ಹುದ್ದೆಗಳಿಗೆ ನೇರ ಸಂದರ್ಶನ; ಪದವಿ ಹೊಂದಿದವರಿಗೆ ಅವಕಾಶ

proof reader

proof reader

ನವದೆಹಲಿ: ನ್ಯಾಷನಲ್ ಕೌನ್ಸಿಲ್ ಆಫ್ ಎಜುಕೇಷನಲ್ ರಿಸರ್ಚ್‌ ಆ್ಯಂಡ್‌ ಟ್ರೈನಿಂಗ್ (National Council of Educational Research & Training) ತನ್ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ನೇರ ಸಂದರ್ಶನ ನಡೆಸಲಿದೆ. ಈ ಬಗ್ಗೆ ಪ್ರಕಟಣೆ ಹೊರಡಿಸಲಾಗಿದ್ದು, ಪ್ರೂಫ್‌ ರೀಡರ್, ಅಸಿಸ್ಟಂಟ್ ಎಡಿಟರ್ ಸೇರಿ ಸುಮಾರು 170 ಹುದ್ದೆಗಳಿಗೆ ತಾತ್ಕಾಲಿಕ ನೇಮಕಾತಿ ನಡೆಯಲಿದೆ (NCERT Recruitment 2024). ಆಸಕ್ತರು ಫೆಬ್ರವರಿ ಮೊದಲ ವಾರದಲ್ಲಿ ದೆಹಲಿಯಲ್ಲಿ ನಡೆಯುವ ನೇರ ಸಂದರ್ಶನದಲ್ಲಿ ಭಾಗವಹಿಸಬಹುದು (Job Alert).

ಹುದ್ದೆಗಳ ವಿವರ ಮತ್ತು ವಯೋಮಿತಿ

ಅಸಿಸ್ಟಂಟ್ ಎಡಿಟರ್: 60 ಹುದ್ದೆ (ಇಂಗ್ಲಿಷ್‌ – 25, ಹಿಂದಿ – 25 ಮತ್ತು ಉರ್ದು – 10) – ವಯೋಮಿತಿ: 50 ವರ್ಷ
ಪ್ರೂಫ್‌ ರೀಡರ್: 60 ಹುದ್ದೆ (ಇಂಗ್ಲಿಷ್‌ – 25, ಹಿಂದಿ – 25 ಮತ್ತು ಉರ್ದು – 10) – ವಯೋಮಿತಿ: 42 ವರ್ಷ
ಡಿಟಿಪಿ ಆಪರೇಟರ್ಸ್‌: 50 ಹುದ್ದೆ (ಇಂಗ್ಲಿಷ್‌ – 20, ಹಿಂದಿ – 20 ಮತ್ತು ಉರ್ದು – 10) – ವಯೋಮಿತಿ: 45 ವರ್ಷ

ವಿದ್ಯಾರ್ಹತೆ ಮತ್ತು ಮಾಸಿಕ ವೇತನ

ಅಸಿಸ್ಟಂಟ್ ಎಡಿಟರ್: ಸಂಬಂಧಿತ ವಿಷಯಗಳಲ್ಲಿ ಪದವಿ ತೇರ್ಗಡೆಯಾಗಿರಬೇಕು. ಮಾಸಿಕ ವೇತನ: 80,000 ರೂ. ಪ್ರೂಫ್‌ ರೀಡರ್: ಸಂಬಂಧಿತ ವಿಷಯಗಳಲ್ಲಿ ಪದವಿ ತೇರ್ಗಡೆಯಾಗಿರಬೇಕು. ಮಾಸಿಕ ವೇತನ: 37,000 ರೂ. ಡಿಟಿಪಿ ಆಪರೇಟರ್ಸ್‌: ಯಾವುದೇ ವಿಷಯಗಳಲ್ಲಿ ಪದವಿ ತೇರ್ಗಡೆಯಾಗಿರಬೇಕು. ಮಾಸಿಕ ವೇತನ: 50,000 ರೂ.

ಸಂದರ್ಶನದ ವಿವರ

ಅಸಿಸ್ಟಂಟ್ ಎಡಿಟರ್:

ಪ್ರೂಫ್‌ ರೀಡರ್:

ಡಿಟಿಪಿ ಆಪರೇಟರ್ಸ್‌:

ಅಭ್ಯರ್ಥಿಗಳು ಸಂದರ್ಶನಕ್ಕೆ ಹಾಜರಾಗುವ ವೇಳೆ ಆಧಾರ್‌ ಕಾರ್ಡ್‌, ಎಸ್ಸೆಸ್ಸೆಲ್ಸಿ ಅಂಕಪಟ್ಟಿ, ಪದವಿ ಪ್ರಮಾಣ ಪತ್ರ, ಕಾರ್ಯಾನುಭವದ ಪ್ರಮಾಣ ಪತ್ರ, ಇತ್ತೀಚಿನ ರೆಸ್ಯೂಮ್‌ ಹಾಜರುಪಡಿಸಬೇಕು ಎಂದು ಪ್ರಕಟಣೆ ತಿಳಿಸಿದೆ.

ಅಧಿಕೃತ ಅಧಿಸೂಚನೆಗಾಗಿ ಇಲ್ಲಿ ಕ್ಲಿಕ್‌ ಮಾಡಿ.

ಇದನ್ನೂ ಓದಿ: Job Alert: ಬ್ಯಾಂಕ್ ಆಫ್ ಬರೋಡಾದ ಖಾಲಿ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

Exit mobile version